(Dedicated our fabulous friend
Lohith)
ಡ್ರಾಮಾ... ತ ನಿ ನ ನ ನಾ
ಲೋಹಿತ್ ಬರಿ, ಹೋತ್ಲಾ ಕಣಣ್ಣಾ...
ಮನ್ ಡೇ ಆದ್ಮೇಲೆ, ಟ್ಯೂಸ್ ಡೇ ಬರ್ತದೆ
ಸಿಗ್ನಲ್ ಆದ್ಮೇಲೆ, ಸೀಮನ್ಸ್ ಬರ್ತದೆ...
ಒಂದರ ಮೇಲೊಂದ್ ಫೋನ್ ಬರ್ತವೆ
ಮಾತ್ ಆಡಿಸಿದ್ರೆ ರೈಲು ಓಡ್ತವೆ...
ಡಯಟ್ ಅನ್ಕೊಂಡೆ ಮಟನ್ ಹೊಡಿತಾನೆ
ಮೀನು ಸಾರಂದ್ರೆ ಬಾಯ್ನೀರು ಸುರಿಸ್ತಾನೆ
ಗುಂಗುರು ಕೂದಲನ್ನ ಹಿಂದಕ್ಕೆ ಬಾಚ್ತಾನೆ
ಮೂಟೆ ಇಟ್ಟಕೊಂಡೆ ಮಸ್ಸಲ್ಸ್ ಬೆಳೆಸವ್ನೆ
ಕಾಲು ಎಳೆಯೋಕೆ ಮುಂದೇನೆ ಇರ್ತಾನೆ...
ಹೋತ್ಲಾ, ಹೋತ್ಲಾ, ಹೋತ್ಲಾ...
ಮಾತೇ ಹೋತ್ಲಕ್ಕೆ ಮೂಲ...
ಹೂ ಕಣ್, ಹೂ ಕಣ್, ಕೇಳ್ಲಾ...
(... ವಾಟ್ ಇಸ್ ದಿಸ್ ನಾನ್ ಸೆನ್ಸ್ ಯಾರ್ ...?)
ಡ್ರಾಮಾ... ತ ನಿ ನ ನ ನಾ
ಲೋಹಿತ್ ಬರಿ, ಹೋತ್ಲಾ ಕಣಣ್ಣಾ...
---------------------------------------------------------------------------
ಪಂ ಪಂ... ಪಂ ಪಂ ಪಂ ಪಂ ಪಮ್... ಪಂ ಪಂ ಪಂ ಪಂ ಪಮ್... ಪಂ ಪಂ ಪಂ ಪಂ ಪಮ್...
(... ಶಿಷ್ಯಾ ಬಿಡೋ ಬಹುಪರಾಕು ...)
ತುಂಬಾ ಮಾತಾಡಿಸಿದ್ರೆ ತಲೆ ಒಳಗಡೆ ಮೆದುಳು ಇರಲ್ಲ ಬರಿ ಹುಳ ಇರುತ್ತ್ವೆ,
ಸತ್ಯ ಡೂಪ್ಲಿಕೇಟ್, ಸುಳ್ಳು ಒರಿಜಿನಲ್ಲು
ಸಾಮ್ರಾಣಿ ಹೊಗೆ ಹಂಗೆ ಮೂರು ದಿನದ ಬಾಳು...
(... ಎಕ್ಷ್ತ್ರಾರ್ಡಿನರಿ ...)
ನೂರರಲ್ಲಿ ಹತ್ತು ಸತ್ಯ ಮಿಕ್ಕಿದ್ದು ಸುಳ್ಳು
ಸಣ್ಣ ಡೀಲು ಮಾಡಿದ್ರೆ ಪೇಮೆಂಟ್ ಇದೆ,
ದೊಡ್ಡ ಡೀಲಿಗೆ ಸ್ವಲ್ಪ ಡಿಸ್ಕೌಂಟ್ ಇದೆ...
ಇವಾಗ ನಂಬರ್ ಬರ್ಕಳಿ, ಆಮೇಲೆ ಫೋನ್ ಮಾಡಿ ಕೇಳ್ಕೊಳಿ...
(... ವ್ಹಾ ...)
ಶರತ್ ಗೆ ಕೆಲಸ ಇಲ್ಲ ಫೋಟೋ ಹೊಡಿತಾನೆ
ಶ್ರೀಮಂತ್ ಗೆ ಕೆಲಸ ಇಲ್ಲ, ಫೇಸ್ ಬುಕ್ ಗೆ ಹಾಕ್ತಾನೆ
ಎಲ್ಲಾ ಫೋಟೋ ಲೋಹಿತನವೆ,
ಷೇರ್ ಮಾಡ್ತಿವಿ ನಾವು,
ಕಾಮೆಂಟ್ ಹೊಡ್ಕಳಿ ನೀವು...
---------------------------------------------------------------------------
ಮದ್ವೆ ಮಾತ್ ಬಂದ್ರೆ, ಪ್ಲೇಟ್ ತಿರುವ್ತಾನೆ
ಕೆ.ಜಿ ಗಟ್ಟಲೆ ಕಾಳು ಹಾಕುತ್ತಲೇ ಇರ್ತಾನೆ...
(... ಬ್ಯಾರೆ ಏನ್ ಮಾಡತಾನ್ಲಾ ...?)
ಫೋನ್ ಕಾಲಲ್ಲೇ ಡೀಲು ಮಾಡ್ತಾನೆ
ಟ್ರೀಟ್ ಕೇಳಿದ್ರೆ ಕತೆ ಬಿಡ್ತಾನೆ...
(... ಡೋಂಟ್ ಆಸ್ಕ್ ಯಾರ್ ...)
ನಮ್ ಮಾತಲ್ಲಿ, ವಿಷ್ಯ ಮೊದಲು PJ ಆಮೇಲೆ
ಇವನ ಮಾತಲ್ಲಿ, PJ ಮೊದಲು ವಿಷ್ಯ ಆಮೇಲೆ...
ಹೋತ್ಲಾ, ಹೋತ್ಲಾ, ಹೋತ್ಲಾ...
ಮಾತೇ ಹೋತ್ಲಕ್ಕೆ ಮೂಲ...
ಬ್ಯಾರೆ ಎಲ್ಲಾನೂ ಹೇಳ್ಲಾ...
ಹೂ ಕಣ್, ಹೂ ಕಣ್, ಕೇಳ್ಲಾ...
(... ವಾಟ್ ಇಸ್ ದಿಸ್ ನಾನ್ ಸೆನ್ಸ್ ಯಾರ್ ...?)
ಡ್ರಾಮಾ... ತ ನಿ ನ ನ ನಾ
ಲೋಹಿತ್ ಬರಿ, ಹೋತ್ಲಾ ಕಣಣ್ಣಾ...
ಗಾದೆ ಮಾತೊಂದ ಸ್ವಲ್ಪ ತಿಳ್ಕೊಳಿ
"ಸಾಗರ"ಕ್ಕೆ ಹೋಗಿ ಬಂದ್ರೆ ಸ್ನಾನ ಮಾಡ್ಕಳಿ
ನಿದ್ದೆ ಬಂತಂದ್ರೆ ಲ್ಯಾಬ್ ಅಲ್ಲಿ ಕುಂತ್ಕೋಳಿ
ಕಾಫಿ ಬಂದಾಗ ಕಣ್ ಒರಸ್ಕೊಳಿ
(... ತುಂಬಾ ಆರ್ಡಿನರಿ ...)
ಇವನ ಸಹವಾಸ ಒಂದು ತುರಿಕೆ ಸೊಪ್ಪು, ಎಲ್ಲರೂ ಕೆರಕೋಳಿ
ಇವನ ನಂಬಿಕೊಂಡರೆ ತೆಂಗಿನಕಾಯಿ ಚಿಪ್ಪು, ಎಲ್ಲರೂ ಇಡ್ಕೋಳಿ...
ಹೋತ್ಲಾ, ಹೋತ್ಲಾ, ಹೋತ್ಲಾ...
ಇಸ್ಪೀಟ್ ಕಾರ್ಡು ಕುಲುಕ್ಲಾ...
ಹೂ ಕಣ್, ಹೂ ಕಣ್, ಹಾಕ್ಲಾ
ಮುಂದೆ ಕುಂತವ್ನ, ಮುಂಡಾ ಮುಚ್ಲಾ...
(... ವಾಟ್ ಇಸ್ ದಿಸ್ ನಾನ್ ಸೆನ್ಸ್ ಯಾರ್ ...?)
ಡ್ರಾಮಾ... ತ ನಿ ನ ನ ನಾ
ಲೋಹಿತ್ ಬರಿ, ಹೋತ್ಲಾ ಕಣಣ್ಣಾ...
ನಂಗೂ ಲೋಹಿತ್ ಗೊತ್ತಣ್ಣ
- ಕೆ. ಸಿ. ಸಂಪತ್ ಕುಮಾರ್