Tuesday, December 24, 2013

ಇಲ್ಲಿಂದ ಬರೆದಿಡಲೇ,

ಪ್ರೇಮಿ    : ಇಲ್ಲಿಂದ ಬರೆದಿಡಲೇ,
ಪ್ರೇಮಿ    : ನನ್ನೆಲ್ಲ ಶುಭಗಳಿಗೆ...
ಪ್ರೇಮಿ    : ನೀ ಕಂಡ ಮರುಕ್ಷಣವೇ
ಪ್ರೇಮಿ    : ಮಾತೆಲ್ಲ ಮುಗುಳುನಗೆ...
ಪ್ರೇಯಸಿ : ಪ್ರೀತೀಯನು ಸೂಚಿಸಲು, ಈ ಪೀಠಿಕೆ, ಬೇಕೇತಕೆ...
ಪ್ರೇಯಸಿ : ನಾನೂಸಹ ಕಾದಿರಲು, ಸಂಕೋಚವು ಇನ್ನೇತಕೆ...
                * * * * *

ಪ್ರೇಮಿ    : ಮತ್ತೊಂದು ಹೊತ್ತೊಂದ
ಪ್ರೇಮಿ    : ನಾವೇಕೆ ಕಾಯಬೇಕು,
ಪ್ರೇಮಿ    : ಈಗಿಂದೀಗೇನೇ, ನಿನ್ನ ಕೂಡಬೇಕು...
ಪ್ರೇಮಿ    : ಕಣ್ಣಿಂದ ಕಣ್ಣಿಗೇ
ಪ್ರೇಮಿ    : ಆಸೇನ ಹೇಳಬೇಕು,
ಪ್ರೇಮಿ    : ನಾಚೊಗಲ್ಲದಲ್ಲಿ, ಬಣ್ಣ ಮೂಡಬೇಕು...
ಪ್ರೇಯಸಿ : ನೀ ಕೇಳದೇ, ನಿನ್ನಾಸೆ ಪೂರೈಸಲೇ
ಪ್ರೇಯಸಿ : ನಿನ್ನೊಂದಿಗೇ, ನನ್ನಾಸೆ ಹಾರೈಸಲೇ... 

ಪ್ರೇಮಿ    : ಇಲ್ಲಿಂದ ಬರೆದಿಡಲೇ,
ಪ್ರೇಮಿ    : ನನ್ನೆಲ್ಲ ಶುಭಗಳಿಗೆ...
ಪ್ರೇಮಿ    : ನೀ ಕಂಡ ಮರುಕ್ಷಣವೇ,
ಪ್ರೇಮಿ    : ವ್ಯಾಮೋಹ ಹಲವುಬಗೆ...
ಪ್ರೇಯಸಿ : ಏಕಾಂತವ ರೂಪಿಸಲು, ಈ ಪೀಠಿಕೆ ಬೇಕೇತಕೆ...
ಪ್ರೇಯಸಿ : ಸಲ್ಲಾಪವ ಯಾಚಿಸಲು, ಸಂಕೋಚವು ಇನ್ನೇತಕೆ...
                * * * * *

ಪ್ರೇಯಸಿ : ಸ್ವಚ್ಚಂದ ಹುಚ್ಚೊಂದು
ಪ್ರೇಯಸಿ : ಹೀಗೇನೆ ಕಾಡಬೇಕು,
ಪ್ರೇಯಸಿ : ನೀಸಿಕ್ಕಮೇಲೇನೆ ವಾಸಿಯಾಗಬೇಕು
ಪ್ರೇಯಸಿ : ಬಚ್ಚಿಟ್ಟ ಗುಟ್ಟೆಲ್ಲಾ  
ಪ್ರೇಯಸಿ : ನೀನೇನೆ ಕೇಳಬೇಕು
ಪ್ರೇಯಸಿ : ನೀನಕ್ಕ ಮೇಲೇನೆ ಮುಂದೆ ಸಾಗಬೇಕು 
ಪ್ರೇಮಿ   : ಎಲ್ಲಿದ್ದರೂ, ನಿನ್ನಿಂದೆ ನಾ ನಿಲ್ಲಲೇ
ಪ್ರೇಮಿ   : ನಿಂತಲ್ಲಿಯೇ, ಹೂಮುತ್ತ ನಾ ಚೆಲ್ಲಲೇ

ಪ್ರೇಯಸಿ : ಇಲ್ಲಿಂದ ಬರೆದಿಡಲೇ,
ಪ್ರೇಯಸಿ : ನನ್ನೆಲ್ಲ ಶುಭಗಳಿಗೆ...
ಪ್ರೇಯಸಿ : ನೀ ಕಂಡ ಮರುಕ್ಷಣವೇ,
ಪ್ರೇಯಸಿ : ಉನ್ಮಾದ ಮನದೊಳಗೆ...
ಪ್ರೇಮಿ   : ಪ್ರೀತೀಯನು ಸೂಚಿಸಲು, ಈ ಪೀಠಿಕೆ, ಬೇಕೇತಕೆ...
ಪ್ರೇಮಿ   : ನಾನೂಸಹ ಕಾದಿರಲು, ಸಂಕೋಚವು ಇನ್ನೇತಕೆ...
                * * * * *

                                                 - ಸಂಪತ್ ಕುಮಾರ್

Thursday, December 12, 2013

ಹಂಬಲಿಸಿ, ಹಂಬಲಿಸಿ,..


ಪ್ರೇಯಸಿ : ಹಂಬಲಿಸಿ, ಹಂಬಲಿಸಿ
ಪ್ರೇಯಸಿ : ನೀ ನನ್ನ ಹಿಂಬಾಲಿಸು
ಪ್ರೇಮಿ    : ಸಮ್ಮತಿಸಿ, ಸಮ್ಮತಿಸಿ 
ಪ್ರೇಮಿ    : ನೀ ನನ್ನ ಸಂಬಾಳಿಸು
ಪ್ರೇಮಿ    : ಮೊಗ್ಗೊಂದ ನೀ ಮುಟ್ಟಿ, ಚೆಲುವಾದ ಹೂವಾಗಿಸು
ಪ್ರೇಯಸಿ : ಆ ಹೂವನೇ ತಂದು, ಮುದ್ದಾಗಿ ಮುಡಿಗಿರಿಸು...
                         * * * * *

ಪ್ರೇಯಸಿ : ಮೊಗದ ಅಂಗಣದಲ್ಲಿ,
ಪ್ರೇಯಸಿ : ನಗೆಯು ಮೂಡುತಲಿದೆ,
ಪ್ರೇಯಸಿ : ನೀ ಬಂದ ಕ್ಷಣವೇ, ನನಗೂ ಅರಿವಿಲ್ಲದೇ...
ಪ್ರೇಮಿ    : ಒಲವ ಸಂಗಡದಲ್ಲಿ,
ಪ್ರೇಮಿ    : ಪಯಣ ಸಾಗುತಲಿರೆ,
ಪ್ರೇಮಿ    : ಬೇರೇನು ಗೊಡವೆ??? ಹೀಗೆ ಇರಬಾರದೇ...
ಪ್ರೇಯಸಿ : ಎಲ್ಲ ಮಾತಿಗು ಮೊದಲು, ನಿನ್ನನೇ ಕೂಗಿದೆ ಕೊರಳು...  
ಪ್ರೇಮಿ    : ಎಲ್ಲಾ ಹಗಲು ಇರುಳು, ನಾನೇ ನಿನ್ನ ನೆರಳು... 

ಪ್ರೇಮಿ    : ಮಾತೊಂದ ನೀ ಆಡಿ, ಚೆಲುವಾದ ಹಾಡಾಗಿಸು
ಪ್ರೇಯಸಿ : ಹಾಡೊಂದ ನೀ ಹಾಡಿ, ಮನವನ್ನು ಹಗುರಾಗಿಸು...
                         * * * * *

ಪ್ರೇಮಿ    : ಮುಗಿಲ ಮಾಳಿಗೆಯಲ್ಲಿ,
ಪ್ರೇಮಿ    : ಚುಕ್ಕಿ ದೀಪಗಳಿವೆ,
ಪ್ರೇಮಿ    : ಭೂಮಂಚ ನಮದೇ, ಹೂ ಹಾಸಿ ರಮಿಸೋಣವೇ..?
ಪ್ರೇಯಸಿ : ಕಣ್ಣ ಜೋಳಿಗೆಯಲ್ಲಿ,
ಪ್ರೇಯಸಿ : ತುಂಟ ಸ್ವಪ್ನಗಳಿವೆ,
ಪ್ರೇಯಸಿ : ಒಂದೊಂದೂ ಹೊಸದೇ, ಕಾಣುತ್ತ ಸುಖಿಸೋಣವೇ..?
ಪ್ರೇಮಿ    : ನೀನೇ ಇರುವ ಮನಕೆ, ಬೇರೇ ಏನು ಬಯಕೆ...
ಪ್ರೇಯಸಿ : ನಿನ್ನಾ ಕಾಣೋ ಕ್ಷಣಕೆ, ದಿನದ ಪೂರ ಎಣಿಕೆ... 

ಪ್ರೇಮಿ    : ಇನ್ನೊಮ್ಮೆ ನೀ ನೋಡಿ, ನವಿರಾಗಿ ಕಣ್ಮಿಟುಕಿಸು
ಪ್ರೇಯಸಿ : ಕೈಯೊಮ್ಮೆ ನೀ ನೀಡಿ, ಬಲವಾಗಿ ಆಲಂಗಿಸು... 
                         * * *

ಪ್ರೇಯಸಿ : ಹಂಬಲಿಸಿ, ಹಂಬಲಿಸಿ
ಪ್ರೇಯಸಿ : ನೀ ನನ್ನ ಹಿಂಬಾಲಿಸು
ಪ್ರೇಮಿ    : ಸಮ್ಮತಿಸಿ, ಸಮ್ಮತಿಸಿ 
ಪ್ರೇಮಿ    : ನೀ ನನ್ನ ಸಂಬಾಳಿಸು
ಪ್ರೇಮಿ    : ಮೊಗ್ಗೊಂದ ನೀ ಮುಟ್ಟಿ, ಚೆಲುವಾದ ಹೂವಾಗಿಸು
ಪ್ರೇಯಸಿ : ಆ ಹೂವನೇ ತಂದು, ಮುದ್ದಾಗಿ ಮುಡಿಗಿರಿಸು...

                                                                 - ಸಂಪತ್ ಕುಮಾರ್

Monday, October 28, 2013

ಸ್ವಪ್ನಗಳ ಸಂತೆಯಲ್ಲಿ

ಪ್ರೇಮಿ    : ಸ್ವಪ್ನಗಳ ಸಂತೆಯಲ್ಲಿ, ಸದಾ ನಾನು ಸಂಚಾರಿ
ಪ್ರೇಮಿ    : ಕನಸುಗಳ ಕೊಳ್ಳುವಾಗ, ನಾನು ಬಹಳ ಉದಾರಿ
ಪ್ರೇಮಿ    : ಪ್ರೀತಿಸಲು ನಿನ್ನನು, ಸದಾ ನಾನು ತಯ್ಯಾರಿ
ಪ್ರೇಮಿ    : ಈ ಹೃದಯದಲ್ಲೀಗ, ನೀನೇ ಅಲ್ಲವೇ ವಿಹಾರಿ...

                  ಸ್ವಪ್ನಗಳ ಸಂತೆಯಲ್ಲಿ,
                  ಸದಾ ನಾನು ಸಂಚಾರಿ
                  * * * * *

ಪ್ರೇಯಸಿ : ಬರುವೆ ನಾ ನಿನ್ನ ಅನುಸರಿಸಿ,
ಪ್ರೇಯಸಿ : ಅಪ್ಪಿಕೋ ಕೊರಳನು ಬಳಸಿ,
ಪ್ರೇಯಸಿ : ನೆನಪುಗಳ ಮತ್ತೆ ವಿಂಗಡಿಸಿ
ಪ್ರೇಯಸಿ : ಸವಿಯುವ ಒಂದೊಂದೇ ಸ್ಮರಿಸಿ,

ಪ್ರೇಮಿ    : ಹೋಗಿದೆ ಹೃದಯವೀಗ, ನನ್ನದೇ ಕೈ ಮೀರಿ
ಪ್ರೇಯಸಿ : ಸಾಗವೆನು ಬಾಳದಾರಿ, ನಿನ್ನನು ನಾನು ಸೇರಿ... 
                  * * * * *

ಪ್ರೇಯಸಿ : ಬೇಡ ಇನ್ನೇಕೆ ಬೆಳದಿಂಗಳು,
ಪ್ರೇಯಸಿ : ಚಂದಿರ ನೀನೆ ಬಳಿಯಿರಲು...
ಪ್ರೇಯಸಿ : ಚುಂಬನ ನಿನ್ನ ಕಿರಣಗಳ,
ಪ್ರೇಯಸಿ : ಕಾಣಲಿ ನನ್ನ ಕಣ್ಣುಗಳು... 

ಪ್ರೇಮಿ    : ನಿಂತಿಹೆ ನನ್ನೆದುರು, ಮೋಹವೇ ಮೈದೋರಿ
ಪ್ರೇಮಿ    : ನೋಡುವೆನು ಕಣ್ತುಂಬಾ, ಸುಮ್ಮನೆ ಒಂದು ಸಾರಿ...
                 * * * * *

ಪ್ರೇಮಿ    : ಸ್ವಪ್ನಗಳ ಸಂತೆಯಲ್ಲಿ, ನೀ ಚೆಂದ ವ್ಯಾಪಾರಿ
ಪ್ರೇಮಿ    : ಕನಸುಗಳ ಕೊಳ್ಳುವಾಗ, ನಾನು ಬಹಳ ಉದಾರಿ
ಪ್ರೇಮಿ    : ಪ್ರೀತಿಸಲು ನಿನ್ನನು, ಸದಾ ನಾನು ತಯ್ಯಾರಿ
ಪ್ರೇಮಿ    : ಈ ಹೃದಯದಲ್ಲೀಗ, ನೀನೇ ಅಲ್ಲವೇ ವಿಹಾರಿ...

                  ಸ್ವಪ್ನಗಳ ಸಂತೆಯಲ್ಲಿ,
                  ಸದಾ ನಾನು ಸಂಚಾರಿ

                                                 - ಸಂಪತ್ ಕುಮಾರ್

Thursday, October 03, 2013

ಎಂದೂ ನಿನ್ನ ಕಣ್ಣಲಿ



         Patho version of Sadaa Ninna Kannali song written by me (from the movie Bacchan)

M:    ಎಂದೂ ನಿನ್ನ ಕಣ್ಣಲಿ
        ಕಣ್ಣಾ ಹನಿಯ ಕಾಣಲು
        ಕನಸಿನಲ್ಲೂ ಕೂಡ ಬಯಸಲಾರೆ ನಾನು
        ನಿನ್ನೆಲ್ಲ ನೋವಿಗೂ,
        ನಾನಿಲ್ಲವೇ ಇನ್ನು
        ನೀ ನಕ್ಕರೆ ಮಿಕ್ಕಿದ್ದೆಲ್ಲಾ ಯಾಕಿನ್ನು
        ಬೆನ್ನ ಹಿಂದೆ ನಿಂತು ಬೆಳಕ ತೋರಲೇನು...

        ಎಂದೂ ನಿನ್ನ ಕಣ್ಣಲಿ
        ಕಣ್ಣಾ ಹನಿಯ ಕಾಣಲು
        ಕನಸಿನಲ್ಲೂ ಕೂಡ ಬಯಸಲಾರೆ ನಾನು...
        *********

F:     ಅತಿ ಭಾವುಕ ಅಳುಕೆಲ್ಲವಾ
        ನನ್ನಿಂದ ನೀ ತೊಡೆದೆ
        ಅಪರೂಪದ ಅನುರಾಗವ
        ನಿನ್ನಿಂದ ನಾ ಪಡೆದೆ

        ನೀನೇ ದಾರಿ
        ನೀನೇ ದಿಕ್ಸೂಚಿ
        ನೀನೇ ನನ್ನ ಬಾಳ ಬುನಾದಿ...
        ನೀನೇ ಧೈರ್ಯ
        ನೀನೇ ನಿರ್ದಾರ
        ನೀನೇ ನನ್ನ ಬಾಳ ಸಿತಾರ
M:    ಭಯವೆಲ್ಲವು ಸಾಕು, ಒಲಿದು ಬಾಳಬೇಕು,
        ನಿನಗೆಂದೇ ನಿಂತಿಹೆ, ಪ್ರೀತಿ ಹೊತ್ತು ನಾನು...

        ಎಂದೂ ನಿನ್ನ ಕಣ್ಣಲಿ
        ಕಣ್ಣಾ ಹನಿಯ ಕಾಣಲು
        ಕನಸಿನಲ್ಲೂ ಕೂಡ ಸಹಿಸಲಾರೆ ನಾನು...
        *********

F:     ದುಗುಡವ ಕಳೆಯುವಂತ
        ಹೊಸತನ ಬೆಳೆಯುವಂತ
        ಹೃದಯದ ಕೃಷಿಕ ನೀನು...

        ನೀನೇ ಶಾಂತಿ
        ನೀನೇ ವಿಶ್ರಾಂತಿ
        ನಿನ್ನ ಧ್ಯಾನ ನನ್ನ ಪ್ರವೃತ್ತಿ
        ನನ್ನ ಸ್ಫೂರ್ತಿ
        ನೀನೇ ಸಂಗಾತಿ
        ಬೇರೆ ಎಲ್ಲಾ ವ್ಯರ್ಥ ವದಂತಿ

M:    ಬಳಿ ಇರುವೆನು ನಾನು, ಮರಳಲಾರೆ ಇನ್ನು
        ನಿನ್ನನ್ನೇ ನೋಡುತಾ ಎಲ್ಲಾ ಮರೆವೆ ನಾನು
        *********

M:    ಎಂದೂ ನಿನ್ನ ಕಣ್ಣಲಿ
        ಕಣ್ಣಾ ಹನಿಯ ಕಾಣಲು
        ಕನಸಿನಲ್ಲೂ ಕೂಡ ಬಯಸಲಾರೆ ನಾನು...
        ನಿನ್ನೆಲ್ಲ ನೋವಿಗೂ,
        ನಾನಿಲ್ಲವೇ ಇನ್ನು
        ನೀ ನಕ್ಕರೆ ಮಿಕ್ಕಿದ್ದೆಲ್ಲಾ ಯಾಕಿನ್ನು
        ಬೆನ್ನ ಹಿಂದೆ ನಿಂತು ಬೆಳಕ ತೋರಲೇನು...

                                                   - ಸಂಪತ್ ಕುಮಾರ್

Monday, September 23, 2013

ನನ್ನ ಶಾಂತಲಾ

(Small tribute to my all time favorite historical lady - Naatyaraani Shaanthalaa)

ನನ್ನ ಶಾಂತಲಾ
ನಿತ್ಯಪ್ರೇಮ ನೀರುಣಿಸುವ ಜೀವಕೊಳ
ನನ್ನ ಶಾಂತಲಾ
ಅಮರಪ್ರೇಮ ಕರುಣಿಸುವ ಅಮೃತಜಲ
ಸದಾದಾಹಿ ನಾನು
ಗೆಳತಿ, ಪ್ರೇಮಾಂದೇಹಿ ನೀನು...
*****

ಆನಂದದ ಅಂಬರದಲಿ
ಅರವಿಂದ ವದನ ನಿನ್ನದು
ನಿದ್ರೆ ಬಾರದ ಕಂಗಳಲ್ಲೂ
ನಿತ್ಯ ಕಾಣೋ ಕನಸು ನಿನ್ನದು
ನಿನಗೆಂದೇ ಈ ಬಾಳು ನನ್ನದು,
ಹೇ ಪ್ರೇಮವತ್ಸಲಾ...

ನನ್ನ ಶಾಂತಲಾ
ಮೋಹಗಂಧ ಸುಘಮಿಸುವ ಪುಷ್ಪದಳ
ನನ್ನ ಶಾಂತಲಾ
ಪ್ರೇಮಗಂಗೆ ಉಗಮಿಸುವ ಪುಣ್ಯನೆಲ
ತೀರಯಾನಿ ನಾನು
ದಾಟಿಸು, ಅಂಬಿಗತಿ ನೀನು...
*****

ಅನುಗಾಲ ಅರಳಿನಿಂತ
ಕಮಲದಂತ ನಗುವು ನಿನ್ನದು
ಆ ನಗುವ ಕಾಣಲೆಂದೆ
ಕಾಲದೊಡನೆ ಕದನ ನನ್ನದು
ನಿನಗೆಂದೇ ಈ ಬಾಳು ನನ್ನದು,
ಹೇ ರಶ್ಮಿನಿರ್ಮಲಾ...

ನನ್ನ ಶಾಂತಲಾ
ಬಾಳತುಂಬ ಬೆಳಗಿನಿಂತ ಚಂದ್ರಕಲ
ನನ್ನ ಶಾಂತಲಾ
ಪ್ರೀತಿಹೊತ್ತ ಮನಸುನಿಂದು ಹೂ ಮೃದುಲ
ಹೊನ್ನಮೂಗುತಿ ನಾನು
ಮುತ್ತೈದೆ, ಕನ್ನಡತಿ ನೀನು...

                                      - ಸಂಪತ್ ಕುಮಾರ್ 

Wednesday, September 18, 2013

ಹೋಗಿ ಬಾ,,, ಓ ಗೆಳೆಯ (Dedicated to Shivu and Santhosh)




ಹೋಗಿ ಬಾ,,, ಓ ಗೆಳೆಯ
ಸುತ್ತಿ ಬಾ ಈ ಚಿಕ್ಕ ಇಳೆಯ.
ಕಳಚುತಲಿ ಅಜ್ಞಾನ ಪೊರೆಯ,
ಕಡೆದು ತಾ ಬಾಳೆಂಬ ಶಿಲೆಯ.
ಈಜುತಲಿ ಕನಸುಗಳ ಹೊಳೆಯ,
ಕಲಿತು ಬಾ ಬದುಕುವ ಕಲೆಯ...

ಸುರಿಸುತಲಿ ಸಂತಸದ ಮಳೆಯ,
ಸರಿಸು ನೀ ಕಹಿನೆನಪ ತೆರೆಯ.
ಕಿತ್ತೆಸೆದು ಕಷ್ಟಗಳ ಕಳೆಯ,
ಬೆಳೆದು ತಾ ಧನಕನಕ ಬೆಳೆಯ.
ಹೊತ್ತು ಬಾ ಅನುಭವದ ಹೊರೆಯ,
ಹರಸುವೆವು ನಾವ್ ಹಾರೈಕೆ ಸೆಲೆಯ...

ಬೀಸಿಹುದು ಈ ಸ್ನೇಹ ಬಲೆಯ,
ಮರೆಯದಿರು ಈ ನಮ್ಮ ನೆಲೆಯ.
ಆಲಿಸುತಿರು ನಮ್ಮೆಲ್ಲ ಕರೆಯ,
ತಾಯಿ, ತಾಯ್ನಾಡ ಮಮತೆಯ ಮೊರೆಯ.
ಹರಿಸುತಲಿ ಹೊಸತನದ ಅಲೆಯ,
ಮರಳಿ ಬಾ ಇಲ್ಲೆ, ಓ ಗೆಳೆಯ...

                                         -ಕೆ. ಸಿ. ಸಂಪತ್ ಕುಮಾರ್

Tuesday, May 28, 2013

ನಾ ನಿನ್ನ ಹಿಂದೆ...


ನೀನು ಮುಂದೆ, 
                           ನಾ ನಿನ್ನ ಹಿಂದೆ...
ಸಾಗಿ ಬಂದೆ, ನಿನ್ನ ಬೆನ್ನ ಹಿಂದೆ...
                      * * * * *

ಕಲ್ಲು ಹಾದಿ ಮೇಲೂ, 
ತಣ್ಣೀರ ತಂಗಾಳಿ ಬೀಸಿ... 
ಹುಲ್ಲು ಹಾಸು, ನೋಡಿಲ್ಲಿ
ನೀ ಹೆಜ್ಜೆ ಇಟ್ಟಲ್ಲಿ...
ಹೇಗೆ??? ಏಕೆ??? ಯೋಚಿಸದೆ,,,
ಸಾಗಿ ಬಂದೆ, ನಿನ್ನ ಬೆನ್ನ ಹಿಂದೆ...
ನೀನು ಮುಂದೆ,
                           ನಾ ನಿನ್ನ ಹಿಂದೆ... 
                      * * * * *

ನದಿ ತೀರ ನಾಕಂಡೆ ಇಲ್ಲೆ
ನಿನ್ನ ಹಿಂಗಾಲ ಅಡಿಯಲ್ಲೇ,
ದಾರಿ ಯಾವುದಿಲ್ಲಿ...
ಗೊತ್ತಿಲ್ಲ ಹೋಗುತಿರುವುದೆಲ್ಲಿ...
ಏನು??? ಎತ್ತ??? ಯೋಚಿಸದೆ,,,
ಸಾಗಿ ಬಂದೆ, ನಿನ್ನ ಬೆನ್ನ ಹಿಂದೆ...
ನಿನ್ನ ಮುಂದೆ,
                          ಇರೋ ನಾಳೆ ನಂದೇ...
                      * * * * *

ನೀನು ಮಾತಾಡುವಾಗ
ಆಗಾಗ ಹಿಂತಿರುಗಿ ನೋಡಿ,
ತಾರೆ ಬಂತಲ್ಲೇ ಮೂಡಿ
ಬಿಸಿಲು ಬೆಳಕನ್ನ ದೂಡಿ...
ಹಗಲೋ??? ಇರುಳೋ??? ಯೋಚಿಸದೆ,,,
ಸಾಗಿ ಬಂದೆ, ನಿನ್ನ ಬೆನ್ನ ಹಿಂದೆ...
ನಿನ್ನ ಹಿಂದೆ,
                      ಇರೋ ನೆರಳು ನಂದೇ...
                      * * * * *

ಸದ್ದು ಗದ್ದಲವೇ ಇಲ್ಲ
ನೀನಿರಲು ನನ್ನೆದುರು ನಲ್ಲೆ,
ನಮ್ಮ ನೋಡಿ ಎಲ್ಲ
ಹಾಡಿ ಶುಭಕೋರುತಿರುವರಲ್ಲೆ...
ಇಂದು,,, ಇನ್ನೆಂದೂ... ಯೋಚಿಸದೆ,,,
ಬಂದೆ ಬರುವೆ, ನಿನ್ನ ಬೆನ್ನ ಹಿಂದೆ...
ನಿನಗೆ ಎಂದೇ,
                          ನನ್ನೆ ಹೊತ್ತು ತಂದೆ...
                      * * * * *

ನೀನು ಮುಂದೆ,
                           ನಾ ನಿನ್ನ ಹಿಂದೆ...
ಸಾಗಿ ಬಂದೆ, ನಿನ್ನ ಬೆನ್ನ ಹಿಂದೆ...

                                     - ಸಂಪತ್ ಕುಮಾರ್

Tuesday, May 07, 2013

ತಿರುವು ದಾರಿಯಲ್ಲಿ (written during KODAGU trip)



ಕಾಫಿ ತೋಟವನ್ನು ಸೀಳಿ ಸಾಗುವ
ತಿರುವು ದಾರಿಯಲ್ಲಿ
ಹಾಸಿ ಮಲಗಿದ್ದ ಹಳೆ ಕನಸುಗಳು
ಎದ್ದು ಕುಳಿತವು ಮನಸಿನಲ್ಲಿ,..

ಲೈಟು ಕಂಬದ ಜೋಡಿ ವೈರುಗಳ ನೊಡಿ
ಅವಳ ಕೈಹಿಡಿದು ನೆಡೆದ ನೆನಪು ಬಂತು,..
ಮುಗಿಲಲ್ಲಿ ಹಾರಿಳಿವ ಜೋಡಿ ಹಕ್ಕಿಗಳ ನೋಡಿ
ಅವಳ ಕೈಹಿಡಿದು ಆಡಿದ ನೆನಪು ಬಂತು,..
ಕಣ್ತುಂಬ ಹೊಸ ಹೊಳಪು ಬಂತು,
ತುಟಿತುಂಬ ನಗುವಿನ ಬೆಳಕು ಬಂತು...

ಆ ಪ್ರಪಾತ ಪಾತಾಳ,
ನಾನರಿಯದೆ ಹೋದ ಅವಳಂತರಾಳವಾಗಿ ಕಂಡಿತು...
ಆ ಬೆಟ್ಟ ಹೊದ್ದಿರುವ, ಆ  ಬೆಳ್ಳಿ ಮಂಜಿನೊದಿಕೆ,
ನನ್ನೆದುರು ಈಗಿಲ್ಲದ, ಅವಳ ಮೂಗುತಿ ನತ್ತಿನಂತಿತ್ತು...
ಸುಳಿಗಾಳಿ ಎದುರಾಗಿ ಬೀಸಿ ಬರುತ್ತಿತ್ತು,
ಹಿಂತುರುಗಿ ಅವಳೆಡೆಗೆ ಹೋಗೆಂದು ನೂಕುತಿತ್ತು...

ಆ ಸ್ವಚ್ಚಂಧ ಝರಿನೀರು,
ಒಲವಿರದ ಮನಸಿನ ಕಲುಷತೆಯ, ಕಳೆದುಕೋ ಎನ್ನುತಿತ್ತು...
ಅಜಾನು ಮರಗಳು, ತಬ್ಬಿ ನಿಂತ ಬಳ್ಳಿಗಳ ತೋರಿ,
ನೀನೇಕೆ ಒಂಟಿ ಎಂದು, ಮೂದಲಿಸಿ ನಗುತಿತ್ತು...
ನಿದಿರೆ ತಾಯಿ ಮೈದುಂಬಿ ಬಂದು, ಕಣ್ಣು ಮುಚ್ಚುತಿತ್ತು
ಅವಳಿರುವ ಕನಸುಗಳ ಬುತ್ತಿ ಬಿಚ್ಚುತಿತ್ತು...

ಕಾಫಿ ತೋಟವನ್ನು ಸೀಳಿ ಸಾಗುವ
ತಿರುವು ದಾರಿಯಲ್ಲಿ,
ಬತ್ತಿ ಹೋಗಿದ್ದ ಒಲವ ಚಿಗುರು
ಮೊಳಕೆಯೊಡೆಯಿತು ಮತ್ತೆ ಮನಸಿನಲ್ಲಿ...

                                      - ಸಂಪತ್ ಕುಮಾರ್

Thursday, March 07, 2013

ಕಣ್ತುಂಬ ನಿನ್ನ ಬಿಂಬ


M: ಕಣ್ತುಂಬ ನಿನ್ನ ಬಿಂಬ
     ಕನಸಂತೆ ಇರುವಾಗ
     ಹಗಲೇಕೆ ಇರುಳೇತಕೆ
     ನೀ ಜೊತೆಯಿರದ ಕ್ಷಣವೇತಕೆ...?
F:  ಕಣ್ತುಂಬ ನಿನ್ನ ಬಿಂಬ
     ಕನಸಂತೆ ಇರುವಾಗ
     ಹಗಲೇಕೆ ಇರುಳೇತಕೆ
     ನೀ ಜೊತೆಯಿರದ ಕ್ಷಣವೇತಕೆ...?

             * * *
M: ನನ್ನೆದುರು ಕುಳಿತಾಗ
     ಮಾತಾಡಿ ಮಾಡದಿರು ಕಾಲಹರಣ.
     ಎಂದಿನಂತೆ ಬರುವೆಯಲ್ಲ ಸ್ವಪ್ನದಲ್ಲಿ,
     ಅಲ್ಲೆಗೆಲ್ಲಾ ಉಳಿಸಿಕೋ...
     ಎಷ್ಟುಸಾರಿ ನೋಡಿದರು
     ನಿನ್ನಂದ ನಯನಕೆ ಸಿಹಿಹೂರಣ.
     ಹೂವಿನಂತೆ ನಗುವೆಯಲ್ಲ ಮೌನದಲ್ಲಿ,
     ಎದೆಗೆ ಒಮ್ಮೆ ಒರಗಿಕೋ...

M: ಇಳಿಸಂಜೆ ಮಳೆಮೋಡ
      ಒಲವನ್ನೇ ಸುರಿವಾಗ
      ನಿನಗೇಕೆ ಈ ನಾಚಿಕೆ
      ನನ್ನೊಲವಲ್ಲಿ ನೆನೆಯೋದಕೆ...?

             * * *
M: ಏಕಾಂಗಿ ನಾ ನಡೆವಾಗ
      ಬಿಸಿಲಾದ ಕಾಡುದಾರಿ, ಬಾಳು ಬಂಧನ
      ಕೈಹಿಡಿದು ನೀ ಬರಲು
      ಹೂದೋಟ ಕಾಲುದಾರಿ, ಇದು ಬೃಂದಾವನ
F:   ಒಂಟಿಯಾದ ಚಲನಕಿಲ್ಲ, ಯಾವ ಅರ್ಥ
      ನನ್ನನೊಮ್ಮೆ ಸ್ಮರಿಸಿಕೋ...
      ನನ್ನ ನಿನ್ನ ಮಿಲನವಿಲ್ಲಿ, ಅಲ್ಲ ವ್ಯರ್ಥ
      ಬದುಕಾಗಿ ವರಿಸಿಕೋ...

F:  ಮನತುಂಬ ನಿನ್ನ ಕಾಂತಿ
     ಬೆಳಕಾಗಿ ಇರುವಾಗ
     ಈ ಉಷೆಯೇಕೆ, ಶಶಿಯೇತಕೆ...
     ನೀನಿರುವಾಗ ಉಸಿರೇತಕೆ...?

             * * *
M: ಕಣ್ತುಂಬ ನಿನ್ನ ಬಿಂಬ
     ಕನಸಂತೆ ಇರುವಾಗ
     ಹಗಲೇಕೆ ಇರುಳೇತಕೆ
     ನೀ ಜೊತೆಯಿರದ ಕ್ಷಣವೇತಕೆ...?
F:  ನೀನಿರದಂತ ಬದುಕೇತಕೆ...?

                                            - ಸಂಪತ್ ಕುಮಾರ್

Tuesday, March 05, 2013

ಪಂಚರಂಗಿ ಕಂಪನಿಗಳು



ಪಂಚರಂಗಿ companyಗಳು
punctual boss-uಗಳು
ಏಳೊ ಎಂಟೋ taskಗಳು
ಎಲ್ಲ ಬಿಟ್ಟಿ projectಗಳು
office ಮೇಲೆ water-ಟ್ಯಾಂಕುಗಳು
breakfast, lunch, snacksಗಳು
Manager, TL, Seniorಗಳು
ಇನ್ನು ಹಾಡು ಓದ್ತಾ ಇದ್ದರೆ thanks-uಗಳು

ಪಂಚರಂಗಿ campusಗಳು
ಪಕ್ಕದcompany figureಗಳು
ಏನೋ relationಗಳು
ಎಂಥಾ connectionಗಳು
ಎಲ್ಲ coffee-dayಲು rush-uಗಳು
ಎಲ್ಲರೂ ಇಲ್ಲಿ ಜೋಡಿಗಳು
ನಾವೇ ಸ್ವಲ್ಪ moodyಗಳು
ನಾವು ನೆಡೆದಾಡೊ ಖಾಲಿ, pen drive-uಗಳು

softwareಗಳು, hardwareಗಳು, professionals-uಗಳು
engineering-u, marketing-u, HR Managerಗಳು,
Java, VB, Perl, .net, developerಗಳು,
ಕೈತುಂಬಾ ಕೆಲಸ ಮಾಡ್ಸಿ payslipಅಲ್ಲಿ ಚೊಂಬು ಕೊಡೊ clientಗಳು,
compile ಮಾಡಲು ಮನಸೇ ಬಾರದ codeಗಳು,
ಕಷ್ಟದ off-shoreಗಳು, onsiteಗೆ bucketಗಳು
ಸತ್ತರು employeeಗಳು, ಇದ್ದರು managerಗಳು...

ಗಿಲಿ ಗಿಲಿ ಗಿಲಿ ನಗುವ colleagueಗಳು,
yes ಸರ್, no ಸರ್ discussionಗಳು, meeting-roomಗಳು,
appraisal ಮೇಲೆ, "Improve domain knowledge, team work skills, communication skills" ಎಂಬ ಬರಹಗಳು
notice mailsಅಲ್ಲಿ timings, rules, disciplines ಗಳ ವಿರಹಗಳು
fresh freshers ಮಿಡಿತಗಳು
blush seniorsಗಳ ತುಡಿತಗಳು
managerವರ್ಯ, ಇವತ್ತಿಗಿಷ್ಟು ಸಾಕು ನಾ ತಿರುಗಿ ನಾಳೆ ಮಾತಾಡಲೇ..?

printout-uಗಳು, manual-uಗಳು,
read-meಗಳು, data sheetಗಳು,
planning-uಗಳು, update-uಗಳು,
deadline-uಗಳು, buggy releaseಗಳು
testinggg,,, set upಗಳು,
fully busy serverಗಳು,
proxy siteಗಳು, download-uಗಳು...

ಪಂಚರಂಗಿ campusಗಳು
ಪಕ್ಕದcompany figureಗಳು
ಗಳು, ಗಳು, ಗಳು, ಗಳು...

MS Paintನಲ್ಲಿ ಬರೆದ  Manager cartoon-uಗಳು
ಹಳೆ ID card, ಹೊಸ tag-uಗಳು
trainingಗಳು, interviewಗಳು, offerಗಳು, fire-outಗಳು...
hike ಆಸೆಯ ಮುಳುಗಡೆಗಳು
resignation letterಗಳು, TL, HR sign-uಗಳು,
ಉಳ್ಕೊಂಡ PFಗಳು, ಮಾಡ್ಕೊಂಡ ಎಡವಟ್ಟುಗಳು,
office dayಗಳು, love starting-uಗಳು, ending-uಗಳು,
ಕಿರಿಕ್ಕುಗಳು, tax-deductionಗಳು, ಸಂಬಳಗಳು...
constant ಆಗೇ ಉಳಿವ pay-slipಗಳು,
EMI ಅಲ್ಲೇ ಕೊಳ್ಳುವ credit card-uಗಳು...

ಇಂತಾ ಸಂಧರ್ಭದಲ್ಲಿ ನಾವು ಕೆಲಸ ಮಾಡುತ್ತಿದ್ದೇವೆ, ನೀವು ಕೆಲಸ ಮಾಡಿಸುತ್ತಿದ್ದೀರಿ,
managerವರ್ಯ office-u bore-u, ನಾ half-day ರಜೆ ಹಾಕಲೇ...?

weekend-uಗಳು, long drive-uಗಳು,
Budwieser beer-ಗಳು, Paneer tikkaaಗಳು (ಆಗ್ಲಪ್ಪಾ)
trekking-uಗಳು, swimming-uಗಳು (ಆಮೇಲೆ)
multiplex mallಗಳು, cinema-aಗಳು (ಓಹೋ)
6-pack gym-uಗಳು, consultancy call-uಗಳು,
2G, 3G, ಹುಟ್ಟು ಸಾವು sample-uಗಳು,,,

ಎಲ್ಲ ಮಹಾ bore-uಗಳು, ದಿನಸಾಯೊ IT ಹೆಣಗಳು... (ಆಯ್ತು ಬಿಡಪ್ಪಾ)
ಹೊಸ commitment-uಗಳು,
ಹಳೆ settlement-uಗಳು,
ಬದುಕುವುದಾ ಮರೆತಿವೆ ಟೆಕ್ಕಿಗಳು,,,
ಒಂದು ಒಳ್ಳೆ ನಗುವಿಗೆ, meaningful ಬದುಕಿಗೆ
ಎಲ್ಲೈತಪ್ಪ ಇಲ್ಲಿ ಜಾಗಗಳು...

                                       -ಕೆ. ಸಿ. ಸಂಪತ್ ಕುಮಾರ್