ನಾ ಮುಳುಗಿ ಹೋದೆ, ನಲ್ಲೇ...
ನಿನ್ನಾ,,,
ಮುಗುಳುನಗುವಿನಲ್ಲೇ,,,
ನೀ ಎಲ್ಲ ಮುನಿಸ ಕೊಲ್ಲಬಲ್ಲೆ...
ನಿನ್ನಾ,,,
ಮುಗುಳುನಗುವಿನಲ್ಲೇ,,,
ನೀ ಎಲ್ಲ ಮುನಿಸ ಕೊಲ್ಲಬಲ್ಲೆ...
***
ಮನಸಿನಾಳದಲ್ಲಿ, ಒಂದು ಮಧುರವಾದ ಒಲುಮೆ,,,
ಮನಸಿನಾಳದಲ್ಲಿ, ಒಂದು ಮಧುರವಾದ ಒಲುಮೆ,,,
ನೀನು ಸಿಕ್ಕ ಮೇಲೆ,
ಮೂಡಿಬಂತು ಮೆಲ್ಲನೆ...
ಬಿಸಿಲುಗಾಲದಲ್ಲಿ, ಒಂದು ಮಳೆಯಬಿಲ್ಲ ನಲುಮೆ,,,
ನೀನು ನಕ್ಕ ಮೇಲೆ,
ದೋಚಿಕೊಂತು ನನ್ನನೆ...
ಮನಸು-ಮನಸು ಸೇರುವಾಗ,,, ಮೌನವೊಂದೇ ಸಾಕಲ್ಲವೇ...???
ಮೂಡಿಬಂತು ಮೆಲ್ಲನೆ...
ಬಿಸಿಲುಗಾಲದಲ್ಲಿ, ಒಂದು ಮಳೆಯಬಿಲ್ಲ ನಲುಮೆ,,,
ನೀನು ನಕ್ಕ ಮೇಲೆ,
ದೋಚಿಕೊಂತು ನನ್ನನೆ...
ಮನಸು-ಮನಸು ಸೇರುವಾಗ,,, ಮೌನವೊಂದೇ ಸಾಕಲ್ಲವೇ...???
ನಿನ್ನ ಹಿಂದೆ ಅಲೆಯುವಾಗ,,, ನನ್ನಲೇನೆ ನಾನಿಲ್ಲವೇ...
***
ಮುಗುಳುನಗುವಿನಲ್ಲೇ,,,
ನಾ ಮಾರು ಹೋದೆ, ನಲ್ಲೇ...
ನಿನ್ನಾ,,,
ಮುಗುಳುನಗುವಿನಲ್ಲೇ,,,
ನೀ ಎಲ್ಲ ಕನಸ ಕದಿಯಬಲ್ಲೆ...
***
ನಿನ್ನ ನೋಟದಲ್ಲಿ, ಇದ್ದ ಸಮ್ಮೋಹದ ಸೆಲೆಗೆ
***
ಮುಗುಳುನಗುವಿನಲ್ಲೇ,,,
ನಾ ಮಾರು ಹೋದೆ, ನಲ್ಲೇ...
ನಿನ್ನಾ,,,
ಮುಗುಳುನಗುವಿನಲ್ಲೇ,,,
ನೀ ಎಲ್ಲ ಕನಸ ಕದಿಯಬಲ್ಲೆ...
***
ನಿನ್ನ ನೋಟದಲ್ಲಿ, ಇದ್ದ ಸಮ್ಮೋಹದ ಸೆಲೆಗೆ
ಏನು ತಾನೆ ಸಾಟಿ,
ಬೇಕೇ ಬೇರೆ ಬಣ್ಣನೆ...
ಅಂತರಂಗದಲ್ಲಿ, ಎದ್ದ ವ್ಯಾಮೋಹದ ಅಲೆಗೆ,,,
ತೇಲಿ ಹೋದೆ ನಾನೇ,
ಬೇಕೇ ಬೇರೆ ಬಣ್ಣನೆ...
ಅಂತರಂಗದಲ್ಲಿ, ಎದ್ದ ವ್ಯಾಮೋಹದ ಅಲೆಗೆ,,,
ತೇಲಿ ಹೋದೆ ನಾನೇ,
ಮಾತಿಲ್ಲದೇ ಸುಮ್ಮನೇ...
ದೂರ ನೀನು ಹೋದಾಗ, ನೆರಳಿಗೂ ನೋವಾಗಿದೆ...
ದೂರ ನೀನು ಹೋದಾಗ, ನೆರಳಿಗೂ ನೋವಾಗಿದೆ...
ಮತ್ತೆ ನಿನ್ನಾ ಕಾಣೋವರೆಗೂ, ಜೀವದಲ್ಲಿ ಉಸಿರೆಲ್ಲಿದೆ...
***
ಮುಗುಳುನಗುವಿನಲ್ಲೇ,,,
***
ಮುಗುಳುನಗುವಿನಲ್ಲೇ,,,
ನಾ ಮರುಳನಾದೆ, ನಲ್ಲೆ...
ನಿನ್ನಾ,,,
ಮುಗುಳುನಗುವಿನಲ್ಲೇ,,,
ನಿನ್ನಾ,,,
ಮುಗುಳುನಗುವಿನಲ್ಲೇ,,,
ನೀ ನನ್ನ ಎದೆಯ ಗಿಲ್ಲಬಲ್ಲೆ...
ನೀ ನನ್ನ ಹ್ರದಯ ಗೆಲ್ಲಬಲ್ಲೆ...
ನೀ ನನ್ನ ಹ್ರದಯ ಗೆಲ್ಲಬಲ್ಲೆ...
- ಸಂಪತ್ ಕುಮಾರ್