Tuesday, May 28, 2013

ನಾ ನಿನ್ನ ಹಿಂದೆ...


ನೀನು ಮುಂದೆ, 
                           ನಾ ನಿನ್ನ ಹಿಂದೆ...
ಸಾಗಿ ಬಂದೆ, ನಿನ್ನ ಬೆನ್ನ ಹಿಂದೆ...
                      * * * * *

ಕಲ್ಲು ಹಾದಿ ಮೇಲೂ, 
ತಣ್ಣೀರ ತಂಗಾಳಿ ಬೀಸಿ... 
ಹುಲ್ಲು ಹಾಸು, ನೋಡಿಲ್ಲಿ
ನೀ ಹೆಜ್ಜೆ ಇಟ್ಟಲ್ಲಿ...
ಹೇಗೆ??? ಏಕೆ??? ಯೋಚಿಸದೆ,,,
ಸಾಗಿ ಬಂದೆ, ನಿನ್ನ ಬೆನ್ನ ಹಿಂದೆ...
ನೀನು ಮುಂದೆ,
                           ನಾ ನಿನ್ನ ಹಿಂದೆ... 
                      * * * * *

ನದಿ ತೀರ ನಾಕಂಡೆ ಇಲ್ಲೆ
ನಿನ್ನ ಹಿಂಗಾಲ ಅಡಿಯಲ್ಲೇ,
ದಾರಿ ಯಾವುದಿಲ್ಲಿ...
ಗೊತ್ತಿಲ್ಲ ಹೋಗುತಿರುವುದೆಲ್ಲಿ...
ಏನು??? ಎತ್ತ??? ಯೋಚಿಸದೆ,,,
ಸಾಗಿ ಬಂದೆ, ನಿನ್ನ ಬೆನ್ನ ಹಿಂದೆ...
ನಿನ್ನ ಮುಂದೆ,
                          ಇರೋ ನಾಳೆ ನಂದೇ...
                      * * * * *

ನೀನು ಮಾತಾಡುವಾಗ
ಆಗಾಗ ಹಿಂತಿರುಗಿ ನೋಡಿ,
ತಾರೆ ಬಂತಲ್ಲೇ ಮೂಡಿ
ಬಿಸಿಲು ಬೆಳಕನ್ನ ದೂಡಿ...
ಹಗಲೋ??? ಇರುಳೋ??? ಯೋಚಿಸದೆ,,,
ಸಾಗಿ ಬಂದೆ, ನಿನ್ನ ಬೆನ್ನ ಹಿಂದೆ...
ನಿನ್ನ ಹಿಂದೆ,
                      ಇರೋ ನೆರಳು ನಂದೇ...
                      * * * * *

ಸದ್ದು ಗದ್ದಲವೇ ಇಲ್ಲ
ನೀನಿರಲು ನನ್ನೆದುರು ನಲ್ಲೆ,
ನಮ್ಮ ನೋಡಿ ಎಲ್ಲ
ಹಾಡಿ ಶುಭಕೋರುತಿರುವರಲ್ಲೆ...
ಇಂದು,,, ಇನ್ನೆಂದೂ... ಯೋಚಿಸದೆ,,,
ಬಂದೆ ಬರುವೆ, ನಿನ್ನ ಬೆನ್ನ ಹಿಂದೆ...
ನಿನಗೆ ಎಂದೇ,
                          ನನ್ನೆ ಹೊತ್ತು ತಂದೆ...
                      * * * * *

ನೀನು ಮುಂದೆ,
                           ನಾ ನಿನ್ನ ಹಿಂದೆ...
ಸಾಗಿ ಬಂದೆ, ನಿನ್ನ ಬೆನ್ನ ಹಿಂದೆ...

                                     - ಸಂಪತ್ ಕುಮಾರ್

Tuesday, May 07, 2013

ತಿರುವು ದಾರಿಯಲ್ಲಿ (written during KODAGU trip)



ಕಾಫಿ ತೋಟವನ್ನು ಸೀಳಿ ಸಾಗುವ
ತಿರುವು ದಾರಿಯಲ್ಲಿ
ಹಾಸಿ ಮಲಗಿದ್ದ ಹಳೆ ಕನಸುಗಳು
ಎದ್ದು ಕುಳಿತವು ಮನಸಿನಲ್ಲಿ,..

ಲೈಟು ಕಂಬದ ಜೋಡಿ ವೈರುಗಳ ನೊಡಿ
ಅವಳ ಕೈಹಿಡಿದು ನೆಡೆದ ನೆನಪು ಬಂತು,..
ಮುಗಿಲಲ್ಲಿ ಹಾರಿಳಿವ ಜೋಡಿ ಹಕ್ಕಿಗಳ ನೋಡಿ
ಅವಳ ಕೈಹಿಡಿದು ಆಡಿದ ನೆನಪು ಬಂತು,..
ಕಣ್ತುಂಬ ಹೊಸ ಹೊಳಪು ಬಂತು,
ತುಟಿತುಂಬ ನಗುವಿನ ಬೆಳಕು ಬಂತು...

ಆ ಪ್ರಪಾತ ಪಾತಾಳ,
ನಾನರಿಯದೆ ಹೋದ ಅವಳಂತರಾಳವಾಗಿ ಕಂಡಿತು...
ಆ ಬೆಟ್ಟ ಹೊದ್ದಿರುವ, ಆ  ಬೆಳ್ಳಿ ಮಂಜಿನೊದಿಕೆ,
ನನ್ನೆದುರು ಈಗಿಲ್ಲದ, ಅವಳ ಮೂಗುತಿ ನತ್ತಿನಂತಿತ್ತು...
ಸುಳಿಗಾಳಿ ಎದುರಾಗಿ ಬೀಸಿ ಬರುತ್ತಿತ್ತು,
ಹಿಂತುರುಗಿ ಅವಳೆಡೆಗೆ ಹೋಗೆಂದು ನೂಕುತಿತ್ತು...

ಆ ಸ್ವಚ್ಚಂಧ ಝರಿನೀರು,
ಒಲವಿರದ ಮನಸಿನ ಕಲುಷತೆಯ, ಕಳೆದುಕೋ ಎನ್ನುತಿತ್ತು...
ಅಜಾನು ಮರಗಳು, ತಬ್ಬಿ ನಿಂತ ಬಳ್ಳಿಗಳ ತೋರಿ,
ನೀನೇಕೆ ಒಂಟಿ ಎಂದು, ಮೂದಲಿಸಿ ನಗುತಿತ್ತು...
ನಿದಿರೆ ತಾಯಿ ಮೈದುಂಬಿ ಬಂದು, ಕಣ್ಣು ಮುಚ್ಚುತಿತ್ತು
ಅವಳಿರುವ ಕನಸುಗಳ ಬುತ್ತಿ ಬಿಚ್ಚುತಿತ್ತು...

ಕಾಫಿ ತೋಟವನ್ನು ಸೀಳಿ ಸಾಗುವ
ತಿರುವು ದಾರಿಯಲ್ಲಿ,
ಬತ್ತಿ ಹೋಗಿದ್ದ ಒಲವ ಚಿಗುರು
ಮೊಳಕೆಯೊಡೆಯಿತು ಮತ್ತೆ ಮನಸಿನಲ್ಲಿ...

                                      - ಸಂಪತ್ ಕುಮಾರ್