ಪ್ರೇಮಿ : ಸ್ವಪ್ನಗಳ ಸಂತೆಯಲ್ಲಿ, ಸದಾ ನಾನು ಸಂಚಾರಿ
ಪ್ರೇಮಿ : ಕನಸುಗಳ ಕೊಳ್ಳುವಾಗ, ನಾನು ಬಹಳ ಉದಾರಿ
ಪ್ರೇಮಿ : ಪ್ರೀತಿಸಲು ನಿನ್ನನು, ಸದಾ ನಾನು ತಯ್ಯಾರಿ
ಪ್ರೇಮಿ : ಈ ಹೃದಯದಲ್ಲೀಗ, ನೀನೇ ಅಲ್ಲವೇ ವಿಹಾರಿ...
ಸ್ವಪ್ನಗಳ ಸಂತೆಯಲ್ಲಿ,
ಸದಾ ನಾನು ಸಂಚಾರಿ
* * * * *
ಪ್ರೇಯಸಿ : ಬರುವೆ ನಾ ನಿನ್ನ ಅನುಸರಿಸಿ,
ಪ್ರೇಯಸಿ : ಅಪ್ಪಿಕೋ ಕೊರಳನು ಬಳಸಿ,
ಪ್ರೇಯಸಿ : ನೆನಪುಗಳ ಮತ್ತೆ ವಿಂಗಡಿಸಿ
ಪ್ರೇಯಸಿ : ಸವಿಯುವ ಒಂದೊಂದೇ ಸ್ಮರಿಸಿ,
ಪ್ರೇಮಿ : ಹೋಗಿದೆ ಹೃದಯವೀಗ, ನನ್ನದೇ ಕೈ ಮೀರಿ
ಪ್ರೇಯಸಿ : ಸಾಗವೆನು ಬಾಳದಾರಿ, ನಿನ್ನನು ನಾನು ಸೇರಿ...
* * * * *
ಪ್ರೇಯಸಿ : ಬೇಡ ಇನ್ನೇಕೆ ಬೆಳದಿಂಗಳು,
ಪ್ರೇಯಸಿ : ಚಂದಿರ ನೀನೆ ಬಳಿಯಿರಲು...
ಪ್ರೇಯಸಿ : ಚುಂಬನ ನಿನ್ನ ಕಿರಣಗಳ,
ಪ್ರೇಯಸಿ : ಕಾಣಲಿ ನನ್ನ ಕಣ್ಣುಗಳು...
ಪ್ರೇಮಿ : ನಿಂತಿಹೆ ನನ್ನೆದುರು, ಮೋಹವೇ ಮೈದೋರಿ
ಪ್ರೇಮಿ : ನೋಡುವೆನು ಕಣ್ತುಂಬಾ, ಸುಮ್ಮನೆ ಒಂದು ಸಾರಿ...
* * * * *
ಪ್ರೇಮಿ : ಸ್ವಪ್ನಗಳ ಸಂತೆಯಲ್ಲಿ, ನೀ ಚೆಂದ ವ್ಯಾಪಾರಿ

- ಸಂಪತ್ ಕುಮಾರ್