Friday, July 07, 2017
Friday, May 12, 2017
Meri Pyaari Bindu
ಹಾ, ಸೋತೆ ನಾನು, ನನ್ನ ಹೃದಯಾ...
Kannada version of the beautiful song 'Haa, Haareya Main, Dil Haareya' from the movie
'Meri Pyaari Bindu'
Link to the original song: https://www.youtube.com/watch?v=TyMUY2CDrjc
ನೋಡಿದೆ ನಾ, ಚಂದ್ರಕಾಂತಿಯಾ
ಮಿನುಗೋ ಕೋಟಿ ಚುಕ್ಕಿ ತಾರೆಯಾ
ನಿನ್ನ ಹಾಗೆ ಯಾರೂ ಇಲ್ಲ, ಬಲ್ಲೆಯಾ...?
ಅನಿಸುತಿದೆ ನಿನ್ನ ಕಣ್ಣಿನಾಳದಿ
ಮುಳುಗದೆ ನಾ, ಉಳಿಯುವೆನೆ...
ನಾ ಪ್ರೀತಿಸುವುದ, ತಡೆಯೋಕೆ
ಈಗ ಯಾರಿಂದಾನ, ಸಾಧ್ಯವಾ...?
ಹಾ, ಸೋತೆ ನಾನು, ನನ್ನ ಹೃದಯಾ...
ಹಾ, ಸೋತೆ ನಾನು, ನನ್ನ ಹೃದಯಾ...
ಹಾ, ಸೋತೆ ನಾನು, ನನ್ನ ಹೃದಯಾ...
ನಾ,,, ಸೋತೆ, ನಿನಗೇ...
ಓ, ಸೋತೆ ನಾನು, ನನ್ನ ಹೃದಯಾ...
ಓ, ಸೋತೆ ನಾನು, ನನ್ನ ಹೃದಯಾ...
ಓ, ಸೋತೆ ನಾನು, ನನ್ನ ಹೃದಯಾ...
ನಾ,,, ಸೋತೆ, ನಿನಗೇ...
ನಾ,,, ಸೋತೆ, ನಿನಗೇ...
ಓಹೋ ಓ...
ಓಹೋ ಓ...
* * *
ಬಿಡಿಗಣ್ಣಿನಲ್ಲಿ ಕಾಣೋ,,, ಸಿಹಿ ಕನಸು ನೀನು.
ಎದೆಯಾಳಕೇ ಇಳಿದ,,, ಪ್ರೀತಿ ಮಾತು ನೀನು.
ಬಿಡಿಗಣ್ಣಿನಲ್ಲಿ ಕಾಣೋ,,, ಸಿಹಿ ಕನಸು ನೀನು.
ಎದೆಯಾಳಕೇ ಇಳಿದ,,, ಪ್ರೀತಿ ಮಾತು ನೀನು.
ನಿನ್ನ ಹೆಸರಿನಾ, ನಶೆ,,, ನಶೆ,,,
ನಾಲಿಗೆಗೆ ಹತ್ತಿಕೊಂಡಿದೆ.
ಈ ಮೋಹದಲ್ಲಿ, ಬೀಳುವಾಗ,,,
ತಡೆಯೋಕೇ, ನನ್ನಿಂದ ತಾನೇ, ಸಾಧ್ಯವಾ...?
* * *
ನೋಡಿದೆ ನಾ, ಹೂವಿನಂದವಾ
ಘಮಿಸೋ ಹೂವ ಆ ಸುಗಂಧವಾ
ನಿನ್ನ ಹಾಗೆ ಯಾರೂ ಇಲ್ಲ, ಬಲ್ಲೆಯಾ...?
ಅನಿಸುತಿದೆ ನಿನ್ನ, ತೋಳುಗಳಲಿ
ಸೆರೆಯಾಗದೆ ನಾ, ಉಳಿಯುವೆನೆ.
ನಾ ಪ್ರೀತಿಸುವುದ, ತಡೆಯೋಕೆ
ಈಗ ಯಾರಿಂದಾನ, ಸಾಧ್ಯವಾ...?
ಹಾ, ಸೋತೆ ನಾನು, ನನ್ನ ಹೃದಯಾ...
ಹಾ, ಸೋತೆ ನಾನು, ನನ್ನ ಹೃದಯಾ...
ಹಾ, ಸೋತೆ ನಾನು, ನನ್ನ ಹೃದಯಾ...
ನಾ,,, ಸೋತೆ, ನಿನಗೇ...
ನಾ,,, ಸೋತೆ, ನಿನಗೇ...
ಓಹೋ ಓ...
- ಸಂಪತ್ ಕುಮಾರ್
Thursday, May 11, 2017
ಕನ್ಯಾಕುಮಾರಿಯಿಂದ ಕಾಶ್ಮೀರಕ್ಕೆ... (ದಿನ-4: ಬೆಳಗಾವಿಯಿಂದ ಮಹಾಬಲೇಶ್ವರ )
ಕನ್ಯಾಕುಮಾರಿಯಿಂದ ಕಾಶ್ಮೀರಕ್ಕೆ
ಮೊದ ಮೊದಲು http://kcsampath.blogspot.in/2017/03/blog-post.htmlಪಯಣಕ್ಕೊಂದು ಪಯಣ http://kcsampath.blogspot.in/2017/03/blog-post_91.html
ದಿನ-1: ಕನ್ಯಾಕುಮಾರಿಯಿಂದ ಮದುರೈ http://kcsampath.blogspot.in/2017/04/1.html
ದಿನ-2: ಮದುರೈಯಿಂದ ತುಮಕೂರು http://kcsampath.blogspot.in/2017/04/2.html
ದಿನ-3: ತುಮಕೂರಿನಿಂದ ಬೆಳಗಾವಿ http://kcsampath.blogspot.in/2017/05/3.html
ದಿನ-4: ಬೆಳಗಾವಿಯಿಂದ ಮಹಾಬಲೇಶ್ವರ
17 ಜನವರಿ 2017ಮಂಗಳವಾರ
ನಾನು ಹೊರಡುವಷ್ಟರಲ್ಲಿ, ಎಲ್ಲರೂ ಹೇಳಿದ್ದ ಸಮಯಕ್ಕೆ ಅರ್ಧ ತಾಸಿಗೂ ಹೆಚ್ಚು ತಡವಾಗಿ, ಅವರು ನಾಲ್ವರನ್ನೂ ಕಾಯಿಸಿಬಿಟ್ಟೆ.
"ನಾನು ರೆಡಿ, luggage ಎಲ್ಲ ತೆಗೆದುಕೊಂಡು ಬನ್ನಿ, check-out ಮಾಡುವಾ" ಎಂದು, ಅವರಿಬ್ಬರ ರೂಮುಗಳಿಗೂ ಫೋನ್ ಮಾಡಿ ಹೇಳಿ, ನನ್ನ ಲಗೇಜನ್ನೆಲ್ಲ ಹೊತ್ತುಕೊಂಡು ಹೋಟೆಲ್ reception ಹತ್ರ ಬಂದೆ.
ನನ್ನ ತಪ್ಪಿಗೆ, ನನ್ನನ್ನು ಇಡೀ ದಿನ ಬಯ್ಯಲು, ಎಲ್ಲರಿಗೂ ಅವಕಾಶ ಸಿಕ್ಕಿತ್ತು. ಇಡೀ ದಿನ ನಾನು ತಿರುಗಿ ಮಾತಾಡದಷ್ಟು, ಅವರು ರೇಗಿಸುವರೆಂದು ಅರ್ಥವಾಗಿತ್ತು.
ಎಲ್ಲರೂ ಬಂದು, ಲಗೇಜನ್ನೆಲ್ಲ ಬೈಕುಗಳಿಗೆ ಕಟ್ಟಿ, ಹೋಟೆಲಿನವರು ಆಫರ್ ಮಾಡಿದ್ದ complementary breakfast ತಿನ್ನಲು ಪಕ್ಕದಲ್ಲಿದ್ದ restaurant ಗೆ ನೆಡೆದೆವು.
ನಿನ್ನೆ ತುಮಕೂರಿನಲ್ಲೇ ತಟ್ಟೆ ಇಡ್ಲಿ ತಿಂದು ಬಂದಿದ್ದ ನಾವು, ಈಗ "ತುಮಕೂರು ಇಡ್ಲಿ ಸೆಂಟರ್" ಹೆಸರಿನ ಹೋಟೆಲಿಗೆ ಬಂದಿದ್ದೆವು. ಅಲ್ಲಿ ಏನ್ ಸಿಗುತ್ತೆ ತಿಂಡಿಗೆ ಅಂದ್ರೆ, "ಸಾರ್, ತಟ್ಟೆ ಇಡ್ಲಿ ಇಲ್ಲಿನ ಸ್ಪೆಷಲ್" ಅಂದ ಅಲ್ಲಿನ ಸರ್ವರ್. "ನಿನ್ನೆ ತುಮಕೂರಲ್ಲೇ ತಿಂದು ಬಂದಿದೀವಿ ಗುರು" ಅಂತ ಹೇಳಿ, ಆದ್ರೂ ಒಂದೆರಡು ತಟ್ಟೆ ಇಡ್ಲಿ ಜೊತೆಗೆ, ದೋಸೆ ಆರ್ಡರ್ ಮಾಡಿ, breakfast ಮುಗಿಸಿದೆವು.
ಇಂದಿನ ನಮ್ಮ ಪಯಣ ಬೆಳಗಾವಿಯಿಂದ ಮಹಾಬಲೇಶ್ವರಕ್ಕಿದ್ದು, 320km ಸಾಗಬೇಕಿತ್ತು. ಸುಮಾರು ಆರು ತಾಸಿನಲ್ಲಿ ನಾವಲ್ಲಿಗೆ ತಲುಪಬಹುದೆಂದುಕೊಂಡೆವು. ಈಗಿನ್ನು ಬೆಳಗಿನ 8.30, ಬಿಸಿಲೇರುವುದಕ್ಕೆ ಮುಂಚೆಯೇ ನಾವು ಹೊರಟಂತಾಯಿತು.
ಬೆಳಗಾವಿಯ ಹೊರವಲಯದಲ್ಲಿ, ಪೆಟ್ರೋಲ್ ತುಂಬಿಸಿಕೊಳ್ಳಲು ನಿಂತೆವು. ಅಲ್ಲೇ ಪಕ್ಕದಲ್ಲಿದ್ದ Emission Test ಶಾಪ್ ನೋಡಿ, ನಮ್ಮ ಎಲ್ಲರ ಬೈಕುಗಳ ಎಮಿಷನ್ ಸರ್ಟಿಫಿಕೇಟ್ expire ಆಗಿರುವುದರ ನೆನಪಾಯಿತು. ಈಗ ಬೆಳಗಾವಿಯಿಂದ ತುಸು ಮುಂದೆ ಹೋದರೆ, ನಮ್ಮ ಗಡಿ ದಾಟಿ ಬೇರೆ ರಾಜ್ಯ ಸಿಗುತ್ತದೆ. ಇಲ್ಲಿಂದ ಮುಂದೆ ಎಲ್ಲಿಯೇ ಆದರೂ ಪೊಲೀಸರು ಹಿಡಿದರೆ, ನಮ್ಮಲ್ಲಿದ್ದ ಒಂದು document ಸರಿಯಿಲ್ಲವಾದರೂ ನಮಗೇ ತಾಪತ್ರಯ ಅಂದುಕೊಂಡು. Emission Test ಮಾಡಿಸಿಕೊಂಡೆವು.
ಆ ಶಾಪ್, ಒಂದೇ ಒಂದು ಚಿಕ್ಕ ಮಳಿಗೆ. ಅದರೊಳಗೆ ಸಣ್ಣ ಟೀ ಅಂಗಡಿಯನ್ನೂ ನೆಡೆಸುತ್ತಾ, ಎಮಿಶನ್ ಟೆಸ್ಟ್ ಕೂಡ ಮಾಡಿಕೊಡುತ್ತಾ, ಆ ಶಾಪ್ ನೆಡೆಸುತ್ತಿದ್ದವನು, ಸುಮಾರು 23 ವಯಸ್ಸಿನ ಹುಡುಗ. ಆತನ ಭಾಷೆ ಬೆಳಗಾವಿಯ ಕನ್ನಡದಂತಿರಲಿಲ್ಲ. "ಯಾವೂರು ನಿಮ್ಮದು" ಅಂತ ಕೇಳಿದಾಗ, "ನನ್ನದು ಉಡುಪಿಯ ಹತ್ತಿರ ಒಂದು ಹಳ್ಳಿ. ಈಗೊಂದು ಆರು ತಿಂಗಳಿಂದ ಈ ಅಂಗಡಿ ನೆಡೆಸಿಕೊಂಡು ಇದೀನಿ" ಅಂದ. ಅಲ್ಲದೆ ತಾನು BCA ಮುಗಿಸಿರುವುದಾಗಿಯೂ, ನಾಳೆ ಒಂದು ಕೆಲ್ಸಕ್ಕೆ ಇಂಟರ್ವ್ಯೂಗೆ ಹೋಗಬೇಕಿರುವುದಾಗಿಯೂ ತಿಳಿಸಿದ.
ಮತ್ತೆ, ಅಲ್ಲಿಗೆ ಕೆಲಸಕ್ಕೆ ಹೋದರೆ, ಈ ಅಂಗಡಿಯನ್ನು ಏನು ಮಾಡುವುದಾಗಿ ಕೇಳಿದಾಗ, "ಇದು ನನ್ನ ಸ್ವಂತದಲ್ಲ, ಬೇರೆ ಕೆಲಸ ಸಿಗುವುವರೆಗೂ ಈ ಅಂಗಡಿ ನೆಡಿಸಿಕೊಂಡು, ಕೆಲಸಕ್ಕೆ ಇದ್ದೀನಿ".
"ನಾನು ಬಿಟ್ಟು ಹೋದ ಮೇಲೆ, ಇನ್ನೊಬ್ಬನನ್ನ ಹುಡುಕಿಕೊಳ್ತಾರೆ ನಮ್ಮ ಓನರ್" ಅಂದ.

ಯಾವ ಮುಜುಗರವೂ ಇಲ್ಲದೇ, ಬೇರೊಂದು ಊರಿಗೆ ಬಂದು, ಆ ರೋಡ್ ಸೈಡಿನ ಚಿಕ್ಕ ಮಳಿಗೆಯಲ್ಲೇ ಇದ್ದುಕೊಂಡು, ಟೀ ಅಂಗಡಿ-ಎಮಿಶನ್ ಟೆಸ್ಟ್ ಎಲ್ಲ ಮಾಡಿಕೊಳ್ಳುತ್ತ, ಜೊತೆಗೆ ತನ್ನ ಓದಿಗೆ ಸರಿಯಾದ ಕೆಲಸವನ್ನೂ ಹುಡುಕುತ್ತಾ, ಭವಿಷ್ಯ ರೂಪಿಸಿಕೊಳ್ಳಲು ನಿಂತಿದ್ದ ಆತನನ್ನು ಕಂಡು ಖುಷಿಯಾಯಿತು. ಒಂದು friendly appreciate ಮಾಡುವ ಮನಸ್ಸಾಯಿತು, ಆದರೆ ಉಳಿದವರು ಸ್ವಲ್ಪ over acting ಮಾಡ್ತಿದಾನೆ ಅಂದುಕೊಳ್ತಾರೆ, ಅಂತ ಸುಮ್ಮನೆ ಒಂದು ಥ್ಯಾಂಕ್ಸ್ ಹೇಳಿ ಹೊರಟುಬಂದೆ.
ಹೈವೇ ತುಂಬಾ ಚೆನ್ನಾಗಿತ್ತು. ಒಂದಷ್ಟು ದೂರ ಸಾಗಿದ ಮೇಲೆ, ಕರ್ನಾಟಕ ಗಡಿ ದಾಟಿ ಮಹಾರಾಷ್ಟ್ರಕ್ಕೆ ಸ್ವಾಗತದ ಬೋರ್ಡು ಸಿಕ್ಕಿತು. ಇಲ್ಲಿಗೆ ಎರಡು ರಾಜ್ಯಗಳನ್ನು ದಾಟಿದಂತಾಯ್ತು, ನಮ್ಮ ಪ್ರವಾಸದಲ್ಲಿ.
ಸುಮಾರು 11.30ರ ವೇಳೆಗೆ ಕೊಲ್ಲಾಪುರ ತಲುಪಿದೆವು. ಶರತ್ ಗೆ ಅವರ ಬೈಕಿನ mileage drop ಆಗಿರುವ ಭಾಸವಾಗಿತ್ತು. ಬೈಕು half clutch ನಲ್ಲಿ ಸಾಗುತ್ತಿರುವ ಅನುಮಾನ ಬಂದು, ಕೊಲ್ಲಾಪುರದಲ್ಲೊಮ್ಮೆ RE ಸರ್ವಿಸ್ ಸೆಂಟರಲ್ಲಿ check ಮಾಡಿಸಿಕೊಂಡು ಹೋಗೋಣವೆಂದು, ತಿಳಿಸಿದರು. ನಮ್ಮ ಮೂವರಲ್ಲಿ ಶರತ್-ಶ್ವೇತಾ ಮುಂದೆ ಸಾಗುತ್ತಿದ್ದವರು, ಮ್ಯಾಪಿನಲ್ಲಿ ಹುಡುಕಿಕೊಂಡು ಸೀದಾ ಸರ್ವಿಸ್ ಸೆಂಟರಿಗೆ ನೆಡೆದರು. ಶಿವು-ದೀಪಿಕ ಮತ್ತು ನಾನು ಅವರನ್ನು ಹಿಂಬಾಲಿಸಿದೆವು.
ಕೊಲ್ಲಾಪುರದ RE ಸರ್ವಿಸ್ ಸೆಂಟರ್ ಅದಾಗಲೇ, ಜನರಿಂದ ತುಂಬಿ ಹೋಗಿತ್ತು. ಆದರೂ ನಾವು ಹೋಗಿ, ಅಲ್ಲಿನ ಮ್ಯಾನೇಜರ್ ಗೆ ನಮ್ಮ ಪ್ರವಾಸದ ವಿಷಯ ತಿಳಿಸಿ, ಶರತ್ ರ ಬೈಕಿನ ಕೆಲಸ ಮಾಡಿಕೊಡಬೇಕಾಗಿ ಕೇಳಿದೆವು. ಆ ಮ್ಯಾನೇಜರ್ ಇನ್ನು ಒಂದು ತಾಸು ಬೇಕಾಗುತ್ತದೆ ಎಂದ. ಆಗಲಿ ಎಂದು ನಾವೆಲ್ಲರೂ ಅಲ್ಲೇ ರಸ್ತೆಯಲ್ಲೇ ಬೈಕುಗಳನ್ನು ನಿಲ್ಲಿಸಿಕೊಂಡು ಕಾಯತೊಡಗಿದೆವು.
ಪ್ರತಿ ವರ್ಷ ನೆಡೆಯುವ Royal Enfield Riders Mania Event ಈ ಬಾರಿ ಕೊಲ್ಲಾಪುರದಲ್ಲಿ, ಇನ್ನೇನು ಕೆಲವು ದಿನದಲ್ಲೇ ಆಯೋಜನೆಗೊಳ್ಳಲಿತ್ತು. ಹಾಗಾಗಿಯೇ ಅಲ್ಲಿ ಅಷ್ಟೊಂದು ಜನರು ಮತ್ತು ಬೈಕುಗಳಿದ್ದವು. Royal Enfield ಕಂಪನಿಯು, ಭಾರತದಾದ್ಯಂತ ಆಯ್ದ ಒಂದು ಜಾಗದಲ್ಲಿ ವರ್ಷಕ್ಕೊಮ್ಮೆ ಈ ಕೂಟವನ್ನು ಆಯೋಜಿಸುತ್ತದೆ. ಹವ್ಯಾಸಿ ಸವಾರರೆಲ್ಲರೂ ಒಂದು ಕಡೆ ಸೇರಿ, RE ಬೈಕುಗಳ ಒಂದು ಜಾತ್ರೆಯಂತಿರುತ್ತದೆ. ಹಲವಾರು ರೀತಿಯ ಪಂದ್ಯಗಳು, ಪ್ರದರ್ಶನಗಳು, ಬಹುಮಾನಗಳು, ಸಂಗೀತ, ಕುಣಿತ ಮೋಜು ಎಲ್ಲವೂ ಇರುತ್ತದೆ ಅಲ್ಲಿ.
ಅಲ್ಲಿ Service Centreನಲ್ಲಿದ್ದ ಹಲವಾರು ಜನ, ನಮ್ಮ ಪ್ರವಾಸದ ಬಗ್ಗೆ ವಿಚಾರಿಸಿ, ಮೆಚ್ಚುಗೆ ವ್ಯಕ್ತಪಡಿಸುತ್ತಿದ್ದರು.
ನಾವು ಸುಮಾರು ಒಂದು ಗಂಟೆ ಕಾದರೂ, ಶರತ್ ರ ಬೈಕನ್ನು ಇನ್ನೂ ಒಳಗಡೆಗೇ ತೆಗೆದುಕೊಂಡು ಹೋಗಿರಲಿಲ್ಲ. ಆಗ ಮತ್ತೆ ಆ ಮ್ಯಾನೇಜರ್ ಬಳಿ request ಮಾಡಿಕೊಳ್ಳಬೇಕಾಯಿತು, ಶರತ್ ಆತನಿಗೆ ನಮ್ಮ ಪರಿಸ್ಥಿತಿಯನ್ನು ಮತ್ತೆ ವಿವರಿಸಿದ ಮೇಲೆ, ಬೈಕನ್ನು ತೆಗೆದುಕೊಂಡು ಒಳ ಹೋದರು.
ಆಗ ಅಲ್ಲಿಗೆ ತನ್ನ ಬೈಕಿನೊಂದಿಗೆ ಬಂದಿದ್ದ ಒಬ್ಬ ವ್ಯಕ್ತಿ ನಮ್ಮೊಡನೆ, ಮಾತಿಗಿಳಿದ. ಏನು ಸಮಸ್ಯೆಯಾಗಿದೆ, ಯಾಕೆ ಕಾಯುತ್ತಿದ್ದೀರಿ, ಎಲ್ಲಿಗೆ ಹೋಗುವವರಿದ್ದೀರಿ, ಎಂದೆಲ್ಲ ವಿಚಾರಿಸತೊಡಗಿದ.
ಎತ್ತರದ ಸದೃಢ ಮೈಕಟ್ಟು, Low fade ಹೇರ್ ಸ್ಟೈಲ್, Balbo Beard & ಮೀಸೆ, ಬಿಳಿ ಶರ್ಟ್, ಮೊಣಕೈವರೆಗೆ ಮಡಿಚಿದ್ದ ತೋಳಲ್ಲಿ ಎದ್ದು ಕಾಣುವ Tattoo,,, Typical Hansome Biker ನಂತೆ ಆತ ಕಾಣುತ್ತಿದ್ದ. ನಮ್ಮ ಪರಸ್ಪರ ಪರಿಚಯದ ಬಳಿಕ, ಆತನ ಹೆಸರು ಓಂಕಾರ್ ಬುಧಾಳೇ ಎಂಬುದಾಗಿಯೂ, ಆತ Passionate Enfield Rider ಎಂದು ತಿಳಿಯಿತು.
ಅಷ್ಟರಲ್ಲಿ ಅಲ್ಲಿದ್ದ ಮ್ಯಾನೇಜರ್ ಹೇಳಿದ, "ಇವರು ಕಳೆದ ಮೂರು ಬಾರಿಯಿಂದಲೂ RE Rider Mania Champion" ಅಂತ.
ಆತನ Humble n Friendly ವ್ಯಕ್ತಿತ್ವ ನೋಡಿ ಆಶ್ಚರ್ಯವಾಯಿತು. ಆತ ತನ್ನ ಹಲವು ರೈಡ್ ಅನುಭವಗಳನ್ನು ನಮ್ಮೊಡನೆ ಹಂಚಿಕೊಂಡು, ನಮ್ಮ ಪ್ರವಾಸಕ್ಕೆ ಶುಭ ಕೋರಿದ. ನಾವು ಹೋಗುಲಿರುವ Route map ಕೇಳಿ, ಆತನಿಗೆ ಅಲ್ಲೆಲ್ಲಾ ರೈಡರ್ ಫ್ರೆಂಡ್ಸ್ ಇರುವುದಾಗಿಯೂ, ಮುಂದೆ ದೆಹಲಿಯವರೆಗೂ ಎಲ್ಲಿಯೇ ನಮಗೆ ತೊಂದರೆಯಾದರೂ, ಆತನಿಗೆ ತಿಳಿಸಿದಲ್ಲಿ, ಆತ ತನ್ನ ಸ್ನೇಹಿತರಿಂದ ಸಹಾಯ ಒದಗಿಸುವುದಾಗಿ ಭರವಸೆ ಕೊಟ್ಟನು. ಆ ಕ್ಷಣಕ್ಕೆ Royal Enfield is a family ಎನ್ನುವ feeling ಬಂತು. ಆತ ಹೊರಡುವ ಮುಂಚೆ ಆ Champion Rider ಜೊತೆ ಒಂದು selfie ತೆಗೆದುಕೊಂಡೆವು.

ಇನ್ನಷ್ಟು ಹೊತ್ತು ಕಾದ ಮೇಲೂ ಬೈಕು ರಿಪೇರಿಯಾಗಲಿಲ್ಲ. ಸಮಯ ಮಧ್ಯಾಹ್ನ 1 ಗಂಟೆಯಾದರೂ ಮುಗಿಯಲಿಲ್ಲವಲ್ಲ ಎಂದು ಕೇಳಿದಾಗ, ಈಗ 1-2 lunch break ಇರುತ್ತೆ, ಆಮೇಲೆನೇ ರಿಪೇರಿ ಮುಗಿಸ್ತೀವಿ ಅಂದರು. ಬೇರೇನೂ ಮಾಡುವಂತಿರಲಿಲ್ಲ, ನಾವೂ ಊಟ ಮಾಡಲು ಹೋಗುವುದಾಗಿ ತೀರ್ಮಾನಿಸಿದೆವು.
ಅಲ್ಲಿ ಪಕ್ಕದಲ್ಲಿದ್ದ hardware ಅಂಗಡಿಯ ವ್ಯಕ್ತಿ ನಮಗೆ ಎರಡು ಹೋಟೆಲುಗಳನ್ನು ಸೂಚಿಸಿ, ಒಂದು ಸ್ವಲ್ಪ ಲಕ್ಸುರಿ ಹೋಟೆಲ್, ಇನ್ನೊಂದು ಸಾಧಾರಣ ಹೋಟೆಲ್. ಎರಡೂ ಎದುರು ಬದುರಿಗಿವೆ, ನಿಮಗೆ ಯಾವುದು ಬೇಕೋ ಅದಕ್ಕೆ ಹೋಗಿ, ಎರಡರಲ್ಲೂ ಊಟ ಚೆನ್ನಾಗಿರುತ್ತದೆ ಎಂದು ತಿಳಿಸಿದರು.
ಒಂದೂವರೆ ಕಿಲೋಮೀಟರ್ ದೂರವಿದ್ದ ಹೋಟೆಲಿಗೆ, ಇನ್ನೂ ಸಮಯವಿದ್ದಿದ್ದರಿಂದ, ಬೈಕುಗಳನ್ನು ಅಲ್ಲಿಯೇ ನಿಲ್ಲಿಸಿ ನಾವು ಆರಾಮವಾಗಿ ನೆಡೆದುಕೊಂಡು ಹೊರಟೆವು.
ನೆಡೆಯುತ್ತಾ ಸಾಗುವಾಗ ಎದುರಿಗೆ ಸಿಕ್ಕ ಒಂದು circle ನಲ್ಲಿ, ರಾಣಿಯೊಬ್ಬರ ಪ್ರತಿಮೆಯಿತ್ತು. ಯಾರ ಪ್ರತಿಮೆಯೆಂದು ಹಾಗೇ ರಸ್ತೆ ದಾಟುತ್ತಲೇ, ಪ್ರತಿಮೆಯ ಕೆಳಗಿದ್ದ ಬೋರ್ಡಿನ ಕಡೆಗೆ ಕಣ್ಣು ಹಾಯಿಸಿದೆ. 'ಮಹಾರಾಣಿ ತಾರಾಬಾಯಿ' ಎಂಬ ಹೆಸರಿತ್ತು. ನನಗಾಗ ಆಕೆ ಮರಾಠಾ ರಾಣಿಯೆಂದು, ಯಾವುದೋ ಕಾದಂಬರಿಯಲ್ಲಿ ಓದಿದ ನೆನಪಾಯಿತು. ಆದರೆ ಅಷ್ಟು ವಿವರವಾಗಿ ಹೊಳೆಯಲಿಲ್ಲ.
(* ಆ ದಿನ ರಾತ್ರಿ ಮಹಾಬಲೇಶ್ವರ ತಲುಪಿ ಹೋಟೆಲ್ ರೂಮಿನಲ್ಲಿ ವಿರಮಿಸುತ್ತಿದ್ದಾಗ, ಆಕೆಯ ಬಗ್ಗೆ internet ನಲ್ಲಿ ಹುಡುಕಿದಾಗ ತಿಳಿಯಿತು, ಆಕೆ ಶಿವಾಜಿ ಮಾಹಾರಾಜರ ಮಗ ರಾಜಾರಾಮ ಭೋಸಲೆಯ ಪತ್ನಿಯೆಂದು. ನಂತರ ನಾನು ಓದಿದ್ದ, "ಶಿವಪ್ರಭುವಿನ ಪುಣ್ಯ" ಎಂಬ ಕಾದಂಬರಿಯಲ್ಲಿನ, ಶಿವಾಜಿಯ ಮರಣಾನಂತರದ ಪರಿಸ್ಥಿತಿಯ ಬಗೆಗಿನ ವಿಷಯಗಳು ನೆನಪಾದವು. *)
ನೆಡೆದು ಬಂದು, ಹೋಟೆಲುಗಳ ಎದುರಿಗೆ ನಿಂತು ಎದುರು ಬದುರಿಗಿದ್ದ ಎರಡೂ ಹೋಟೆಲುಗಳನ್ನು ನೋಡಿ, "ಹೋಟೆಲ್ ಮಿರ್ಚಿ" ಎಂದು ಬೋರ್ಡಿದ್ದ ಸಾಧಾರಣ ಹೋಟೆಲ್ ಸಾಕು ನಮ್ಮ ಊಟಕ್ಕೆ ಎಂದು, ಒಳಗೆ ನೆಡೆದೆವು.
ನಮಗಾರಿಗೂ Restaurant with luxury ambiance ಬೇಕೆನಿಸಲಿಲ್ಲ, ಮರಾಠಿ ಶೈಲಿಯ ಸರಳ ಊಟ ಸಾಕಿತ್ತು. ನಮ್ಮಲ್ಲಿ ಯಾರೊಬ್ಬರೂ ಏನೂ ಚಕಾರವೆತ್ತಲಿಲ್ಲ, ನಮಗೆ ಸರಳತೆಯಲ್ಲೇ ಖುಷಿ ಎನಿಸಿತು. ಆಗ ನನಗೆ ಅಲ್ಲಿ ಕುವೆಂಪುರವರ ಒಂದು ಪದ್ಯದ ಈ ಸಾಲುಗಳು ಅರೆಬರೆಯಾಗಿ ನೆನಪಾದವು.
ಅಲ್ಲಿ ಪಕ್ಕದಲ್ಲಿದ್ದ hardware ಅಂಗಡಿಯ ವ್ಯಕ್ತಿ ನಮಗೆ ಎರಡು ಹೋಟೆಲುಗಳನ್ನು ಸೂಚಿಸಿ, ಒಂದು ಸ್ವಲ್ಪ ಲಕ್ಸುರಿ ಹೋಟೆಲ್, ಇನ್ನೊಂದು ಸಾಧಾರಣ ಹೋಟೆಲ್. ಎರಡೂ ಎದುರು ಬದುರಿಗಿವೆ, ನಿಮಗೆ ಯಾವುದು ಬೇಕೋ ಅದಕ್ಕೆ ಹೋಗಿ, ಎರಡರಲ್ಲೂ ಊಟ ಚೆನ್ನಾಗಿರುತ್ತದೆ ಎಂದು ತಿಳಿಸಿದರು.
ಒಂದೂವರೆ ಕಿಲೋಮೀಟರ್ ದೂರವಿದ್ದ ಹೋಟೆಲಿಗೆ, ಇನ್ನೂ ಸಮಯವಿದ್ದಿದ್ದರಿಂದ, ಬೈಕುಗಳನ್ನು ಅಲ್ಲಿಯೇ ನಿಲ್ಲಿಸಿ ನಾವು ಆರಾಮವಾಗಿ ನೆಡೆದುಕೊಂಡು ಹೊರಟೆವು.
![]() |
| ಮಹಾರಾಣಿ ತಾರಾಬಾಯಿ |
(* ಆ ದಿನ ರಾತ್ರಿ ಮಹಾಬಲೇಶ್ವರ ತಲುಪಿ ಹೋಟೆಲ್ ರೂಮಿನಲ್ಲಿ ವಿರಮಿಸುತ್ತಿದ್ದಾಗ, ಆಕೆಯ ಬಗ್ಗೆ internet ನಲ್ಲಿ ಹುಡುಕಿದಾಗ ತಿಳಿಯಿತು, ಆಕೆ ಶಿವಾಜಿ ಮಾಹಾರಾಜರ ಮಗ ರಾಜಾರಾಮ ಭೋಸಲೆಯ ಪತ್ನಿಯೆಂದು. ನಂತರ ನಾನು ಓದಿದ್ದ, "ಶಿವಪ್ರಭುವಿನ ಪುಣ್ಯ" ಎಂಬ ಕಾದಂಬರಿಯಲ್ಲಿನ, ಶಿವಾಜಿಯ ಮರಣಾನಂತರದ ಪರಿಸ್ಥಿತಿಯ ಬಗೆಗಿನ ವಿಷಯಗಳು ನೆನಪಾದವು. *)
ನೆಡೆದು ಬಂದು, ಹೋಟೆಲುಗಳ ಎದುರಿಗೆ ನಿಂತು ಎದುರು ಬದುರಿಗಿದ್ದ ಎರಡೂ ಹೋಟೆಲುಗಳನ್ನು ನೋಡಿ, "ಹೋಟೆಲ್ ಮಿರ್ಚಿ" ಎಂದು ಬೋರ್ಡಿದ್ದ ಸಾಧಾರಣ ಹೋಟೆಲ್ ಸಾಕು ನಮ್ಮ ಊಟಕ್ಕೆ ಎಂದು, ಒಳಗೆ ನೆಡೆದೆವು.
ನಮಗಾರಿಗೂ Restaurant with luxury ambiance ಬೇಕೆನಿಸಲಿಲ್ಲ, ಮರಾಠಿ ಶೈಲಿಯ ಸರಳ ಊಟ ಸಾಕಿತ್ತು. ನಮ್ಮಲ್ಲಿ ಯಾರೊಬ್ಬರೂ ಏನೂ ಚಕಾರವೆತ್ತಲಿಲ್ಲ, ನಮಗೆ ಸರಳತೆಯಲ್ಲೇ ಖುಷಿ ಎನಿಸಿತು. ಆಗ ನನಗೆ ಅಲ್ಲಿ ಕುವೆಂಪುರವರ ಒಂದು ಪದ್ಯದ ಈ ಸಾಲುಗಳು ಅರೆಬರೆಯಾಗಿ ನೆನಪಾದವು.
ಸಾಮಾನ್ಯತಾ ಸುಖವೇ ಶಾಂತಿ ಜೀವಾಧಾರ;
ಸಾಮಾನ್ಯತೆಯೇ ಜಗನ್ ಮಾನ್ಯತಾ ಸಂಸಾರ!!!
- ಕುವೆಂಪು
ಕಾಂಪೌಂಡ್ ಗೋಡೆಯ ಮೇಲೆ ಕಮಾನು ಕಟ್ಟಿ, ನೆರಳಿಗೆಂದು ಹಸಿರುಬಣ್ಣದ ತೆಳು ಪ್ಲಾಸ್ಟಿಕ್ ನೂಲಿನ ಬಟ್ಟೆಯನ್ನು ಮುಚ್ಚಿ, ಒಳಗೆ ತುಸು ತಂಪಾಗಿರುವಂತೆ ಆ ಹೋಟೆಲಿನಲ್ಲಿ ವ್ಯವಸ್ಥೆ ಮಾಡಿದ್ದರು.
ಇದ್ದ ನಾಲ್ಕೈದು ಟೇಬಲ್ಲಿನಲ್ಲಿ, ಹಲವರು ಕೂತಿದ್ದರು. ನಮಗೂ ಒಂದು ಟೇಬಲ್ ತೋರಿಸಿ, ಕೂರಲು ಹೇಳಿ, ಒಬ್ಬ ಹುಡುಗ ಆರ್ಡರ್ ತೆಗೆದುಕೊಳ್ಳಲು ಬಂದ. ನಾವು ಮೆನು ನೋಡುತ್ತಾ ಇಲ್ಲಿನ ಮರಾಠಿ ಸ್ಪೆಷಲ್ ಟ್ರೈ ಮಾಡೋಣ, ಅಂತ ಮಾತಾಡಿಕೊಳ್ಳುತ್ತಿದ್ದೆವು. ಆಗ ನಮ್ಮ ಮಾತು ಕೇಳಿಸಿಕೊಂಡು ಆತ, ಕನ್ನಡದಲ್ಲಿಯೇ ಏನೇನು ಚೆನ್ನಾಗಿರುತ್ತೆ ಎಂದು ತಿಳಿಸಿ ಹೇಳಿದ. ನಾವು ಆಗಲಿ ಎಂದು ಅವೆಲ್ಲವನ್ನೂ ತರಲು ಹೇಳಿದೆವು.
ಆತ ಬೆಳಗಾವಿಯನೆಂದೂ, ಅಲ್ಲದೆ ಅದು ಗಡಿಭಾಗವಾದ್ದರಿಂದ, ಹಲವಾರು ಜನರಿಗೆ ಕನ್ನಡ ಬರುತ್ತದೆಂದೂ ತಿಳಿಸಿದ.
ಒಂದತ್ತು ನಿಮಿಷ ಕಾದ ಬಳಿಕ ನಮ್ಮ ಊಟ ಬಂದಿತು. ನಾವು ಅಲ್ಲಿ ತಿಂದ, ನೆನಪಿನಲ್ಲಿಟ್ಟು ಹೇಳಬಹುದಾದ ವಿಶೇಷ ತಿನಿಸುಗಳೆಂದರೆ ಶೆವಗಾ ಫ್ರೈ ಎಂಬ ಸ್ಟಾರ್ಟರ್, ಕೊಲ್ಲಾಪುರದ 'ವೆಜ್ ಕೋಲ್ಹಪುರಿ', ಫೋಡ್ನಿಬಾತ್ ಮತ್ತು ಅಕ್ಕಾಸೀಸೂನ್.
![]() |
| ಶೇವಗಾ ಫ್ರೈ |
ವೆಜ್ ಕೋಲ್ಹಪುರಿ, ನಮಗೆಲ್ಲ ಗೊತ್ತೇ ಇದೆ. ಇನ್ನು ಶೇವಗಾ ಬಗ್ಗೆ ಹೇಳಬೇಕೆಂದರೆ ಅದು, ನುಗ್ಗೆಕಾಯಿಯನ್ನು ಕತ್ತರಿಸಿ ಬೇಯಿಸಿ, ಎಣ್ಣೆಯಲ್ಲಿ ಶೇಂಗಾ ಪುಡಿಯೊಂದಿಗೆ ಉರಿದು, ಮಾಡಲಾಗಿದ್ದ starter. ಫೋಡ್ನಿಬಾತ್ ಒಂದು ವಾಂಗೀಬಾತ್ ಶೈಲಿಯ ಪುಲಾವ್, ಅಕ್ಕಾಸೀಸೂನ್ ಅಂದರೆ ಹೆಸರುಕಾಳಿನ ಒಂದು ರೀತಿಯ ಪಲ್ಯ. ಎಲ್ಲವೂ ಒಂಥರಾ ಹೊಸ ರುಚಿ, ನಮ್ಮ ನಾಲಗೆಗೆ ಬಹಳ ಹಿಡಿಸಿತು.
ಊಟ ಮುಗಿಸಿ, ಹೊರ ಬಂದಾಗ ಎಲ್ಲರೂ ಮತ್ತೆ ವಾಪಸ್ಸು ಅಲ್ಲಿಯ ತನಕ ನೆಡೆಯಲು ಆಗುವುದಿಲ್ಲ ಎಂದರು. ಆಗ ಒಂದು ಆಟೋ ಹಿಡಿದು, ಒಂದೇ ಆಟೋದಲ್ಲಿ ಐವರೂ ಹೋದೆವು. ಆ ಆಟೋ ಆ ದಿನ, ನಮಗೆಷ್ಟು ಶಾಪ ಹಾಕಿಕೊಂಡಿತೋ ಗೊತ್ತಿಲ್ಲ, ಆದರೆ ಅದರ ಗೋಳು ಆ ಎಂಜಿನ್ ಶಬ್ದದಲ್ಲಿ ಸ್ಪಷ್ಟವಾಗಿ ಕೇಳುತ್ತಿತ್ತು.
ಆ ಸರ್ವಿಸ್ ಸೆಂಟರಿನವರು ಇನ್ನೂ ರಿಪೇರಿ ಮುಗಿಸಿರಲಿಲ್ಲ. ಶರತ್ ಹೋಗಿ ಬೇಗ ಮಾಡಿಕೊಡಿ ಅಂತ, ಆ ಮೆಕ್ಯಾನಿಕ್ ಪಕ್ಕದಲ್ಲಿ ಕುಳಿತುಕೊಂಡರು. ನಾವು ಹೋಗಿ waiting ರೂಮಿನಲ್ಲಿ ಕುಳಿತುಕೊಂಡು ಕಾಯತೊಡಗಿದೆವು.
ನಾನೂ ಮತ್ತು ಶರತ್ ನಮ್ಮ ಬೈಕುಗಳನ್ನು ಬೆಂಗಳೂರಿನಿಂದ ಕನ್ಯಾಕುಮಾರಿಗೆ ಕಳುಹಿಸುವ ಮೊದಲೇ, ಬೈಕಿನ ಟ್ಯೂಬುಗಳಿಗೆ Puncture care solution ಅನ್ನು ಹಾಕಿಸಿಕೊಂಡಿದ್ದೆವು. Tubeless ಟೈರುಗಳಾದರೆ puncture ಆದರೂ ಸಹ ಪಂಕ್ಚರ್ ಶಾಪ್ ಸಿಗುವವೆರೆಗೆ ಹಲವಾರು ಕಿಲೋಮೀಟರು ಹೋಗಬಹುದು. ಆದರೆ ಟ್ಯೂಬುಗಳುಳ್ಳ ಟೈರುಗಳಾದರೆ ಜಾಸ್ತಿ ದೂರ ಹೋಗಲಾಗುವುದಿಲ್ಲ. ಹಾಗಾಗಿಯೇ ಟ್ಯೂಬುಗಳೊಳಗೆ ಅಂಟಿನಂತಹ ಒಂದು ದ್ರವವನ್ನು ತುಂಬಿಸಿದರೆ, ಅಕಸ್ಮಾತ್ ಪಂಕ್ಚರ್ ಆದರೂ ಸಹ, ಅದಾಗಿಯೇ ಅಂಟಿಕೊಂಡು air pressure ಕಡಿಮೆಯಾಗದಂತೆ ತಡೆಯುತ್ತದೆ. ಹಾಗಾಗಿಯೇ ನಾವು, ಆ solution ಅನ್ನು ಟ್ಯೂಬುಗಳಿಗೆ ಹಾಕಿಸಿಕೊಂಡಿದ್ದೆವು. ಶಿವು ಆ ಸೊಲ್ಯೂಷನ್ ಡಬ್ಬಿಗಳನ್ನು ಕೊಂಡಿದ್ದನಾದರೂ, ಬೆಂಗಳೂರಿನಲ್ಲಿ ಅದನ್ನು ಹಾಕಿಸಿಕೊಳ್ಳಲು ಸಮಯ ಸಿಗದೇ, ಹಾಗೇ ಬ್ಯಾಗಿನಲ್ಲಿ ತಂದಿದ್ದನು. ಆಗ ಹೇಗೂ ಇಲ್ಲಿ ಸರ್ವಿಸ್ ಸೆಂಟರಿನಲ್ಲಿ ಕಾಯುತ್ತಿರುವೆವಲ್ಲ ಎಂದು, ಆ ಮರೆತಿದ್ದ ಕೆಲಸವನ್ನು ಇಲ್ಲಿ ಮಾಡಿಸಿಕೊಂಡನು.
ಶರತ್ ರ ಬೈಕಿನ clutch plate ಹಾಳಾಗಿದೆಯೆಂದು ಮೆಕ್ಯಾನಿಕ್ ಹೇಳಿದರು. ಸರಿ ಹೊಸದನ್ನು ಹಾಕಿ ಎಂದಾಗ, ಈಗ ಹೊಸದನ್ನು ಹಾಕಲು ಬಹಳಷ್ಟು ತಡವಾಗಬಹುದು ಎಂದರು. ಆಗ ಇಲ್ಲೊಂದು ಸ್ಪೇರ್ clutch plate ಖರೀದಿಸಿಕೊಂಡು ಒಯ್ಯುವುದಾಗಿಯೂ, ಮುಂದೆ ಹೋಗುವ ಯಾವುದಾದರೂ ಊರಿನಲ್ಲಿ ಸಮಯ ಬಿಡುವು ಮಾಡಿಕೊಂಡು ಮತ್ತೆ ಹೊಸದನ್ನು ಹಾಕಿಸಿಕೊಳ್ಳಬೇಕೆಂದು ಯೋಚಿಸಿ, ಇದ್ದುದನ್ನೇ ಮತ್ತೆ ಸರಿಯಾಗಿ adjust ಮಾಡಿ, oiling ಮಾಡಿಸಿಕೊಂಡು, ಬೈಕನ್ನು ಹೊರ ತಂದರು.
ಅಂತೂ ನಾಲ್ಕು ಗಂಟೆಯಾಯಿತು, ನಾವು ಮತ್ತೆ ನಮ್ಮ ಪ್ರಯಾಣ ಶುರುಮಾಡುವ ವೇಳೆಗೆ.
ಇಲ್ಲಿ ಅನಿರೀಕ್ಷತವಾಗಿ ನಾಲ್ಕು ತಾಸು ಸಮಯ ಕಾಲಹರಣವಾಗಿದ್ದರಿಂದ ನಮ್ಮ ಪ್ಲಾನ್ ಸ್ವಲ್ಪ ಏರುಪೇರಾಯಿತು. ಈಗ ನಾವು ನೋಡಬೇಕೆಂದಿದ್ದ ಒಂದು ತಾಣವನ್ನು, ಹೊರತುಪಡಿಸಿ ಸೀದಾ ಮಹಾಬಲೇಶ್ವರದ ಕಡೆಗೆ ಸಾಗುವುದಾಗಿಯೂ, ಮಹಾಬಲೇಶ್ವರ ಬೆಟ್ಟದ ಕೆಳಗೆ ಕಾಣಸಿಗುವ 'ದೋಮ್ ಲೇಕ್' ಅನ್ನು ನೋಡಬಹುದಾಗಿ ಯೋಜಿಸಿ ಬೈಕುಗಳ ವೇಗವನ್ನು ಹೆಚ್ಚಿಸಿದೆವು.
ಅದು ಸ್ಟೇಟ್ ಹೈವೇ, ಅಲ್ಲದೇ ಡಿವೈಡೆಡ್ ಲೇನ್ ಕೂಡ ಇರಲಿಲ್ಲ. ಆದರೂ ಹೆಚ್ಚು ವಾಹನ ದಟ್ಟಣೆ ಇರಲಿಲ್ಲವಾದ್ದರಿಂದ ನಾವು ಬಹಳ ವೇಗವಾಗಿ ಸಾಗುತ್ತಿದ್ದೆವು. ನಾವು ತಮಿಳುನಾಡಿನಲ್ಲಿ ಪ್ರಯಾಣ ಮಾಡುತ್ತಿದ್ದಾಗ ಅಷ್ಟೇನೂ, ಯಾವುದೋ ಬೇರೆ ರಾಜ್ಯಕ್ಕೆ ಬಂದ ಭಾವನೆಯಿರಲಿಲ್ಲ. ಪ್ರಾಯಶಃ ನಾವು ಇನ್ನೊಂದು ದಿನದಲ್ಲಿ ಕರ್ನಾಟಕ ತಲುಪುವೆವೆಂಬ ಯೋಚನೆ, ಅಲ್ಲಿ ಮನಸಲ್ಲಿ ಇದ್ದದ್ದರಿಂದಲೋ ಏನೋ.
ಆದರೆ ಇಲ್ಲಿ ನಾವು ನಮ್ಮ ನಾಡು ದಾಟಿ ಬಂದೆವು ಎಂಬ ಭಾವನೆ, ಒಂದು ರೀತಿಯ ಹೊಸದಾಗಿ ಏನೋ ನೋಡುತ್ತಿರುವ ಪುಳಕ, ಮುಂದೆ ಮುಂದೆ ಹೇಗಿರುವುದೋ ಎಂಬ ತಳಮಳ ಬಹಳಷ್ಟು ಇತ್ತು. ನನಗೆ ಅತ್ಯಾಕರ್ಷಕವೆಂದು ಯಾವುದೂ ಕಾಣಲಿಲ್ಲವಾದರೂ, ಸುತ್ತಲೂ ಏನಿದೆ, ಎಲ್ಲ ದೃಶ್ಯವನ್ನೂ ಕಣ್ತುಂಬಿಕೊಳ್ಳಬೇಕು, ಯಾವುದೋ ಯೋಚನೆ ಮಾಡುತ್ತಾ ಬೈಕು ಓಡಿಸಿ ಸಿಕ್ಕ ಅವಕಾಶ ಬಿಡದೆ, ಆಸಕ್ತಿದಾಯಕವಾಗಿ ಎಲ್ಲವನ್ನೂ ನೋಡಬೇಕು, ಪ್ರತಿ ಕ್ಷಣದ rideನ್ನೂ ಅನುಭವಿಸಬೇಕು, ಎಂದೆಲ್ಲಾ ಏನೇನೋ ಅಂದುಕೊಳ್ಳುತ್ತಾ, ನಾನು ಪ್ರಯತ್ನಪೂರ್ವಕವಾಗಿ ಅತ್ತಿತ್ತ, ಅತ್ತಿತ್ತ ನೋಡುತ್ತಲೇ, ನನ್ನ ಮುಂದೆ ಸಾಗುತ್ತಿದ್ದ ಶಿವೂ ಮತ್ತು ಶರತ್ ರ ಬೈಕುಗಳನ್ನು ಹಿಂಬಾಲಿಸುತ್ತಿದ್ದೆ.
(ಆಗಿನ್ನೂ ನನಗೆ, ಕಣ್ಣು ತಂತಾನೇ ನಿರಾಯಾಸವಾಗಿ, ಅಪ್ರಯತ್ನವಾಗಿ, ಯಾವುದೋ ಮಾಯಾಲೋಕದಲ್ಲಿ ಕಳೆದುಹೋಗುವ, ಅನುಭವವಿನ್ನೂ ಆಗಿರಲಿಲ್ಲ. ಅದಕ್ಕಾಗಿಯೇ ನಾನು, ಪ್ರಯಾಣವನ್ನು ಪೂರ್ಣ ಮನಸ್ಸಿಟ್ಟು ಸವಿಯಲು ಪ್ರಯತ್ನಿಸುತ್ತಿದ್ದೆ.)
ಮರಾಠ ನಾಡಿನ ಆ ಹಾದಿಯಲ್ಲಿ, ರಸ್ತೆಯ ಎಡ ಬಲಕ್ಕೆ ಎಷ್ಟು ದೂರ ಸಾಗಿದರೂ ಬರೀ ಬೆಳೆದು ನಿಂತ ಕಬ್ಬಿನ ಗದ್ದೆಗಳೇ ಕಾಣುತ್ತಿದ್ದವು. ಬಿಸಿಲಿಳಿದ ಸಂಜೆಯಲ್ಲಿ, ಹಸಿರಾದ ಕಬ್ಬಿನ ಗದ್ದೆಗಳ ಮೇಲೆ, ಗಾಳಿಗೆ ತೂಗಿಬಾಗುತ್ತಿದ್ದ ಕಬ್ಬಿನ ತೆನೆಗಳು ಹಸಿರು ಕೆರೆಯೊಂದರ ಸಣ್ಣ ಅಲೆಗಳಂತೆ ಭಾಸವಾಗುತ್ತಿತ್ತು. ಕಬ್ಬನ್ನು ತುಂಬಿಕೊಂಡು ಸಾಗುತ್ತಿದ್ದ ಎತ್ತಿನ ಬಂಡಿಗಳು, ಟ್ರ್ಯಾಕ್ಟರ್-ಗಳು ಒಂದರ ಹಿಂದೆ ಒಂದರಂತೆ ಆಗಾಗ ಎದುರಾಗುತ್ತಿದ್ದವು.
ಶರತ್-ಶ್ವೇತಾ ಮತ್ತು ಶಿವೂ-ದೀಪಿಕಾರಿಗೆ ಪರಸ್ಪರ ಸಾಥಿಯಿದ್ದದರಿಂದ ಅವರುಗಳು ಹೇಗೆ ಮಾತನಾಡುತ್ತಾ, ಅನಿಸಿಕೆಗಳ ಹಂಚಿಕೊಳ್ಳುತ್ತಾ ಪ್ರಯಾಣವನ್ನು ಸವಿದರೋ ನಾನರಿಯೆ. ನನಗಂತೂ, ಬರಿ ನಾನು, ನನ್ನ ಭಾವನೆಗಳು, ನನ್ನ ಬೈಕಿನ ಶಬ್ದ ಮತ್ತು ಎದುರಿಗೆ ಕಾಣುವ ದೃಶ್ಯ ಇವಿಷ್ಟೇ ಇದ್ದವು ನನ್ನ ಪಾಲಿಗೆ.
ಸಂಜೆ 6 ಗಂಟೆಯ ಸುಮಾರಿಗೆ, ಒಂದು ಬ್ರೇಕ್ ತೆಗೆದುಕೊಳ್ಳೋಣವೆಂದು ನಾವು ಒಂದು ಸಣ್ಣ ರಸ್ತೆಬದಿಯ ಹೋಟೆಲಿನ ಪಕ್ಕ ನಿಲ್ಲಿಸಿದೆವು. ಆದರೆ ಸಂಜೆ ಟೀ/ಕಾಫಿಗೆ ಬದಲಾಗಿ, ಅಲ್ಲಿ ಕಾಣಿಸಿದ ಕಬ್ಬಿನ-ಹಾಲು ಕುಡಿಯೋಣವೆಂದು ಕುಳಿತೆವು.
ನಾನೂ, ಶಿವು ಮತ್ತು ಶರತ್ ದಣಿವಾರಿಸ್ಕೊಳ್ಳುತ್ತಿದ್ದೆವು. ದೀಪಿಕಾ ತಾವು ದಾರಿಯಲ್ಲಿ ಕಂಡ ವಿಷಯಗಳ ಬಗ್ಗೆ ಹೇಳುತ್ತಿದ್ದರು, "ನಾನು ಕಬ್ಬು ತುಂಬಿದ ಗಾಡಿ ಕಂಡಾಗ, ತಿನ್ನಲು ಕಬ್ಬು ಮುರಿದುಕೊಳ್ಳೋಣ ಎಂದುಕೊಂಡೆ, ಆದರೆ ಶಿವು ಬೈಕು ನಿಲ್ಲಿಸಲೇ ಇಲ್ಲ" ಅಂತ ಶಿವೂಗೆ ಬಯ್ದರು. ಶಿವೂ "ಕಬ್ಬು ಯಾಕೆ, ಕಬ್ಬಿನ-ಹಾಲನ್ನೇ ಕುಡಿ ಈಗ" ಅಂದಿದ್ದು, ತಾನು ನಿಲ್ಲಿಸದಿದ್ದು ಸರಿ ಎಂಬುದಾಗಿ ಹೇಳಿದಂತಿತ್ತು. ಶ್ವೇತಾಗೆ ಎಲ್ಲಿ ಹೋದರಲ್ಲಿ ತಮ್ಮ ಗೆಳೆಯರು ಸಿಗುತ್ತಿದ್ದರು. I mean, ನಾಯಿಗಳು, ನಾಯಿ-ಮರಿಗಳು. ಅಲ್ಲಿಯೂ ಯಾವುದೋ ಒಂದು ನಾಯಿ ಬಂದು ಅವರ ಕಾಲ ಬಳಿ ಬಾಲ ಅಲ್ಲಾಡಿಸುತ್ತಿತ್ತು. ಅವರು ಅದರೊಡನೆ ಆಡುತ್ತಾ ಬ್ಯುಸಿಯಾಗಿದ್ದರು. ನಾವು ಎರಡೆರಡು ಲೋಟ ಕಬ್ಬಿನ-ಹಾಲು ಕುಡಿದೆವು.
ಕುಡಿಯುತ್ತಾ ನಾನು, ಕಬ್ಬಿನ-ಹಾಲು ಕುಡಿದರೆ ಬೇಗ ನಿದ್ದೆ ಬರುತ್ತದೆ ಎಂದು, ನನ್ನ ಬಾಲ್ಯದ ಶಾಲಾದಿನಗಳಲ್ಲಿ ಒಮ್ಮೆ ಸಂಜೆಯೇ ಮನೆಯಲ್ಲಿ ಆಲೆಮನೆಯಿಂದ ತಂದಿದ್ದ ಕಬ್ಬಿನ-ಹಾಲನ್ನು ಹೊಟ್ಟೆ ತುಂಬಾ ಕುಡಿದು, ಒಂದತ್ತು ನಿಮಿಷದಲ್ಲೇ ಎಚ್ಚರವಾಗದಂತೆ ಮಲಗಿ, homework ಮಾಡದೇ ಮರುದಿನ ಶಾಲೆಗೇ ಹೋಗಿ, ಹೊಡೆತ ತಿಂದ ನೆನಪನ್ನು ಹೇಳಿದೆ. ಎಲ್ಲರೂ ನನ್ನ ಮೇಲೆ ತಿರುಗಿಬಿದ್ದರು. "ಬರೀ ಓತ್ಲಾ ವಿಷಯಗಳೇ ಆಯ್ತು, homework ಮಾಡದ ಕಳ್ಳನಿಗೆ, ಕಬ್ಬಿನ-ಹಾಲಿನ ಪಿಳ್ಳೆ ನೆವ" ಎಂದು ವಾದಿಸಿ, ಅದರಲ್ಲಿ ನನ್ನದೇ ತಪ್ಪು, ಕಬ್ಬಿನ-ಹಾಲು ನಿರಪರಾಧಿ ಎಂದು ಘೋಷಿಸಿಬಿಟ್ಟರು. ನಾಲ್ವರ ಮುಂದೆ ವಾದ ಮಾಡಲಾಗದೇ, ಹೊರಿಸಿದ ತಪ್ಪನ್ನು ಹೊತ್ತುಕೊಂಡು ಸುಮ್ಮನಾದೆ. ಆ ನಾಲ್ವರ ಮುಖದಲ್ಲೂ ಅಣಕುನಗೆ ಎದ್ದು ಕಾಣುತಿತ್ತು. ನಾನೂ ನಗಲೇಬೇಕಾಯಿತು.
ಮುಂದೆ ಇನ್ನ ಐವತ್ತು ಕಿಲೋಮೀಟರಿನಲ್ಲಿ ದೋಮ್ ಲೇಕ್ ಸಿಗುವುದಾಗಿಯೂ, ಆದಷ್ಟೂ ಬೇಗ ಅಲ್ಲಿ ತಲುಪಬೇಕು ಅಂದುಕೊಂಡು ಇನ್ನೂ ವೇಗವಾಗಿ ಪ್ರಯಾಣ ಮುಂದುವರಿಸಿದೆವು.
Google Map ಸರಿಯಾಗಿ ನಮ್ಮನ್ನು, ದೋಮ್ ಲೇಕ್ ಬಳಿಗೆ ತಲುಪಿಸಿತು.
ಅಲ್ಲಿ ಕೆರೆಯಂಗಳಕ್ಕೆ ಇಳಿಯಲು ಇದ್ದ ಕಿರಿದಾದ ದಾರಿಯಲ್ಲಿ, ಬೈಕುಗಳನ್ನು ಇಳಿಸಿಕೊಂಡು. ಅರ್ಧ ನೀರಿದ್ದ ಕೆರೆಯಂಗಳಕ್ಕೆ ಬಂದು ನಿಂತೆವು. ದೂರದಲ್ಲೆಲ್ಲೋ ಒಂದಿಬ್ಬರು-ಮೂವರು ಕೆರೆಯ ದಂಡೆಯ ಮೇಲೆ ಕೂತಿದ್ದು, ತಿರುಗಾಡುತ್ತಿದ್ದು ಕಾಣಿಸಿತು ಬಿಟ್ಟರೆ, ಹತ್ತಿರದಲ್ಲಿ ಬೇರಾರು ಇರಲಿಲ್ಲ.
ಆ ಕೆರೆಯ ವಿಹಂಗಮ ನೋಟವನ್ನು ಸವಿಯತೊಡಗಿದ ಒಂದತ್ತು ನಿಮಿಷದಲ್ಲೇ, ಮಬ್ಬುಗತ್ತಲಾಗತೊಡಗಿತು. ಆ ಮಂದ ಬೆಳಕಲ್ಲೂ ಒಂದು ಸುಂದರ ದೃಶ್ಯ ವೈಭವ ಕಾಣುತ್ತಿತ್ತು.
| Dhom Lake |
ಸುತ್ತಲೂ ಗುಡ್ಡಗಳಿಂದ ಆವೃತವಾದ ಆ ವಿಶಾಲ ಕೆರೆ, ಮನೋಹರವಾಗಿತ್ತು. ಹಲವಾರು ಫೋಟೋ ತೆಗೆದುಕೊಂಡೆವು. ಶರತ್ ಕತ್ತಲಲ್ಲಿ ಒಂದು experimentನಂತೆ flash ಲೈಟ್ ಹಿಡಿದು ನಿಂತ ನಮ್ಮಗಳ ಫೋಟೋಗಳನ್ನು ಅದ್ಭುತವಾಗಿ ಕ್ಲಿಕ್ಕಿಸಿದರು.
ಮತ್ತೆ ಕತ್ತಲಲ್ಲಿ ತೆಗೆದ ಫೋಟೋಗಳಲ್ಲಿ, ನನ್ನ ಸಿಗ್ನೇಚರ್ ಮಾರ್ಕ್ ಶಕ್ತಿಮಾನ್ ಫೋಟೋಗಳು ಬಂದವು. ಶಕ್ತಿಮಾನ್ ಆಗಮನದಿಂದ ನನ್ನ ಜೊತೆಯಿದ್ದ ಆ ನಾಲ್ವರು ಮಧ್ಯ ವಯಸ್ಸಿನ ಮಕ್ಕಳು, ಉಲ್ಲಾಸಗೊಂಡರು. ಆ ಖುಷಿಯಲ್ಲಿ, ಶಕ್ತಿಮಾನ್ ಹಾಡಿನ ವಿಡಿಯೋ ಕೂಡ ಚಿತ್ರೀಕರಣಗೊಂಡಿತು.
(ಆದರೆ , ಆ ಫೋಟೋಗಳನ್ನು ಮತ್ತು ವಿಡಿಯೋವನ್ನು ನಾನಿಲ್ಲಿ ಶೇರ್ ಮಾಡಲಾರೆ)
ಜಾಸ್ತಿ ತಡ ಮಾಡುವುದು ಬೇಡವೆಂದು, ಅಲ್ಲಿಂದ ಎಲ್ಲರೂ ಹೊರಟೆವು. ಕತ್ತಲಾಗಿದ್ದರಿಂದ ನಾವು ಕೆರೆಯಂಗಳಕ್ಕೆ ಇಳಿದಿದ್ದ ಕಿರಿದಾದ ದಾರಿ ಕಾಣುತ್ತಲೇ ಇರಲಿಲ್ಲ, ನಮ್ಮ್ ಬೈಕಿನ ಲೈಟುಗಳನ್ನು ಹೊತ್ತಿಸಿಕೊಂಡೆವು. ಮೂರು ಬೈಕಿನ ದೀಪಗಳೂ (with extra lights) ಪ್ರಜ್ವಲವಾಗಿ ಉರಿಯಿತ್ತಿದ್ದವು. ಅಂದಾಜಿನ ಮೇಲೆ ಒಂದು ದಾರಿ ಹಿಡಿದು ಬಂದು, ಕೊನೆಗೂ ಮಹಾಬಲೇಶ್ವರದ ರಸ್ತೆ ಸೇರಿದೆವು.
ಮಹಾಬಲೇಶ್ವರದ ಬೆಟ್ಟ ಹತ್ತುವ ತಿರುವು ಮುರಿವಿನ ದಾರಿಯಲ್ಲಿ, ಅದೂ ಕತ್ತಲಲ್ಲಿ ಹತ್ತುವ ಮಜವೇ ಬೇರೇ. ಬೈಕನ್ನು ಬಾಗಿಸಿ ಬಾಗಿಸಿ, ಒಂದರಿಂದೆ ಒಂದರಂತೆ ಅತ್ತ ಒಮ್ಮೆ ಇತ್ತ ಒಮ್ಮೆ ವಾಲಿಸುತ್ತಾ ವಾಲಿಸುತ್ತಾ, ಬರೀ focused headlight ಬೆಳಕನ್ನೇ follow ಮಾಡುವ thrill, ಬೇರೆಯದೇ ರೀತಿ. ಅದನ್ನು ಅನುಭವಿಸಿಯೇ ತೀರಬೇಕು.
Riders ಗಳಿಗೇನೋ, ಇದು ಒಂದು ಥ್ರಿಲ್ ನಿಜ, ಆದರೆ ಹಿಂದೆ ಕುಳಿತ pillion riders ಗೆ??? ಅದರ ಬಗ್ಗೆ ಅವರನ್ನೇ ಕೇಳಬೇಕು.
ಶ್ವೇತಾ comfortable ಅನಿಸುವಂತೆ ಇದ್ದರು. ದೀಪಿಕಾ ಮಾತ್ರ, ಅಲ್ಲಲ್ಲಿ ಒಮ್ಮೊಮ್ಮೆ ಕಡಿದಾದ ತಿರುವುಗಳಲ್ಲಿ ತುಸು ಭಯಗೊಂಡೆನೆಂದು ಹೇಳಿದರು.
ಮೇಲೆ ಮೇಲೆ ಎತ್ತರಕ್ಕೆ ಹತ್ತಿದಂತೆ, ಚಳಿ ನಿಧಾನವಾಗಿ ಹೆಚ್ಚಾಗತೊಡಗಿತು. ಮಹಾಬಲೇಶ್ವರ ತಲುಪಿದ ಮೇಲೆ ಛಳಿಯ ಪ್ರಭಾವ ಪೂರ್ಣವಾಗಿತ್ತು. ನಾವು ವೇಗವಾಗಿ ಗಾಳಿಯಲ್ಲಿ ಬಂದಿದಕ್ಕೆ, ಚಳಿ ಇನ್ನೂ ಹೆಚ್ಚೆನಿಸಿ ಮೈ ನಡುಕ ಶುರುವಾಗಿತ್ತು.
ಶರತ್ ಬುಕ್ ಮಾಡಿದ್ದ ಹೋಟೆಲಿಗೆ ಸೀದಾ ಹೋಗಿ, ಎಲ್ಲರೂ ನಮ್ಮ ಲಗೇಜುಗಳನ್ನು ಇಳಿಸಿ ನಮ್ಮ ನಮ್ಮ ರೂಮು ಸೇರಿದೆವು. ರೂಮಿನ ನೆಲವೂ ಬರಿಗಾಲಿನಲ್ಲಿ ಕಾಲಿಡದಷ್ಟು ತಣ್ಣಗಿತ್ತು. ನಮ್ಮ ವೇಷವನ್ನೆಲ್ಲಾ ಬದಲಿಸಿ, ಒಂದರ್ಧ ತಾಸು ವಿರಮಿಸಿಕೊಂಡು, ಫ್ರೆಶ್ ಆಗಿ ಊಟಕ್ಕೆಂದು ಮತ್ತೆ ಹೊರನೆಡೆದೆವು.
ಈಗಿನ್ನೂ ರಾತ್ರಿ 9.30ರ ಸಮಯ, ಪ್ರವಾಸೀ ತಾಣವಾದರೂ ಸಹ ಅಂದು ರಜಾ ದಿನವಲ್ಲದ್ದರಿಂದ, ಅಷ್ಟು ಜನ ಸಂದಣಿಯಿಲ್ಲದೆ, ಯಾವುದೇ ಗಡಿಬಿಡಿಯಿಲ್ಲದೇ, ಊರು ತುಸು ಆರಾಮವಿದ್ದಂತೆ ಅನಿಸುತ್ತಿತ್ತು.
ಊಟಕ್ಕೆ restaurant ಹುಡಿಕಿಕೊಂಡು, ಹಾಗೆ ಖಾಲಿ ಖಾಲಿಯಿದ್ದ ಬೀದಿಯಲ್ಲಿ ಒಂದು ವಾಕ್ ಹೊರಟೆವು. ತುಸು ದೂರ ಹೋದ ಮೇಲೆ ಒಂದಷ್ಟು ಜನರಿದ್ದ, "ಸಾಯಿ ಫುಡ್ಸ್" ಅನ್ನುವ ಒಂದು ಹೋಟೆಲ್ ಕಾಣಿಸಿತು.
ಹೋಗಿ ಕುಳಿತ ನಾವು, ಮೆನು ನೋಡಿ ಕಾಲ ಕಳೆಯದೇ ಎಲ್ಲರೂ "ಮಹಾರಾಷ್ಟ್ರ ತಾಲಿ" ಆರ್ಡರ್ ಮಾಡಿದೆವು. ದೀಪಿಕಾ ಮಾತ್ರ ತನಗೆ ಊಟ ಬೇಡ ಬೇರೇನನ್ನಾದರೂ ಆಮೇಲೆ ಆರ್ಡರ್ ಮಾಡುವುದಾಗಿ ಕುಳಿತರು.
ನಮ್ಮಲ್ಲಿ ದೀಪಿಕಾ ಒಬ್ಬರಿಗೆ, ಹಿಂದಿ ಅಷ್ಟು ಸಮಂಜಸವಾಗಿ ಬರುತ್ತಿರಲಿಲ್ಲ.
ನಮ್ಮ ಊಟಕ್ಕೆ ನಾವುಗಳು ಕಾಯುತ್ತ ಕುಳಿತಿದ್ದೆವು. ಆಗ ದೀಪಿಕಾ, ಶಾಲೆಯ ಕಾಪಿರೈಟ್ ಪುಸ್ತಕದಲ್ಲಿ ಬರೆಸುವ ವಾಕ್ಯದಂತೆ, ಮನಸಲ್ಲೇ ಒಂದು ವಾಕ್ಯ ಹೊಂದಿಸಿಕೊಂಡು ಮೊಸರು ಅನ್ನವನ್ನು ಆರ್ಡರ್ ಮಾಡಿದರು. ಅವರ ವಾಕ್ಯಶೈಲಿ ಕೇಳುತ್ತಿದ್ದಂತೆ ಫಕ್ಕನೆ ಎಲ್ಲರಿಗೂ ತಡೆಯಲಾರದಷ್ಟು ನಗು ಬಂತು. ದೀಪಿಕಾಗೆ ಏನಾಯ್ತೆಂದು ತಿಳಿಯುವುದಕ್ಕೂ ಸಮಯ ಕೊಡದಷ್ಟು ನಕ್ಕೆವು. ಕೊನೆಗೆ ಅವರು "ನನಗೆ ಹಿಂದಿ ಅಷ್ಟು ಬರುವುದಿಲ್ಲ, ನೀವು ಕಲಿಸಬೇಕು, ಇಲ್ಲ ಹೆಲ್ಪ್ ಮಾಡಬೇಕು" ಅಂತ ರೇಗಿದರು.
ನಾವು ನಾಲ್ವರೂ ಒಟ್ಟಿಗೇ,,, "ನಾವು ನಿಮಗೆ ಹಿಂದಿ ಕಲಿಸುವುದೂ ಇಲ್ಲ, ಹೆಲ್ಪ್ ಕೂಡ ಮಾಡುವುದಿಲ್ಲ, ಇನ್ನು ಮುಂದಿನ ಟ್ರಿಪ್ ಪೂರಾ ನಿಮ್ಮ ಹಿಂದಿಯ fun ಇರಬೇಕು..." ಅಂತ ಮತ್ತಷ್ಟು ನಕ್ಕೆವು.
ನಮಗೆ ಸೊಗಸಾದ ತಾಲಿ ಊಟವೂ ಬಂತು, ದೀಪಿಕಾಗೆ ಒಂದು ಕಪ್ ಅಲ್ಲಿ ಮೊಸರು ಒಂದು ಕಪ್ ಅಲ್ಲಿ ಅನ್ನವೂ ಬಂತು, ಅದನ್ನು ನೋಡಿ ಮತ್ತೆ ನಕ್ಕೆವು.
ರುಚಿಯಾದ ಊಟ ಮುಗಿಸಿ, ಹೊರಗೆ ಬಂದು ಬೀದಿಯಲ್ಲಿ ಹಾಗೇ ಸಾಗಿದೆವು.
ಮಹಾಬಲೇಶ್ವರ strawberry ಬೆಳೆಯುವುದಕ್ಕೆ ಪ್ರಸಿದ್ಧ. ಹಾಗಾಗಿ ನಾವು ಈ ದಿನ ಒಂದು ಸ್ಟ್ರಾಬೆರಿ ಫಾರಂ ನೋಡಬೇಕೆಂದುಕೊಂಡಿದ್ದೆವು, ತಡವಾಗಿ ಬಂದಿದ್ದರಿಂದ ಅದು ಸಾಧ್ಯವಾಗಲಿಲ್ಲ. ಹಾಗಾಗಿ ನಾಳೆ ಫ್ರೆಶ್ ಸ್ಟ್ರಾಬೆರಿ ಹಣ್ಣುಗಳನ್ನು ಸವಿದರಾಯ್ತು ಎಂದುಕೊಂಡೆವು.
ಹಾಗೆಯೇ ಮಹಾಬಲೇಶ್ವರ, candies and fruit jellyಗೂ ಹೆಸರುವಾಸಿ. ರಸ್ತೆಯ ಎರಡೂ ಬದಿಗೆ ಸಾಲು ಸಾಲಾಗಿದ್ದ ಅಂಗಳಲ್ಲಿ ಒಂದರಲ್ಲಿ, ಹಲವಾರು ರೀತಿಯ ಕ್ಯಾಂಡೀಸ್, ಜೆಲ್ಲೀಸ್, ಮತ್ತು ಚಾಕೊಲೇಟ್ಸ್ ಕೊಂಡು ಸವಿದೆವು. ಉಳಿದವನ್ನು, ಮುಂದಿನ ಪ್ರಯಾಣ ಸಮಯದಲ್ಲಿ, ಸವಿಯಬಹುದೆಂದು ಇಟ್ಟುಕೊಂಡು, ಒಂದು ಸುತ್ತು ಊರು ಸುತ್ತಿದಂತಾಗಿ, ಮತ್ತೆ ನಮ್ಮ ಹೋಟೆಲ್ ತಲುಪಿದೆವು.
ನಾಳೆಗೆ, ಬೆಳಗ್ಗೆ 6ಕ್ಕೇ ತಯಾರಾಗಿ, ಸುತ್ತಲಿನ ಕೆಲವು ತಾಣಗಳನ್ನು ನೋಡಲು ಹೋಗಬೇಕೆಂದು ಶರತ್ ಹೇಳಿದರು. ಅಷ್ಟು ಬೇಗ ಈ ಕೊರೆಯುವ ಚಳಿಯಲ್ಲಿ ತಯಾರಾಗಲು, ಸ್ನಾನಕ್ಕೆ ಬಿಸಿನೀರು ಬೇಕೇ ಬೇಕಿತ್ತು. ರೂಮಿನಲ್ಲಿ ಬಿಸಿನೀರು ನಾಳೆಗೆ ಬರುತ್ತದೆಯೇ ಎಂದು ಕೇಳಿ, ನಮಗೆ 5.30ರ ಸುಮಾರಿಗೇ ಬೇಕು ಎಂದು ಸರ್ವಿಸ್ನವರಿಗೆ ಮತ್ತೆ ಮತ್ತೆ ಒತ್ತಿ ಹೇಳಿ, ರೂಮುಗಳನ್ನು ಸೇರಿದೆವು.
ಅಲಾರಂ ಸೆಟ್ ಮಾಡಿ, ಅಡಿಯಿಂದ ಮುಡಿಯವರೆಗೂ ಹೊದಿಕೆ ಹೊದ್ದು, ಕಣ್ಣು ಮುಚ್ಚಿದೆ.
* * * * *
Day-4 Ride- Belgavi to Mahabaleshwara
- Disatance covered - 320 KM
- Route Map
* * * * *
ದಿನ-5: ಮಹಾಬಲೇಶ್ವರದಿಂದ ಛತ್ರನಿಜಾಮಪುರ್ (yet to write)
Saturday, May 06, 2017
ಕನ್ಯಾಕುಮಾರಿಯಿಂದ ಕಾಶ್ಮೀರಕ್ಕೆ... (ದಿನ-3: ತುಮಕೂರಿನಿಂದ ಬೆಳಗಾವಿ)
ಕನ್ಯಾಕುಮಾರಿಯಿಂದ ಕಾಶ್ಮೀರಕ್ಕೆ
ಮೊದ ಮೊದಲು http://kcsampath.blogspot.in/2017/03/blog-post.htmlಪಯಣಕ್ಕೊಂದು ಪಯಣ http://kcsampath.blogspot.in/2017/03/blog-post_91.html
ದಿನ-1: ಕನ್ಯಾಕುಮಾರಿಯಿಂದ ಮದುರೈ http://kcsampath.blogspot.in/2017/04/1.html
ದಿನ-2: ಮದುರೈಯಿಂದ ತುಮಕೂರು http://kcsampath.blogspot.in/2017/04/2.html
ದಿನ-3: ತುಮಕೂರಿನಿಂದ ಬೆಳಗಾವಿ
16 ಜನವರಿ 2017ಸೋಮವಾರ
ಮತ್ತೆ ಬೆಳಗಾಯಿತು.
7:30ಕ್ಕೆಂದು ಇಟ್ಟಿದ್ದ ಅಲಾರ್ಮ್ ಹೊಡೆದುಕೊಳ್ಳುತ್ತಿದ್ದರೂ, ಕಣ್ಣು ಬಿಡಲಾಗಲಿಲ್ಲ. ಮತ್ತರ್ಧ ತಾಸು ಮಲಗಿಬಿಟ್ಟೆ.
ಈ ದಿನವೂ ಮಾಡಬೇಕಿದ್ದ long ride ನೆನಪಾಗಿ, ಕಣ್ಣುಜ್ಜಿಕೊಂಡು ಎದ್ದೆ. ಟಿವಿ ಆನ್ ಮಾಡಿ ಉದಯ ಮ್ಯೂಸಿಕ್ ಹಾಕಿದೆ, love songs ಬರುತಿತ್ತು. ಎದ್ದ ಒಂದೆರಡು ಕ್ಷಣದಲ್ಲೇ, ಮನಸ್ಸು ನಿದ್ದೆಯ ಮಂಪರಿನಿಂದ romantic moodಗೆ ಹಾರಿತು. ಹಾಡುತ್ತಾ. ಹಾಡುತ್ತಾ ತಯಾರಾದೆ.
ಮೊದಲು ತಿಂಡಿ ಮುಗಿಸಿ, ಅಲ್ಲಿಂದ RE Service Centerಗೆ ಹೋಗಿ ಬಂದು, ಆಮೇಲೆ ನಮ್ಮ ಪ್ರಯಾಣ ಶುರುಮಾಡಬೇಕಾಗಿತ್ತು.
ಈ ಮೊದಲೆರಡು ದಿನಗಳ ಪ್ರಯಾಣದಲ್ಲಿ, ನಮ್ಮ ಬೈಕುಗಳಲ್ಲಿ ಏನೇನು ತೊಂದರೆಯೆನಿಸುತ್ತಿದೆ ಎಂದು, ಅರ್ಥವಾಗಿತ್ತು. Long rideಗಳಲ್ಲೇ ಬೈಕುಗಳ ಸಮಸ್ಯೆಗಳು ಹೆಚ್ಚು ಕಾಣಿಸುವುದು, ಮತ್ತು ಒಬ್ಬ ನಿಜವಾದ Biker ಎಂದಿಗೂ ಆ ಸಮಸ್ಯೆಗಳಿಗೆ ಬೇಸರಿಸದೆ, ಅವನ್ನು ಕಲಿಕೆಯೆಂದು ಪರಿಗಣಿಸಿ ಸಮಸ್ಯೆಗಳನ್ನು ಪರಿಹರಿಸಿ, ತನ್ನ ಬೈಕನ್ನು ಇನ್ನಷ್ಟು ಪ್ರೀತಿಸುತ್ತಾನೆ.
ಶರತ್, ಶಿವುರಿಗೆ call ಮಾಡಿ ಹೊರಡೋಣವೇ, ಎಂದು ಕೇಳಿಕೊಂಡು ಹೊಟೇಲಿಂದ ಹೊರಗೆ ಬಂದೆವು. ಕಳೆದ ಎರಡು ದಿನಗಳಲ್ಲಿ ಮೊದಲ ಬಾರಿಗೆ ತುಸು ಚಳಿಯಿದ್ದ ತಂಪಾದ ಬೆಳಗನ್ನು ಕಂಡಂತೆ ಅನಿಸಿತು.
ಸೀದಾ ತುಮಕೂರಿನ ಹೆದ್ದಾರಿ ಪಕ್ಕದ ಪವಿತ್ರ ಹೋಟೆಲ್ ಗೆ ಹೋದೆವು. ಅಲ್ಲಿ ತಟ್ಟೆ ಇಡ್ಲಿ ಸಕತ್ ಫೇಮಸ್, ಬೆಂಗಳೂರು ತುಮಕೂರು ಹೆದ್ದಾರಿಯಲ್ಲಿ ಸಾಗುವ ಯಾರೂ ಅಲ್ಲಿನ ರುಚಿಯಾದ ತಟ್ಟೆಇಡ್ಲಿ ಸವಿಯದೇ ಹೋಗುವುದಿಲ್ಲ.
ಶಿವು ಮತ್ತು ನಾನು ಆತನ ಬೈಕಿಗೆ ಬೇಕಿದ್ದ ಬ್ಯಾಟರಿ ಕವರ್ ಕೊಳ್ಳಲು, RE Service center ಹುಡುಕಿಕೊಂಡು ಹೋದೆವು. ಒಂದತ್ತು ಕಿ.ಮೀ ದೂರದಲ್ಲಿ ಇದ್ದ ಸರ್ವಿಸ್ ಸೆಂಟರ್ ಗೆ ಹೋಗಿ, ಬರುವಷ್ಟರಲ್ಲಿ ಇಲ್ಲಿ ನಮ್ಮ ಬೈಕುಗಳೆರಡೂ ತಯಾರಿದ್ದವು. ಅಲ್ಲಿಂದ ರೂಮಿಗೆ ಹೋಗಿ, ನಮ್ಮೆಲ್ಲ ಲಗೇಜು ಹೇರಿಕೊಂಡು ಹೊರಟಾಗ ಸಮಯ ಹತ್ತಿರತ್ತಿರ 12. ನಮ್ಮ ಸುತ್ತಲೂ ಸೋಮವಾರದಂದು ಕೆಲಸಗಳಲ್ಲಿ ಬ್ಯುಸಿಯಾಗಿದ್ದ ಜನರನ್ನೂ, ಆದರೆ ಕೆಲಸವನ್ನೆಲ್ಲಾ ಮರೆತು ಆರಾಮವಾಗಿ ಪ್ರವಾಸದಲ್ಲಿರುವ ನಮ್ಮನ್ನೂ ನೋಡಿಕೊಂಡು, ಮನಸ್ಸಲ್ಲಿ ಏನೋ ಒಂದು ಉತ್ಸಾಹ ತುಂಬುವ ಖುಷಿ ಉಕ್ಕಿಬಂತು.
ಬೆಳಗಿನ ಚಳಿ ಕಳೆದು, ಬಿಸಿಲೇರಿತ್ತು. ಬೈಕುಗಳಲ್ಲಿ ಪೆಟ್ರೋಲ್ ಸದ್ಯಕ್ಕಿದೆ, ಇನ್ನೊಂದು ನೂರೈವತ್ತು ಕಿ.ಮೀ ಸಾಗಿ ಎಲ್ಲಾದರೂ ಪೆಟ್ರೋಲಿಗೆಂದು ಬ್ರೇಕ್ ಕೊಡೋಣ ಅಂತ, ಸಾಗಿದೆವು.
ಈ ದಿನದ ನಮ್ಮ ಪ್ರಯಾಣದ ಕೊನೆ, ಬೆಳಗಾವಿ. 450 ಕಿ.ಮೀ ದೂರವಿದೆ, ಅಲ್ಲದೆ ಉಳಿದ ಪೂರ್ತಿ ದಿನವೂ ನಮ್ಮ ಕೈಲಿದೆ.
ಆದರೂ ನಿನ್ನೆಯಂತೆ ನಮ್ಮ ನಿಧಾನಗತಿಯಿಂದ ತಡವಾಗಬಾರದು, ಸ್ವಲ್ಪ ಸ್ಪೀಡ್-ಅಪ್ ಮಾಡಿಕೊಂಡು, ನಾವು ಎಷ್ಟು ಬೇಗ ಕ್ರಮಿಸಬಹುದು ನೋಡೋಣ ಇದರಿಂದ ನಮ್ಮ confidence ಕೂಡ ಹೆಚ್ಚುವುದರಿಂದ ಹಾಗೆ ತೀರ್ಮಾನಿಸಿ ಹೊರಟೆವು. ನಾವು ಮೂವರು ಎಲ್ಲೂ ನಿಧಾನಿಸದೆ, ಒಬ್ಬರಿಗೊಬ್ಬರು ವೇಗ ಹೊಂದಿಸಿಕೊಂಡು ಸಾಗಿದೆವು.

ಚಿತ್ರದುರ್ಗದಲ್ಲಿ re-fuel ಮಾಡಿಕೊಂಡು, ಮತ್ತೆ ವೇಗವಾಗಿ ಮುಂದೆ ಸಾಗಿದೆವು. ಇನ್ನೇನು ದಾವಣಗೆರೆ ಸಮೀಪವಿತ್ತು. ಮುಂದಿದ್ದ ಶರತ್ ಮತ್ತು ನನ್ನ ಬೈಕುಗಳು, ಸುಮಾರು ನೂರರ ವೇಗಗದಲ್ಲಿದ್ದವು. ರಸ್ತೆ ಬದಿಯಲ್ಲಿ ನಮ್ಮಂಥವರಿಗಾಗಿ ಕಾಯುತ್ತಿದ್ದ ಪೊಲೀಸರು, ದೂರದಿಂದಲೇ ಕೈಯೊಡ್ಡಿ ನಿಲ್ಲಲು ಹೇಳಿದರು. ಎರಡು ದಿನದ ಹಿಂದೆ ತಮಿಳುನಾಡಿನ ಹೆದ್ದಾರಿಯಲ್ಲಿ ಪೊಲೀಸರಿಂದಾದ ಇರಿಸುಮುರಿಸು ನೆನಪಾಯ್ತು. ಬೈಕುಗಳನ್ನು ಅವರ ಜೀಪಿನ ಮುಂದೆ ನಿಲ್ಲಿಸಿ, ಅವರ ಹತ್ತಿರಕ್ಕೆ ಹೋದೆವು. ಹೊರಗೆ ಒಬ್ಬ ಪೇದೆ ಮಾತ್ರ ಇದ್ದರು, ಇನ್ನುಳಿದವರು ಜೀಪಿನಲ್ಲಿ ಕೂತಿದ್ದರು.
ಹತ್ತಿರಕ್ಕೆ ಹೋದಂತೆಯೇ ಇವರೂ ಕೂಡ, "ಯಾರು ನೀವು, ಎಲ್ಲಿಗೆ ಹೋಗುತ್ತಿರುವುದು" ಎಂದು ಕೇಳಿದರು. ನಾವು ಕನ್ನಡದಲ್ಲಿ ನಮ್ಮ ವಿವರ ತಿಳಿಸಿದೆವು. ಆತ ತಕ್ಷಣವೇ, ಆಶ್ಚರ್ಯದಿಂದ ನಮ್ಮ ಬಗ್ಗೆ ವಿಚಾರಿಸತೊಡಗಿದ. "ಇಲ್ಲಿಂದ ಕಾಶ್ಮೀರದವರೆಗೂ ಹೀಗೇ ಬೈಕಲ್ಲಿ ಹೋಗುವಿರಾ??? ಬೈಕಲ್ಲೇ ಹೋಗಬೇಕೆಂದು ಯಾಕೆ ಅಂದುಕೊಂಡಿರಿ??? ಎಲ್ಲೆಲ್ಲಿ ಹೋಗಲಿದ್ದೀರಿ???" ಎಂದೆಲ್ಲಾ, ವಿಚಾರಿದ.
ಆತನಾಗಲೇ ನಮ್ಮ ಓವರ್-ಸ್ಪೀಡನ್ನು ಮರೆತಾಗಿತ್ತು.
ಈ ಪೊಲೀಸ್ ಮಾತ್ರ, ನಮ್ಮ ಜೊತೆಗಿದ್ದ ಶ್ವೇತಾರ ಬಗ್ಗೆ "ಯಾರೀಕೆ?" ಅಂತಲೂ ಕೂಡ, ಒಂದು ಮಾತು ಕೇಳಲಿಲ್ಲ. ನಮ್ಮ ಬಳಿಯೂ, ಅಷ್ಟೇ ಸಂಯಮದಿಂದ ವ್ಯವಹರಿಸಿದ.

ಅಷ್ಟರಲ್ಲಿ ಹಿಂದೆ ಬರುತ್ತಿದ್ದ ಶಿವೂ-ದೀಪಿಕಾರ ಬೈಕು ನಮಗೆ ಹತ್ತಿರಾಯ್ತು. ಅವರೂ ನೂರರ ಮೇಲಿನ ವೇಗದಲ್ಲಿದ್ದರು. ನಾವು "ಅವರೂ ನಮ್ಮ ಜೊತೆಯವರು" ಎಂದಾಗ, ಆತನೇ ಅವರಿಗೆ ನಿಲ್ಲಿಸುವುದು ಬೇಡ, ಮುಂದೆ ಹೋಗಿ ಎಂದು ಕೈ ತೋರಿಸಿದ.
ಆತ ನಮಗೆ ಶುಭ ಕೋರಿ, ಕಳುಹಿಸಿದ. ನಾವು ಮುಂದೆ ಊಟಕ್ಕೆ ಹತ್ತಿರದಲ್ಲಿ ಎಲ್ಲಿ ನಿಲ್ಲಿಸಬೇಕೆಂದು ಕೇಳಿದೆವು. ಆತ "ನಿಮಗೆ ಸಾಧಾರಣ ಹೋಟೆಲ್ ಸಾಕೆಂದರೆ, ಇಲ್ಲೇ ಇನ್ನೊಂದು ಕಿ.ಮೀ. ನಲ್ಲಿ ಟೋಲ್-ಗೇಟಿನ ಪಕ್ಕಕ್ಕೆ ಚಿಕ್ಕ ಹೋಟೆಲಿದೆ. ಅಲ್ಲಿ ತುಂಬಾ ಚೆನ್ನಾದ ಚಪಾತಿ ಊಟ ಸಿಗುತ್ತದೆ. ಅಥವಾ ತುಂಬ ಒಳ್ಳೆಯ ಹೋಟೆಲ್ ಬೇಕೆಂದರೆ, ಇಲ್ಲಿಂದ ಇನ್ನತ್ತು ಕಿ.ಮೀ, ಮುಂದೆ ಹೋಗಬೇಕು" ಅಂದ.
"ನಾವು ಇಲ್ಲೇ, ಟೋಲ್-ಗೇಟ್ ಬಳಿಯೇ ಊಟ ಮಾಡುತ್ತೇವೆ" ಎಂದು, ಥ್ಯಾಂಕ್ಸ್ ಹೇಳಿ ಹೊರಟೆವು.
ಆತ ಹೇಳಿದಂತೆಯೇ, ಟೋಲ್-ಗೇಟ್ ದಾಟಿದ ತಕ್ಷಣ, ಎಡಕ್ಕೆ ಚಿಕ್ಕ ಹೋಟೆಲ್ ಕಾಣಿಸಿತು. ಒಂದು ಚಿಕ್ಕ ಕೈತೋಟದ ನಡುವೆ ಮನೆಯಂತೆ ಇದ್ದ ಅಲ್ಲಿ, ನಮ್ಮನ್ನು ಬಿಟ್ಟರೆ ಬೇರಾರೂ ಜನ ಇರಲಿಲ್ಲ.
ನಾವು ಎಲ್ಲರಿಗೂ ಚಪಾತಿ ಊಟ ಆರ್ಡರ್ ಮಾಡಿದೆವು, ಹೋಟೆಲಿನವನು ಇನ್ನೊಂದು ಕಾಲು ಗಂಟೆ ಸಮಯದಲ್ಲಿ ಊಟ ರೆಡಿ ಮಾಡುವುದಾಗಿ ಹೇಳಿದ. ನಾವು ತುಮಕೂರಿನಿಂದ ಸುಮಾರು 200 ಕಿ.ಮೀ ದೂರವನ್ನು ಬರಿ ಎರಡೂವರೆ ಗಂಟೆಗಳಲ್ಲಿ ಕ್ರಮಿಸಿ ಬಂದಿದ್ದರಿಂದ, ಸ್ವಲ್ಪ ದಣಿವಾರಿಕೊಳ್ಳುತ್ತಾ ಕುಳಿತೆವು.
ಹೇಳಿದಂತೆ, ಹದಿನೈದು ನಿಮಿಷದಲ್ಲಿ ಬಿಸಿ ಬಿಸಿ ಚಪಾತಿ ನಮ್ಮೆದುರು ಬಂದವು. ಬಹಳ ರುಚಿಯಾಗಿತ್ತು ಊಟ. Extra extra ಚಪಾತಿ ತಿಂದು, ಊಟ ಮುಗಿಸುವಷ್ಟರಲ್ಲಿ, ನಮಗೆ ಇಲ್ಲಿಗೆ ಬರಲು ಹೇಳಿದ ಪೊಲೀಸರೂ ಅಲ್ಲಿಗೆ ಬಂದರು. ಮತ್ತೆ ಅವರಿಗೆ ಥ್ಯಾಂಕ್ಸ್ ಹೇಳಿ, ನಮ್ಮ ಪಯಣ ಮುಂದುವರಿಸಿದೆವು.
ಇನ್ನು ಮುಂದಿನ ಬ್ರೇಕ್ ಹಾವೇರಿ ಬಳಿ ಇರುವ ರಾಕ್ ಗಾರ್ಡನ್ ಗೆ ಎಂದು ತೀರ್ಮಾನಿಸಿದ್ದೆವು. ನನಗೆ ಸರಿಯಾಗಿ ಅದರ ಲೊಕೇಶನ್ ಗೊತ್ತಿರಲಿಲ್ಲ ಆದರೆ, ಹಾವೇರಿ ಎಂದು ಕೇಳಿಸಿಕೊಂಡಿದ್ದೆ, ಅಷ್ಟೇ.
ಇನ್ನೂ 111 ಕಿ.ಮೀ ದೂರವಿದ್ದರಿಂದ ನಾವು ದೂರ ದೂರ ಉಳಿದು ಸಾಗುತ್ತಾ, ನಾನು ಪೂರ್ತಿ ಹಿಂದಾಗಿಬಿಟ್ಟೆ. ಹಾವೇರಿ ಎಂದು ಹೆಸರು ಕೇಳಿಕೊಂಡಿದ್ದ ನಾನು, ಹೆದ್ದಾರಿಯಲ್ಲಿ ಸಾಗುತ್ತಾ ಹಾವೇರಿಗೆ ಎಡ ತಿರುವು ಎಂದು ಬರೆದಿದ್ದ ಬೋರ್ಡ್ ನೋಡಿ, ಇವರೂ ಇತ್ತ ಕಡೆಯೇ ಹೋಗಿರಬಹುದೆಂದು, ಹಾವೇರಿ ಕಡೆಗೆ ಸಾಗಿಬಿಟ್ಟೆ.
ಹಾವೇರಿ ಸಿಟಿ ಒಳಗೆ ಹೋಗಿ, ಅವರು ಎತ್ತ ಸಾಗಿದರೆಂದು ತಿಳಿಯದೆ, ಫೋನ್ ಮಾಡಿದರೆ ಯಾರಿಗೂ ಫೋನ್ connect ಆಗಲಿಲ್ಲ. ಸುಮಾರು 20 ನಿಮಿಷ ಕಾದ ಮೇಲೆ, ಶ್ವೇತಾ ಫೋನ್ ಮಾಡಿದರು. "ನಾನು ಹೀಗೆ ಹಾವೇರಿಯ ಸಿಟಿ entrance ಅಲ್ಲಿ ಇದೀನಿ. ನೀವೆಲ್ಲ ಎಲ್ಲಿದಿರಾ" ಅಂದೆ.
"ಹಾವೇರಿಗೇಕೆ ಹೋದ್ರಿ?,,, ನಾವು ಹೆದ್ದಾರಿಲೇ ಮುಂದೆ ಬಂದು ಹುಬ್ಬಳ್ಳಿ ಕಡೆಗೆ ಹೋಗ್ತಿದಿವಿ... ವಾಪಸ್ ಬನ್ನಿ" ಅಂದ್ರು. ಅಲ್ಲಿಂದ ಮತ್ತೆ ವಾಪಸ್ ಹೊರಟು, ಹೆದ್ದಾರಿ ತಲುಪಿ ವೇಗವಾಗಿ ಸಾಗಿದೆ.
ಅವರು, ನಾನೂ ಬರಲಿ ಎಂದು, ನಿಧಾನವಾಗಿ ಹೋಗುತ್ತಿದ್ದರು. ಅವರನ್ನು ಕೂಡಿಕೊಂಡು ಇನ್ನೊಂದು ಐವತ್ತು ಕಿ.ಮೀ ಸಾಗಿದ ಮೇಲೆ, ರಸ್ತೆಯ ಎಡಕ್ಕೆ ಉತ್ಸವ್ ರಾಕ್ ಗಾರ್ಡನ್, ಸಿಕ್ಕಿತು.
ಈ ದಿನ ಪ್ಲಾನಿನಲ್ಲಿ ಸಂತೇಬೆನ್ನೂರಿನ ಬಳಿಯ ಕಲ್ಯಾಣಿಯನ್ನು ಕೂಡ ನೋಡುವ ಮಾತಿತ್ತು, ಆದರೆ ಸಮಯದ ಅಭಾವ ಮತ್ತು ನಾವು ಸಾಗಬೇಕಿದ್ದ ದೂರದಿಂದಾಗಿ, ಬರಿಯ ಹೆದ್ದಾರಿಯ ಪಕ್ಕದಲ್ಲೇ ಸಿಗುವ ರಾಕ್ ಗಾರ್ಡನ್ ಒಂದನ್ನಷ್ಟೇ ನೋಡಿ, ಮುಂದೆ ಸಾಗಬೇಕಾಯಿತು.

ಈ ದಿನ ಸೋಮವಾರವಾದ್ದರಿಂದ ಅಷ್ಟೇನೂ ಜನ ಸಂದಣಿಯಿರಲಿಲ್ಲ ಅಲ್ಲಿ. ನಮ್ಮ ಬೈಕುಗಳನ್ನು luggage ಸಮೇತ ಎದುರಲ್ಲೇ park ಮಾಡಿ, ಒಳಗೆ ಹೋದೆವು. ಟಿಕೆಟ್ ಕೊಂಡು ಒಳಗೆ ಹೊಗುತ್ತಿದಂತೆ, ಅಲ್ಲಿ baggage ಕೌಂಟರಿನ ಹುಡುಗ, ಇನ್ನ ಅರ್ಧ ಗಂಟೆ ಅಷ್ಟೇ ಇದು ಓಪನ್ ಇರೋದು, ಅಷ್ಟರಲ್ಲಿ ನೋಡಿಕೊಂಡು ವಾಪಸ್ ಬರಬೇಕು ಅಂತ ಹೇಳಿ, ನಮ್ಮ jackets, knee pads ಗಳನ್ನೆಲ್ಲ ಅಲ್ಲಿ ಇರಿಸಿಕೊಂಡ.
| ಕವಿರತ್ನ ಕಾಳಿದಾಸನಾಗಿ ಡಾ|| ರಾಜಕುಮಾರ್ |
ಮುಂದೆ ಸಾಗಿದರೆ, ಹಲವಾರು ಕಲಾಕೃತಿಗಳು ಸಾಲು ಸಾಲಾಗಿ ನಿಂತಿದ್ದವು. ಇನ್ನೊಂದು ಅಂಕಣದಲ್ಲಿ ನಮ್ಮೆಲ್ಲ ಸಂಪ್ರದಾಯಗಳ ಪರಿಚಯವಿತ್ತು. ಹುಟ್ಟು, ಬಾಲ್ಯ, ಮುಂಜಿ, ಮದುವೆ ಮತ್ತು ಸಾವಿನ ಪರಿಚಯ. ಹಲವು ಧರ್ಮಗಳ ಆಚಾರಗಳಂತೆ ಮದುವೆಯ ಶಾಸ್ತ್ರಗಳ ಪ್ರತಿಕೃತಿಗಳು ಇನ್ನೊಂದು ಕಡೆಯಿದ್ದವು.
ಒಳಾಂಗಣವನ್ನೆಲ್ಲ ದಾಟಿ ಹೊರನೆಡೆದರೆ, ನಮ್ಮ ಕರುನಾಡ ಸಂಸ್ಕೃತಿಯ, ಹಳ್ಳಿ ಜೀವನವನ್ನು ನಮ್ಮೆದುರು ತೆರೆದಿಡುವ ಅಮೋಘ ಕಲಾ ರಾಶಿ ಕಾಣ ಸಿಗುತ್ತದೆ.
ಮೊದಲಿಗೆ ಹಳ್ಳಿಯಲ್ಲಿರುತ್ತಿದ್ದ ಹಲವಾರು ಕಸುಬು ಆಧಾರಿತ ಕುಟುಂಬಗಳ ಮನೆಗಳು (ಕುಂಬಾರರು, ಕಮ್ಮಾರರು, ಚಮ್ಮಾರರು, ಮರಗೆಲಸದವರು), ಅವರ ಕೆಲಸಗಳ ರೀತಿಗಳು ಎಲ್ಲದರ ಪಡಿಯಚ್ಚು ಕಾಣುತ್ತವೆ.
ಹಳ್ಳಿಯ ಗೌಡರ ಮನೆಯ ವಾತಾವರಣ, ಹಳ್ಳಿಯ ಬ್ರಾಹ್ಮಣರ ಮನೆಯ ಜಗುಲಿ, ಅಕ್ಕಸಾಲಿಗರ ಅಂಗಡಿ, ಬಳೆಗಾರನ ಸುತ್ತುವರಿದ ಹೆಂಗೆಳೆಯರು, ಹೀಗೆ ಹತ್ತು ಹಲವಾರು ಹಳ್ಳಿಯ ಚಿತ್ರಣಗಳನ್ನು, ಬಣ್ಣ ಕಟ್ಟಿ ಬರೆದಷ್ಟು ಸ್ಪುಟವಾಗಿ ಸೃಷ್ಟಿಸಿ ಇಟ್ಟಿದ್ದಾರೆ.
| ಹಳ್ಳಿಯ ಗೌಡರ ಚಾವಡ |
| ಬ್ರಾಹ್ಮಣರ ಮನೆಯ ಜಗುಲಿ |
| ಗರಡಿಮನೆಯ ಕುಸ್ತಿ ಅಖಾಡ |
ಕೆರೆಯಂಗಳ, ಉಳುವ ರೈತ, ಕೊಟ್ಟಿಗೆ, ಮಲ್ಲಗಂಬ, ಗರಡಿ ಮನೆಗಳನ್ನೆಲ್ಲ ನೋಡಿ, ಹಳ್ಳಿಯಿಂದ ಹೊರಬಂದು ಪಟ್ಟಣಕ್ಕೆ ಕಾಲಿಟ್ಟಂತೆಯೇ,,, ಕೊನೆಯಲ್ಲಿ ಹೋಟೆಲೊಂದು ಕಾಣುತ್ತದೆ.
ನಮಗೆ ತಿನ್ನಲು ಏನಾದರೂ ಸಿಗಬಹುದೆಂದು ಹತ್ತಿರಕ್ಕೆ ಹೋದಾಗ ತಿಳಿಯಿತು, ಅದು ಈಗಿನ cafe ಒಂದರ ಪ್ರತಿರೂಪ ಅಷ್ಟೇ ಎಂದು. ಅಲ್ಲಿ ಒಂದು ಟೇಬಲ್ಲಿನಲ್ಲಿ ರಮ್ಯಾ-ಪುನೀತ್ ರಾಜಕುಮಾರ್ ಕೂಡ, ಎಂದೂ ಖಾಲಿಯಾಗದ ಕಾಫಿ ಕಪ್ ಗಳ ಎದುರು, ಒಬ್ಬರನ್ನೊಬ್ಬರು ನೋಡುತ್ತಾ ಕಣ್ಣು ಮಿಟುಕಿಸದೇ ಕುಳಿತಿದ್ದರು. ನಾವೂ ನೋಡಿ ನಕ್ಕು ವಾಪಸ್ಸಾದೆವು.

ನಮಗೆ ಒಂದು ಬ್ರೇಕ್ ಸಿಕ್ಕ ಹಾಗೆ ಆಯಿತಾದರೂ, ಆ ರಾಕ್ ಗಾರ್ಡನ್, ಅತ್ತ ಹೋದಾಗ ಎಲ್ಲರೂ ಒಮ್ಮೆ ನೋಡಲೇಬೇಕಾದ ಜಾಗ.
ರಾಕ್ ಗಾರ್ಡನ್ ರಾಕ್ ಹೋಟೆಲಿನಲ್ಲಿ ತಿನ್ನಲು ನಮಗೇನು ಸಿಗದಿದ್ದರಿಂದ, ನಾವು ನಮ್ಮ Coffee Breakಗೆ ಹುಬ್ಬಳ್ಳಿಗೆ ಹೋಗೋಣ, ಅಲ್ಲಿ ಕಾಫಿ ಜೊತೆಗೆ ಗಿರ್ಮಿಟ್ ಕೂಡ ಸವಿಯಬಹುದು ಎಂದುಕೊಂಡೆವು. ಹುಬ್ಬಳ್ಳಿಯ ಗಿರ್ಮಿಟ್ ಶಾಪ್ ಅಂತ ಗೂಗಲ್ ಮ್ಯಾಪ್ ನಲ್ಲಿ ಹುಡುಕಿಕೊಂಡು ಹೊರಟೆವು.
ಇನ್ನ ನಲವತ್ತು ನಿಮಿಷಗಳ ಪ್ರಯಾಣದ ನಂತರ ಹುಬ್ಬಳಿತಲುಪಿದೆವು. ಆದರೆ ಆ ಗಿರ್ಮಿಟ್ ಅಂಗಡಿ, ಊರ ಒಳಗೆಲ್ಲೋ ಇನ್ನೈದು ಕಿ.ಮೀ ನಲ್ಲಿದೆ ಎಂದು ತೋರಿಸುತಿತ್ತು. ಅಷ್ಟೇ ಅಲ್ಲವಾ ಎಂದು ಹೊರಟರೆ, ಅದು ಮಾರ್ಕೆಟ್ ರೋಡೊಂದರ ಒಳಗೆ ನುಸುಳಿ, ಗಲ್ಲಿಗಲ್ಲಿಯಂತ ರೋಡಿನಲ್ಲಿ ಸಾಗಿ, ಸಾಗಾಣೆ ಲಾರಿಗಳಿಂದ Traffic jam ಆಗಿ, ಅಲ್ಲಿಗೆ ತಲುಪುವಷ್ಟರಲ್ಲಿ ಯಾಕಾದರೂ ಹುಬ್ಬಳ್ಳಿ ಊರೊಳಗೆ ಬೈಕನ್ನು ತಿರುಗಿಸಿದೆವೋ ಅನ್ನಿಸಿತು.
ಕೊನೆಗೂ ಬೈಕುಗಳು 'ಆಯಟ್ಟಿ ಸ್ಪೆಷಲ್ ಗಿರ್ಮಿಟ್ ಶಾಪ್' ಎದುರು ನಿಂತವು. ಬೇಗನೆ ಒಳ ಹೋಗಿ, ಗಿರ್ಮಿಟ್ ಮತ್ತು ಬಿಸಿ ಮಿರ್ಚ್ಚಿ ಬಜ್ಜಿ ಆರ್ಡರ್ ಮಾಡಿದೆವು. ಅದು ತೀರಾ ಚಿಕ್ಕ ಒಂದೇ ರೂಮಿನ ಹೋಟೆಲ್. ನಾವು ಐವರೂ ಒಳಗೆ ಕುಳಿತಿದ್ದಷ್ಟಕ್ಕೆ, ಹೋಟೆಲ್ ಭರ್ತಿಯಾಯಿತು (ಹೌಸ್ ಫುಲ್).
![]() |
| ಹುಬ್ಬಳ್ಳಿಯ ಮಿರ್ಚಿ-ಗಿರ್ಮಿಟ್ |
ಬೆಳಗಾವಿಯಲ್ಲಿ ಉಳಿಯಲು ಹೋಟೆಲನ್ನು ಶರತ್ ಆಗಲೇ ಬುಕ್ ಮಾಡಿದ್ದರು. ನಾವೀಗ ಮತ್ತೆ 100KM ಸಾಗಬೇಕಿತ್ತು. ಆ ಇಕ್ಕಟ್ಟಿನ ಮಾರ್ಕೆಟ್ ರೋಡುಗಳಿಂದ ನುಸುಳಿ ಹೊರಬರುವಷ್ಟರಲ್ಲಿ, ನಾನು, ಶರತ್ ಮತ್ತು ಶಿವೂರನ್ನು ಫಾಲೋ ಮಾಡಲು ಆಗದೆ ದಾರಿ ತಪ್ಪಿದೆ. ಮುಂದೆ ಮತ್ತೆ ಹೆದ್ದಾರಿಗೆ ಬನ್ನಿ ಸಿಗುವುದಾಗಿ ಫೋನ್ ಮಾಡಿ ಹೇಳಿ, ನಾನೂ ಮ್ಯಾಪ್ ಹಾಕಿಕೊಂಡು ಹುಬ್ಬಳ್ಳಿಯಿಂದ ಹೊರಬಿದ್ದೆ.
ಅವರೂ ಹೆದ್ದಾರಿಯಲ್ಲಿ ನಾನಿದ್ದ ಜಾಗಕ್ಕೆ ಬಂದರು, ಮುಂದೆ 100km ಗಳ ದಾರಿ ತುಸು ನಿರಾಯಾಸವಾಗಿ ಕಂಡಿತು. ಕತ್ತಲಾವರಿಸಿ ಸಮಯ 8 ಘಂಟೆಯಾಗಿದ್ದರೂ, ಹೆದ್ದಾರಿಯಲ್ಲಿ lane reflectorಗಳು ಅಚ್ಚುಕಟ್ಟಾಗಿ ಇದ್ದು, ರಸ್ತೆಯೂ ಅದ್ಭುತವಾಗಿತ್ತು. ಎಲ್ಲರೂ ನಮ್ಮ ನಮ್ಮ ಪಾಲಿನ ರೈಡನ್ನು ನಮ್ಮಿಷ್ಟದ ವೇಗದಲ್ಲಿ enjoy ಮಾಡುತ್ತಾ ಸಾಗಿದೆವು.
ನಾನು 140km/hr ನಷ್ಟು ವೇಗವನ್ನು ತಲುಪಿ, ನನ್ನ ಬೈಕು ಈಗಲೂ ಒಳ್ಳೆಯ condition ನಲ್ಲಿದೆ ಅಂದು ಖುಷಿಪಟ್ಟೆ.
ಸುಮಾರು ಒಂದೂವರೆ ತಾಸಿನಲ್ಲಿ ಬೆಳಗಾವಿ ತಲುಪಿ, ಹೋಟೆಲ್ ಹನುಮಾನ್ ಮುಂದೆ ಬೈಕು ನಿಲ್ಲಿಸಿದಾಗ, ಸಮಯ 9.30.
ಮತ್ತೆ ನಮ್ಮ ಗಂಟು ಮೂಟೆಯನ್ನೆಲ್ಲ ಬೈಕುಗಳಿಂದ ಬಿಚ್ಚಿ, ರೂಮೊಳಗೆ ಇಟ್ಟು, fresh ಆಗಿ ಊಟಕ್ಕೆ ಹೊರಬಂದಾಗ 10PM.
ಶರತ್-ಶ್ವೇತಾ ಮತ್ತು ನಾನು, ಅಷ್ಟು ಹಸಿವಿರದಿದ್ದರಿಂದ ಅಲ್ಲಿಯೇ ಬೆಳಗಾವಿಯ ಚಾಟ್ ಸ್ಟ್ರೀಟ್ ನಲ್ಲಿ, ಐಸ್ ಕ್ರೀಮ್ ಹಣ್ಣು ಹಂಪಲನ್ನು ತಿನ್ನುವುದಾಗಿ ಅತ್ತ ಸಾಗಿದರೆ. ಶಿವೂ-ದೀಪಿಕಾಗೆ ಆರೋಗ್ಯಕರ ಊಟ ಬೇಕಾಗಿ ಎದುರಿಗಿದ್ದ restaurant ಕಡೆಗೆ ಸಾಗಿದರು.
ನಾಳೆ ಸುಮಾರು 8ಕ್ಕೆ, ಎಲ್ಲರೂ ತಿಂಡಿ ಮುಗಿಸಿ ಹೊರಟುಬಿಡೋಣವೆಂದು ಕೊಂಡು ರೂಮುಗಳನ್ನು ಸೇರಿದೆವು.
ಇಷ್ಟು ದಣಿದು ರೂಮೊಳಗೆ ಸೇರಿದರೂ, ಮಲಗಲು ಇನ್ನೂ ಒಂದು ತಾಸು ಬೇಕಾಗುತ್ತಿತ್ತು ನಮಗೆ.
ದಿನವೆಲ್ಲ ರಸ್ತೆ ಪ್ರಯಾಣದ ಪರಿಣಾಮ, ನಾವು ಧೂಳು, ಬೆವರಿನಿಂದ ತುಂಬಿಹೋಗಿರುತ್ತಿದ್ದರಿಂದ, ಸ್ನಾನ ಮಾಡಿಯೇ ಮಲಗಬೇಕಾಗುತ್ತಿತ್ತು. ಅಲ್ಲದೇ ಇಲ್ಲಿಂದ ಮುಂದೆ-ಮುಂದೆ, ನಮ್ಮ ಬಟ್ಟೆಗಳನ್ನೂ ನಾವು ತೊಳೆದು, ರಾತ್ರಿಯೆಲ್ಲ ಒಣಗಲು ಹಾಕಬೇಕಾಗುತ್ತಿತ್ತು.
ಎಲ್ಲಿಯೂ ಒಂದು ರಾತ್ರಿಗೆ ಹೆಚ್ಚು ಉಳಿಯುತ್ತಿರಲಿಲ್ಲವಾದ್ದರಿಂದ ಹೋಟೆಲಿನ ಲಾಂಡ್ರಿಯನ್ನೂ ಬಳಸುವುದು ಸಾಧ್ಯವಾಗುತ್ತಿರಲಿಲ್ಲ. ಹಾಗಾಗಿ ಎಷ್ಟು ಸಾಧ್ಯವೋ ಅಷ್ಟು ನಮ್ಮ ನಿತ್ಯದ ಬಟ್ಟೆಗಳನ್ನು ತೊಳೆದು ಒಣಗಲು ಹಾಕಿ ಮಲಗುತ್ತಿದ್ದೆವು.

ಬೆಳಗಾವಿಯ ಇರುಳು ಅಷ್ಟು ಬಿಸಿಯಿಲ್ಲದಿದ್ದರೂ, ಚಳಿಯಂತೇನೂ ಅನ್ನಿಸಲಿಲ್ಲ. ಬೆಳಗ್ಗೆಗೆ ಅಲಾರಾಂ ಇಟ್ಟು, ಕಣ್ಮುಚ್ಚಿದಂತೆಯೇ ಸಣ್ಣ ಪುಟ್ಟ ಕನಸಿನ ರಾಶಿ ತೆರೆದುಕೊಳ್ಳತೊಡಗಿತು.
Day-3 Ride
- Tumkur to Belgavi
- Disatance covered - 450 KM
- Route Map
- Tumkur to Belgavi
- Disatance covered - 450 KM
- Route Map
Sunday, April 30, 2017
ಕನ್ಯಾಕುಮಾರಿಯಿಂದ ಕಾಶ್ಮೀರಕ್ಕೆ... ( ದಿನ-2: ಮದುರೈಯಿಂದ ತುಮಕೂರು)
ಕನ್ಯಾಕುಮಾರಿಯಿಂದ ಕಾಶ್ಮೀರಕ್ಕೆ
ಮೊದ ಮೊದಲು http://kcsampath.blogspot.in/2017/03/blog-post.htmlಪಯಣಕ್ಕೊಂದು ಪಯಣ http://kcsampath.blogspot.in/2017/03/blog-post_91.html
ದಿನ-1: ಕನ್ಯಾಕುಮಾರಿಯಿಂದ ಮದುರೈ http://kcsampath.blogspot.in/2017/04/1.html
ದಿನ-2: ಮದುರೈಯಿಂದ ತುಮಕೂರು
15 ಜನವರಿ 2017ಭಾನುವಾರ
AC ಯ remote ವರ್ಕ್ ಆಗಲಿಲ್ಲ, off ಮಾಡಲು switch ಕೂಡ ಇರಲಿಲ್ಲ. ಹೊರಗೆ ತುಂಬಾ ಸೆಕೆಯಿತ್ತು, ಆದರೆ ರೂಮೊಳಗೆ ಮಾತ್ರ chilling AC temperature ಅಲ್ಲಿ ನಾನು, ತಲೆ ತುಂಬಾ ಹೊದಿಕೆ ಹೊದ್ದು ಮಲಗಿದ್ದೆ. ನನ್ನ ಮೊಬೈಲಿನ ಅಲಾರ್ಮ್ ಏನೇನೋ sound ಮಾಡಿ ನಿದ್ದೆಗೆಡಿಸಿತು.
ಸುಖನಿದ್ದೆಯಿಂದ ಏಳಲು ಮನಸಿರಲಿಲ್ಲ. ಆದರೆ ಆ ದಿನ ನಮ್ಮ ಪ್ರಯಾಣ ಸ್ವಲ್ಪ ಭಯಂಕರವೇ ಇತ್ತು. ಅದಕ್ಕಾಗಿಯೇ ನಮ್ಮ ಕ್ಯಾಪ್ಟನ್ ಶರತ್ ಎಲ್ಲರಿಗೂ "ನಾಳೆ, 7ಕ್ಕೆ ಎಲ್ಲರೂ ತಯಾರಿದ್ದು, ಮೀನಾಕ್ಷಿ ದೇವಸ್ಥಾನ ನೋಡಲು ಹೊರಡಬೇಕು" ಎಂದು ಹೇಳಿದ್ದರು.
ನನ್ನಿಂದ ತಡವಾಗಬಾರದೆಂದು, ಎದ್ದು ತಯಾರಾಗಿ ಅವರ ರೂಮಿನ ಬಾಗಿಲು ತಟ್ಟಿದೆ. ಶರತ್ ಮತ್ತು ಶ್ವೇತಾ ಕೂಡ ready ಯಾಗಿದ್ದವರು, ಹೊರಗೆ ಬಂದರು. "ಶಿವು-ದೀಪಿಕಾ ಇನ್ನೂ ಎದ್ದಿಲ್ಲ, phone call ಗೆ ಕೂಡ answer ಮಾಡ್ತಿಲ್ಲ, ಬಾಗಿಲು ತಟ್ಟಿದರೂ ಏಳುತ್ತಿಲ್ಲ... ನಾವು ಸುಮಾರು 20 ನಿಮಿಷದಿಂದ try ಮಾಡ್ತಾನೆ ಇದೀವಿ" ಅಂದರು. ಹೌದಾ, ಅಂತ ಹೇಳಿ ನಾನೂ ಒಂದೆರಡು ಬಾರಿ ಬಾಗಿಲು ಬಡಿದೆ. ಏನೂ ಉತ್ತರ ಬರಲಿಲ್ಲ. ಸ್ವಲ್ಪ ಹೊತ್ತು ಕಾದರೂ ಏಳಲಿಲ್ಲ.
"ಇನ್ನೂ ಕಾಯುವುದು ಬೇಡ, ಅವರು ಮಲಗಿದ್ದು ನಾವು ದೇವಸ್ಥಾನ ನೋಡಿ ಬರುವಷ್ಟರಲ್ಲಿ ಎದ್ದು ತಯಾರಾದರೆ, ಇಲ್ಲಿಂದ ಮುಂದೆ ಹೊರಟು ಬಿಡೋಣ" ಅಂದರು ಶರತ್.
ಹಾಗೇ ಆಗಲಿ ಎಂದು ನಾವು ಮೂವರೂ ಹೊರಟೆವು, ಹೊರಡುವ ಮುನ್ನ ಕೊನೆ ಪ್ರಯತ್ನ ಅಂತ ಒಮ್ಮೆ ಬಾಗಿಲು ತಟ್ಟಿದೆ. ಶಿವು ಎದ್ದುಬಂದು ಬಾಗಿಲು ತೆಗೆದ. ಒಂದು ಸಮಾಧಾನದೊಂದಿಗೆ, "ನೀವಿಬ್ಬರೂ ತಯಾರಾಗಿ ದೇವಸ್ಥಾನಕ್ಕೆ ಬನ್ನಿ, ನಾವು ಅಲ್ಲಿಗೆ ಹೋಗಿರುತ್ತೇವೆ" ಎಂದು ದೇವಸ್ಥಾನದ ದಾರಿ ಹಿಡಿದೆವು.
ರಾತ್ರಿ ನಾವು ಊಟ ಮಾಡಿದ್ದ ಹೋಟೆಲ್, ಮತ್ತೆ ತೆರೆದಿತ್ತು. ಹೋಗಿ ಕಾಫಿ ಕುಡಿದು, ದೇವಸ್ಥಾನಕ್ಕೆ ಹೋದೆವು. Queueನಲ್ಲಿ ನಿಂತಾಗ ಅಲ್ಲಿನ ಸೆಕ್ಯೂರಿಟಿ, ಕ್ಯಾಮೆರಾಗಳನ್ನು ಒಳಗೆ ಬಿಡುವುದಿಲ್ಲ ಎಂದರು. ನಮ್ಮ ಫೋಟೋಗ್ರಾಫರ್ ಶರತ್ ಗೆ, ಬೇಸರವಾಯ್ತು, ಹೊರಗೆ ಹೋಗಿ ಇದ್ದ ಎರಡು ಮೂರು ಕ್ಯಾಮೆರಾಗಳನ್ನು locker ನಲ್ಲಿ ಇಟ್ಟು, ಒಳಕ್ಕೆ ಬಂದೆವು.
ಮಧುರೈ ಮೀನಾಕ್ಷಿ ಮಂದಿರ, ಬಹು ಪ್ರಸಿದ್ಧ, ಬಹು ವಿಸ್ತಾರವಾದ ದೇವಸ್ಥಾನ. ಮೀನಿನಂಥ ಅಕ್ಷಿಯುಳ್ಳವಳಾದ ಪಾರ್ವತಿಯ ಅವತಾರವೆನ್ನುವ ಮೀನಾಕ್ಷಿದೇವಿ ಹಾಗೂ ಸುಂದರೇಶ್ವರ ಸ್ವಾಮಿಯ, ದ್ರಾವಿಡ ಶೈಲಿಯ ಮಂದಿರ. ನನಗೆ ಆ ದೇವಾಲಯದ ಇತಿಹಾಸವನ್ನು ತಿಳಿದ ಮಟ್ಟಿಗೆ ಹೇಳಬೇಕೆಂದರೆ, ಈ ದೇವಸ್ಥಾನಕ್ಕೆ ಒಂದು ಸಾವಿರಕ್ಕೂ ಹೆಚ್ಚು ವರ್ಷಗಳ ಇತಿಹಾಸವಿದೆ ಎನ್ನಬಹುದು.
1311ನೇ ಇಸವಿಯಲ್ಲಿ ನೆಡೆಯಿತೆನ್ನುವ ವಾರಂಗಲ್ಲು ಯುದ್ಧದಲ್ಲಿ, ಅಲ್ಲಾವುದೀನ್ ಖಿಲ್ಜಿಯ ಸರದಾರ ಮಲ್ಲಿಕಾಫರ್, ದಕ್ಷಿಣದ ಮಹಾನ್ ಹಿಂದೂ ಸಾಮ್ರಾಜ್ಯದ ದೊರೆಗಳಾದ ಹೊಯ್ಸಳರನ್ನು ಪೂರ್ತಿಯಾಗಿ ಸೋಲಿಸಿ, ಎಲ್ಲವನ್ನು ಲೂಟಿ ಹೊಡೆದ ಮೇಲೆ, ಆತನ ಕಣ್ಣುಗಳು ಮಧುರೈನ ಪಾಂಡ್ಯರ ಮೇಲೆ ಬೀಳುತ್ತದೆ.
ಹೊಯ್ಸಳ ಸಾಮ್ರಾಜ್ಯದಲ್ಲಿ ದೇವಾಲಯಗಳಲ್ಲಾದ ಅನಾಚಾರದ ವಿರುದ್ಧ ಸಿಡಿದೆದ್ದ ರಾಜ, ಸುಂದರ ಪಾಂಡ್ಯನನ್ನೂ, ಯುದ್ಧದಲ್ಲಿ ಸೋಲಿಸಿದ ಮಲ್ಲಿಕಾಫರ್ ಮೀನಾಕ್ಷಿ ಮಂದಿರದ ಭಂಡಾರದಲ್ಲಿದ್ದ ಲಕ್ಷಗಟ್ಟಲೆ ಹೊನ್ನು ಮತ್ತು ದಾಸ್ತಾನನ್ನು ದೋಚುತ್ತಾನೆ.
ಮುಂದೆ ಒಂದೆರಡು ಶತಮಾನಗಳ ಬಳಿಕ, ಮಧುರೈನಲ್ಲಿ ಸ್ವತಂತ್ರ ರಾಜನಾದ ವಿಶ್ವನಾಥ ನಾಯಕ, 1600 ರಲ್ಲಿ ಮೀನಾಕ್ಷಿ ಮಂದಿರವನ್ನು ಪುನರುಜ್ಜೀವನಗೊಳಿಸುತ್ತಾನೆ. ಮತ್ತೆ 1625 ರಲ್ಲಿ, ದೇವಸ್ಥಾನದ ನಿರ್ಮಾಣವನ್ನು ಕೈಗೆತ್ತಿಕೊಂಡ ತಿರುಮಲನಾಯಕ ಈಗ ನಾವು ಕಾಣುವ ಬಹಳಷ್ಟು ಕಟ್ಟಡಗಳನ್ನು ನಿರ್ಮಿಸುತ್ತಾನೆ.
ಜನಪದರ ಕಥೆಗಳ ಮೂಲಕ ತಿಳಿಯುವುದೇನೆಂದರೆ, ಆ ವಂಶಜರಿಂದ ತಿರುಮಲನಾಯಕನ ಕಾಲದಿಂದ ಈಗಿನ ತನಕವೂ, ಈ ಮಂದಿರದಲ್ಲಿ ಒಂದಲ್ಲ ಒಂದು ನಿರ್ಮಾಣ/ದುರಸ್ತಿ ಕಾರ್ಯ ನೆಡೆಯುತ್ತಲೇ ಇರುತ್ತದೆಂದು.
ಬೆಳಗಿನ 8 ಘಂಟೆಗೆ, ಒಳ ಬಂದ ನಾವು ಮೊದಲು ದರ್ಶನಕ್ಕೆಂದು ಸಾಲಿನಲ್ಲಿ ನಿಂತೆವು, ಎತ್ತ ತಿರುಗಿದರೂ ಸುಂದರ ಶಿಲ್ಪಗಳೇ ಇದ್ದ ಮಂದಿರವನ್ನು ನೋಡುತ್ತಾ ನೋಡುತ್ತಾ ಸಾಲಿನಲ್ಲಿ ಮುಂದೆ ಸಾಗಿದ್ದೇ ತಿಳಿಯಲಿಲ್ಲ. ಕಪ್ಪುಶಿಲೆಯ, ಮನುಷ್ಯಾಕೃತಿಯಷ್ಟೇ ಅಳತೆಯ, ಬಲಕ್ಕೆ ಸುಂದರವಾದ ತುರುಬು ಮುಡಿಕಟ್ಟಿದ್ದ, ಅದ್ಭುತಾಲಂಕೃತಗೊಂಡಿದ್ದ ಮೀನಾಕ್ಷಿ ಅಮ್ಮನ ದರ್ಶನ ಮುಗಿಸಿ, ಸುಂದರೇಶ್ವರ ಗುಡಿಯನ್ನು ನೋಡಿ ಮುಂದೆ ಬಂದೆವು.
ದೇವಾಲಯದ ಅಮೋಘ ಶಿಲ್ಪಕಲೆ ತುಂಬಿದ ವಿಶಾಲ ಹಜಾರಗಳು, ಎಷ್ಟು ನೋಡಿದರೂ ಮುಗಿಯದ ಅದ್ಭುತ ಚಿತ್ರಕಲಾ ಗೋಡೆಗಳು, ಮಾಳಿಗೆಗಳು, ಎಲ್ಲವೂ ತಮಿಳು ಸಂಸ್ಕೃತಿಯ ಕಲಾಶ್ರೀಮಂತಿಕೆಯನ್ನು ಮೆರಗುಗೊಳಿಸುತ್ತಿದ್ದವು. ಮೂಕವಿಸ್ಮಿತರಾಗಿ ದೇವಾಲಯದ ಎಲ್ಲಕ್ಕೂ ಕಣ್ಣೊತ್ತಿ ಸಾಗಿದ್ದೆವು.
ಅಷ್ಟರಲ್ಲಿ ಶಿವು-ದೀಪಿಕಾ ಕೂಡ ದರ್ಶನ ಮುಗಿಸಿ, ನಮ್ಮನ್ನು ಕೂಡಿಕೊಂಡರು. ಮುಂದೆ ಸಾವಿರ ಕಂಬದ ಮಂಟಪವಿದೆಯೆಂದು, ನೋಡಲು ಹೋದೆವು. ಅಲ್ಲಿ ಸಾವಿರ ಕಂಬಗಳೇನೋ ಇದ್ದವು. ಆದರೆ ಅದು ನಾವೆಣಿಸಿದ್ದಷ್ಟು ಅದ್ಭುತವಾಗಿರಲಿಲ್ಲ, ತುಸು ಸಪ್ಪೆಯೆನಿಸಿತು. ಆ ಕಂಬಗಳ ನಡು ನಡುವೆಯೇ ದೇವಾಲಯಕ್ಕೆ ಸಂಬಂದಿಸಿದ ಐತಿಹಾಸಿಕ ವಸ್ತುಗಳ ಸಂಗ್ರಹಾಲಯವನ್ನು ಇಟ್ಟಿದ್ದರು. ತುಸು ಹೊತ್ತು ನಮ್ಮ ಪಾಡಿಗೆ ನಾವು ಕಂಬಗಳ ಮಧ್ಯೆ ಸುತ್ತಾಡಿ, ಆಮೇಲೆ ಅಲ್ಲಿಂದ ಹೊರಬಂದೆವು.
ನಿನ್ನೆ ಮಕರ-ಸಂಕ್ರಾಂತಿಯಿತ್ತಲ್ಲವೇ, ನಾವು ಆ ದಿನ ಮನೆಯಲ್ಲಿರುವುದಿಲ್ಲವೆಂದೇ ದೀಪಿಕಾರ ತಾಯಿ ನಮಗೆಲ್ಲ ಎಳ್ಳು-ಬೆಲ್ಲ ಕೊಟ್ಟು ಕಳಿಸಿದ್ದರು. ಅದನ್ನು ನಿನ್ನೆ ಕೊಡದೆ, ಇವತ್ತು ದೇವಸ್ಥಾನದಲ್ಲಿ ಕೊಡೋಣವೆಂದು ದೀಪಿಕಾ ಅಲ್ಲಿಗೆ ತಂದಿದ್ದರು. ನಮಗೂ ಹಸಿವಾಗಿದ್ದರಿಂದ, ದೇವಸ್ಥಾನದಿಂದ ನಮ್ಮ ಹೋಟೆಲಿಗೆ ನೆಡೆಯುವಷ್ಟರಲ್ಲಿ ಅರ್ಧದಷ್ಟನ್ನು ತಿಂದು ಮುಗಿಸಿದೆವು.
ಹೋಟೆಲಿನಲ್ಲಿ complementary breakfast ಇತ್ತು. ಶರತ್ ನಮಗೆಲ್ಲ ಮಧುರೈ speacial ಇಡ್ಲಿ ಕೊಡಿಸುತ್ತೇನೆ ಎಂದಿದ್ದವರು, ಆಗ ಅಲ್ಲಿ ಕೊಟ್ಟ ಇಡ್ಲಿಯನ್ನೇ "ಇದೇ,,, ಅದು." ಅಂತ ತಿನ್ನಲು ಹೇಳಿದರು.
"ನಿನ್ನೆ ಹಲ್ವಾ ಕೊಡಿಸಲಿಲ್ಲ,,, ಇವತ್ತು ಇಡ್ಲಿ ಕೊಡಿಸಲಿಲ್ಲ,,, ಕ್ಯಾಪ್ಟನ್ ಸರಿಯಿಲ್ಲ..." ಅಂತ ರೇಗಿಸಿದೆವು. "ಇವತ್ತಿನ ಪ್ಲಾನಲ್ಲಿ ಜಿಗರ್ಥಂಡ ಒಂದು ಉಳಿದಿದೆ,,, ಅದನ್ನಾದ್ರೂ ಕೊಡ್ಸಿ..." ಅಂದೆವು. ನಗುವೊಂದೇ ಅವರಿಂದ ಬಂದ ಉತ್ತರ.
ತಿಂಡಿ ಮುಗಿಸಿ ರೂಮುಗಳಿಗೆ ತೆರಳಿ, ಮತ್ತೆ ನಮ್ಮ ವೇಷಭೂಷಣ ತೊಟ್ಟು rideಗೆ readyಯಾಗಿ, ಲಗೇಜಿನೊಂದಿಗೆ ಹೊರಬಂದು check-out ಮಾಡಿ, ಬೈಕುಗಳಿಗೆ ಎಲ್ಲವನ್ನೂ ಲೋಡ್ ಮಾಡಿದೆವು.
ಈ ದಿನದ ಪ್ಲಾನ್ ಪ್ರಕಾರ, ನಾವು ಇಂದು ಉಳಿಯಲು ತುಮಕೂರು ತಲುಪಬೇಕಾಗಿತ್ತು. ಉರಿಬಿಸಿಲಿನಲ್ಲಿ ಸುಮಾರು 520ಕಿ.ಮೀ. ಗಳ ಪ್ರಯಾಸದ ಪ್ರಯಾಣ, ನಮ್ಮ ಪಾಲಿಗಿತ್ತು.
ಗಡಿಯಾರ 11 ಘಂಟೆ ತೋರಿಸುತ್ತಿತ್ತು. ನಾನು ಮೇಲೆ ತಿಳಿಸಿದ ತಿರುಮಲನಾಯಕರ, ಅರಮನೆಯನ್ನು ನೋಡಿ ಅಲ್ಲಿಂದ ತುಮಕೂರು ಕಡೆಗೆ ಪ್ರಯಾಣ ಬೆಳೆಸುವ ಎಂದುಕೊಂಡು, ಹೊರಟೆವು.
ಹೋಟೆಲಿನಿಂದ 5km ದೂರವಿದ್ದ ಆ ಅರಮನೆ, ಸುಮಾರು ನಾನೂರು ವರ್ಷಕ್ಕೂ ಹಳೆಯ ಕಟ್ಟಡ. ಮೊದಲ ನೋಟಕ್ಕೆ ಹಳೆಯ ಕಾಲದ ಒಂದು ಬೃಹತ್ ಬಂಗಲೆಯಂತೆಯೋ ಅಥವಾ ಯಾವುದೋ ಬ್ರಿಟೀಷರ ಕಾಲದ ಬಂಗಲೆಯಂತೆ ಕಾಣುತ್ತದೆ. ಹೊರಗಿನ ಸುತ್ತು ಗೋಡೆಯನ್ನು ದಾಟಿ ಒಳ ಹೋದೊಡನೆ, ಅಮೋಘ ದರ್ಬಾರ್ ಹಾಲ್ ಎದುರಿಗೆ ಸಿಗುತ್ತದೆ.
ಇಲ್ಲಿಂದ ಒಳಗೆ ಹುಬ್ಬೇರುವಷ್ಟು ಎತ್ತರದ ಕಂಬಗಳ ಮೇಲೆ ನಿಂತಿರುವ ಅದ್ಭುತ ಛಾವಣಿಯಿಂದ ಸುತ್ತುವರಿದ ದರ್ಬಾರ್ ಹಾಲ್. ಮೇಲ್ನೋಟಕ್ಕೆ ಮಾಸಿ ಹೋದಂತಿದ್ದರೂ, ಸುಂದರ ವಿನ್ಯಾಸಗಳ ಸಾಲು ಸಾಲು ಕಮಾನುಗಳು, ಅಲ್ಲಿದ್ದಷ್ಟು ಹೊತ್ತೂ ನಮ್ಮ ಕಣ್ಣುಗಳನ್ನು ಅವುಗಳತ್ತಲೇ ಸೆಳೆಯುತ್ತವೆ.
ನಾಯಕರು ಕುಳಿತು ದರ್ಬಾರು ನೆಡೆಸುತ್ತಿದ್ದ ಜಾಗದಲ್ಲಿ, ಸಿಂಹಾನವಲ್ಲದಿದ್ದರೂ ಒಂದು ಹಳೆಯ ಕಾಲದ ಕುರ್ಚಿಯನ್ನಿಟ್ಟಿದ್ದಾರೆ. ಆದರೆ ಇನ್ನು ಒಳಗಿನ ಅರಮನೆಯ ಭಾಗಕ್ಕೆ ಪ್ರವೇಶ ನಿಷಿದ್ಧವಿದ್ದರಿಂದ, ಒಳಗೆ ಹೋಗಿ ಪೂರ್ತಿ ಅರಮನೆಯನ್ನು ನೋಡಲು ಆಗಲಿಲ್ಲ.
ಅಲ್ಲಿನ ಎತ್ತರದ ಮಾಳಿಗೆಗಳಲ್ಲಿ, ಯಾರೂ ತಮಗೆ ತೊಂದರೆ ಕೊಡುವವರಿಲ್ಲದೇ, ಆ ಅರಮನೆಯನ್ನು ಸದ್ಯದ ಮಟ್ಟಿಗೆ ಯಾವ ಯುದ್ಧವಿಲ್ಲದೇ ಪಾರಿವಾಳಗಳು ಗೆದ್ದುಕೊಂಡಿವೆ. ಕಂಬಗಳ ನಡುವಿನ ಹಜಾರದಲ್ಲಿ ಸುತ್ತಾಡುವಾಗ, ತಲೆಯೆತ್ತಿ ಮೂರ್ನಾಲ್ಕು ಬಾರಿ ಯೋಚಿಸಿ ನೋಡಿಯೇ ನೆಡೆಯಬೇಕಾದ ಸ್ಥಿತಿಯಿದೆ ಅಲ್ಲಿ.
ನಮ್ಮ ಲಗೇಜನ್ನೆಲ್ಲ ಬೈಕುಗಳಲ್ಲೇ ಬಿಟ್ಟು ಬಂದಿದ್ದರಿಂದ, ಬೇಗ ಹೊರಗೆ ಬಂದು ಬಿಟ್ಟೆವು. ಅರಮನೆಯ ಪ್ರವೇಶದ ದಾರಿಯಲ್ಲಿ ಸಣ್ಣ ಗಾಡಿಯಲ್ಲಿ ಜಿಗರ್ಥಂಡ ಜ್ಯೂಸ್ ಅಂತ ಬೋರ್ಡು ಹಾಕಿತ್ತು. ಶರತ್ ನಮ್ಮನ್ನೆಲ್ಲ ಕೂಗಿ ಗಾಡಿಯನ್ನು ತೋರಿಸಿ, ಬನ್ನಿ ಎಂದು ಕರೆದರು. ನಾವು ನಿಂತಿದ್ದ ಜಾಗದಿಂದ ಅಲ್ಲಿಗೆ ಹೋಗಬೇಕೆನ್ನುವಷ್ಟರಲ್ಲಿ, ಅಲ್ಲಿದ್ದ ಅರಮನೆಯ ಗೈಡ್ ಒಬ್ಬರು, "ಸರ್, ಅಲ್ಲಿ ಮುಂದೆ ಮೇನ್ ರೋಡಿನಲ್ಲಿ ಮಧುರೈ ಸ್ಪೆಷಲ್ ಜಿಗರ್ಥಂಡ ಅಂಗಡಿಯಿದೆ, ಆ ಅಂಗಡಿಯದ್ದೇ ಒರಿಜಿನಲ್ ಟೇಸ್ಟ್. ಅಲ್ಲಿ ಹೋಗಿ ಟೇಸ್ಟ್ ಮಾಡಿ" ಅಂದ. ಆತ ಹೇಳಿದ್ದು ಒಳ್ಳೆಯದಾಯ್ತೆಂದು, ಶರತ್ ರನ್ನು ಕರೆದು ಮುಂದೆ ಹೊರಟು, ಅಲ್ಲಿಂದ ಮೇನ್ ರೋಡ್ ತಲುಪುತ್ತಿದ್ದಂತೆಯೇ ಅರ್ಧ ಕಿ.ಮೀ ನಲ್ಲಿ ನಮ್ಮ ಬಲಕ್ಕೆ ಒಂದು ಚಿಕ್ಕ ಜ್ಯೂಸು ಅಂಗಡಿ ಕಾಣಿಸಿತು. ಪೂರ್ತಿ ಜನಜಂಗುಳಿಯಿತ್ತು ಅಲ್ಲಿ, ಆ ಜನರನ್ನು ನೋಡಿಯೇ, "ಹಾ, ಇದೇ ಆ ಫೇಮಸ್ ಶಾಪ್" ಅಂದು ಕೊಂಡು, ಬೈಕುಗಳನ್ನು ರಸ್ತೆ ಬದಿ ನಿಲ್ಲಿಸಿ, ಜ್ಯೂಸು ಅಂಗಡಿಯ ಜನಗಳ ನಡುವೆ ನುಗ್ಗಿದೆವು.
ನಮ್ಮ ವೇಷ ಅವತಾರಗಳನ್ನ ಎಲ್ಲರೂ, ಆಶ್ಚರ್ಯದಿಂದ ನೋಡುತ್ತಿದ್ದರು. ಆದರೆ ನಮ್ಮ ಗಮನ ಜ್ಯೂಸಿನ ಮೇಲಿತ್ತು. ಸ್ಪೆಷಲ್ ಜಿಗರ್ಥಂಡ ಐದು ಎಂದು, ಆರ್ಡರ್ ಮಾಡಿದೆವು. ಒಂದಕ್ಕೆ 50ರೂ. ಎಲ್ಲರೂ ಜ್ಯೂಸು ಹಿಡಿದು, ಹೊರಗೆ ಬಂದು ನಿಂತು, ಮನಸಾರೆ ಸವಿಯತೊಡಗಿದೆವು, ಅಷ್ಟೇನೂ ತನ್ಮಯಗೊಳಿಸುವಷ್ಟು ರುಚಿಕರವಲ್ಲದಿದ್ದರೂ ನಮಗೆ ಒಂದು ಹೊಸ ಅನುಭವ.
"ಅಲ್ಲಿನ ಗೈಡ್ ಹೇಳದೇ ಇದ್ದಿದ್ದರೆ, ಆ ಗಾಡಿ ಅಂಗಡಿಯ ಜ್ಯೂಸನ್ನೇ, ಇದೆ ಒರಿಜಿನಲ್ ಜಿಗರ್ಥಂಡ ಅಂತ, ನಮಗೆಲ್ಲ ಯಾಮಾರಿಸಿಬಿಡುತ್ತಿದ್ದಿರಿ ಅಲ್ವಾ???" ಅಂತ, ಎಲ್ಲರೂ ಶರತ್ ಗೆ ಕಾಳೆಯುತ್ತಿದ್ದೆವು.
ನಮ್ಮ ಪಕ್ಕದಲ್ಲಿ ನಿಂತಿದ್ದ ಒಂದು ಕುಟುಂಬದವರು, ನಮ್ಮನ್ನೆಲ್ಲ ಮಾತಾಡಿಸಿ, ನಮ್ಮ ಪ್ರವಾಸದ ಬಗ್ಗೆ ವಿಚಾರಿಸಿ, ಆಶ್ಚರ್ಯ ಪಟ್ಟು "All the best" ಹೇಳಿ ಕಳುಹಿಸಿದರು.
ಈಗ ಮಧ್ಯಾಹ್ನ 1 ಗಂಟೆ, ಹಸಿವಂತೂ ಯಾರಿಗೂ ಆಗಿರಲಿಲ್ಲ. ಇಲ್ಲಿಂದ 500km ಹೋಗಬೇಕಿದೆ. ಹಾಗಾಗಿ ಊಟದ ಯೋಚನೆ ಬಿಟ್ಟು, ಮುಂದೆ ಸದ್ಯಕ್ಕೆ ಇನ್ನೆಲ್ಲೂ ನಿಲ್ಲುವುದು ಬೇಡ, "ಸಾಗುವಾ ದಾರಿ,,, ದೂರಾ..." ಅಂತ ಹೆದ್ದಾರಿ ಹಿಡಿದೆವು. ಅಲ್ಲಿಂದ ಬೆಂಗಳೂರು ಕಡೆಗೆ ಸೀದಾ ಒಂದೇ ಹೆದ್ದಾರಿಯಾದ್ದರಿಂದ, ಮ್ಯಾಪ್ ಅವಶ್ಯಕತೆಯಿಲ್ಲದೆ ನಮ್ಮ ಪಾಡಿಗೆ ನಾವುಗಳು ಒಬ್ಬೊಬ್ಬರಾಗಿ ಸಾಗುತ್ತಿದ್ದೆವು. ಆದರೂ ಒಬ್ಬರ ಕಣ್ಣಿಗೊಬ್ಬರು ಕಾಣುವಷ್ಟು ಅಂತರವನ್ನಂತೂ ಕಾದುಕೊಂಡು ಬರುತ್ತಿದ್ದೆವು.
ಮಧುರೈ ದಾಟಿ, ತುಸು ದೂರ ಬರುತ್ತಿದಂತೆಯೇ ಹೆದ್ದಾರಿ, ಸಿರುಮಲೈ ರಕ್ಷಿತಾರಣ್ಯದ ಹೊರ ವಲಯದಲ್ಲಿ ಸಾಗುತ್ತದೆ. ಅಚ್ಚುಕಟ್ಟಾದ ಹೆದ್ದಾರಿಯಲ್ಲಿ, ಬೈಕು ಓಡಿಸುವುದು ಕಷ್ಟವೇನಲ್ಲ. ಹಾಗಾಗಿ ಕಣ್ಣು, ಸುತ್ತೆಲ್ಲ ಪರಿಸರವನ್ನು ನೋಡುತ್ತಲೇ ಸಾಗುತ್ತದೆ.
ಬಲಕ್ಕೆ, ಆ ಸುತ್ತ ಮುತ್ತಲ ಬಯಲು ನಾಡಿನಲ್ಲಿ ದಿಗ್ಗನೆ ಒಂದೊಕ್ಕೊಂದು ಒತ್ತಿಕೊಂಡು ಮನೋಹರವಾಗಿ ಹಬ್ಬಿದ್ದ ಪರ್ವತ ರಾಶಿ ಕಣ್ಣಿಗೆ ಬಿತ್ತು. ಸುಮಾರು 15ಕಿ.ಮೀ ಹಾಗೇ ದಾರಿಯುದ್ದಕ್ಕೂ ನಮ್ಮ ಜೊತೆಯೇ ಬರುತ್ತಿದೆ ಎಂದು ಭಾಸವಾಗುವಂತೆ, ಪರ್ವತ ಮಾಲೆ ನಮ್ಮ ಪಕ್ಕಕ್ಕೆ ಕಾಣುತ್ತಲೇ ಇತ್ತು.
ಮೊದಲಿಗೆ ಯಾವುದಿದು ಬೆಟ್ಟ ಸಾಲೆಂದು, ತಿಳಿಯದ ನನಗೆ ರಸ್ತೆಯಲ್ಲಿ ಪಕ್ಕದ ಮೈಲುಗಲ್ಲಿನಲ್ಲಿದ್ದ 'ದಿಂಡಿಗಲ್ಲು' ಹೆಸರನ್ನು ಕಂಡೊಡನೆ, ನಾನು ಓದಿದ್ದ Kenneth Andersonರ ನರಭಕ್ಷಕ ಬೇಟೆಯ ಕಥೆಗಳು ನೆನಪಾದವು. ಆ ದಿಂಡಿಗಲ್ಲು ಬೆಟ್ಟವನ್ನು ಮತ್ತು ಸುತ್ತಲ ಕಾಡನ್ನು ಅವರ ಒಂದು ಪುಸ್ತಕದಲ್ಲಿ ವಿವರಿಸಿದ್ದ, ಸಣ್ಣ ಪುಟ್ಟ ವಿಷಯಗಳು ಮನಸಿನ್ನಲ್ಲಿ ಮೂಡಿದವು. ಮತ್ತಷ್ಟು ಕುತೂಹಲದಿಂದ ಕಣ್ತುಂಬಿಕೊಂಡೆ. ಈಗ ಆ ಬೆಟ್ಟಸಾಲು ಇನ್ನಷ್ಟು ರೋಚಕವಾಗಿ ಕಂಡಿತು.
ಒಂದೆರಡು ಘಂಟೆಗಳು ಸಾಗಿದ ಮೇಲೆ ಊಟದ ನೆನಪಾಗತೊಡಗಿತು. ನನ್ನ ಮುಂದೆ ಸಾಗುತ್ತಿದ್ದ ಶರತ್ ಸ್ವಲ್ಪ slow ಮಾಡಿ, ನನಗೆ ಊಟದ ಸನ್ನೆ ಮಾಡಿ ಮುಂದುವರಿದರು. ಆಗ ನಾನು ನಿಧಾನವಾಗಿ ಸಾಗುತ್ತಾ ಹಿಂದಿದ್ದ ಶಿವು ಹತ್ತಿರಾದಾಗ, ಊಟದ ಸನ್ನೆ ಮಾಡಿದೆ, ಆಗ ಹಿಂದೆ ಕುಳಿತಿದ್ದ ದೀಪಿಕಾ ನನಗೆ ನಿಲ್ಲುವಂತೆ ಹೇಳಿದರು.
ಸುಖನಿದ್ದೆಯಿಂದ ಏಳಲು ಮನಸಿರಲಿಲ್ಲ. ಆದರೆ ಆ ದಿನ ನಮ್ಮ ಪ್ರಯಾಣ ಸ್ವಲ್ಪ ಭಯಂಕರವೇ ಇತ್ತು. ಅದಕ್ಕಾಗಿಯೇ ನಮ್ಮ ಕ್ಯಾಪ್ಟನ್ ಶರತ್ ಎಲ್ಲರಿಗೂ "ನಾಳೆ, 7ಕ್ಕೆ ಎಲ್ಲರೂ ತಯಾರಿದ್ದು, ಮೀನಾಕ್ಷಿ ದೇವಸ್ಥಾನ ನೋಡಲು ಹೊರಡಬೇಕು" ಎಂದು ಹೇಳಿದ್ದರು.
ನನ್ನಿಂದ ತಡವಾಗಬಾರದೆಂದು, ಎದ್ದು ತಯಾರಾಗಿ ಅವರ ರೂಮಿನ ಬಾಗಿಲು ತಟ್ಟಿದೆ. ಶರತ್ ಮತ್ತು ಶ್ವೇತಾ ಕೂಡ ready ಯಾಗಿದ್ದವರು, ಹೊರಗೆ ಬಂದರು. "ಶಿವು-ದೀಪಿಕಾ ಇನ್ನೂ ಎದ್ದಿಲ್ಲ, phone call ಗೆ ಕೂಡ answer ಮಾಡ್ತಿಲ್ಲ, ಬಾಗಿಲು ತಟ್ಟಿದರೂ ಏಳುತ್ತಿಲ್ಲ... ನಾವು ಸುಮಾರು 20 ನಿಮಿಷದಿಂದ try ಮಾಡ್ತಾನೆ ಇದೀವಿ" ಅಂದರು. ಹೌದಾ, ಅಂತ ಹೇಳಿ ನಾನೂ ಒಂದೆರಡು ಬಾರಿ ಬಾಗಿಲು ಬಡಿದೆ. ಏನೂ ಉತ್ತರ ಬರಲಿಲ್ಲ. ಸ್ವಲ್ಪ ಹೊತ್ತು ಕಾದರೂ ಏಳಲಿಲ್ಲ.
"ಇನ್ನೂ ಕಾಯುವುದು ಬೇಡ, ಅವರು ಮಲಗಿದ್ದು ನಾವು ದೇವಸ್ಥಾನ ನೋಡಿ ಬರುವಷ್ಟರಲ್ಲಿ ಎದ್ದು ತಯಾರಾದರೆ, ಇಲ್ಲಿಂದ ಮುಂದೆ ಹೊರಟು ಬಿಡೋಣ" ಅಂದರು ಶರತ್.
ಹಾಗೇ ಆಗಲಿ ಎಂದು ನಾವು ಮೂವರೂ ಹೊರಟೆವು, ಹೊರಡುವ ಮುನ್ನ ಕೊನೆ ಪ್ರಯತ್ನ ಅಂತ ಒಮ್ಮೆ ಬಾಗಿಲು ತಟ್ಟಿದೆ. ಶಿವು ಎದ್ದುಬಂದು ಬಾಗಿಲು ತೆಗೆದ. ಒಂದು ಸಮಾಧಾನದೊಂದಿಗೆ, "ನೀವಿಬ್ಬರೂ ತಯಾರಾಗಿ ದೇವಸ್ಥಾನಕ್ಕೆ ಬನ್ನಿ, ನಾವು ಅಲ್ಲಿಗೆ ಹೋಗಿರುತ್ತೇವೆ" ಎಂದು ದೇವಸ್ಥಾನದ ದಾರಿ ಹಿಡಿದೆವು.
ರಾತ್ರಿ ನಾವು ಊಟ ಮಾಡಿದ್ದ ಹೋಟೆಲ್, ಮತ್ತೆ ತೆರೆದಿತ್ತು. ಹೋಗಿ ಕಾಫಿ ಕುಡಿದು, ದೇವಸ್ಥಾನಕ್ಕೆ ಹೋದೆವು. Queueನಲ್ಲಿ ನಿಂತಾಗ ಅಲ್ಲಿನ ಸೆಕ್ಯೂರಿಟಿ, ಕ್ಯಾಮೆರಾಗಳನ್ನು ಒಳಗೆ ಬಿಡುವುದಿಲ್ಲ ಎಂದರು. ನಮ್ಮ ಫೋಟೋಗ್ರಾಫರ್ ಶರತ್ ಗೆ, ಬೇಸರವಾಯ್ತು, ಹೊರಗೆ ಹೋಗಿ ಇದ್ದ ಎರಡು ಮೂರು ಕ್ಯಾಮೆರಾಗಳನ್ನು locker ನಲ್ಲಿ ಇಟ್ಟು, ಒಳಕ್ಕೆ ಬಂದೆವು.
ಮಧುರೈ ಮೀನಾಕ್ಷಿ ಮಂದಿರ, ಬಹು ಪ್ರಸಿದ್ಧ, ಬಹು ವಿಸ್ತಾರವಾದ ದೇವಸ್ಥಾನ. ಮೀನಿನಂಥ ಅಕ್ಷಿಯುಳ್ಳವಳಾದ ಪಾರ್ವತಿಯ ಅವತಾರವೆನ್ನುವ ಮೀನಾಕ್ಷಿದೇವಿ ಹಾಗೂ ಸುಂದರೇಶ್ವರ ಸ್ವಾಮಿಯ, ದ್ರಾವಿಡ ಶೈಲಿಯ ಮಂದಿರ. ನನಗೆ ಆ ದೇವಾಲಯದ ಇತಿಹಾಸವನ್ನು ತಿಳಿದ ಮಟ್ಟಿಗೆ ಹೇಳಬೇಕೆಂದರೆ, ಈ ದೇವಸ್ಥಾನಕ್ಕೆ ಒಂದು ಸಾವಿರಕ್ಕೂ ಹೆಚ್ಚು ವರ್ಷಗಳ ಇತಿಹಾಸವಿದೆ ಎನ್ನಬಹುದು.
1311ನೇ ಇಸವಿಯಲ್ಲಿ ನೆಡೆಯಿತೆನ್ನುವ ವಾರಂಗಲ್ಲು ಯುದ್ಧದಲ್ಲಿ, ಅಲ್ಲಾವುದೀನ್ ಖಿಲ್ಜಿಯ ಸರದಾರ ಮಲ್ಲಿಕಾಫರ್, ದಕ್ಷಿಣದ ಮಹಾನ್ ಹಿಂದೂ ಸಾಮ್ರಾಜ್ಯದ ದೊರೆಗಳಾದ ಹೊಯ್ಸಳರನ್ನು ಪೂರ್ತಿಯಾಗಿ ಸೋಲಿಸಿ, ಎಲ್ಲವನ್ನು ಲೂಟಿ ಹೊಡೆದ ಮೇಲೆ, ಆತನ ಕಣ್ಣುಗಳು ಮಧುರೈನ ಪಾಂಡ್ಯರ ಮೇಲೆ ಬೀಳುತ್ತದೆ.
ಹೊಯ್ಸಳ ಸಾಮ್ರಾಜ್ಯದಲ್ಲಿ ದೇವಾಲಯಗಳಲ್ಲಾದ ಅನಾಚಾರದ ವಿರುದ್ಧ ಸಿಡಿದೆದ್ದ ರಾಜ, ಸುಂದರ ಪಾಂಡ್ಯನನ್ನೂ, ಯುದ್ಧದಲ್ಲಿ ಸೋಲಿಸಿದ ಮಲ್ಲಿಕಾಫರ್ ಮೀನಾಕ್ಷಿ ಮಂದಿರದ ಭಂಡಾರದಲ್ಲಿದ್ದ ಲಕ್ಷಗಟ್ಟಲೆ ಹೊನ್ನು ಮತ್ತು ದಾಸ್ತಾನನ್ನು ದೋಚುತ್ತಾನೆ.
ಮುಂದೆ ಒಂದೆರಡು ಶತಮಾನಗಳ ಬಳಿಕ, ಮಧುರೈನಲ್ಲಿ ಸ್ವತಂತ್ರ ರಾಜನಾದ ವಿಶ್ವನಾಥ ನಾಯಕ, 1600 ರಲ್ಲಿ ಮೀನಾಕ್ಷಿ ಮಂದಿರವನ್ನು ಪುನರುಜ್ಜೀವನಗೊಳಿಸುತ್ತಾನೆ. ಮತ್ತೆ 1625 ರಲ್ಲಿ, ದೇವಸ್ಥಾನದ ನಿರ್ಮಾಣವನ್ನು ಕೈಗೆತ್ತಿಕೊಂಡ ತಿರುಮಲನಾಯಕ ಈಗ ನಾವು ಕಾಣುವ ಬಹಳಷ್ಟು ಕಟ್ಟಡಗಳನ್ನು ನಿರ್ಮಿಸುತ್ತಾನೆ.
ಜನಪದರ ಕಥೆಗಳ ಮೂಲಕ ತಿಳಿಯುವುದೇನೆಂದರೆ, ಆ ವಂಶಜರಿಂದ ತಿರುಮಲನಾಯಕನ ಕಾಲದಿಂದ ಈಗಿನ ತನಕವೂ, ಈ ಮಂದಿರದಲ್ಲಿ ಒಂದಲ್ಲ ಒಂದು ನಿರ್ಮಾಣ/ದುರಸ್ತಿ ಕಾರ್ಯ ನೆಡೆಯುತ್ತಲೇ ಇರುತ್ತದೆಂದು.
ಬೆಳಗಿನ 8 ಘಂಟೆಗೆ, ಒಳ ಬಂದ ನಾವು ಮೊದಲು ದರ್ಶನಕ್ಕೆಂದು ಸಾಲಿನಲ್ಲಿ ನಿಂತೆವು, ಎತ್ತ ತಿರುಗಿದರೂ ಸುಂದರ ಶಿಲ್ಪಗಳೇ ಇದ್ದ ಮಂದಿರವನ್ನು ನೋಡುತ್ತಾ ನೋಡುತ್ತಾ ಸಾಲಿನಲ್ಲಿ ಮುಂದೆ ಸಾಗಿದ್ದೇ ತಿಳಿಯಲಿಲ್ಲ. ಕಪ್ಪುಶಿಲೆಯ, ಮನುಷ್ಯಾಕೃತಿಯಷ್ಟೇ ಅಳತೆಯ, ಬಲಕ್ಕೆ ಸುಂದರವಾದ ತುರುಬು ಮುಡಿಕಟ್ಟಿದ್ದ, ಅದ್ಭುತಾಲಂಕೃತಗೊಂಡಿದ್ದ ಮೀನಾಕ್ಷಿ ಅಮ್ಮನ ದರ್ಶನ ಮುಗಿಸಿ, ಸುಂದರೇಶ್ವರ ಗುಡಿಯನ್ನು ನೋಡಿ ಮುಂದೆ ಬಂದೆವು.
ದೇವಾಲಯದ ಅಮೋಘ ಶಿಲ್ಪಕಲೆ ತುಂಬಿದ ವಿಶಾಲ ಹಜಾರಗಳು, ಎಷ್ಟು ನೋಡಿದರೂ ಮುಗಿಯದ ಅದ್ಭುತ ಚಿತ್ರಕಲಾ ಗೋಡೆಗಳು, ಮಾಳಿಗೆಗಳು, ಎಲ್ಲವೂ ತಮಿಳು ಸಂಸ್ಕೃತಿಯ ಕಲಾಶ್ರೀಮಂತಿಕೆಯನ್ನು ಮೆರಗುಗೊಳಿಸುತ್ತಿದ್ದವು. ಮೂಕವಿಸ್ಮಿತರಾಗಿ ದೇವಾಲಯದ ಎಲ್ಲಕ್ಕೂ ಕಣ್ಣೊತ್ತಿ ಸಾಗಿದ್ದೆವು.
ದೇವಸ್ಥಾನದಲ್ಲಿ ಸುಮಾರು ಎರಡೂವರೆ ಘಂಟೆಗಳಷ್ಟು ಹೊತ್ತು ಕಳೆದಿದ್ದೆವು. ಆದರೂ ದೇವಾಲಯದ ಅರ್ಧದಷ್ಟನ್ನೂ ನೋಡಲಿಲ್ಲ ಅನಿಸುತ್ತದೆ.
ನಿನ್ನೆ ಮಕರ-ಸಂಕ್ರಾಂತಿಯಿತ್ತಲ್ಲವೇ, ನಾವು ಆ ದಿನ ಮನೆಯಲ್ಲಿರುವುದಿಲ್ಲವೆಂದೇ ದೀಪಿಕಾರ ತಾಯಿ ನಮಗೆಲ್ಲ ಎಳ್ಳು-ಬೆಲ್ಲ ಕೊಟ್ಟು ಕಳಿಸಿದ್ದರು. ಅದನ್ನು ನಿನ್ನೆ ಕೊಡದೆ, ಇವತ್ತು ದೇವಸ್ಥಾನದಲ್ಲಿ ಕೊಡೋಣವೆಂದು ದೀಪಿಕಾ ಅಲ್ಲಿಗೆ ತಂದಿದ್ದರು. ನಮಗೂ ಹಸಿವಾಗಿದ್ದರಿಂದ, ದೇವಸ್ಥಾನದಿಂದ ನಮ್ಮ ಹೋಟೆಲಿಗೆ ನೆಡೆಯುವಷ್ಟರಲ್ಲಿ ಅರ್ಧದಷ್ಟನ್ನು ತಿಂದು ಮುಗಿಸಿದೆವು.
ಹೋಟೆಲಿನಲ್ಲಿ complementary breakfast ಇತ್ತು. ಶರತ್ ನಮಗೆಲ್ಲ ಮಧುರೈ speacial ಇಡ್ಲಿ ಕೊಡಿಸುತ್ತೇನೆ ಎಂದಿದ್ದವರು, ಆಗ ಅಲ್ಲಿ ಕೊಟ್ಟ ಇಡ್ಲಿಯನ್ನೇ "ಇದೇ,,, ಅದು." ಅಂತ ತಿನ್ನಲು ಹೇಳಿದರು.
"ನಿನ್ನೆ ಹಲ್ವಾ ಕೊಡಿಸಲಿಲ್ಲ,,, ಇವತ್ತು ಇಡ್ಲಿ ಕೊಡಿಸಲಿಲ್ಲ,,, ಕ್ಯಾಪ್ಟನ್ ಸರಿಯಿಲ್ಲ..." ಅಂತ ರೇಗಿಸಿದೆವು. "ಇವತ್ತಿನ ಪ್ಲಾನಲ್ಲಿ ಜಿಗರ್ಥಂಡ ಒಂದು ಉಳಿದಿದೆ,,, ಅದನ್ನಾದ್ರೂ ಕೊಡ್ಸಿ..." ಅಂದೆವು. ನಗುವೊಂದೇ ಅವರಿಂದ ಬಂದ ಉತ್ತರ.
ತಿಂಡಿ ಮುಗಿಸಿ ರೂಮುಗಳಿಗೆ ತೆರಳಿ, ಮತ್ತೆ ನಮ್ಮ ವೇಷಭೂಷಣ ತೊಟ್ಟು rideಗೆ readyಯಾಗಿ, ಲಗೇಜಿನೊಂದಿಗೆ ಹೊರಬಂದು check-out ಮಾಡಿ, ಬೈಕುಗಳಿಗೆ ಎಲ್ಲವನ್ನೂ ಲೋಡ್ ಮಾಡಿದೆವು.
ಈ ದಿನದ ಪ್ಲಾನ್ ಪ್ರಕಾರ, ನಾವು ಇಂದು ಉಳಿಯಲು ತುಮಕೂರು ತಲುಪಬೇಕಾಗಿತ್ತು. ಉರಿಬಿಸಿಲಿನಲ್ಲಿ ಸುಮಾರು 520ಕಿ.ಮೀ. ಗಳ ಪ್ರಯಾಸದ ಪ್ರಯಾಣ, ನಮ್ಮ ಪಾಲಿಗಿತ್ತು.
ಗಡಿಯಾರ 11 ಘಂಟೆ ತೋರಿಸುತ್ತಿತ್ತು. ನಾನು ಮೇಲೆ ತಿಳಿಸಿದ ತಿರುಮಲನಾಯಕರ, ಅರಮನೆಯನ್ನು ನೋಡಿ ಅಲ್ಲಿಂದ ತುಮಕೂರು ಕಡೆಗೆ ಪ್ರಯಾಣ ಬೆಳೆಸುವ ಎಂದುಕೊಂಡು, ಹೊರಟೆವು.
ಹೋಟೆಲಿನಿಂದ 5km ದೂರವಿದ್ದ ಆ ಅರಮನೆ, ಸುಮಾರು ನಾನೂರು ವರ್ಷಕ್ಕೂ ಹಳೆಯ ಕಟ್ಟಡ. ಮೊದಲ ನೋಟಕ್ಕೆ ಹಳೆಯ ಕಾಲದ ಒಂದು ಬೃಹತ್ ಬಂಗಲೆಯಂತೆಯೋ ಅಥವಾ ಯಾವುದೋ ಬ್ರಿಟೀಷರ ಕಾಲದ ಬಂಗಲೆಯಂತೆ ಕಾಣುತ್ತದೆ. ಹೊರಗಿನ ಸುತ್ತು ಗೋಡೆಯನ್ನು ದಾಟಿ ಒಳ ಹೋದೊಡನೆ, ಅಮೋಘ ದರ್ಬಾರ್ ಹಾಲ್ ಎದುರಿಗೆ ಸಿಗುತ್ತದೆ.
| ತಿರುಮಲನಾಯಕರ ಅರಮನೆ |
ನಾಯಕರು ಕುಳಿತು ದರ್ಬಾರು ನೆಡೆಸುತ್ತಿದ್ದ ಜಾಗದಲ್ಲಿ, ಸಿಂಹಾನವಲ್ಲದಿದ್ದರೂ ಒಂದು ಹಳೆಯ ಕಾಲದ ಕುರ್ಚಿಯನ್ನಿಟ್ಟಿದ್ದಾರೆ. ಆದರೆ ಇನ್ನು ಒಳಗಿನ ಅರಮನೆಯ ಭಾಗಕ್ಕೆ ಪ್ರವೇಶ ನಿಷಿದ್ಧವಿದ್ದರಿಂದ, ಒಳಗೆ ಹೋಗಿ ಪೂರ್ತಿ ಅರಮನೆಯನ್ನು ನೋಡಲು ಆಗಲಿಲ್ಲ.
ಅಲ್ಲಿನ ಎತ್ತರದ ಮಾಳಿಗೆಗಳಲ್ಲಿ, ಯಾರೂ ತಮಗೆ ತೊಂದರೆ ಕೊಡುವವರಿಲ್ಲದೇ, ಆ ಅರಮನೆಯನ್ನು ಸದ್ಯದ ಮಟ್ಟಿಗೆ ಯಾವ ಯುದ್ಧವಿಲ್ಲದೇ ಪಾರಿವಾಳಗಳು ಗೆದ್ದುಕೊಂಡಿವೆ. ಕಂಬಗಳ ನಡುವಿನ ಹಜಾರದಲ್ಲಿ ಸುತ್ತಾಡುವಾಗ, ತಲೆಯೆತ್ತಿ ಮೂರ್ನಾಲ್ಕು ಬಾರಿ ಯೋಚಿಸಿ ನೋಡಿಯೇ ನೆಡೆಯಬೇಕಾದ ಸ್ಥಿತಿಯಿದೆ ಅಲ್ಲಿ.
(Shaktiman Spotted after Decades)
ಅಲ್ಲಿ ಕೆಲವು ಫೋಟೋ ತೆಗೆದುಕೊಂಡು, ಹೊರಬಂದೆವು. ನನ್ನ Jacketನ reflector lining, ಫೋಟೋ flashಗೆ ಹೊಳೆದು ಬಂದಿದ್ದರಿಂದ, ಫೋಟೋ ನೋಡಿದ ಎಲ್ಲರೂ Shaktiman ಎಂದು ನಾಮಕರಣ ಮಾಡಿಬಿಟ್ಟರು.ನಮ್ಮ ಲಗೇಜನ್ನೆಲ್ಲ ಬೈಕುಗಳಲ್ಲೇ ಬಿಟ್ಟು ಬಂದಿದ್ದರಿಂದ, ಬೇಗ ಹೊರಗೆ ಬಂದು ಬಿಟ್ಟೆವು. ಅರಮನೆಯ ಪ್ರವೇಶದ ದಾರಿಯಲ್ಲಿ ಸಣ್ಣ ಗಾಡಿಯಲ್ಲಿ ಜಿಗರ್ಥಂಡ ಜ್ಯೂಸ್ ಅಂತ ಬೋರ್ಡು ಹಾಕಿತ್ತು. ಶರತ್ ನಮ್ಮನ್ನೆಲ್ಲ ಕೂಗಿ ಗಾಡಿಯನ್ನು ತೋರಿಸಿ, ಬನ್ನಿ ಎಂದು ಕರೆದರು. ನಾವು ನಿಂತಿದ್ದ ಜಾಗದಿಂದ ಅಲ್ಲಿಗೆ ಹೋಗಬೇಕೆನ್ನುವಷ್ಟರಲ್ಲಿ, ಅಲ್ಲಿದ್ದ ಅರಮನೆಯ ಗೈಡ್ ಒಬ್ಬರು, "ಸರ್, ಅಲ್ಲಿ ಮುಂದೆ ಮೇನ್ ರೋಡಿನಲ್ಲಿ ಮಧುರೈ ಸ್ಪೆಷಲ್ ಜಿಗರ್ಥಂಡ ಅಂಗಡಿಯಿದೆ, ಆ ಅಂಗಡಿಯದ್ದೇ ಒರಿಜಿನಲ್ ಟೇಸ್ಟ್. ಅಲ್ಲಿ ಹೋಗಿ ಟೇಸ್ಟ್ ಮಾಡಿ" ಅಂದ. ಆತ ಹೇಳಿದ್ದು ಒಳ್ಳೆಯದಾಯ್ತೆಂದು, ಶರತ್ ರನ್ನು ಕರೆದು ಮುಂದೆ ಹೊರಟು, ಅಲ್ಲಿಂದ ಮೇನ್ ರೋಡ್ ತಲುಪುತ್ತಿದ್ದಂತೆಯೇ ಅರ್ಧ ಕಿ.ಮೀ ನಲ್ಲಿ ನಮ್ಮ ಬಲಕ್ಕೆ ಒಂದು ಚಿಕ್ಕ ಜ್ಯೂಸು ಅಂಗಡಿ ಕಾಣಿಸಿತು. ಪೂರ್ತಿ ಜನಜಂಗುಳಿಯಿತ್ತು ಅಲ್ಲಿ, ಆ ಜನರನ್ನು ನೋಡಿಯೇ, "ಹಾ, ಇದೇ ಆ ಫೇಮಸ್ ಶಾಪ್" ಅಂದು ಕೊಂಡು, ಬೈಕುಗಳನ್ನು ರಸ್ತೆ ಬದಿ ನಿಲ್ಲಿಸಿ, ಜ್ಯೂಸು ಅಂಗಡಿಯ ಜನಗಳ ನಡುವೆ ನುಗ್ಗಿದೆವು.
ನಮ್ಮ ವೇಷ ಅವತಾರಗಳನ್ನ ಎಲ್ಲರೂ, ಆಶ್ಚರ್ಯದಿಂದ ನೋಡುತ್ತಿದ್ದರು. ಆದರೆ ನಮ್ಮ ಗಮನ ಜ್ಯೂಸಿನ ಮೇಲಿತ್ತು. ಸ್ಪೆಷಲ್ ಜಿಗರ್ಥಂಡ ಐದು ಎಂದು, ಆರ್ಡರ್ ಮಾಡಿದೆವು. ಒಂದಕ್ಕೆ 50ರೂ. ಎಲ್ಲರೂ ಜ್ಯೂಸು ಹಿಡಿದು, ಹೊರಗೆ ಬಂದು ನಿಂತು, ಮನಸಾರೆ ಸವಿಯತೊಡಗಿದೆವು, ಅಷ್ಟೇನೂ ತನ್ಮಯಗೊಳಿಸುವಷ್ಟು ರುಚಿಕರವಲ್ಲದಿದ್ದರೂ ನಮಗೆ ಒಂದು ಹೊಸ ಅನುಭವ.
"ಅಲ್ಲಿನ ಗೈಡ್ ಹೇಳದೇ ಇದ್ದಿದ್ದರೆ, ಆ ಗಾಡಿ ಅಂಗಡಿಯ ಜ್ಯೂಸನ್ನೇ, ಇದೆ ಒರಿಜಿನಲ್ ಜಿಗರ್ಥಂಡ ಅಂತ, ನಮಗೆಲ್ಲ ಯಾಮಾರಿಸಿಬಿಡುತ್ತಿದ್ದಿರಿ ಅಲ್ವಾ???" ಅಂತ, ಎಲ್ಲರೂ ಶರತ್ ಗೆ ಕಾಳೆಯುತ್ತಿದ್ದೆವು.
ನಮ್ಮ ಪಕ್ಕದಲ್ಲಿ ನಿಂತಿದ್ದ ಒಂದು ಕುಟುಂಬದವರು, ನಮ್ಮನ್ನೆಲ್ಲ ಮಾತಾಡಿಸಿ, ನಮ್ಮ ಪ್ರವಾಸದ ಬಗ್ಗೆ ವಿಚಾರಿಸಿ, ಆಶ್ಚರ್ಯ ಪಟ್ಟು "All the best" ಹೇಳಿ ಕಳುಹಿಸಿದರು.
ಈಗ ಮಧ್ಯಾಹ್ನ 1 ಗಂಟೆ, ಹಸಿವಂತೂ ಯಾರಿಗೂ ಆಗಿರಲಿಲ್ಲ. ಇಲ್ಲಿಂದ 500km ಹೋಗಬೇಕಿದೆ. ಹಾಗಾಗಿ ಊಟದ ಯೋಚನೆ ಬಿಟ್ಟು, ಮುಂದೆ ಸದ್ಯಕ್ಕೆ ಇನ್ನೆಲ್ಲೂ ನಿಲ್ಲುವುದು ಬೇಡ, "ಸಾಗುವಾ ದಾರಿ,,, ದೂರಾ..." ಅಂತ ಹೆದ್ದಾರಿ ಹಿಡಿದೆವು. ಅಲ್ಲಿಂದ ಬೆಂಗಳೂರು ಕಡೆಗೆ ಸೀದಾ ಒಂದೇ ಹೆದ್ದಾರಿಯಾದ್ದರಿಂದ, ಮ್ಯಾಪ್ ಅವಶ್ಯಕತೆಯಿಲ್ಲದೆ ನಮ್ಮ ಪಾಡಿಗೆ ನಾವುಗಳು ಒಬ್ಬೊಬ್ಬರಾಗಿ ಸಾಗುತ್ತಿದ್ದೆವು. ಆದರೂ ಒಬ್ಬರ ಕಣ್ಣಿಗೊಬ್ಬರು ಕಾಣುವಷ್ಟು ಅಂತರವನ್ನಂತೂ ಕಾದುಕೊಂಡು ಬರುತ್ತಿದ್ದೆವು.
ಮಧುರೈ ದಾಟಿ, ತುಸು ದೂರ ಬರುತ್ತಿದಂತೆಯೇ ಹೆದ್ದಾರಿ, ಸಿರುಮಲೈ ರಕ್ಷಿತಾರಣ್ಯದ ಹೊರ ವಲಯದಲ್ಲಿ ಸಾಗುತ್ತದೆ. ಅಚ್ಚುಕಟ್ಟಾದ ಹೆದ್ದಾರಿಯಲ್ಲಿ, ಬೈಕು ಓಡಿಸುವುದು ಕಷ್ಟವೇನಲ್ಲ. ಹಾಗಾಗಿ ಕಣ್ಣು, ಸುತ್ತೆಲ್ಲ ಪರಿಸರವನ್ನು ನೋಡುತ್ತಲೇ ಸಾಗುತ್ತದೆ.
ಬಲಕ್ಕೆ, ಆ ಸುತ್ತ ಮುತ್ತಲ ಬಯಲು ನಾಡಿನಲ್ಲಿ ದಿಗ್ಗನೆ ಒಂದೊಕ್ಕೊಂದು ಒತ್ತಿಕೊಂಡು ಮನೋಹರವಾಗಿ ಹಬ್ಬಿದ್ದ ಪರ್ವತ ರಾಶಿ ಕಣ್ಣಿಗೆ ಬಿತ್ತು. ಸುಮಾರು 15ಕಿ.ಮೀ ಹಾಗೇ ದಾರಿಯುದ್ದಕ್ಕೂ ನಮ್ಮ ಜೊತೆಯೇ ಬರುತ್ತಿದೆ ಎಂದು ಭಾಸವಾಗುವಂತೆ, ಪರ್ವತ ಮಾಲೆ ನಮ್ಮ ಪಕ್ಕಕ್ಕೆ ಕಾಣುತ್ತಲೇ ಇತ್ತು.
ಒಂದೆರಡು ಘಂಟೆಗಳು ಸಾಗಿದ ಮೇಲೆ ಊಟದ ನೆನಪಾಗತೊಡಗಿತು. ನನ್ನ ಮುಂದೆ ಸಾಗುತ್ತಿದ್ದ ಶರತ್ ಸ್ವಲ್ಪ slow ಮಾಡಿ, ನನಗೆ ಊಟದ ಸನ್ನೆ ಮಾಡಿ ಮುಂದುವರಿದರು. ಆಗ ನಾನು ನಿಧಾನವಾಗಿ ಸಾಗುತ್ತಾ ಹಿಂದಿದ್ದ ಶಿವು ಹತ್ತಿರಾದಾಗ, ಊಟದ ಸನ್ನೆ ಮಾಡಿದೆ, ಆಗ ಹಿಂದೆ ಕುಳಿತಿದ್ದ ದೀಪಿಕಾ ನನಗೆ ನಿಲ್ಲುವಂತೆ ಹೇಳಿದರು.
ನಿಂತು ಏನೆಂದು ಕೇಳಿದಾಗ, ಶಿವು ಹೊಸದಾಗಿ ಕೊಂಡಿದ್ದ riding hand glovesನ ಹೊಲಿಗೆಯೆಲ್ಲಾ ಕಿತ್ತು ಹೋಗಿತ್ತು. ಕೊಳ್ಳುವಾಗಲೇ ಅವನು ಸರಿಯಾಗಿ ಪರಿಶೀಲಿಸಬೇಕಿತ್ತು. ಈಗ, ಅದನ್ನು ಬೆಂಗಳೂರಿನಲ್ಲಿ ಬದಲಾಯಿಸಿಕೊಳ್ಳಲು ನಮಗೆ ಸಮಯವಿರಲಿಲ್ಲ. ಹಾಗಾಗಿ ನಿನ್ನೆಯೇ ಅವನು ಯೋಚನೆ ಮಾಡಿ, ನಾವು ಸಾಗುವ ದಾರಿಯಲ್ಲಿ ಸಿಗುವ ಒಂದು ಊರಿನವನಾದ ಆತನ ಸ್ನೇಹಿತನಿಗೆ, ತಾನು ಆ gloves ಗಳನ್ನು ಕೊಟ್ಟು, ಆತ ಮರುದಿನ ಅದನ್ನು ಬೆಂಗಳೂರಿನ shop ನಲ್ಲಿ ಬದಲಾಯಿಸಿ ಮುಂದೆ ದೆಹಲಿಗೆ ಅದನ್ನು courier ಮಾಡಿಸಲು, plan ಮಾಡಿಕೊಂಡಿದ್ದ. ಆದ್ದರಿಂದ ಈಗ ಊಟಕ್ಕೆ ನಮ್ಮ ಜೊತೆ ನಿಲ್ಲದೆ, ಸೀದಾ ಆ ಸ್ನೇಹಿತನ ಊರಿಗೆ ಹೋಗಿ ಬರುವುದಾಗಿಯೂ, ಮತ್ತೆ ನಮ್ಮನ್ನು ಬೆಂಗಳೂರಿನಲ್ಲಿ join ಆಗುವುದಾಗಿಯೂ ಹೇಳಿದ.
ನನ್ನ ಮೊದಲ post ನಲ್ಲಿ, ನಾನು ಶಿವುನ ಬಗ್ಗೆ ವಿವರವಾಗಿ ತಿಳಿಸಿದ್ದೆನಲ್ಲ, ಹಾಗೆಯೇ ಆತನ ಹಲವಾರು ಕೆಲಸಗಳು ಹೀಗೆ ಒಂದಲ್ಲ ಒಂದು ಎಡವಟ್ಟಿನಿಂದ ಕೂಡಿರುತ್ತವೆ.
ಸರಿ, ಹಾಗೇ ಮಾಡಿ ನೀವು. ನಾವು ಬೆಂಗಳೂರು ತಲುಪಿ phone ಮಾಡುವುದಾಗಿ ಹೇಳಿ ಕಳಿಸಿದೆ.
ಸರಿ, ಹಾಗೇ ಮಾಡಿ ನೀವು. ನಾವು ಬೆಂಗಳೂರು ತಲುಪಿ phone ಮಾಡುವುದಾಗಿ ಹೇಳಿ ಕಳಿಸಿದೆ.
ಮುಂದೆ ಹೋಗಿದ್ದ ಶರತ್ ರಸ್ತೆ ಬದಿಯಲ್ಲಿ ಕಾಣಿಸಿದ ಹೋಟೆಲಿನ ಕಡೆಗೆ ಬೈಕನ್ನು ತಿರುಗಿಸಿ ನಿಂತಿದ್ದರು. ಅವರಿಗೆ, ಶಿವುನ ಕತೆಯನ್ನೆಲ್ಲ ಹೇಳಿ, ಹೋಟೆಲ್ ಒಳ ಹೋದೆವು. ತುಸು ದೊಡ್ಡದೇ ಇದ್ದ ಹೋಟೇಲಿನಲ್ಲಿ, ಅದಾಗಲೇ ಸಾಕಷ್ಟು ಜನರಿದ್ದರು. ಟೇಬಲ್ಲಿಗಾಗಿ ಕಾದು, ಅದು ಸಿಕ್ಕಿ ಕುಳಿತಮೇಲೆ, ಆರ್ಡರ್ ಮಾಡಲು ಕರೆದರೆ ಆತ ಬಂದವನೇ "ಸಾರ್, ಲೆಮನ್ ರೈಸಾ? ಕರ್ಡ್ ರೈಸಾ???" ಅಂತ ಕೇಳಿ, ಅಲ್ಲಿ ಬೇರಿನ್ನೇನೂ ಸಿಗುವುದಿಲ್ಲ ಎಂದು ಮನವರಿಕೆ ಮಾಡಿಸಿದ. ಅಯ್ಯೋ, ಕಳೆದ ಮೂರು ಹೊತ್ತಿನಿಂದ ಊಟವೇ ಸಿಕ್ಕಿಲ್ಲವಲ್ಲ, ಬರಿ ತಿಂಡಿಯೇ ಗತಿನಾ,,, ಅಂತ ಅದನ್ನೇ ತರಿಸಿಕೊಂಡು ತಿಂದು, ಜ್ಯೂಸ್ ಕುಡಿದು ಬೈಕ್ ಹತ್ತಿದೆವು.
ಮುಂದಿನ ದಾರಿ ಚೆನ್ನಾಗಿಯೇ ಇದ್ದುದರಿಂದ ಶ್ವೇತಾ ರೈಡ್ ಮಾಡಲು ಕುಳಿತರು. ನಾನು, earphones ನಲ್ಲಿ ಹಾಡು ಹಾಕಿಕೊಂಡು ಅವರ ಹಿಂದೆ ಹೊರಟೆ.
ಬಿಸಿಲು ಬಹಳಾ ಬಿರುಸಾಗಿತ್ತು, ರಸ್ತೆಯಲ್ಲಿ ಎದುರಾಗಿ ಬೀಸುವ ಗಾಳಿಯೂ ಬಿಸಿ ಬಿಸಿ ಹವೆಯಂತೆ ಮುಖಕ್ಕೆ ರಾಚುತ್ತಿತ್ತು. ಮುಂದೆ ಹೋಗದೇ ಬೇರೆ ವಿಧಿಯಿಲ್ಲ, ಸಾಗುತ್ತಿದ್ದೆವು. ಬಿಸಿಲಿಗೆ ಹೆಲ್ಮೆಟ್ ಒಳಗೇ ಮುಖ ಸುಟ್ಟು ಉರಿಯುತ್ತಿತ್ತು. ಅಯ್ಯೋ ಹೀಗೆ ಆದ್ರೆ ಇನ್ನೆರಡು ದಿನದಲ್ಲಿ, ನನ್ನ ಮುಖ ಎಲ್ಲ tan ಆಗಿ, ಇನ್ನೂ ಕಪ್ಪಗಾಗಿ ಹೋಗಿಬಿಡ್ತಿನಲ್ಲ,,, ಇವರಿಗೆಲ್ಲಾಏನು, ಮಧುವೆ ಆಗಿಬಿಟ್ಟಿದೆ, ಆದ್ರೆ ನಂಗೆ?,, ಇನ್ನು ನನ್ನ ಯಾವ ಹುಡುಗೀನಾದರೂ ಒಪ್ಪುತಾಳ,,, ಅಂತಾ ತರಲೆ ಚಿಂತೆ ಆಗಾಗ ಬಂದು ಬಂದು ಹೋಗ್ತಿತ್ತು.
ಶ್ವೇತಾ ಚೆನ್ನಾಗಿಯೇ ride ಮಾಡುತ್ತಿದ್ದರಾದರೂ, ತುಸು ಮಂದಗತಿಯಲ್ಲಿ ಸಾಗುತ್ತಿದ್ದೆವು. ಮೊಸರನ್ನ ತಿಂದು, ಮಧ್ಯಾಹ್ನದಿಂದ ಬಿಸಿಲಲ್ಲಿದ್ದರಿಂದ, ಕಿವಿಯಲ್ಲಿ ಗುಂಯ್ ಗುಡುವ ಹಾಡು ಬೇರೆ ಲಾಲಿಯಂತನಿಸಿ ತೂಕಡಿಕೆ ಶುರುವಾಯಿತು. ಬೈಕ್ ಹೋಡಿಸುತ್ತಲೇ ಕಣ್ಣು ಮುಚ್ಚಿ ಮುಚ್ಚಿ ಬಿಡತೊಡಗಿದ್ದೆ.
ಸುಮಾರು 5ಗಂಟೆಯ ಹೊತ್ತಿಗೆ, ನನಗೆ ನಿದ್ರೆ ತಡೆಯಲಾರದೆ ಮುಂದೆ ಹೋಗಿ, ಪಕ್ಕದಲ್ಲಿದ್ದ ಸಣ್ಣ tea shop ನಲ್ಲಿ ನಿಲ್ಲಿಸಿ, ನೀರು ಕುಡಿದು ಮುಖ ತೊಳೆದುಕೊಂಡೆ. ಶ್ವೇತಾ-ಶರತ್ ಕೂಡ ಬಂದು, ಒಂದು break ತಗೊಳೋಣ ಅಂತ ನಿಲ್ಲಿಸಿದರು.
ಅವರು ಬಂದು ಕುಳಿತಾಗ, ನಿದ್ರೆ ಬರಲಿಲ್ವಾ ನಿಮಗೆ ಅಂದೆ. ಶ್ವೇತಾ, "ಹಾ,,, ನನಗೂ ನಿದ್ರೆ ಬರ್ತಿತ್ತು" ಅಂದ್ರು. ಶರತ್, "ನನಗಂತೂ ಚೂರೂ ನಿದ್ರೆ ಬರಲಿಲ್ಲ,,, ಮೈಯೆಲ್ಲಾ ಕಣ್ಣಾಗಿ ಕೂತಿದ್ದೆ... ಬೈಕ್ ಓಡಿಸ್ತಿದ್ದಿದ್ದು, ಇವಳಲ್ವಾ ಅದಿಕ್ಕೆ..." ಅಂತ, ಕಿಚಾಯಿಸಿದರು. ಅದಕ್ಕೆ ನಾನೂ, "ಹೌದು, ನಂಗಂತೂ,,, ಇವರು ಬೈಕ್ ಓಡಿಸೋ ತೀರಿಗೆ, ತೂಕಡಿಕೆ ಬಂದೋಯ್ತು", ಅಂತ ಮೊಸರನ್ನದ ತಪ್ಪನ್ನ, ಶ್ವೇತಾರ riding ಮೇಲೆ ಹಾಕಿದೆ. ನಮ್ಮ ಮಾತನ್ನು serious ಅಂದುಕೊಂಡು "ಹೌದಾ,,, ಅಷ್ಟೊಂದು ಕೆಟ್ಟದಾಗಿ ಓಡಿಸಿದನಾ,,, ನಾನು" ಅಂತ ಸಪ್ಪೆ ಮುಖಮಾಡಿ ನಕ್ಕರು. ಪಾಪ ಹತ್ತರತ್ತಿರ 150km ride ಮಾಡಿದ ಅವರಿಗೆ ಸುಳ್ಳು ಹೇಳಿ ರೇಗಿಸಿದೆವಲ್ಲ ಅನಿಸಿತು.
ನನ್ನ ಹಳೆಯ knee pad ನ screw ಒಂದು, ನನ್ನ ಬ್ಯಾಗುಗಳಿಗೆ ತೊಡರಿ ಕಿತ್ತು ಹೋಗಿತ್ತು. ಅದನ್ನ ರಿಪೇರಿ ಮಾಡಿಸುವುದು ಮತ್ತೆ, ಸಮಸ್ಯೆಯಾಗಿತ್ತು. ಆಗ, ಹೇಗೂ ಶಿವು-ದೀಪಿಕಾರಿಗಾಗಿ ಬೆಂಗಳೂರಿನಲ್ಲಿ ಕಾಯಲೇಬೇಕಾಗಿತ್ತಾದ್ದರಿಂದ, ಆ time ಬಳಸಿಕೊಳ್ಳೋಣವೆಂದು ಶರತ್, ಬೆಂಗಳೂರಿನಲ್ಲಿದ್ದ ತನ್ನ ತಮ್ಮನಿಗೆ ಹೊಸ knee pads ಖರೀದಿಸಿ ತಂದು, ನಾವು ಬೆಂಗಳೂರನ್ನು ದಾಟುವಲ್ಲಿ ಬಂದು ನಮಗೆ ತಲುಪಿಸಲು ಹೇಳಿದರು.
ತಡಮಾಡದೆ tea ಕುಡಿದು, ಮತ್ತೆ ಬೆಂಗಳೂರು ದಾರಿ ಹಿಡೆದೆವು. ಧರ್ಮಪುರಿ, ಸೇಲಂ ಹೀಗೇ ಒಂದೊಂದೇ ಊರುಗಳನ್ನು ದಾಟಿ ಮುಂದುವರಿಯುತ್ತಲೇ ಇದ್ದೆವು. ಹಲವಾರು Sunday evening riders ಕೂಡ ನಮಗೆ ಜೊತೆಯಾಗಿ ಸಾಗಿಬಂದರು. ಅಂತೂ ಬೆಂಗಳೂರು ತಲುಪಿದಾಗ ರಾತ್ರಿ 8:30. ನೈಸ್ ರೋಡಿನ ಬಳಿ ಸಿಕ್ಕ ಶರತ್-ರ ತಮ್ಮನಿಂದ knee pads ತೆಗೆದುಕೊಂಡು, Thanks ಹೇಳಿ, ಶಿವು ಎಲ್ಲಿದ್ದಾನೆಂದು ಅವರಿಗೆ ಫೋನ್ ಮಾಡಿದೆವು.
ಶಿವು-ದೀಪಿಕಾ ಅವರು ತಂದಿದ್ದ ಅಗತ್ಯಕ್ಕೂ ಹೆಚ್ಚು ಲಗೇಜಿನ ಬಗ್ಗೆ ನಿನ್ನೆ ತಿಳಿಸಿದ್ದೆನಲ್ಲ, ಅದನ್ನು ಸ್ವಲ್ಪ ಕಡಿಮೆ ಮಾಡಿ ಚಿಕ್ಕ ಬ್ಯಾಗನ್ನು ತರಲು, ಬರುವ ದಾರಿಯಲ್ಲಿ ಸಿಗುವ ಅವರ ಅಕ್ಕನ ಮನೆಗೆ ಹೋಗಿರುವುದಾಗಿಯೂ, ಅಲ್ಲಿಂದ ಹೊರಟು ಇನ್ನೊಂದೆರಡು ತಾಸಿನಲ್ಲಿ ನಮ್ಮನ್ನು ನೆಲಮಂಗಲದ ದಾರಿಯಲ್ಲಿ ಸಿಗುವುದಾಗಿ ಹೇಳಿದರು.
ನಾವು ಊಟ ಮುಗಿಸಿಕೊಳ್ಳೋಣವೆಂದು, ಶ್ವೇತರಿಗೆ ತಿಳಿದಿದ್ದ ಹೊಸಕೆರೆಹಳ್ಳಿ ಬಳಿಯ ಹವ್ಯಕ ಮೆಸ್ ಒಂದಕ್ಕೆ ಹೋದೆವು. ನಾನಾಗಲೇ ಹೇಳಿದಂತೆ, ಕಳೆದ ಮೂರೂ ಹೊತ್ತಿನಿಂದ ಬರಿ ತಿಂಡಿ ತಿಂದು, ಹೊಟ್ಟೆ ಒಂದು ರುಚಿಯಾದ ಊಟ ಬಯಸುತ್ತಿತ್ತು. ಶುದ್ಧ ಹವ್ಯಕ ಶೈಲಿಯ ಊಟ, ಅದ್ಭುತ ರುಚಿಯೆನಿಸಿತು. ಹಸಿದ ಹೊಟ್ಟೆ ತುಂಬಾ, ಆನಂದವಾಗಿ ತಿಂದು, ಶಿವೂ-ದೀಪಿಕಾರಿಗೂ parcel ಕಟ್ಟಿಸಿಕೊಂಡು, ಹೊರಟೆವು.
ಹೊರಡುವಾಗ ಅಲ್ಲಿದ್ದ ಹಲವಾರು ಜನ ನಮ್ಮ ಪ್ರವಾಸದ ಬಗ್ಗೆ ವಿಚಾರಿಸಿ, ಶುಭ ಹಾರೈಸಿದರು. ಒಂಥರಾ ಖುಷಿ ಅನುಭವ ಎನಿಸಿತು. ಅಲ್ಲಿಂದ ಸೀದಾ ನೆಲಮಂಗಲದ ದಾರಿ ತಲುಪಿ, ಅಲ್ಲಿ ಶಿವುನ ಬೈಕಿಗಾಗಿ ಕಾಯತೊಡಗಿದೆವು.
ನೆಲಮಂಗಲ-ತುಮಕೂರು ಟೋಲ್ ರೋಡಿನಲ್ಲಿ, ರಸ್ತೆ ಪಕ್ಕದಲ್ಲಿ ಕುಳಿತು ಸುಮಾರು ಒಂದುವರೆ ಗಂಟೆಗೂ ಹೆಚ್ಚು ಕಾದೆವು. ನಾನು songs ಕೇಳುತ್ತಾ ಕುಳಿತಿದ್ದೆ. ಶ್ವೇತಾ-ಶರತ್ ಅದೂ ಇದೂ ಹರಟುತ್ತಾ time pass ಮಾಡುತಿದ್ದರು. ಕಣ್ಣೆದುರಲ್ಲೇ ಮಿಂಚಿನಂತೆ ಸಾಗುವ truck, busಗಳು, ವೇಗದ ರಭಸಕ್ಕೆ ಅವುಗಳೊಂದಿಗೆ ನಮ್ಮನ್ನೂ ಎಳೆದೊಯ್ಯುತ್ತವೇನೋ ಅನ್ನುವಂತೆ ಹೋಗುತ್ತಿದ್ದವು. ಹುಣ್ಣಿಮೆಯೋ ಹಿಂದು-ಮುಂದು ಅನಿಸುತ್ತೆ, ಚಂದ್ರನೂ ಆಗಸದಲ್ಲಿ ಸುಂದರವಾಗಿ ಬೆಳಗುತ್ತಿದ್ದ. ಒಂದು ರೀತಿ ರಸ್ತೆಬದಿಯ ತಪಸ್ಸಿನಂತಿತ್ತು ಅನುಭವ.
ಕಾದು ಕಾದು ದಣಿದ ಮೇಲೆ, ಅವರು ಬಂದರು. ಸಮಯ ಹನ್ನೆರಡರ ಆಸುಪಾಸು. ಇನ್ನೂ ನೂರು ಕಿ.ಮೀ ದೂರವಿತ್ತು ತುಮಕೂರು. ಸರಿ, ಮುಂದೆ ಸಾಗಿತೆಮ್ಮ ಪಯಣ.
ರಾತ್ರಿಯಲ್ಲಿ ಬೈಕ್ ರೈಡ್ ಮಾಡಲೇಬಾರದು ಎಂದು ಪ್ಲಾನಿನಲ್ಲಿ ಮೊದಲೇ ಅಂದುಕೊಂಡಿದ್ದೆವಾದರೂ ಈಗ ನಮ್ಮ ನಿಧಾನಗತಿಯ ಪಯಣ, ಹಲವಾರು ತಾಪತ್ರಯಗಳಿಂದ ತಡವಾಗಿ ಹೋಗಿತ್ತು. ಅಲ್ಲದೇ ತುಮಕೂರಿನಲ್ಲಿ ಹೋಟೆಲ್ ಕಾಯ್ದಿರಿಸಿದ್ದೆವು, ಹಾಗಾಗಿ ಅಲ್ಲಿಗೆ ತಲುಪಲೇಬೇಕಿತ್ತು. ನಾವು ಹಾಕಿಸಿಕೊಂಡಿದ್ದ ಎಕ್ಸ್ಟ್ರಾ ಲೈಟುಗಳನ್ನೂ ಉರಿಸುತ್ತಲೇ, ತುಸು ನಿಧಾನವಾಗಿಯೇ ಜಾಗರೂಕವಾಗಿ ಸಾಗಿದೆವು.
ತುಮಕೂರಿನ, ವೈಶಾಲಿ ಕಂಫರ್ಟ್ಸ್ ಹೋಟೆಲಿನ ಎದುರು ತಲುಪವಷ್ಟರಲ್ಲಿ, ಮಧ್ಯ ರಾತ್ರಿ 1.30.
ನಮ್ಮ ಪೂರ್ತಿ ಪ್ರವಾಸದಲ್ಲಿ ಹೋಟೆಲ್ ಬುಕಿಂಗಿನ ಜವಾಬ್ದಾರಿ ವಹಿಸಿದ್ದು ಶಿವು ಮತ್ತು ಶರತ್. ಅವರು ಮೊದಲು ಹೋಗಿ ನಮ್ಮ ಬುಕಿಂಗ್ ರಶೀದಿಯನ್ನು ತೋರಿಸಿ, ರೂಮು ಪಡೆಯುವಲ್ಲಿ, ನಾವು ಉಳಿದವರು ಲಗೇಜುಗಳನ್ನು ರೂಮುಗಳಿಗೆ ಸಾಗಿಸಿದೆವು.
ನಮ್ಮೆಲ್ಲರನ್ನು ಆಯಾಸ ಮತ್ತು ನಿದ್ದೆ ಅಕ್ಷರಸಃ ಆವರಿಸಿಕೊಂಡಿತ್ತು. ನಮ್ಮ ಮುಖಗಳು, ಬಟ್ಟೆಗಳು ಧೂಳು ಮತ್ತು ಹೊಗೆಮಯವಾಗಿದ್ದವು. ಶರತ್, "ನಾಳೆ ಬೆಳಗ್ಗೆ 8ಕ್ಕೆ ತಯಾರಾಗಿರಿ, ಎಲ್ಲರೂ..." ಅಂದರು. ಸುಮ್ಮನೆ ತಲೆಯಾಡಿಸಿ ರೂಮು ಸೇರಿದೆವು.
ನಾನಂತೂ ರೂಮೊಳಗೆ ಹೋದ ಐದೇ ನಿಮಿಷದಲ್ಲಿ, ಹಾಸಿಗೆ ಸೇರಿದೆ.
ಹೊರಗೆ ಚಂದಿರ, ಆಗಸದ ಹಾದಿಯಲ್ಲಿ ಇನ್ನೂ ತನ್ನ ಅರ್ಧ ದಾರಿಯಲ್ಲಿದ್ದ.

Day-1 Ride
- Madhurai to Tumkur
- Disatance covered - 520 KM
- Route Map
- Madhurai to Tumkur
- Disatance covered - 520 KM
- Route Map
Thursday, April 20, 2017
ಕನ್ಯಾಕುಮಾರಿಯಿಂದ ಕಾಶ್ಮೀರಕ್ಕೆ... (ದಿನ-1: ಕನ್ಯಾಕುಮಾರಿಯಿಂದ ಮದುರೈ)
ಕನ್ಯಾಕುಮಾರಿಯಿಂದ ಕಾಶ್ಮೀರಕ್ಕೆ
ಮೊದ ಮೊದಲು http://kcsampath.blogspot.in/2017/03/blog-post.html
ಪಯಣಕ್ಕೊಂದು ಪಯಣ http://kcsampath.blogspot.in/2017/03/blog-post_91.html
ದಿನ-1: ಕನ್ಯಾಕುಮಾರಿಯಿಂದ ಮದುರೈ
14 ಜನವರಿ 2017
ಶನಿವಾರ
ನನಗೆ ಎಚ್ಚರವಾದಾಗ ಹೊದಿಕೆಯಿಲ್ಲದೆ ಮಲಗಿದ್ದ ನನ್ನ ಕಿವಿಗಳಿಗೆ ಬಸ್ಸಿನ ಕಿಟಕಿಯ ಸಂದಿಯಿಂದ ತಣ್ಣನೆ ಗಾಳಿ ಹೊಡೆಯುತಿತ್ತು. ಬಿಸಿಲುಗಾಲವಾದ್ದರಿಂದ ಅದು ಬೆಳಗಿನ ಜಾವದ ತಂಪು ಗಾಳಿಯಷ್ಟೇ, ಹಾಗಾಗಿಯೇ ದಣಿದಿದ್ದ ನನಗೆ ರಾತ್ರಿ ಚೆನ್ನಾಗಿ ನಿದ್ರೆ ಹತ್ತಿ, ಈಗ ದೇಹ ಮತ್ತು ಮನಸ್ಸು ಮುದಗೊಂಡಿದ್ದವು.
ನನ್ನ ಪಕ್ಕದ ಕ್ಯಾಬಿನ್ನುಗಳಲ್ಲಿ ಮಲಗಿದ್ದ ಶಿವು ಮತ್ತು ಶರತ್ ದಂಪತಿಗಳು ಇನ್ನೂ ಎದ್ದಿರಲಿಲ್ಲ. ಅವರನ್ನು ನಾನಾಗಿ ಏಳಿಸುವುದು ಬೇಡವೆಂದುಕೊಂಡು, ಕಿಟಕಿಯಿಂದ ಹೊರಗೆ ಒಂದೊಂದಾಗೇ ಹಿಂದಕ್ಕೆ ಸರಿಯುತ್ತಿದ್ದ ಊರುಗಳನ್ನು ನೋಡುತ್ತಾ ಕುಳಿತುಕೊಂಡೆ.
ಮೊಬೈಲ್ ತೆಗೆದು data ಆನ್ ಮಾಡಿದೆ.
Data ಆನ್ ಮಾಡುವ ಮೊದಲು, ನಾನೀಗ roaming ನಲ್ಲಿರುವೆ ಎಂದು ನೆನಪಾಯ್ತು. ಛೇ, ಈ trip ಗಾಗಿಯಾದರೂ ಒಂದು JIO ಸಿಮ್ ತೆಗೆದುಕೊಳ್ಳಲಿಲ್ಲವಲ್ಲ ಎಂದು ಬೇಸರವಾಯ್ತು. ಇನ್ನು ಇಪ್ಪತ್ತ್ಮೂರು ದಿನ roaming ನಲ್ಲಿ data ಬಳಸಿದರೆ Airtel ನವರು ಮುಂದಿನ ತಿಂಗಳ ಬಿಲ್ಲಿನಲ್ಲಿ ನನ್ನ ಜೇಬಿಗೆ ಒಂದಲ್ಲ, ಹತ್ತು ಬ್ಲೇಡ್ ಒಟ್ಟಿಗೆ ಹಾಕುತ್ತಾರೆಂದು ಖಾತ್ರಿಯಾಯ್ತು. ಈ mobile ಚಟ ಹತ್ತಿಸಿಕೊಂಡ ಮೇಲೆ ಬೇರೆ ವಿಧಿಯಿಲ್ಲ ಬಳಸಲೇಬೇಕಲ್ಲ, ಆಗಿದ್ದಾಗಲಿ ನೋಡೋಣ ಎಂದುಕೊಂಡೆ.
Google map ನಲ್ಲಿ ಕನ್ಯಾಕುಮಾರಿಯಿನ್ನೂ 30km ಇದೆ ಎಂದು ತೋರಿಸಿತು. ನನ್ನ ಸ್ನೇಹಿತರ Happy Journey ಮೆಸೇಜುಗಳು ಬಹಳಷ್ಟು ಬಂದಿದ್ದವು, ಎಲ್ಲರಿಗೂ ಥ್ಯಾಂಕ್ಸ್ ಹೇಳಿದೆ.
ಇಂದು ಮಕರ ಸಂಕ್ರಾಂತಿ, Happy Sankranti ಶುಭಾಶಯಗಳೂ ಬರಲಾರಂಭಿಸಿದವು, ನಾನೂ ಎಲ್ಲರಿಗೂ ಪ್ರತಿಶುಭಾಶಯ ತಿಳಿಸುತ್ತಾ ಕುಳಿತೆ.
ತುಸು ಹೊತ್ತಿನ ಬಳಿಕ ಉಳಿದವರೆಲ್ಲರೂ ಎದ್ದರು, ಎಲ್ಲರ ಮುಖದಲ್ಲೂ ಒಂದು ಕುತೂಹಲಭರಿತ ಉತ್ಸಾಹ ಕಾಣುತ್ತಿತ್ತು.
ಸುಮಾರು 8ರ ಹೊತ್ತಿಗೆ ಕನ್ಯಾಕುಮಾರಿಯಲ್ಲಿ, ನಮ್ಮೆಲ್ಲ ಲಗೇಜು ರಾಶಿಯೊಂದಿಗೆ ಬಸ್ಸು ಇಳಿದೆವು. ನಮಗೀಗ ಸ್ನಾನ ಮುಗಿಸಿ, ಬೈಕುಗಳು ಸಿಗುವವರೆಗೆ ಲಗೇಜು ಇಟ್ಟಿರಲು ಅರ್ಧ ದಿನದ ಮಟ್ಟಿಗೆ ಹೋಟೆಲ್ ರೂಮು ಬೇಕಾಗಿತ್ತು. ನಾವು ಬಸ್ಸು ಇಳಿದಲ್ಲಿಯೇ ಎಲ್ಲರನ್ನೂ ನಿಲ್ಲಿಸಿ, ನಾನೂ ಶರತ್ ಹೋಟೆಲ್ ಹುಡುಕಿಕೊಂಡು ಹೊರಟೆವು, ತುಸು ದೂರದಲ್ಲಿಯೇ ಸಿಕ್ಕಿದ ಹೋಟೆಲೊಂದಕ್ಕೆ ಹೋಗಿ ಅರ್ಧ ದಿನದ ಮಟ್ಟಿಗೆ Dormitory ರೂಮೊಂದನ್ನು ಬುಕ್ ಮಾಡಿ, ವಾಪಸ್ಸು ಹೋಗಿ ಅವರೆಲ್ಲರನ್ನೂ ಕರೆದುಕೊಂಡು ರೂಮು ಸೇರಿದೆವು. ನನ್ನ ನಾಲ್ಕೈದು ಬ್ಯಾಗುಗಳೊಡನೆ ಲಿಫ್ಟ್ ಇಲ್ಲದ ಆ ಹೋಟೆಲಿನ ನಾಲ್ಕನೇ ಮಹಡಿ ತಲುಪುವಷ್ಟರಲ್ಲಿ ಬೆವೆರಲ್ಲೇ ಸ್ನಾನವಾದಂತಾಯ್ತು. ನಾವು urgent ಅಲ್ಲಿ ಬರೀ ಅರ್ಧ ದಿನಕ್ಕಷ್ಟೇ ಅಲ್ಲವೇ ಎಂದುಕೊಂಡು, ರೂಮ್ ನೋಡದೇ ಬುಕ್ ಮಾಡಿಕೊಂಡು ರೂಮೊಳಗೆ ಬಂದಿದ್ದೆವು. ನಮ್ಮ ತಪ್ಪಿನ ಶಿಕ್ಷೆ ಎಷ್ಟು ಕ್ರೂರವಾಗಿತ್ತೆಂದರೆ, ನಾವು bathroomಗೆ ಕಾಲಿಡಲೂ ಭಯಪಡುವಂತಿತ್ತು.
ಮೊದಲ ದಿನದ ಮೊದಲ ಹೆಜ್ಜೆಯೇ ಹೀಗಾಗಬೇಕೇ... :(
ಇನ್ನೇನೂ ಮಾಡುವಂತಿಲ್ಲ, ಹೇಗೋ ತಯಾರಾದರಾಯ್ತು ಎಂದುಕೊಂಡೆವು.
ನಾವೀಗ ಆ Transportation ಅವರಿಂದ ಬೈಕುಗಳನ್ನು ಪಡೆದುಕೊಂಡು ಬರಬೇಕಿತ್ತು, ಹಾಗಾಗಿ ನಾನು ಶರತ್ ಮತ್ತು ಶಿವು, ಅವರು ಬರ ಹೇಳಿದ ಜಾಗಕ್ಕೆ ಆಟೋ ಹತ್ತಿ ಹೊರಟೆವು. ಆ ವ್ಯಕ್ತಿಯ ಅರ್ಥವಾಗದ ತಮಿಳಿನಿಂದಾಗಿ, ನಾವು ಆ ಸ್ವಲ್ಪವೇ ಇರುವ ಕನ್ಯಾಕುಮಾರಿ ಊರನ್ನು ಮೂರು ಸುತ್ತು ಹೊಡೆದೆವು. ಕೊನೆಗೆ ಆತನೇ ಬಂದು ನಾವಿದ್ದ ಒಂದು ಜಾಗದಿಂದ ಕರೆದುಕೊಂಡು ಹೋದ, ಅದೂ ಎಲ್ಲಿಗೆ, ನಮ್ಮ ಹೋಟೆಲಿನ ಪಕ್ಕದ ರೋಡಿಗೆ. ಛೇ, ಮತ್ತೆ ಎಡವಟ್ಟಾಯಿತಲ್ಲ ಅಂದುಕೊಂಡೆವು.
ಆದರೆ ಅಲ್ಲಿಗೆ ಹೋದರೆ, ಇನ್ನೊಂದು ರಾಮಾಯಣ ಶುರುವಾಗಿತ್ತು. ಆ Transportation ನವನು, ನಮ್ಮ ಬೈಕುಗಳನ್ನು ಕನ್ಯಾಕುಮಾರಿಗೆ ಹತ್ತಿರದ ಒಂದು ಊರಿಗೆ truck ನಲ್ಲಿ ಕಳಿಸಿ, ಅಲ್ಲಿಂದ ಮುಂದಕ್ಕೆ ಒಂದು ಚಿಕ್ಕ goods autoಗೆ ಮೂರು ಬೈಕುಗಳನ್ನು ಮೂಟೆಯಂತೆ ತುಂಬಿ, ಕಳಿಸಿದ್ದಾನೆ. ಅದೂ ಎರಡು ದಿನ ಮುಂಚೆಯೇ.
ನಾವು ಹೋದಕೂಡಲೇ ಆ ಆಟೋ ಡ್ರೈವರ್ ಅಳುತ್ತಾ ಡ್ರಾಮಾ ಮಾಡತೊಡಗಿದ.
"ಸಾರ್, ನಾನು ಎರಡು ದಿನದಿಂದ ಇಲ್ಲಿ ಕಾಯುತ್ತಿದ್ದೇನೆ. ನೀವು ಇವತ್ತು ಬಂದಿದ್ದೀರ"
"ನನಗೆ ಇಲ್ಲಿ ಎರಡು ದಿನದಿಂದ ಊಟ ಇಲ್ಲ, ನಿದ್ದೆ ಇಲ್ಲ"
"ಇವತ್ತು ಪೊಂಗಲ್ ಹಬ್ಬಕ್ಕೆ ಮನೆಗೆ ಹೋಗಬೇಕಿತ್ತು, ಅದೂ ಇಲ್ಲ"
"ಇಲ್ಲಿ ಎರಡು ದಿನದಿಂದ ಪಾರ್ಕಿಂಗ್ ಗೆ, Patrol ಪೊಲೀಸರಿಗೆ ದುಡ್ಡು ಕೊಟ್ಟುಕೊಂಡು ಕಾಯುತ್ತಿದ್ದೇನೆ"
"ನೀವೀಗ ನಾಲ್ಕು ಸಾವಿರ ಕೊಟ್ಟರೇನೇ, ಬೈಕುಗಳನ್ನು ಕೆಳಗಿಳಿಸುತ್ತೇನೆ, ಇಲ್ಲಾ ಆಟೋನ ವಾಪಸ್ಸು ಹೊಡೆದುಕೊಂಡು ಹೋಗುತ್ತೇನೆ"
ಅಂತ, ಒಂದೇ ಸಮನೇ ಗೋಗೊರೆದುಕೊಂಡು ಸುತ್ತ ಮುತ್ತ ಜನರನ್ನು ಸೇರಿಸಿದ.
ನಮಗೆ, ಅವನು ಬೈಕುಗಳನ್ನು ಆಟೋಗೆ ತುಂಬಿದ್ದ ರೀತಿಯನ್ನು ನೋಡಿಯೇ ಸಿಟ್ಟಿನ ಜೊತೆಗೆ, ಬೇಸರವಾಗಿ ಹೋಗಿತ್ತು. ಇನ್ನು ನಮಗೊಬ್ಬರಿಗೂ ಅರ್ಥವಾಗದ ತಮಿಳಿನಲ್ಲಿ ಇಷ್ಟೆಲ್ಲವನ್ನೂ ನಮಗೆ ತಿಳಿಸುವಷ್ಟರಲ್ಲಿ ಕನಿಷ್ಠ ಅರ್ಧ ಘಂಟೆಯಾದರೂ ನಮ್ಮೊಡನೆ ಅವನು ಗೋಗೋರೆದಿದ್ದ.
ಅಷ್ಟರಲ್ಲಿ ನಮ್ಮ ಸುತ್ತ ಸುಮಾರು ಹತ್ತರಿಂದ ಹದಿನೈದು ಜನ ನಿಂತಿದ್ದರು. ನಮಗೋ ಚೂರೂ ತಮಿಳು ತಿಳಿಯುತ್ತಿರಲಿಲ್ಲ. ನಾವು ಕನ್ನಡದಲ್ಲಿ, ಹಿಂದಿಯಲ್ಲಿ ಅದು ಇದು ಹೇಳುತ್ತಿದ್ದೆವು. ಆಗ ಅಲ್ಲಿದ್ದ ಒಬ್ಬ ವ್ಯಕ್ತಿ, ಹರುಕು-ಮುರುಕು ಹಿಂದಿಯಲ್ಲಿ ಉತ್ತರಿಸತೊಡಗಿದ. ನಮಗಾಗ Translator ಒಬ್ಬ ಸಿಕ್ಕ ಖುಷಿಯಾಯಿತು. ಆದರೆ ಯಾರೂ ನಮ್ಮ ಪರವಾಗಿ ಮಾತಾಡುವುದಿರಲಿ, ನಮ್ಮ ಮಾತನ್ನೇ ಯಾರೂ ಕೇಳುತ್ತಿರಲಿಲ್ಲ.
ಕೊನೆಗೆ ನಾವೂ ಜೋರುಮಾಡತೊಡಗಿದೆವು.
"ನಾವು ನಿಮಗೆ ಹೇಳಿದ್ದು ಶನಿವಾರ ಕೊಡಿ ಅಂತ, ನೀವು ಎರಡು ದಿನ ಮುಂಚೆ ಬಂದು ಕಾಯ್ತಾ ಕೂತರೆ, ನಾವೇನ್ ಮಾಡೋಣ. ನಾವ್ಯಾಕೆ ದುಡ್ಡು ಕೊಡಬೇಕು. ನಿಮ್ಮ owner ಗೆ ಫೋನ್ ಮಾಡಿಕೊಡಿ, ಮಾತಾಡ್ತಿವಿ" ಅಂತ ಹೇಳಿದ ಮೇಲೆ, ಆ owner ಗೆ ಫೋನ್ ಮಾಡಿಕೊಟ್ಟ. ಕೊನೆಗೆ ಆತ ಹೇಳಿದ "ಸಾರ್, 2000 ಕೊಟ್ಟು ಬೈಕ್ ತಗೋಳಿ. ನಾನು ಆ ದುಡ್ಡನ್ನ ನಿಮ್ಮ accountಗೆ transfer ಮಾಡ್ತೀನಿ" ಅಂತ.
ಆಗ ಒಪ್ಪಿ ದುಡ್ಡು ಕೊಟ್ಟು, ಬೈಕುಗಳನ್ನ ಇಳಿಸಲು ಹೇಳಿದೆವು. ಅಲ್ಲಿದ್ದವರೆಲ್ಲ ಕೈಜೋಡಿಸಿದರು, ಅವರು ಮೂಟೆಗಳಂತೆ ಅವನ್ನು ಎಳೆದು ಇಳಿಸಿದರು.
ಬೆಳಗ್ಗೆಯಿಂದ ಏನೂ ತಿನ್ನದೆ ಇವನ ಬಳಿ ಏಗಾಡಿ ರೋಸಿ ಹೋಗಿತ್ತು. ಅವಸರದಲ್ಲಿ ಬೈಕುಗಳ ಪ್ಯಾಕಿಂಗನ್ನೆಲ್ಲಾ ಬಿಚ್ಚಿ ಎಸೆದು, ಬೈಕುಗಳಿಗೆ ಎಲ್ಲೆಲ್ಲಿ damage ಆಗಿವೆ ಎಂದು ಹುಡುಕಿದೆವು. ಶರತ್ ರ Thunderbird safe ಆಗಿತ್ತು. ಶಿವುನ ಬೈಕಿನ ಲಗೇಜ್ ಕ್ಯಾರಿಯರ್ ನಲ್ಲಿ ಸಣ್ಣ ಪುಟ್ಟ scratchesಗಳಾಗಿದ್ದವು. ಕೊನೆಗೆ ಇಳಿಸಿದ ನನ್ನ ಬೈಕಿನಲ್ಲಿ scratchesಗಳ ಜೊತೆಗೆ ಪೆಟ್ರೋಲ್ ಟ್ಯಾಂಕಿನ ಮೇಲೆ dent ಕೂಡ ಆಗಿತ್ತು. ಬೇಸರವೇನೋ ಆಯ್ತು, ಆದರೆ ಇದಕ್ಕಾಗಿ ಮತ್ತೆ ಅವನ ಬಳಿ ವಾದ ಮಾಡುವ ಉತ್ಸಾಹ ನಮಗಿರಲಿಲ್ಲ.

ಎಲ್ಲಾ ಆಯ್ತು ಎಂದುಕೊಂಡರೆ, ಪ್ಯಾಕ್ ಮಾಡಿ ಕಳಿಸುವಾಗ ಬಿಚ್ಚಿ ಬೇರೆಯಾಗಿ ಇಟ್ಟಿದ್ದ ಬೈಕಿನ ಕನ್ನಡಿಗಳೇ ಇರಲಿಲ್ಲ.
"ಎಲ್ಲಯ್ಯಾ, mirror ಗಳು" ಎಂದರೆ, "ನನಗೆ, ಗೊತ್ತಿಲ್ಲ. ಅವರು ನನಗೆ ಕೊಟ್ಟಿದ್ದು ಇಷ್ಟೇ..."
"ಅವನ್ನು ಬೇರೆಯಾಗಿ ಇಟ್ಟಿದ್ದರೆ, ಅವು miss ಆಗಿ transportation truck ನಲ್ಲಿ ಕೇರಳ ಮುಟ್ಟಿರುತ್ತವೆ" ಅಂದ.
"ಎಲ್ಲಯ್ಯಾ, mirror ಗಳು" ಎಂದರೆ, "ನನಗೆ, ಗೊತ್ತಿಲ್ಲ. ಅವರು ನನಗೆ ಕೊಟ್ಟಿದ್ದು ಇಷ್ಟೇ..."
"ಅವನ್ನು ಬೇರೆಯಾಗಿ ಇಟ್ಟಿದ್ದರೆ, ಅವು miss ಆಗಿ transportation truck ನಲ್ಲಿ ಕೇರಳ ಮುಟ್ಟಿರುತ್ತವೆ" ಅಂದ.
"ಥೂ,,, ಇದೆಂಥಾ ಕರ್ಮ,,, ಒಂದಲ್ಲ ಒಂದು ಎಡವಟ್ಟುಗಳಾಗುತ್ತಿವೆಯಲ್ಲ" ಅಂದುಕೊಂಡೆವು.
ಮತ್ತೆ ಬೆಂಗಳೂರಿನ ಆ Transportation ವ್ಯಕ್ತಿಗೆ ಫೋನ್ ಮಾಡಿದೆವು, ಅವನು ಪ್ಯಾಕ್ ಮಾಡಿದ ಹುಡುಗರನ್ನು ವಿಚಾರಿಸಿ ಹೇಳಿದ "ಸರ್, Mirrorಗಳನ್ನ ಬೈಕುಗಳ ಜೊತೆಯೇ ಪ್ಯಾಕ್ ಮಾಡಿ ಇಟ್ಟಿದ್ದಾರೆ. ಸರಿಯಾಗಿ ನೋಡಿ" ಎಂದ.ತಕ್ಷಣ ಪ್ಯಾಕಿಂಗ್ ರಟ್ಟು ಪ್ಲಾಸ್ಟಿಕನ್ನೆಲ್ಲ ಎಸೆದಿದ್ದ ಕಸದ ರಾಶಿಯೆಡೆಗೆ ಓಡಿದೆವು, ಎಲ್ಲವನ್ನೂ ಹರಿದು ಬಿಚ್ಚಿದಾಗ ಆ Mirrors ಗಳು ಸಿಕ್ಕಿದವು. ಸದ್ಯ ಎಲ್ಲ ಸಿಕ್ಕವಲ್ಲಾ ಎಂದುಕೊಂಡೆವು.
ನಮಗೆ ಇಷ್ಟು ಹೊತ್ತು ತಮಿಳು ಹಾಗೂ ಹಿಂದಿಗೆ Translator ಆಗಿದ್ದ ವ್ಯಕ್ತಿ, ಇಷ್ಟೊಂದು ಹೊತ್ತು ನಮ್ಮ ಜೊತೆ ಇದ್ದಿದ್ದರಿಂದ ಆತನೇನೋ ನಮ್ಮಿಂದ ಸ್ವಲ್ಪ ದುಡ್ಡು expect ಮಾಡ್ತಿರ್ತಾನೆ ಅಂದುಕೊಂಡಿದ್ದೆವು. ಆದರಾತ ನಿಷ್ಕಲ್ಮಷವಾಗಿ ನಮ್ಮ ಸಹಾಯಕ್ಕಾಗಿ ಬಂದಿದ್ದ ಎಂದು ಗೊತ್ತಾಯಿತು. ಅಲ್ಲೇ ಆ ರಸ್ತೆಯಲ್ಲಿ ಇಡ್ಲಿ ಅಂಗಡಿ ಇಟ್ಟುಕೊಂಡಿದ್ದ ಆತ, ಈ ದಿನ ಅಂಗಡಿ ಮುಚ್ಸಿದ್ದರಿಂದ ಕೆಲಸವೇನೂ ಇಲ್ಲದೇ free ಇದ್ದ. ನಮ್ಮಗಳ ಮಾತು ವಾದಗಳನ್ನು ನೋಡಿ, ಅಲ್ಲಿಗೆ ಬಂದದ್ದು ನಮಗೆ ಬಹಳವೇ ಸಹಾಯವಾಯಿತು.
ನಮ್ಮ ಪ್ರವಾಸದ ವಿಷಯವನ್ನೆಲ್ಲ ಹೇಳಿದ ಮೇಲೆ, ಆತ ನಮಗೆ ಶುಭ ಕೋರಿದ. ಕೆಲವರು ಆಶ್ಚರ್ಯದಿಂದ ಸುಮ್ಮನೆ ನಮ್ಮನ್ನು, ನಮ್ಮ ಬೈಕುಗಳನ್ನು ನೋಡುತ್ತಿದ್ದರು.
ಅಷ್ಟರಲ್ಲಾಗಲೇ ಸುಮಾರು ಮೂರುವರೆ ತಾಸುಗಳಿಂದ ಹೋಟೆಲಿನಲ್ಲಿಯೇ ಕಾದು ಕುಳಿತಿದ್ದ ಶ್ವೇತಾ ಮತ್ತು ದೀಪಿಕಾ, ಆಗಾಗ message ಮಾಡಿ ಕೇಳುತ್ತಲೇ ಇದ್ದರು, "ಇನ್ನೂ ಮುಗಿಲಿಲ್ವಾ??? ಯಾಕೆ? ಏನಾಗಿದೆ?" ಅಂತ.
ಕೊನೆಗೆ ಅಲ್ಲಿದ್ದವರಿಗೆ Thanks ಹೇಳಿ, ಪಕ್ಕದ ರಸ್ತೆಯಲ್ಲೇ ಇದ್ದ ಹೋಟೆಲಿಗೆ ಬೈಕುಗಳೊಡನೆ ಹೊರಟೆವು.
* * *
(ಇಲ್ಲಿಂದ ಮುಂದೆ ನಮ್ಮ ಸುಂದರ ಪ್ರವಾಸ...)
ನಾವು ಹೋಟೆಲ್ ರೂಮು ತಲುಪಿದಾಗ ಸಮಯ 12ರ ಮೇಲಾಗಿತ್ತು. ಶ್ವೇತಾ ಮತ್ತು ದೀಪಿಕ ತಯಾರಾಗಿ ಕಾಯುತ್ತಿದ್ದರು.
ನಾವು ಮೂವರೂ ಆ bathroom ನಲ್ಲಿ ಸ್ನಾನ ಮಾಡುವ ಸಾಹಸ ಮಾಡಲಿಲ್ಲ. ಬರಿ ಬ್ರಷ್ ಮಾಡಿ ಮುಖ ತೊಳೆದುಕೊಂಡು, deodorant ಹೊಡೆದುಕೊಂಡು full fresh ಆಗಿ ಕನ್ಯಾಕುಮಾರಿ ನೋಡಲು ಹೊರಟೆವು. ಕನ್ಯಾಕುಮಾರಿ ದೇವಸ್ಥಾನ ಮತ್ತು ವಿವೇಕಾನಂದ ಬಂಡೆಗೆ ಹೋಗುವ ಸ್ಥಳ ಹೋಟೆಲಿನಿಂದ ಬರಿ 2km ಅಷ್ಟೇ ಇದ್ದದ್ದು, ಆದರೆ ಆ ಬಿಸಿಲಲ್ಲಿ ನೆಡೆಯುವ ಮನಸ್ಸಾಗಲಿಲ್ಲ ನಮಗೆ. ಹಾಗಾಗಿ ಬೈಕುಗಳನ್ನೇರಿ ಹೊರಟೆವು.
ಎಲ್ಲಕ್ಕೂ ಮೊದಲು ನಮಗೆ ಹೊಟ್ಟೆಗೆ ಏನಾದರು ಬೇಕಾಗಿತ್ತು. ದಾರಿಯಲ್ಲಿ ಮೊದಲಿಗೆ ಯಾವ ಹೋಟೆಲ್ ಸಿಗುತ್ತದೋ ಅಲ್ಲೇ ಊಟ ಅಂದುಕೊಂಡೆವು. ಮೊದಲಿಗೆ ಸಿಕ್ಕ ಎರಡೂ ಹೊಟೆಲುಗಳೂ non-veg ಆಗಿದ್ದವು, ನಾವು ಐವರೂ vegetarians ಆದ್ದರಿಂದ ಮುಂದೆ ಸಾಗಿದೆವು. ತುಸುದೂರದಲ್ಲೇ ಒಂದು ಚಿಕ್ಕ, ಅಪ್ಪಟ ತಮಿಳು ಶೈಲಿಯ ಶುದ್ಧ ಸಸ್ಯಾಹಾರಿ ಹೋಟೆಲು ಕಾಣಿಸಿತು. ಶ್ವೇತಾ ಬೈಕಿನಿಂದಿಳಿದು ತನಗೆ ಬಾರದ ತಮಿಳಿನಲ್ಲಿ ಊಟ ಸಿಗುತ್ತದೆಯೇ ಎಂದು ಕೇಳಿದರು. ಬರಿ ಅನ್ನ ಸಾಂಬಾರ್ ಅಷ್ಟೇ ಸಿಗುವುದು ಎಂದು ಹೇಳಿದರು. ನಮಗೂ ಅಷ್ಟೇ ಬೇಕಿದ್ದಿದ್ದು, ಯಾಕಂದ್ರೆ ಪ್ರವಾಸದ ಸಮಯದಲ್ಲಿ ನಮ್ಮ ಆಹಾರದ ಬಗ್ಗೆಯೂ ಹುಷಾರಾಗಿರಬೇಕಾಗಿದ್ದಿದ್ದು ಮುಖ್ಯವಾಗಿತ್ತು.
ಆ ಹೋಟೆಲಿನ ಮಾಲೀಕ ತಾತ, ತಮಿಳಿನಲ್ಲಿ ಏನೇನೋ ವಿವರಿಸಿ ಹೇಳಿ ಊಟ ಬಡಿಸಿದರು.
ಊಟ ರುಚಿಕಟ್ಟಾಗಿತ್ತು.
ಮೊದಲು "ವಿವೇಕಾನಂದ ಮೆಮೋರಿಯಲ್ ರಾಕ್" ನೋಡೋಣವೆಂದು beachಗೆ ಸಾಗಿದೆವು. ಅಲ್ಲಾಗಲೇ ಬಹಳಷ್ಟು ಉದ್ದದ queue ಇತ್ತು. ಶ್ವೇತಾ ಮತ್ತು ದೀಪಿಕಾರನ್ನು ಇಳಿಸಿ, ನೀವು queueನಲ್ಲಿ ನಿಂತು ಮೊದಲು ticket ತೆಗೆದುಕೊಳ್ಳಲು ಹೇಳಿ, ನಾವು ಅಲ್ಲೆಲ್ಲಾ ಸುತ್ತಾಡಿ ಎಲ್ಲೂ parking ವ್ಯವಸ್ಥೆಯಿಲ್ಲದೆ, ಮುಂದೆಲ್ಲೋ ಇದ್ದ ಸಣ್ಣ ಓಣಿ ರಸ್ತೆಯಲ್ಲಿ park ಮಾಡಿ ಬಂದೆವು.
ಅಷ್ಟರಲ್ಲವರು queueನಲ್ಲಿರದೆ ಇನ್ನೊಂದು ಕಡೆ ಕಾಯುತ್ತಾ ನಿಂತಿದ್ದವರು, "ಅದು general queue, ಇಲ್ಲಿಂದ special entrance ಇದೆ. 170ರು ticket" ಅಂದರು. Ticket ಕೊಂಡ ಮೇಲೆ, ಅಲ್ಲಿಂದ ಸೀದಾ Ferry ಬಳಿಗೆ ಹಿಂದಾರಿಯಿಂದ ಕಳಿಸಿದರು. Lifesaver jacket ತೊಟ್ಟು ತಯಾರಾದ ಒಂದೆರಡು ನಿಮಿಷಗಳಲ್ಲೇ ಬಂದ ferryಗೆ ಹತ್ತಿ, ತೂಗಾಡುತ್ತಾ ತೆಲಾಡುತ್ತ ಸಾಗಿ Rock ತಲುಪಿದೆವು. ಅಲ್ಲಿ ಪ್ರವೇಶಕ್ಕೆ ಮತ್ತೊಂದು ticket, ತೆಗೆದುಕೊಂಡು ದೊಡ್ಡ ಬಂಡೆಯ ಪುಟ್ಟ ಪುಟ್ಟ ಮೆಟ್ಟಿಲನತ್ತಿದೆವು.
ಅದೊಂದು ಏಕಶಿಲೆ, ಭಾರತದ ದಕ್ಷಿಣ ಭೂಭಾಗವಾದ ಕನ್ಯಾಕುಮಾರಿಯ ಸಮುದ್ರ ತೀರದಿಂದ, ಒಂದು ಮೈಲಿ ಆಚೆಗೆ ಸಣ್ಣ ದ್ವೀಪವೆಂಬಂತೆ ನಿಂತಿದೆ. Indira Point ಅನ್ನು ಅಧಿಕೃತವಾಗಿ ಭಾರತದ ದಕ್ಷಿಣ ತುದಿಯೆಂದು ಘೋಷಿಸುವವರೆಗೂ, ಈ ಶಿಲೆಯನ್ನೇ ದಕ್ಷಿಣ ತುದಿಯೆಂದು ತಿಳಿಯಲಾಗಿತ್ತು.
ಭವ್ಯ ಭಾರತದ ಕನಸನ್ನೊತ್ತು ಬಂದ ವಿವೇಕಾನಂದರು, ಆಗಿನ ಅನಕ್ಷರಸ್ಥ, ಬಡತನ, ಮೂಢನಂಬಿಕೆ, ಗುಲಾಮಗಿರಿಯ ಸಂಕೋಲೆಯಿಂದ ಭಾರತಾಂಬೆಯನ್ನು ಉದ್ಧರಿಸುವ ಮಾರ್ಗ ಹುಡುಕುತ್ತಾ ದೇಶ ಪರ್ಯಟನೆ ಮಾಡಿಕೊಂಡು ಬಂದು, ಕನ್ಯಾಕುಮಾರಿ ತಲುಪಿದರು.
ಕನ್ಯಾಕುಮಾರಿಗೆ ಪೌರಾಣಿಕ ಹಿನ್ನಲೆಯೂ ಇದ್ದು, ಪಾರ್ವತಿ ದೇವಿಯ ಅವತಾರವೆನ್ನುವ ಕನ್ಯಾಕುಮಾರಿಯು ನೆಲೆಸಿದ ತಾಣವದು.
ಇಲ್ಲಿಗೆ ಬಂದ ವಿವೇಕಾನಂದರು, ಕನ್ಯಾಕುಮಾರಿ ದೇವಸ್ಥಾನ ದರ್ಶಿಸಿ ಹೊರಬಂದು, ಈ ದ್ವೀಪದಂತಿರುವ ಬಂಡೆಯನ್ನು ಕಂಡರು. ಅದು ಅವರನ್ನು ತನ್ನತ್ತ ಸೆಳೆಯಿತು, ಅಲ್ಲಿಯೇ ತೀರದಲ್ಲಿದ್ದ ಮೀನುಗಾರ ದೋಣಿಯನೊಬ್ಬನಿಗೆ ತನ್ನನ್ನು ಅಲ್ಲಿಗೆ ತಲುಪಿಸುವಂತೆ ಕೇಳಿಕೊಂಡರು. ಆತ ತನಗೆ ಕಾಸು ಕೊಟ್ಟರಷ್ಟೇ ಅಲ್ಲಿಗೆ ತಲುಪಿಸುವೆನೆಂದು ಹೇಳಿದ. ಒಂದು ನಯಾಪೈಸೆಯೂ ಇಲ್ಲದ ಸನ್ಯಾಸಿ ವಿವೇಕಾನಂದರು, ಕಾವಿಯನ್ನು ಕಚ್ಚೆಯಂತೆ ಕಟ್ಟಿ, ಮರುಕ್ಷಣದಲ್ಲಿಯೇ ಸಮುದ್ರಕ್ಕೆ ಹಾರಿ ಈಜತೊಡಗಿದರು. ತನಗೇನಾಗಬೇಕೆಂದುಕೊಂಡು ಆ ದೋಣಿಯವನು, ಸುಮ್ಮನಾದನು. ಅಲೆ ಅಲೆಯ ಹೊಡೆತಗಳ ನಡುವೆಯೇ, ಈಜಿಕೊಂಡು ಬಂಡೆಯನ್ನು ತಲುಪಿದ ವಿವೇಕಾನಂದರು, ಉತ್ತರದತ್ತ ಮುಖ ಮಾಡಿ ಕುಳಿತು, ತಾಯಿಯ ಪಾದದ ಬಳಿ ಕುಳಿತ ಮಗನಂತೆ, ಭಾರತಾಂಬೆಯನ್ನು ಅಡಿಯಿಂದ ಮುಡಿಯವರೆಗೆ ಪೂಜಿಸುತ್ತ ಧ್ಯಾನಾಸಕ್ತರಾದರು. ಧ್ಯಾನಾವಸ್ಥೆಯಲ್ಲೇ ಮೂರುದಿನಗಳನ್ನು ಅನ್ನಾಹಾರವಿಲ್ಲದೇ ಕಳೆದು ಜ್ಞಾನೋದಯ ಸಾಧಿಸಿದರು. ಅಷ್ಟರಲ್ಲಿ ಇತ್ತ ಆ ದೋಣಿಯವನು ಊರಿನವರಿಗೆ ವಿಷಯ ತಿಳಿಸಿದನು, "ಹೀಗೆ ಮೂರು ದಿನಗಳ ಹಿಂದೆ ಸ್ವಾಮಿಯೊಬ್ಬರು ಈಜಿ ಆ ಬಂಡೆಗೆ ಹೋಗಿದ್ದಾರೆ" ಎಂದು. ಕುತೂಹಲಗೊಂಡ ಸ್ಥಳೀಯರು, ದೋಣಿಯಲ್ಲಿ ಅಲ್ಲಿ ತಲುಪಿ, ಧ್ಯಾನಾವಸ್ಥೆಯಲ್ಲಿದ್ದ ವಿವೇಕಾನಂದರನ್ನು ಎಚ್ಚರಿಸಿ, ಸತ್ಕರಿಸಿ ವಾಪಸ್ಸು ಕರೆತಂದರು. ಅಲ್ಲಿಂದ ಮುಂದೆ ನೆಡೆದದ್ದು ಇತಿಹಾಸ.
ವಿವೇಕಾನಂದರಿಗೆ ಜ್ಞಾನೋದಯವಾದ ಸ್ಮರಣಾರ್ಥ ಅಲ್ಲಿ, ಅವರ ಸ್ಮಾರಕವನ್ನು ನಿರ್ಮಿಸಲಾಗಿದೆ. ಅಲ್ಲಿ ದೇವಸ್ಥಾನದ ರೀತಿಯ ಮಂಟಪ ಒಂದಿದ್ದು, ಒಳಗೆ ವಿವೇಕಾನಂದರ ಭವ್ಯ ವಿಗ್ರಹವಿದೆ. ಪಕ್ಕದಲ್ಲೇ ಅಂಟಿಕೊಂಡಂತಿರುವ ಇನ್ನೊಂದು ಬಂಡೆಯಲ್ಲಿ ತಮಿಳಿನ ಮಹಾಕವಿ ತಿರುವಳ್ಳುವರ್ ಮಹಾಪ್ರತಿಮೆಯಿದೆ. ಅಲ್ಲಿಗೆ ಪ್ರವೇಶ ನಿರ್ಬಂಧಿಸಲಾಗಿತ್ತು, ಹಾಗಾಗಿ ದೂರದಿಂದ ಆ ನೀಲಿ ಸಾಗರದ ಮೇಲೆ ನಿಂತ ನೀಲ ಮೂರ್ತಿಯ ದೃಶ್ಯ ಕಣ್ತುಂಬಿಕೊಂಡೆವು.
ಮಧ್ಯಾಹ್ನದ ಬಿಸಿಲಿಗೆ ಕಲ್ಲು ಬಹಳಷ್ಟು ಕಾದು, ಕಾಲಿಟ್ಟರೆ ಸುಡುವಂತಿತ್ತು. ಪ್ರಾಂಗಣದಲ್ಲಿ ಹಾಸಿದ್ದ mat ಬಿಟ್ಟು ಹೊರಗೆ ನಿಲ್ಲಲಾರದಂತಿತ್ತು. ಸಮುದ್ರ ತೀರದ ಗಾಳಿ ಜೋರಾಗಿ ಬೀಸುತಿತ್ತು. ಒಂದು ಕಡೆಗೆ ಕನ್ಯಾಕುಮಾರಿಯ ತೀರದ ನೋಟ, ಇನ್ನೊಂದು ಕಡೆಗೆ ಕಣ್ಣಿಗೆ ಕಾಣದಷ್ಟು ದೂರಕ್ಕೆ, ನೀಲಿ ಸಾಗರದ ಮೇಲೆ ತಿಳಿ ನೀಲಿ ದಿಗಂತದ ವಿಹಂಗಮ ನೋಟ. ಅಲೆಗಳು ಆಗಾಗ ಬಂಡೆಗೆ ಅಪ್ಪಳಿಸುವ ನೀರ ನಿನಾದ, ಉಲ್ಲಾಸಭರಿತವಾಗಿತ್ತು.
ಒಂದೆರಡು ತಾಸುಗಳನ್ನು ಆ ಅಮೋಘ ಶಿಲಾತಪೋಭೂಮಿಯಲ್ಲಿ ಕಳೆದು, ವಾಪಸ್ಸಾದೆವು. ಅಲ್ಲಿಗೆ ಹೋಗುವಾಗ ಕೊಂಡಿದ್ದ special entry ticket, ವಾಪಸ್ಸು ಬರುವಾಗ valid ಇಲ್ಲ. ಹಾಗಾಗಿ, ಎಲ್ಲರಿಗೂ ಒಂದೇ queue. ಸುಮಾರು ಒಂದರ್ದ ತಾಸು ferry ಗಾಗಿ ಕಾಯಬೇಕಾಯಿತು. ನಾವು ನಿಂತಿದ್ದ ಸಾಲಿನಲ್ಲಿ, ಹಲವು ವಿದೇಶಿ ಪ್ರವಾಸಿಗರೂ ಇದ್ದರು. ನಡುವೆ ಒಂದು ಉತ್ತರ ಭಾರತದಿಂದ ಬಂದಿದ್ದ ಪ್ರವಾಸಿಗರ ಗುಂಪೂ ಇತ್ತು. ಅದರಲ್ಲೊಬ್ಬ ಯುವಕ, ಪೂರ ಖಾವಿ ತೊಟ್ಟು, ವಿವೇಕಾನಂದರ ರೂಪಿನಲ್ಲಿ ಬಂದಿದ್ದ. ಆತನೊಡನೆ ಹಲವು ವಿದೇಶಿ ಪ್ರವಾಸಿಗರು selfie ತೆಗೆದುಕೊಳ್ಳುತ್ತಿದ್ದರು. ಆತ ನಿಜವಾಗಿಯೂ ಸನ್ಯಾಸಿಯೋ ಅಥವಾ ಸುಮ್ಮನೇ ಹಾಗೇ ಖುಷಿಗಾಗಿ ಆ ವೇಷ ಹಾಕಿದ್ದನೋ ತಿಳಿಯಲಿಲ್ಲ, ಆದರೆ ಆತನ ಮುಖದಲ್ಲಿ ಒಂದು ವಿಶೇಷ ಕಳೆಯೊಂದಿತ್ತು.
Ferry ಬಂದೊಡನೆ, ಅವಸರವಾಗಿ life jacket ತೊಟ್ಟು ride enjoy ಮಾಡಲು ಮುಂಬಾಗದ ಸಾಲಿನಲ್ಲಿ ಕುಳಿತೆವು. ಈ ಬಾರಿಯ ride ಒಂದೆರಡು rough waves ಗಳಿಂದಾಗಿ, ಹಾರಿ ಹಾರಿ ಇಳಿದು, ರೋಮಾಂಚಕವಾಗಿತ್ತು. ಸಾಲಿನ ತುದಿಯಲ್ಲಿ ಕುಳಿತಿದ್ದ ಶ್ವೇತಾ, ಅಲೆ ಅಪ್ಪಳಿಸಿ ಚಿಮ್ಮಿದ ನೀರಿನಿಂದಾಗಿ ಅರೆ ಬರೆ ನೆಂದು ಹೋಗಿ, ಇರಿಸುಮುರಿಸಾದರು. ನಾವ್ಯಾರೂ ನೆನೆಯಲಿಲ್ಲ, ಹಾಗಾಗಿ ಹಾಸ್ಯಮಾಡಿ ಎಲ್ಲರೂ ನಕ್ಕೆವು.
ಕನ್ಯಾಕುಮಾರಿ ಮಂದಿರ ನೋಡಲು, ನಮಗೆ ಸಮಯ ಉಳಿದಿರಲಿಲ್ಲ. ನಾವಿನ್ನೂ ನಮ್ಮ ಮೊದಲ ದಿನದ bike ride ಶುರು ಮಾಡಿರಲಿಲ್ಲ. ಮೊದಲ ದಿನದ plan ಪ್ರಕಾರ ಇಂದು ರಾತ್ರಿಗೆ ಉಳಿಯಲು ಮಧುರೈ ತಲುಪಬೇಕಿತ್ತು. ಹಾಗಾಗಿ ತಡಮಾಡದೇ ಒಣಗಿದ್ದ ಬಾಯಿಗೆ ಎಳನೀರು ಕುಡಿದು ಹೋಟೆಲ್ ಕಡೆಗೆ ಓಡಿದೆವು.
ರೂಮಿಗೆ ಬಂದ ತಕ್ಷಣ ನಮ್ಮ ವೇಷಭೂಷಣಗಳನ್ನೆಲ್ಲಾ (Jacket, Gloves, Knee pads, Riding Shoes) ತೊಟ್ಟು, ಮೊದಲೇ ತಯಾರು ಮಾಡಿಟ್ಟಿದ್ದ bagಗಳನ್ನೆಲ್ಲಾ ಬೈಕುಗಳಿಗೆ ಕಟ್ಟಿದೆವು. ನನ್ನ ಬೈಕಿನಲ್ಲಿ ನಾನೊಬ್ಬನೇ ಇದ್ದಿದ್ದರಿಂದ trip ಸಲುವಾಗಿ ಖರೀದಿಸಿದ್ದ accessories, tools n extra ಅನಿಸಿದ other things ಎಲ್ಲವನ್ನೂ ನನ್ನ ಬೈಕಿನ ಹಿಂದಕ್ಕೆ ಕಟ್ಟಿಕೊಂಡೆ. ಶರತ್-ಶ್ವೇತಾ, ಅವರ ಲಗೇಜುಗಳನ್ನು perfect ಆಗಿ arrange ಮಾಡಿ ತಂದಿದ್ದರು, ಹಾಗಾಗಿ ಏನೂ ಅಡಚಣೆಯಾಗದಂತೆ, ಬೈಕಿಗೆ ಲೋಡ್ ಮಾಡಿದರು. ಶಿವು-ದೀಪಿಕಾ, ಸ್ವಲ್ಪ ಹೆಚ್ಚು ಲಗೇಜು ಹೊತ್ತು ತಂದಿದ್ದರು, ಬೈಕಿನ ಲಗೇಜ್ ಕ್ಯಾರಿಯರಿಗೆ ಹಿಡಿಸಲಾರದಷ್ಟು ದೊಡ್ಡ ಬ್ಯಾಗೊಂದಿತ್ತು. ಆದರೂ ಅದನ್ನು ಹೇಗೋ ಬಿಗಿದು ಕಟ್ಟಿದೆವು. ಆದರೆ ಅಷ್ಟನ್ನೂ ಪೂರ್ತಿ trip ಹೊತ್ತು manage ಮಾಡುವುದು ಕಷ್ಟವಿತ್ತು. ಹಿಂಬದಿ ಕೂರುವ ದೀಪಿಕಾಗೆ ಅಷ್ಟು ಲಗೇಜಿನಿಂದಾಗಿ ಬಹಳಷ್ಟು ಇರಿಸು ಮುರಿಸಂತೂ ಕಾದಿತ್ತು.
ಬೈಕುಗಳನ್ನು ready to ride ಮಾಡಿ, ಸಮಯ ಸಂಜೆಯ 4.30ರ ಹೊರಡುವ ಶುಭಗಳಿಗೆಯ ನೆನಪಿಗೆ photo ಕ್ಲಿಕ್ಕಿಸಿಕೊಂಡು ಹೊರಟು, ಅಲ್ಲೇ ಮುಂದೆ ಬೈಕುಗಳಿಗೆ full tank petrol ತುಂಬಿಸಿಕೊಂಡು ಮಧುರೈ ಹಾದಿ ಹಿಡಿದೆವು.
ಹಿಂಬದಿ ಸವಾರಾಗಿದ್ದ ಶ್ವೇತ ಮತ್ತು ದೀಪಿಕರ ಜವಾಬ್ದಾರಿ, ಪೂರ್ತಿ tripಗೆ map ಗಳಿಂದ ನಮಗೆ route & navigate ಮಾಡವುದಾಗಿತ್ತು. ಹಾಗಾಗಿ, ಹಿಂಬದಿ navigator ಇದ್ದ ಶರತ್ ಅಥವಾ ಶಿವು ಇಬ್ಬರಲ್ಲೊಬ್ಬರು ಯಾವಾಗಲೂ ಮುಂದೆ ಸಾಗಬೇಕಾಗಿಯೂ, ಮಧ್ಯದಲ್ಲಿ ಒಬ್ಬನೇ rider ಆದ ನಾನು follow ಮಾಡಬೇಕೆಂದು, ನನ್ನ ಹಿಂದೆ ಉಳಿದ ಇನ್ನೊಬ್ಬರು (with navigator rider) ಬರಬೇಕೆಂದು ಯೋಚಿಸಿಕೊಂಡೆವು.
ನಾವು ರಾತ್ರಿಯೊಳಗೆ 250km ಕ್ರಮಿಸಬೇಕಿತ್ತು. ಇದಿನ್ನೂ ಮೊದಲ ದಿನವಾದ್ದರಿಂದಲೋ ಏನೋ, ಮೂವರೂ (ಮೂರೂ ಬೈಕುಗಳು) ಹೊಂದಾಣಿಕೆಯ ವೇಗದಲ್ಲಿ ಸಾಗುವದು ಕಷ್ಟವಿತ್ತು. ಶರತ್ ಮುಂದೆ ಹೋಗುತ್ತಿದ್ದರು, ನಾನು ತುಸು ಆರಾಮಾಗಿಯೇ ಅವರನ್ನ ಹಿಂಬಾಲಿಸುತ್ತಿದ್ದೆ. ಆದರೆ ಶಿವು ಮಾತ್ರ ನಮ್ಮಿಂದ ಹಿಂದೆ ಹಿಂದೆ ಉಳಿಯುತ್ತಿದ್ದ.

ಕನ್ಯಾಕುಮಾರಿಯ ಹೊರವಲಯ ದಾಟಿದ ಮೇಲೆ ಸಿಗುವ ಸಾಲುಗಟ್ಟಲೆ wind mills ಗಳು, ಆ ಸಂಜೆ ಸಮಯದ ಬಣ್ಣತುಂಬಿದ ಆಗಸದಲ್ಲಿ ಕಣ್ಣಿಗೆ ಹಬ್ಬದಂತಿದ್ದವು.
ಸುಮಾರು 30-40km ಹಾದಿಯಲ್ಲಿ ಸಾಗಿದ್ದೆವು, ಶಿವು ಮತ್ತು ದೀಪಿಕಾ ಕಾಣುತ್ತಿಲ್ಲವಲ್ಲ ಎಂದು ನಾವು ಬೈಕುಗಳನ್ನು ರಸ್ತೆ ಪಕ್ಕಕ್ಕೆ ನಿಲ್ಲಿಸಿ, ಕಾಯತೊಡಗಿದೆವು. ಒಂದೈದು ನಿಮಿಷಗಳ ಬಳಿಕ ಬಂದ ಅವರಿಗೆ, ಯಾಕೆ ನಿಧಾನವಾಯ್ತು, ನಮ್ಮನ್ನ ಹಿಂಬಾಲಿಸುತ್ತಾ ಬನ್ನಿ, ಕನಿಷ್ಠ rear view mirrors ನಲ್ಲಿ ಕಾಣುವಷ್ಟು ಅಂತರವನ್ನಾದರೂ ಕಾದಿರಿಸುತ್ತ ಬರಬೇಕೆಂದು ಹೇಳಿದೆವು. ಹಾಗೇ ನಿಲ್ಲಿಸಿದ್ದಾಗ ಹಿಂದೆಯಿಂದ ಅವರ ಬೈಕನ್ನು ನೋಡಿದ ನಾನು, ಅವರ ಬೈಕಿಂದ number plate ನ, ಎರಡರಲ್ಲಿ ಒಂದು bolt ಉದುರಿ ಹೋಗಿ, ಅದು ಒಂದೇ ಒಂದು bolt ನಲ್ಲಿ ಇನ್ನೇನು ಇದೂ ಉದುರಿ ಹೋಗುವುದೇನೋ ಎನ್ನುವಂತೆ ನೇತಾಡುತಿತ್ತು. "ಹೇ, ಏನೋ ಇದು" ಎಂದು ಕೇಳಿದಾಗ ಅವರಿಬ್ಬರೂ ಬೈಕಿನಿಂದ ಇಳಿದು ನೋಡಿದರು. ಅವರಿಬ್ಬರೂ ಇಳಿದಾಗ, ಅವರ ಬೈಕಿನ battery box cover ಕೂಡ ಎಲ್ಲೋ ಉದುರಿ ಹೋಗಿರುವುದು ಕಾಣಿಸಿತು. "ಇವೆಲ್ಲಾ ಬೈಕಿಂದ ಬಿದ್ದು ಹೋದ್ರೂ ನಿಮ್ಮಿಬ್ಬರಿಗೂ ಗೊತ್ತಾಗಲಿಲ್ಲವೇನ್ರೋ" ಅಂತ ಕೇಳಿದಾಗ, ಇಬ್ಬರೂ ಮುಖ ಮುುಖ ನೋಡಿದ್ರು.
ಸರಿ, ಇನ್ನೇನೂ ಮಾಡೋಕಾಗಲ್ಲ, battery cover ನ ನಾಳೆ ಇಲ್ಲ ನಾಡಿದ್ದು ಎಲ್ಲಾದರೂ Royal Enfield Shop ಅಲ್ಲಿ ಹಾಕಿಸಿಕೊಳ್ಳೋಣ, ಸಧ್ಯ number plate ಬಿದ್ದೋಗಲಿಲ್ಲವಲ್ಲ ಎಂದು, ನಮ್ಮ ಹತ್ತಿರ ಇದ್ದ spare bolt ಹಾಕಿ number plate ಸರಿ ಮಾಡಿಕೊಂಡು, ಮುಂದೆ ಹೊರಟೆವು.

ಈ ದಿನದ ಪ್ರಯಾಣದ ಮಧ್ಯೆ ಸಿಗುವ, ತಿರುನಲ್ವೇಲಿಯಲ್ಲಿ ಅಲ್ಲಿನ famous ಹಲ್ವಾ ತಿಂದು ಹೋಗಬೇಕೆಂಬೆದು ನಮ್ಮ ಪ್ಲಾನಿನಲ್ಲಿತ್ತು. ಆದರೆ ನಾವು ಹೆದ್ದಾರಿಯಲ್ಲಿ ಸಾಗುತ್ತ ಸಾಗುತ್ತ ಇದ್ದಂತೆಯೇ ಇನ್ನೂ ಮುಂದೆ ಇದೆ, ಅಂದುಕೊಳ್ಳುತ್ತ ಬಂದ ತಿರುನಲ್ವೇಲಿಯನ್ನು ಬೈಪಾಸಿನಲ್ಲಿ ದಾಟಿ, ಇನ್ನೂ ಮುಂದೆ ಬಂದಾದ ಮೇಲೆ,,, ಅಯ್ಯೋ ನಮಗೆ ದಾರಿ ತಿಳಿಯಲಿಲ್ಲವಲ್ಲ ಎಂದು ಬೇಸರಗೊಂಡೆವು. ಹಲ್ವಾ miss ಆಯ್ತು.
ಇನ್ನ 50km ಸಾಗುವಷ್ಟರಲ್ಲಿ ಮತ್ತೆ ಅದೇ ರಾಗ, ಶಿವು-ದೀಪಿಕಾರ ಬೈಕ್ ನಮ್ಮಿಂದ ಬಹಳ ಹಿಂದೆ ಉಳಿದಿತ್ತು. ಆದರೂ ನಾನು ಮತ್ತು ಶರತ್ ನಿಧಾನ ಮಾಡುವುದು ಬೇಡವೆಂದು, ಮುಂದುವರಿಯುತ್ತಲೇ ಇದ್ದೆವು. ಇದ್ದಕ್ಕಿದ್ದಂತೆ ರಸ್ತೆ ಬದಿಯಲ್ಲಿ ಒಂದು Royal Enfield Service Center ನೋಡಿದ ಶ್ವೇತ, ಶರತ್ ಗೆ ಬೈಕ್ ನಿಲ್ಲಿಸಲು ಹೇಳಿದ್ದಾರೆ. ಹಾಗಾಗಿ ಶರತ್ ತಕ್ಷಣ ಬೈಕನ್ನು ರಸ್ತೆಯ ಪಕ್ಕಕ್ಕೆ ತಿರುಗಿಸಿ ನಿಲ್ಲಿಸಿದರು. ಅವರ ಹಿಂದೆಯೇ ನಾನೂ ತಕ್ಷಣವೇ ಬೈಕನ್ನು ನಿಲ್ಲಿಸಿ, ಶಿವು ಬಂದರೆ ನಿಲ್ಲಿಸಲು ಹೇಳೋಣವೆಂದು ಕಾಯತೊಡಗಿದೆವು.
ಆದರೆ, ನಾವು ನಿಂತಿದ್ದ ಜಾಗದಿಂದ ಸುಮಾರು 300 ಮೀಟರ್ ದೂರದಲ್ಲಿ, ಮರೆಯಲ್ಲಿ ನಿಂತು racing ಮಾಡುವವರನ್ನು ಹಿಡಿಯಲು ಕಾಯುವ highway police, ಜೀಪನ್ನು ಮರೆಯಲ್ಲಿ ನಿಲ್ಲಿಸಿಕೊಂಡಿದ್ದರು. ಅಲ್ಲಿ ಕಾದಿದ್ದ ಅವರಿಗೆ, ನಾವು ವೇಗವಾಗಿ ಬಂದು, ಅವರು ಕಂಡ ಕೂಡಲೇ ಅಲ್ಲೇ ದೂರದಲ್ಲಿ ನಿಲ್ಲಿಸಿಕೊಂಡಿದ್ದು, ಕಳ್ಳರು ಪೋಲೀಸರನ್ನ ನೋಡಿ ಕದ್ದು ಅವಿತುಕೊಂಡಂತೆ ಅನ್ನಿಸಿದೆ. ನಾವು ಅವರ ಕಡೆಗೆ ಗಮನವನ್ನೇ ಕೊಟ್ಟಿರಲಿಲ್ಲ, ಆದರವರು ಯಾರೋ ಮಹಾನ್ ಕಳ್ಳರನ್ನ ಹಿಡಿಯುವವರಂತೆ, ಎದ್ದು ಬಿದ್ದು ಓಡಿ ಬರತೊಡಗಿದರು.
ಅಷ್ಟರಲ್ಲಿ ಶಿವು-ದೀಪಿಕಾ ಕೂಡ ಬೈಕಿನಲ್ಲಿ ಬಂದರು, ನಾವವರನ್ನ ತಡೆದು ನಿಲ್ಲುವಂತೆ ಹೇಳಿದೆವು. ನಾವಿಲ್ಲಿ ಯಾಕೆ ನಿಂತಿರುವೆವೆಂದು ಅವರಿಗೆ ಗೊತ್ತೇ ಇಲ್ಲ, ಬಂದು ಬೈಕನ್ನು ನಮ್ಮ ಪಕ್ಕ ನಿಲ್ಲಿಸಿದರು.
ಅಷ್ಟರಲ್ಲಿ ಆ ಪೊಲೀಸರಲ್ಲಿ ಮುಂದಿದ್ದವನು ನಮ್ಮ ಹತ್ತಿರ ಬಂದಾಗಿತ್ತು. ಅವನ ಮುಖಚರ್ಯೆಯಾಗಲಿ, ಬಂದು ವ್ಯವಹರಿಸತೊಡಗಿದ ರೀತಿಯಾಗಲಿ, ಒಂದೂ ನಯಾ ಪೈಸಾ ಮರ್ಯಾದೆ ಕೊಡುವಂತಿರಲಿಲ್ಲ. ಅವನ ಕಣ್ಣಿನ ತುಂಬಾ ಇವತ್ತಿನ ಮಟ್ಟಿಗೆ ಲಂಚ ಸಿಕ್ಕೀತೆಂಬ ದುರಾಸೆಯೊಂದೇ ಕಾಣುತಿತ್ತು
ನಮ್ಮಲ್ಲಿ ಪೊಲೀಸರಿಗೆ, ತುಂಡು ರಾಜಕಾರಣಿಗಳಿಗೆ ಮತ್ತು ಕೆಲವು ಇಲಾಖೆಯ ಸರ್ಕಾರಿ ನೌಕರರಿಗೆ ಇರುವಷ್ಟು ದರ್ಪ, ದುರಹಂಕಾರ, ಬೇರೆ ಇನ್ನ್ಯಾರಿಗೂ ಇರುವುದಿಲ್ಲ. ಇಲ್ಲಿ ಈ ಪೊಲೀಸರು ನಮ್ಮೊಡನೆ ಗೌರವದಿಂದ ವ್ಯವಹರಿಸಲಿಲ್ಲ ಎಂಬ ಕಾರಣಕ್ಕಾಗಿಯಷ್ಟೇ ಹೀಗೆ ಬರೆಯುತ್ತಿರುವೆ, ಎಂದು ತಪ್ಪು ತಿಳಿಯಬೇಡಿ. ನಾವು ಹಲವಾರು ಬಾರಿ, ಪೊಲೀಸರು routine check ಗೆ, over speed ಗೆ, traffic violationsಗಳಿಗೆ ನಿಲ್ಲಿಸಿ ಪರಿಶೀಲಿಸಿದ್ದು, ಒಮ್ಮೊಮ್ಮೆ ದಂಡ ಕಟ್ಟಿದ್ದ ಅನುಭವಗಳೂ ಇವೆ. ಹಾಗಾಗಿಯೇ ಇಲ್ಲಿ ಈ ಪೊಲೀಸರು ವ್ಯವಹರಿಸಿದ್ದನ್ನು ನಾನು ಪ್ರಾಮಾಣಿಕವಾಗಿ ತಿಳಿಸುತ್ತಿದ್ದೇನೆ. ಇದು ನನ್ನೊಬ್ಬನ ಅಭಿಪ್ರಾಯವಲ್ಲ, ಅಲ್ಲಿದ್ದ ನಾವು ಐವರ ಅಭಿಪ್ರಾಯ.
ಕೈಯಲ್ಲೊಂದು handy cam ಹಿಡಿದಿದ್ದ ಆತ, ನಮ್ಮ ಹತ್ತಿರಕ್ಕೆ ಬಂದವನೇ ನಮ್ಮೆಲ್ಲರನ್ನೂ ಒಟ್ಟಿಗೆ ಪಕ್ಕಕ್ಕೆ ನಿಲ್ಲುವಂತೆ ಹೇಳಿ, ನಮ್ಮ ವೀಡಿಯೊ ತೆಗೆಯತೊಡಗಿದ. ಆ ಕ್ಷಣಕ್ಕೆ ನಾವೆಲ್ಲರೂ ಸಿಟ್ಟಿಗೆದ್ದೆವು. ಯಾವ ಅಧಿಕಾರದ ಮೇಲೆ, ಆತ ನಮ್ಮ ಬಗ್ಗೆ ಏನೂ ವಿಚಾರಿಸದೆ ವಿಡಿಯೋ ಮಾಡುತ್ತಿದ್ದಾನೆ ಎಂದು. ನಮ್ಮ ಮಾತೇನನ್ನೂ ಗಣನೆಗೆ ತೆಗೆದುಕೊಳ್ಳದವನಂತೆ, ವಿಡಿಯೋ ತೆಗೆಯುತ್ತಲೇ ತಮಿಳಿನಲ್ಲಿ ವಿಚಾರಿಸತೊಡಗಿದ. ಯಾರು ನೀವು? ಎಲ್ಲಿಂದ ಬರುತ್ತಿದ್ದೀರಾ? racing ಮಾಡ್ತಿದೀರಾ ಇಲ್ಲಿ? ಈ ಹುಡುಗಿಯರು ಯಾರು? ಎಂದು ಕೇಳತೊಡಗಿದ.
ಇಂಥ ಸಂದರ್ಭಗಳಲ್ಲಿ ಶರತ್ ಸಿಟ್ಟಾಗುತ್ತಾರೆ ಎಂದು ನನಗೆ ಗೊತ್ತಿತ್ತು, ಶಿವು ಅಷ್ಟಾಗಿ respond ಮಾಡುವುದಿಲ್ಲ ಅಂತಲೂ ಗೊತ್ತು. ಅಲ್ಲದೇ ದುರಹಂಕಾರದ ಪೊಲೀಸರಲ್ಲಿ, ಅವರು ಏನೇ ಅಂದರೂ, ಸಭ್ಯತೆಯಿಂದ ನಾಟಕೀಯವಾಗಿಯಾದರೂ ವಿಧೇಯವಾಗಿ ವರ್ತಿಸಿದರೆ ಪರಿಸ್ಥಿತಿ ಸಲೀಸಾಗಿ ನಿಭಾಯಿಸಬಹುದು. ಹಾಗಾಗಿ ನಾನೇ ಮುಂದಾಗಿ, ಆತ ಕೇಳಿದ ಪ್ರಶ್ನೆಗಳನ್ನು ಊಹಿಸಿ ಅರ್ಥ ಮಾಡಿಕೊಂಡು, ಎಲ್ಲವಕ್ಕೂ ಉತ್ತರಿಸತೊಡಗಿದೆ. ನಮ್ಮ ವಿಳಾಸ, ಕೆಲಸ ಕಾರ್ಯ, ಇಲ್ಲಿಗೇಕೆ ಬಂದೆವೆಂಬುದನ್ನೂ ಹೇಳಿ, ನಮ್ಮ ಲಗೇಜುಗಳನ್ನು ತೋರಿಸಿ, ಇಬ್ಬಿಬ್ಬರು ಕೂತು ಸಾಗುವ ನಾವು racing ಮಾಡುವುದು ಸಾಧ್ಯವೇ ಎಂದು ತಿಳಿಸಿದೆ. ಈ ಹುಡುಗಿಯರು ಯಾರೆಂದು ಕೇಳಿದ್ದಕ್ಕೆ, ಇವರುಗಳ ಪತ್ನಿಯರೆಂದು ಹೇಳಿದರೂ, ಕೇಳದ ಆತನಿಗೆ marriage cirtificate, ಆಧಾರ್ ಕಾರ್ಡ್ ಗಳನ್ನು ತೋರಿಸಬೇಕಾಯಿತು. ಅಷ್ಟು ಅನುಚಿತವಾಗಿ ವರ್ತಿಸಿದ್ದು ಅಲ್ಲಿದ್ದ ಇಬ್ಬರು ಸ್ತ್ರೀಯರಿಗೂ ಬಹಳಷ್ಟು ಬೇಸರ ತರಿಸಿತ್ತು. ಅಷ್ಟರಲ್ಲಿ ಆತನ ಜೊತೆಗಿದ್ದ ಪೊಲೀಸರೆಲ್ಲ ಬಂದು, ಏನು, ಏನೆಂದು ಕೇಳತೊಡಗಿದರು.
"ಹಾಗಾದರೆ ನಮ್ಮನ್ನು ನೋಡಿ ಇಲ್ಲ್ಯಾಕೆ ನಿಲ್ಲಿಸಿದರೆಂದು" ಕೇಳಿದ. ಆಗ ಎದುರಲ್ಲೇ ಇದ್ದ Royal Enfield Service Center ತೋರಿಸಿ, ಶಿವು ಬೈಕಿನ ಬಿದ್ದು ಹೋಗಿದ್ದ battery cover ಕೂಡ ತೋರಿಸಿ, ಇಲ್ಲಿ ಇದನ್ನು ಕೊಳ್ಳುವ ಸಲುವಾಗಿ ನಿಲ್ಲಿಸಿದೆವೆಂದು ಸಮಜಾಯಿಷಿ ಕೊಟ್ಟೆವು. ಆಗ ಅಲ್ಲಿ ಪಕ್ಕದ ಸರ್ವಿಸ್ ರಸ್ತೆಯಲ್ಲಿ ಬಂದ ಒಬ್ಬ RE-mechanic ನ ನಿಲ್ಲಿಸಿ, ನಿಮ್ಮಲ್ಲಿ ಈ ಕವರ್ ಸಿಗುತ್ತದೆಯೇ ಎಂದು ಕೇಳಿದೆವು. ಆತ "ಇಲ್ಲ, ಇಲ್ಲಿ ಖಾಲಿಯಾಗಿದೆ" ಅಂದ. ಅದನ್ನ ಕೇಳಿಸಿಕೊಂಡ ಆ ಪೊಲೀಸರು ಸುಮ್ಮನೆ ವಾಪಸ್ಸಾದರು. ನಮ್ಮನ್ನು ಮತ್ತೆ ಏನೇ ಪ್ರಶ್ನಿಸಿದರೂ ಎಲ್ಲಕ್ಕೂ ನಾವು ಸಮಜಾಯಿಷಿಗೆ ತಯಾರಿದ್ದೇವೆಂದು ತಿಳಿದು, ಅಂದಿನ ಮಾಮೂಲು ಸಿಗದ ಬೇಸರಕ್ಕೋ ಏನೋ, ಒಂದು ನಿರ್ಭಾವ ನೋಟ ಬೀರಿ ಅವರು ಹೊರಟು ಹೋದರು. ಅಷ್ಟನ್ನೆಲ್ಲಾ ಅವರಲ್ಲಿ ವ್ಯವರಿಸುವಾಗ, ವಿದ್ಯಾವಂತರಾಗಿ ಸರ್ಕಾರಿ ನೌಕರಿಯಲ್ಲಿದ್ದರೂ ಸಹ, ಕನಿಷ್ಠ ವ್ಯಾವಹಾರಿಕ english ಜ್ಞಾನವಿಲ್ಲದ ಆ ಪೊಲೀಸರನ್ನ ಕಂಡು ಒಂದು irritating ಸಿಟ್ಟು ನಮ್ಮೆಲ್ಲರಲ್ಲೂ ಮೂಡಿತ್ತು.
ನಮಗೆ ಸಿಟ್ಟು, ಬೇಸರ ಎರಡೂ ಆದರೂ, ಇಷ್ಟಕ್ಕೆ ಮುಗಿಯಿತಲ್ಲ ಎಂದುಕೊಂಡು, ಮುಂದೆ ಇನ್ನೆಲ್ಲಾದರೊ ಆ ಕವರ್ ಹಾಕಿಸಿಕೊಂಡರಾಯ್ತೆಂದು, ಪ್ರಯಾಣ ಮುಂದುವರಿಸಿದೆವು. ಇನ್ನಷ್ಟು ದೂರ ಕ್ರಮಿಸಿ ಒಂದು ಸಣ್ಣ Coffee Break ಗೆ .
ಒಂದು ಮಾಮೂಲು ಹೆದ್ದಾರಿ ಹೋಟೆಲ್ ಅದು, ಬಿಸಿ ಇಡ್ಲಿ ಹಾಗೂ ದೋಸೆ ಆಗ ತಾನೇ ತಯಾರಾಗುತ್ತಿತ್ತು. ದೋಸೆ (ಉತ್ತಪ್ಪಮ್) ಅಷ್ಟು ಹಿಡಿಸಲಿಲ್ಲವಾದರೂ, ಇಡ್ಲಿ ಬಹಳ ರುಚಿಯಾಗಿತ್ತು. ತಿಂದು ಬಿಸಿ ಕಾಫೀ ಕುಡಿಯುತ್ತಾ ಕುಳಿತಿದ್ದಾಗ, ಹೋಟೆಲಿನ ಪಕ್ಕದ ಹೊಲದ ಮೈದಾನದಲ್ಲಿ ನೆಡೆಯುತ್ತಿದ್ದ ಜಲ್ಲಿಕಟ್ಟು ಕಾಣಿಸಿತು. ನೋಡಲು ಹೋಗೋಣವೇ ಅಂದುಕೊಂಡರೂ, ಅಷ್ಟೊತ್ತಿಗಾಗಲೇ ಕತ್ತಲಾಗತೊಡಗಿದ್ದಲ್ಲದೇ, ಅಲ್ಲಿ ಜನ ಕುಡಿದು ಕುಣಿದು ಮತ್ತೇರಿದಂತೆ ಇರುತ್ತಾರಾದ್ದರಿಂದ ಅತ್ತ ಹೋಗದೆ, ಸುಮ್ಮನೆ ಮಧುರೈ ದಾರಿ ಹಿಡಿದೆವು.
ಮತ್ತೆಲ್ಲೂ ನಿಲ್ಲದೇ ಮಧುರೈ ತಲುಪಲು ನಿರ್ಧರಿಸಿ ಹೊರಡುವಾಗ, ನಾನು ಕಿವಿಗೆ earphones ಹಾಕಿಕೊಂಡು, ಮ್ಯೂಸಿಕ್ ಕೇಳುತ್ತಾ ಅವರ ಬೈಕುಗಳನ್ನು ಹಿಂಬಾಲಿಸಿದೆ.
ಎಲ್ಲಿ ನಮ್ಮ ಬೈಕುಗಳು ದೂರ-ದೂರಾದವೊ ತಿಳಿಯಲಿಲ್ಲ, ನಾನು ಅವರಿಬ್ಬರಿಗಿಂತ ವೇಗವಾಗಿ ಮುಂದೆ ಮುಂದೆ ಬಂದಿದ್ದೆ. ಇದಕ್ಕೆ ಕಾರಣವೂ ಇದೆ.
ನನ್ನ ಮತ್ತು ಶರತ್ ರ ಬೈಕುಗಳು ಸುಮಾರು ಹತ್ತಿರ ಹತ್ತಿರವಾಗೇ ಸಾಗಿತ್ತಿದ್ದೆವು. ಮಧ್ಯ ಸಾಗಿಬಂದ ಒಂದು ಕಾರಿನಲ್ಲಿದ್ದ ಕೆಲ ಪುಂಡರು ಮೊದಲು ಸಿಕ್ಕ ನನ್ನ ಬೈಕನ್ನು, ನೋಡಿ ನೋಡಿ ಗೇಲಿ ಮಾಡುತ್ತಾ ಮುಂದೆ ಹೋದರು. ಆಗ ತಕ್ಷಣ ನನಗನ್ನಿಸಿತು ಇವರು ನನ್ನ ಮುಂದೆ ಸಾಗುತ್ತಿರುವ ಶರತ್ ರ ಬೈಕಿಗೂ ಗೇಲಿ ಮಾಡುವರೆಂದು, ಅಲ್ಲದೆ ಹಿಂದೆ ಶ್ವೇತಾ ಕುಳಿತಿದ್ದರಿಂದ ಆ ಪುಂಡರು ಇನ್ನೂ ಇರಿಸು ಮುರಿಸನ್ನುಂಟು ಮಾಡುವರೆಂದುಕೊಂಡು, ಅವರ ಬೈಕಿಗೂ ಮತ್ತು ಕಾರಿಗೂ ನಡುವಲ್ಲಿ ಸಾಗಿ ಕೊಂಚವಾದರೂ ಅದನ್ನು ತಪ್ಪಿಸೋಣವೆಂದು ವೇಗ ಹೆಚ್ಚಿಸಿಕೊಂಡು ಮುಂದೆ ಹೋದೆ.
ಆ ಪೋಲಿಗಳು ಏನೇನೋ ಅಂದರೂ, ವೇಗವಾಗಿ ಸಾಗುತ್ತಿದ್ದ ನಾವು ಅತ್ತ ಗಮನ ಹರಿಸಲೂ ಇಲ್ಲ, ಅಲ್ಲದೆ ಹೆಲ್ಮೆಟ್ ಧರಿಸಿ full cover ಆಗಿದ್ದ ನಾವು ಏನೆಂದು ಕೇಳಿಸಿಕೊಳ್ಳಲೂ ಇಲ್ಲ. ಆದರೆ ತುಸು ತೊಂದರೆಯನ್ನಂತೂ ಕೊಟ್ಟು ಮುಂದೆ ಹೋದರು ಅವರು. ಹೀಗೇ ಸಾಗುತ್ತಾ ಬಂದ ನಾನು, ಯಾವಾಗ ಬಹಳ ದೂರ ಬಂದೆ ಎಂದು ತಿಳಿಯಲೇ ಇಲ್ಲ. ಅಲ್ಲದೇ ಶರತ್-ಶ್ವೇತ ನನಗಿಂತ ಮುಂದೆ ಹೋದರೋ, ಹಿಂದೆ ಉಳಿದರೋ ಅದೂ ತಿಳಿಯಲಿಲ್ಲ.
ಬಹಳ ದೂರ ಹೋದ ಮೇಲೆ ಅನುಮಾನ ಬಂದು, ಬೈಕು ನಿಲ್ಲಿಸಿ ಮ್ಯಾಪ್ ಹಾಕಿ ನೋಡಿದಾಗ, ಮಧುರೈ ನನ್ನ ಹಿಂದಕ್ಕೆ ಉಳಿಯಿತು ಎಂದು ತಿಳಿಯಿತು. ಆಗ, ಶಿವು ಮಾತ್ರ ಖಂಡಿತಾ ನನ್ನ ಹಿಂದೆಯೇ ಬರುತ್ತಿದ್ದಾನೆ ಎಂದು ಅನ್ನಿಸಿ, ದೀಪಿಕಾಗೆ ಫೋನ್ ಮಾಡಿದೆ. ಆಗ ದೀಪಿಕಾ ಹೇಳಿದರು, "ನೀವ್ಯಾಕೆ ಮುಂದೆ ಹೋದಿರಿ, ನಾವು ಮತ್ತು ಶರತ್-ಶ್ವೇತ ಇಲ್ಲಿಯೇ ಮಧುರೈಗೆ ಹೆದ್ದಾರಿಯಿಂದ turn ಆಗುವ ಕಡೆ ಇದ್ದೀವಿ. ನಿಮ್ಮ ಫೋನ್ ಕೂಡ not reachable ಬರುತ್ತಿದೆ".
ಆಗ ನಾನು, "ನನಗೆ ತಿಳಿಯಲೇ ಇಲ್ಲ ಆ entry. ಸರಿ ನೀವು ಅಲ್ಲಿಂದ ಹೋಟೆಲ್ಲಿಗೆ ಬನ್ನಿ. ನನಗೆ ನೀವು ಬುಕ್ ಮಾಡಿರುವ ಹೋಟೆಲ್ ಹೆಸರು ನೆನಪಿದೆ, ನಾನು map ಹಾಕಿಕೊಂಡು ಬರ್ತೀನಿ" ಅಂದೆ.
ಅಲ್ಲಿಂದ ಮೊಬೈಲಿನಲ್ಲಿ map ಹಿಡಿದು ವಾಪಸ್ ಹೊರಟು, ಮಧುರೈನ ಸಿಟಿ ಮಧ್ಯದಲ್ಲಿದ್ದ
ಹೋಟೆಲ್ ತಲುಪಿದೆ. ಆದರೆ ಅವರು ಯಾರೂ ಅಲ್ಲಿಗಿನ್ನು ಬಂದಿರಲಿಲ್ಲ. ಮತ್ತೆ ಫೋನ್ ಮಾಡಿ ನಾನು ಅದೇ ಹೋಟೆಲಿಗೆ ಬಂದಿರುವೆನೋ ಏನೋ, ಎಂದು ಕೇಳಿದೆ. ನಾನು ಸರಿಯಾದ ವಿಲಾಸಕ್ಕೇ ತಲುಪಿರುವೆನೆಂದೂ, ಅವರು ಏಲ್ಲೋ ಒಂದು ಕಡೆ ದಾರಿ ತಪ್ಪಿ ತಡವಾಗಿದ್ದರಿಂದ, ಈಗ ಅಲ್ಲಿಗೆ ಬರುತ್ತಿರುವರೆಂದು ಹೇಳಿದರು.
ಸಮಯ ಸುಮಾರು 9.30 ಆಗಿತ್ತು. ಕನ್ಯಾಕುಮಾರಿಯಿಂದ 250 km ಕ್ರಮಿಸಿ ಬರಲು, ಒಟ್ಟು ಐದು ತಾಸುಗಳಾಗಿದ್ದವು ನಮಗೆ.
ತುಸು ಕಾದ ಬಳಿಕ ಅವರೂ ತಲುಪಿದರು. ನಮ್ಮ ಲಗೇಜನ್ನೆಲ್ಲ ಇಳಿಸಿ, ರೂಮುಗಳಿಗೆ ಹೊತ್ತೊಯ್ದು, ನಾವು ಫ್ರೆಶ್ ಆಗಿ ಊಟ ಹುಡುಕಿಕೊಂಡು ಹೊರಟೆವು. ಮಧುರೈ ದೇವಸ್ಥಾನದ ಬೀದಿಯಲ್ಲಿ ಇರುವ ಒಂದು ಹೋಟೆಲ್ ತೆರೆದಿತ್ತು. ಆದರೆ ಅಲ್ಲೆಲ್ಲೂ ರಾತ್ರಿಗೆ ಊಟ ಸಿಗುವುದಿಲ್ಲ, ಬರೀ roast (ದೋಸೆ) ಅಥವಾ ಇಡ್ಲಿ ಸಿಗುವುದೆಂದು ಹೇಳಿದರು. ದೋಸೆ ಜೊತೆಗೆ ಮತ್ತೆ ಕಾಫಿ ಕುಡಿದು, ವಾಪಸ್ಸಾದೆವು. ನಾಳೆ ಬೆಳಿಗ್ಗೆ 6ಕ್ಕೇ ದೇವಸ್ಥಾನ ನೋಡಲು ಹೊರಡಬೇಕೆಂದು ತೀರ್ಮಾನಿಸಿ, ನಮ್ಮ ನಮ್ಮ ರೂಮು ಸೇರಿದೆವು.
ಮೊದಲ ದಿನವಾದ್ದರಿಂದಲೋ ಏನೋ, ಅಷ್ಟೇನೂ ಸುಸ್ತಾಗಿರಲಿಲ್ಲ. ಆದರೂ ಹಿಂದಿನ ರಾತ್ರಿ ಬಸ್ಸಿನಲ್ಲಿ ಪ್ರಯಾಣ ಮಾಡಿ, ಈ ದಿನ ಪೂರ್ತಿ ಚಟುವಟಿಕೆಯಿಂದ ಇದ್ದದ್ದರಿಂದ ಕಣ್ಮುಚ್ಚಿದೊಡನೆ ತಣ್ಣಗೆ ನಿದ್ದೆ ಬಂತು.
Day-1 Ride
- Kanyakumari to Madhurai
- Disatance covered - 250 KM

ದಿನ-2: ಮಧುರೈಯಿಂದ ತುಮಕೂರು http://kcsampath.blogspot.in/2017/04/2.html
Subscribe to:
Comments (Atom)