ಆ ತೀರದಿ ನೀ ಕುಳಿತು
ಕಳಿಸಿರುವೆಯ ಒಲವನ್ನು
ಈ ನೀರಿನ, ಅಲೆ ಅಲೆ ಮೇಲೆ...
ಕಿರು ಬೆರಳಿನ ತುದಿಯಿಂದ
ನಿನ್ ಹೆಸರನು ಗೀಚಲು,
ಈ ಮರಳೇ, ಬಿಳಿ ಬಿಳಿ ಹಾಳೆ...
ಕನಸುಗಳೇ ತುಂಬಿರಲು
ಉಳಿದೆಲ್ಲವ ಯೋಚಿಸಲು
ಈ ಮನಸಿಗೆ, ಇನ್ನೆಲ್ಲಿದೆ ವೇಳೆ...
ಜಗವೆಲ್ಲ ಸುತ್ತಿದರೂ
ನಿನ್ನನ್ನೇ ತಲುಪುವೆನು
ನಾ ಕೊನೆಗೆ, ಇಂದಲ್ಲ ನಾಳೆ...
- ಸಂಪತ್ ಕುಮಾರ್
No comments:
Post a Comment