Monday, July 06, 2020

ನೀನೇನೇ ಅರ್ಥ

ಒಮ್ಮೊಮ್ಮೆ ಆಗಸಕೆ ಚಂದ್ರನೂ ಅರ್ಧ
ನೀನಿರದ ಬಾಳಿಗೆ ಇಷ್ಟೇ ತಾನೇ ಅರ್ಥ

ಕಲ್ಪನೆಗೂ, ಕಡುನಿಜಕೂ,,,
ಏರ್ದನಿಗೂ, ಮರುದನಿಗೂ,,,
ಜೊತೆಯಾಗಿ ಬಾ, ಬೆಸೆಯುತಾ ಬೆರಳು
ಕಾರ್ಮೋಡದೊಳಗೂ, ಬೆಳಗುವುದು ಇರುಳು...

ಒಮ್ಮೊಮ್ಮೆ ಮಳೆ ಬಿಲ್ಲಿಗೆ, ಬಣ್ಣಗಳೂ ಅರ್ಧ
ನೀನಿರದ ಬಾಳಿಗೆ ಇಷ್ಟೇ ತಾನೇ ಅರ್ಥ

ಬಂಧನಕೂ, ಬಾಂಧವ್ಯಕೂ,,,
ಸ್ಪಂದನೆಗೂ, ಸಾಂಗತ್ಯಕೂ,,,
ಜೊತೆಸಾಗಿ ಬಾ, ಒಂದಾಗಿಸಿ ನೆರಳು,
ಜರಿಮಳೆಯಲ್ಲೂ, ಹೊಳೆಯುವುದು ಬಿಸಿಲು...

ನನ್ನೆಲ್ಲಾ ಖುಷಿಗೂ ನೀನೇನೇ ಅರ್ಥ,
ನೀನಿರದೆ ನಾನು, ಸಂಪೂರ್ಣ ವ್ಯರ್ಥ...

- ಸಂಪತ್ ಕುಮಾರ್