Monday, December 01, 2014

ನೀನೇ ಅಚ್ಚು ಮೆಚ್ಚು...

ನೀನೇ ಅಚ್ಚು ಮೆಚ್ಚು,,,
ನಂಗೆ, ನಿಂದೇ ಪ್ರೀತಿ ಹುಚ್ಚು.
ನೀ ಜೀವಕ್ಕಿಂತ,,, ಹೆಚ್ಚು...
* * *

ಬರುವೆ ನಾ ಕಡಲುಗಳ ದಾಟಿ,
ಸಿಗುವುದಾದರೆ ಸಾಕು, ನಿನದೊಂದು ಭೇಟಿ...
ತರುವೆ ನಾ ಮಲ್ಲಿಗೆಯ ರಾಶಿ,
ನೀ ಬರುವ ದಾರಿಗೆ, ಇಡಲೆಂದು ಹಾಸಿ...

ನೀ ನಗುವ ಬಗೆಗೆ, ನೀನೆ ಹೇಳು,,, ಬೇರೆ ಏನಿದಿಯೇ ಸಾಟಿ???
ನೀನಿರಲು ಜೊತೆಗೆ, ಆ ಸ್ವರ್ಗಕ್ಕಿಂತಲೂ ಈ ಭೂಮಿ ವಾಸಿ...

ವಿರಹದ ಕತ್ತಲು, ಇರುವಾಗ ಸುತ್ತಲು,
ನೀ ಪ್ರೀತಿ ದೀಪ ಹಚ್ಚು...

ನೀನೇ ಅಚ್ಚು ಮೆಚ್ಚು,,,
ನಂಗೆ, ನಿಂದೆ ಪ್ರೀತಿ ಹುಚ್ಚು.
ನೀ ಜೀವಕ್ಕಿಂತ,,, ಹೆಚ್ಚು...
* * *

ಇರುಳಲೀ ಕನಸುಗಳ ದಾಳಿ
ನಿನ್ನದೇನೇ ಕನಸು, ನೀನೇ ಇರುವೆ ಅಲ್ಲಿ...
ಒಲವೆ ನೀ ಜನುಮಗಳ ಸಾಥಿ
ಜೊತೆಯಲಿರುವ ನಾವು, ಕಣ್ಣು ರೆಪ್ಪೆಯ ರೀತಿ...

ನೀ ನುಡಿವ ಬಗೆಗೆ, ನೀನೆ ಹೇಳು,,, ಬೇರೆ ಏನಿದಿಯೇ ಸಾಟಿ???
ನೀಬರಲು ಜೊತೆಗೆ, ಹೂದೋಟಕಿಂತಲೂ, ಕಾಲುದಾರಿ ವಾಸಿ...

ಬೇಸರದ ಕತ್ತಲು, ಕವಿದಾಗ ಸುತ್ತಲು,
ನೀ ಬೆಳಕಾಗಿ ಮಿಂಚು...

ನೀನೇ ಅಚ್ಚು ಮೆಚ್ಚು,,,
ನಂಗೆ, ನಿಂದೆ ಪ್ರೀತಿ ಹುಚ್ಚು.
ನೀ ಜೀವಕ್ಕಿಂತ,,, ಹೆಚ್ಚು...

                                              - ಕೆ. ಸಿ. ಸಂಪತ್ ಕುಮಾರ್

Friday, October 31, 2014

ಹೇ ಭೂಮಿ,,,


ಹೇ ಭೂಮಿ, ನಿನಗ್ಯಾರು ಉಡಿಸಿದರೆ, ನೀಲಿ ಸಾಗರದ ಸೀರೆ
ಈ ಪ್ರೇಮಿ, ಚಂದಿರಗೆ ನಿನಗಿಂತ ಸುಂದರಿ ಇನ್ನ್ಯಾರೆ...
ನೀನೇ ಸ್ಪೂರ್ತಿಧಾರೆ...
*    *    *

ನೀನೇ ಪ್ರೇಮಕ್ಕೂ
ನೀನೇ ಧ್ಯಾನಕ್ಕೂ
ನೀನೇ ಹೃದಯಾಂತರಾಳ ಗಾನಕ್ಕೂ
ನೀನೇನೆ ಒಡತಿ, ನನ್ನೆಲ್ಲ ಸ್ವಪ್ನಕ್ಕೂ...

ತಂಗಾಳಿಯಲ್ಲಿ ತೂಗಾಡುತಿರಲು, ನಿನ್ನ ಮುಂಗುರುಳು,
ಯಾರೇ ಆದರೂ ಪ್ರೀತಿಸಲೇಬೇಕು, ಬೇರೇನನೂ ಯೋಚಿಸುವ ಮೊದಲು... 

*    *    *
ಹೇ ಭೂಮಿ, ನಿನಗ್ಯಾರು ಹಿಡಿಸಿದರೆ ಆ ಸೂರ್ಯನಾ ಚಿಂತೆ,,,
ಈ ಪ್ರೇಮಿ, ಚಂದಿರನು ಇರುವಾಗ ಸುತ್ತುತ್ತ ನಿನ್ನಿಂದೆ...
ಎಂದೂ ನಿನಗೆಂದೇ...
*    *    *

ನೀನೇ ಸ್ನೇಹಕ್ಕೂ
ನೀನೇ ಮೋಹಕ್ಕೂ
ನೀನೇ ಬದುಕೆಲ್ಲಸಾಗೋ ಯಾನಕ್ಕೂ
ನೀನೇನೆ ಗೆಳತಿ, ನನ್ನೆಲ್ಲ ಜನ್ಮಕ್ಕೂ...

ಸಂಕೋಚದಲ್ಲಿ ತೊಳಲಾಡುತಿರಲು, ನಿನ್ನ ತಿಳಿಕಂಗಳು,
ಯಾರೇ ಆದರೂ ಮೋಹಿಸಲೇಬೇಕು, ಬೇರೇನನೂ ಭಾವಿಸುವ ಮೊದಲು... 

*    *    *
ಹೇ ಭೂಮಿ, ನಿನಗ್ಯಾರು ಕಲಿಸಿದರೆ ಈ ಮೌನದಾ ಭಾಷೆ,,,
ಈ ಪ್ರೇಮಿ, ಚಂದಿರಗೆ ನಿನ್ನೊಡನೆ ದಿನವೂ ಮಾತಾಡುವಾಸೆ...
ಒಮ್ಮೆ ಮಾತಾಡಿಸೆ... 
*    *    *

ಹೇ ಭೂಮಿ, ನಿನಗ್ಯಾರು ಉಡಿಸಿದರೆ, ನೀಲಿ ಸಾಗರದ ಸೀರೆ
ಈ ಪ್ರೇಮಿ, ಚಂದಿರಗೆ ನಿನಗಿಂತ ಸುಂದರಿ ಇನ್ನ್ಯಾರೆ...
ನೀನೇ ಸ್ಪೂರ್ತಿಧಾರೆ...

                                                          - ಸಂಪತ್ ಕುಮಾರ್

Thursday, September 25, 2014

ರನ್ನ...

ನಮ್ಮೋರನ್ನ,
ತಮ್ಮೋರನ್ನ,,,
ಬೆನ್ನಹಿಂದೆ ಬಂದೋರನ್ನ,,,
ಎಂದು ಬಿಟ್ಟು ಕೊಡೋನಲ್ಲ,,, ರನ್ನ...
ಅಪ್ಪ ಅಮ್ಮ,
ಅಣ್ಣ ತಮ್ಮ,,,
ಅಂತ ತಿಳಿದುಕೊಂಡೋರನ್ನ,,,
ಕಣ್ಣಲ್ಲಿಟ್ಟು ಕಾಪಾಡೋನೇ,,, ರನ್ನ...

ಆರು ಅಡಿ, ಚಿನ್ನ...
ನಿನಗ್ಯಾರೋ ಸಮ,,, ಸಿಂಹ...
*  *  *  *  *  *  *  *  *

ನೆಡೆಯೋದಂತೂ ಮೂಗಿನ ನೇರ
ನೆಡತೆಯಲ್ಲಿ,,, ರಾಮಚಂದ್ರ...
ಹುಟ್ಟೋವಾಗ್ಲೇ ನೀ ಕುಬೇರ
ಪಟ್ಟಕ್ಕೆ ಬಂದ್ರೆ, ಭೂಮಿಗೆ ಇಂದ್ರ...

ದೇಹಿ ಅಂದೋನ್ ಗೆ ದೇವರು, ರನ್ನ,,, ದ್ವೇಷ ಅನ್ನೋನ್ ಗೆ, ನರಸಿಂಹ...

ಕಣ್ಣ ಮುಂದೆ ನಿಂತೋರನ್ನ
ಕಣ್ಣಿನಲ್ಲೇ ಸೋಲಿಸೋನೇ ರನ್ನ...
ಆರು ಅಡಿ, ಚಿನ್ನ...
ನಿನಗ್ಯಾರೋ ಸಮ,,, ಸಿಂಹ...
*  *  *  *  *  *  *  *  *

ಮೆತ್ತಗೆ ಇದ್ದರೆ, ಮಲ್ಲಿಗೆ ಹೂವು
ಸಿಟ್ಟಾಗಿ ಬಿಟ್ಟರೆ, ನಾಗರ ಹಾವು...
ಕೋಟಿಗೊಬ್ಬ ಕನ್ನಡದವನು
ಜೈ ಅನ್ನಲೇ ಬೇಕು, ನೀವು ನಾವು

ಸೋತು ಬಂದೋನ್ ಗೆ ಸ್ಫೂರ್ತಿ ರನ್ನ,,, ಸ್ನೇಹ ತಂದೋನ್ ಗೆ ಪ್ರೀತಿ ರನ್ನ...

ನನ್ನ ನಿನ್ನ ಎಲ್ಲಾರನ್ನ, 
ಒಂದು ಕೈ ಮೀರಿಸೋನೇ ರನ್ನ...
ಆರು ಅಡಿ, ಚಿನ್ನ...
ನಿನಗ್ಯಾರೋ ಸಮ,,, ಸಿಂಹ...
*  *  *  *  *  *  *  *  *

ನಮ್ಮೋರನ್ನ,
ತಮ್ಮೋರನ್ನ,,,
ಬೆನ್ನಹಿಂದೆ ಬಂದೋರನ್ನ,,,
ಎಂದು ಬಿಟ್ಟು ಕೊಡೋನಲ್ಲ,,, ರನ್ನ...
ಅಪ್ಪ ಅಮ್ಮ,
ಅಣ್ಣ ತಮ್ಮ,,,
ಅಂತ ತಿಳಿದುಕೊಂಡೋರನ್ನ,,,
ಕಣ್ಣಲ್ಲಿಟ್ಟು ಕಾಪಾಡೋನೇ,,, ರನ್ನ...

ಆರು ಅಡಿ, ಚಿನ್ನ...
ನಿನಗ್ಯಾರೋ ಸಮ,,, ಸಿಂಹ...
                                             - ಸಂಪತ್ ಕುಮಾರ್

Thursday, September 04, 2014

ಮನಸೇಕೋ ತುಡಿಯುತಿದೆ,,,

ಮನಸೇಕೋ ತುಡಿಯುತಿದೆ,,, 
ಪ್ರೀತಿಯನು ಇಂದೇ,,, ಹೇಳಿಬಿಡು ಎಂದು... 
ಇನ್ನೆಷ್ಟು ದಿವಸ ಕಾಯುವುದು, ನೊಂದು
ಪ್ರತಿಸಂಜೆಯಲ್ಲೂ ವಿರಹದಲಿ ಬೆಂದು...
ಮನಸೇಕೋ ತುಡಿಯುತಿದೆ,,,
ಪ್ರೀತಿಯನು ಇಂದೇ,,, ಹೇಳಿಬಿಡು ಎಂದು...
             *    *    *

ಕಣ್ಣಲ್ಲಿ, ಎಷ್ಟೆಲ್ಲಾ ಹೇಳದ ಮಾತಿವೆ 
ತುಟಿಯಲ್ಲಿ ಮಾತ್ರ, ಮಾತಿರದ ಮೌನವೇ...
ಉಸಿರಾಟದಲ್ಲೂ ಬರಿ ನಿನ್ನ ಧ್ಯಾನವೇ...

ನಿನಗೆಂದೇ ಇನ್ನು, ಈ ನನ್ನ ಜೀವ,,, 
                         ಕೊಲ್ಲುತಿವೆ ನನ್ನ, ನಿನ್ನ ಹಾವ ಭಾವ... 

ತುಟಿಯೇಕೋ ತೊದಲುತಿದೆ,
ಹೆಸರಿಡಿದು ಹೇಗೆ,,, ಕೂಗುವುದು ಎಂದು...
ಇನ್ನೆಷ್ಟು ಕನಸ ಕಾಣುವುದು, ನೊಂದು
ಪ್ರತಿಸಂಜೆಯಲ್ಲೂ ವಿರಹದಲಿ ಬೆಂದು...
ಮನಸೇಕೋ ತುಡಿಯುತಿದೆ,,,
ಪ್ರೀತಿಯನು ಇಂದೇ,,, ಹೇಳಿಬಿಡು ಎಂದು...
             *    *    *

ನಿನ್ನನ್ನೇ, ನನ್ನೆಲ್ಲಾ ಸಮ್ಮೋಹ ಕಾದಿದೆ
ಎದುರಲ್ಲಿ ಮಾತ್ರ ನೀನಿರದ ನೋವಿದೆ...
ಅನುರಾಗವೆಲ್ಲಾ ಬರಿ ನಿನ್ನೇ, ಬೇಡಿದೆ...

ನಿನಗೆಂದೇ ಇನ್ನು, ಈ ನನ್ನ ಜೀವ,,,
                          ಕೊಳ್ಳುವೆಯ ನೀನೇ, ನನ್ನೆದೆಯ ಹೂವ...

ಮನಸೇಕೋ ತುಡಿಯುತಿದೆ,,,
ಪ್ರೀತಿಯನು ಇಂದೇ,,, ಹೇಳಿಬಿಡು ಎಂದು... 
ಇನ್ನೆಷ್ಟು ದಿವಸ ಕಾಯುವುದು ನೊಂದು,
ಪ್ರತಿಸಂಜೆಯಲ್ಲೂ ವಿರಹದಲ್ಲಿ ಬೆಂದು...
ಎದೆಯೇಕೋ ಎದರುತಿದೆ
ನನ್ನೊಲವ ನೀನು,,, ಒಪ್ಪುವೆಯ ಎಂದು...

                                      - ಸಂಪತ್ ಕುಮಾರ್

Monday, August 04, 2014

ವರ್ಣವೇ...

ಮನದ ಮಳೆಬಿಲ್ಲಿನಲ್ಲಿ, ಮೂಡಿಬಂದ ವರ್ಣವೇ
ನೂರೊಂದು ಕಾಲಕು, ಮಿನುಗುತಿರು ಹೀಗೆಯೇ...
ಗೆಳತಿ ನೀ ನಕ್ಕರಿಲ್ಲಿ, ನಾಚಿಕೊಂತು ಸ್ವರ್ಣವೇ,
ಇನ್ನೆಲ್ಲಾ ಕಾಲಕು, ನಗುತಲಿರು ಹೀಗೆಯೇ...
* * * * *

ಈ ಸ್ನೇಹ,
ಸನ್ನಾಹ,,,
ಎಂದಿಗೂನು ಸುಂದರ. 
ನಮ್ಮಲ್ಲಿ,
ಇನ್ನೆಂದೂ,
ಬಾರದಿರಲಿ ಅಂತರ...

ಜೊತೆಯಿರಲು ನೀನು, ಮರೆತೇ ಹೋದೆ ನಾನು,,,
ಬೇಸರಿಕೆ ಎಂದರೇನು...?

* * * * *
ದಿನದ ಇಳಿಸಂಜೆಯಲ್ಲಿ, ಬಾನಗೆಂಪು ವರ್ಣವೇ
ಇನ್ನೆಲ್ಲಾ ಸಂಜೆಗೂ, ಹೊಳೆಯುತಿರು ಹೀಗೆಯೇ...
* * * * *

ನೀನಾಗೇ
ಬಂದಾಗ
ಹಾಗೇನೇ ಹತ್ತಿರ,,,
ಏಕಿಷ್ಟು
ಉಲ್ಲಾಸ
ನಾನರಿಯೆ ಉತ್ತರ...

ದಡವಾದರೆ ನೀನು, ಈಜಿ ಸೇರುವೆ ನಾನು,,,
ಸಾಗರವೇ ಬಂದರೇನು...?

* * * * *
ನದಿಯ ತಿಳಿನೀರಿಗಿಂತ, ಶುಭ್ರವಾದ ವರ್ಣವೇ
ಇನ್ನೆಲ್ಲಾ ಕಾಲಕು, ಹರಿಯುತಿರು ಹೀಗೆಯೇ...
ಮನದ ಮಳೆಬಿಲ್ಲಿನಲ್ಲಿ, ಮೂಡಿಬಂದ ವರ್ಣವೇ
ನೂರೊಂದು ಕಾಲಕು, ಮಿನುಗುತಿರು ಹೀಗೆಯೇ...

                                 - ಸಂಪತ್ ಕುಮಾರ್

ನೀನೇ ತಾನೇ..?


ನೀನೇ ತಾನೇ, ನನ್ನ ಕನಸುಗಳು
ನಿನ್ನಿಂದಾನೇ ಎಲ್ಲ ಸೊಗಸುಗಳು
ಇನ್ನು ಏನೇ, ನಿನ್ನ ಮುನಿಸುಗಳು?
ನಕ್ಕುಬಿಡೇ ಒಮ್ಮೆ,
ಒಂದಾಗಲಿ ನಮ್ಮ ಮನಸುಗಳು...
    *    *    *

ಹೋಗೋಣ ಇನ್ನು, ಹಾಗೆ ತುಸು ದೂರ
ಕಾಯುತಿದೆ ನಮ್ಮ, ಆ ತುಂಗೆ ತೀರ...
ಮರಳ ಗೂಡನು ಕಟ್ಟಿ ಆಡೋಣ ಬಾ,,,
ಬೆರಳ ಕೂಡಿಸಿ ಹೆಸರ ಗೀಚೋಣ ಬಾ...
ನೆರಳ ನೋಡುತ, ಒರಗಿ ಕೂರೋಣ ಬಾ... 

ಚುಕ್ಕಿ ತಾರೆ ರತ್ನಗಳಿಗು, ಮಿಕ್ಕುಮೀರಿ ಮಿಂಚುವಂತ,,,
ನೀನೇ ತಾನೇ, ನನ್ನ ಬೆರಗುಗಳು
ನಿನ್ನಿಂದಾನೆ ಎಲ್ಲ, ಸೊಬಗುಗಳು
ಇನ್ನು ಏಕೇ ಸಣ್ಣ ಕೊರಗುಗಳು?
ಸಿಕ್ಕುಬಿಡೇ ಒಮ್ಮೆ,
ಹೆಚ್ಚಾಗಲಿ ನಮ್ಮ ಸಲುಗೆಗಳು... 
    *    *    * 

ನಾನಾದೆ ನಿನ್ನ, ಪ್ರೀತಿ ಸಾಲಗಾರ
ತೀರಿಸುವೆ ಎಲ್ಲ, ಜೀವನದ ಪೂರ... 
ಬದುಕ ಜಾಡನು ಜೊತೆ ಸಾಗೋಣ ಬಾ,,,
ದನಿಯ ಕೂಡಿಸಿ ಜೊತೆ ಹಾಡೋಣ ಬಾ,,,
ಒಲವ ಮೋಡದಿ ಮಳೆಯಾಗೋಣ ಬಾ...

ಬೀಳೋ ಎಲ್ಲ ಸ್ವಪ್ನಗಳಲು, ತೇಲಿಬಂದು ಸೇರುವಂತ,,,
ನೀನೇ ತಾನೇ, ನನ್ನ ಮಿಡಿತಗಳು
ನಿನ್ನಿಂದಾನೆ ಎಲ್ಲ ತುಡಿತಗಳು
ಇನ್ನು ಎಷ್ಟೇ, ನಿನ್ನ ಸೆಳೆತಗಳು?
ಅಪ್ಪಿಬಿಡೇ ಒಮ್ಮೆ,
ಒಂದಾಗಲಿ ಎದೆ ಬಡಿತಗಳು...


                                                                     - ಸಂಪತ್ ಕುಮಾರ್

Friday, July 18, 2014

ಕೇಳೆನ್ನ ಒಲವೇ,,,


ಕೇಳೆನ್ನ ಒಲವೇ,,, ನನ್ನದೆಯ ಹಾಡನ್ನೊಮ್ಮೆ...
ಪ್ರತಿಯೊಂದು ಸಾಲೆಲ್ಲವೂ, ಕುರಿತಾಗಿಯೇ ನಿನ್ನೇ...
ಕೇಳೆನ್ನ ಒಲವೇ,,, ನನ್ನದೆಯ ಹಾಡನ್ನೊಮ್ಮೆ...
ಪ್ರತಿಯೊಂದು ಸಾಲೆಲ್ಲವೂ, ಕುರಿತಾಗಿಯೇ ನಿನ್ನೇ...
*    *    *

ಕಣ್ಣೆದುರು ನೀನಿರೆ,
ಮೈಮರೆತು ಕೂರುವೆ,..
ಉಳಿದೆಲ್ಲವಾ ಬಿಟ್ಟು, ಹೇಗಿತ್ತೋ ಹಾಗೆಯೇ...
ನೀ ಕಾಣದಿದ್ದರೂ,
ಮೈಮರೆತು ಕೂರುವೆ,.. 
ನೆನಪೆಲ್ಲವಾ ಬಿಚ್ಚಿ, ಉನ್ಮತ್ತನಾಗಿಯೇ...

ಮೀಸಲು ಈ ಹೃದಯ, ಎಂದಿಗೂ ನಿನಗಾಗಿ..
ಬೇಡವೇ ಬೇರೇನೂ, ಪ್ರೀತಿಯ ಬದಲಾಗಿ...

*    *    *
ಹೇಳೆನ್ನ ಒಲವೇ,,, ಪ್ರೀತಿಸುವ ಮಾತನ್ನೊಮ್ಮೆ...
ಪ್ರತಿಯೊಂದು ಮಾತಲ್ಲಿಯೂ, ನೆನೆಯುವೆನು ನಿನ್ನೇ...
ಕೇಳೆನ್ನ ಒಲವೇ,,, ನನ್ನದೆಯ ಹಾಡನ್ನೊಮ್ಮೆ...
ಪ್ರತಿಯೊಂದು ಸಾಲೆಲ್ಲವೂ, ಕುರಿತಾಗಿಯೇ ನಿನ್ನೇ...
*    *    *

ಜೊತೆಯಾಗಿ ಬಂದರೆ
ನೆರಳಂತೆ ಕಾಯುವೆ,..
ನಿನ್ನ ಪಾದವಾ ಹೊತ್ತು, ಅಂಗೈಯ ಮೇಲೆಯೇ...
ಜೊತೆಯಾಗದಿದ್ದರೂ
ನಿನಗೆಂದೆ ಕಾಯುವೆ,.. 
ಹೂವೆಲ್ಲವಾ ಚೆಲ್ಲಿ, ನೀ ಬರುವ ದಾರಿಗೇ...

ಬೀಸಿದೆ ತಂಗಾಳಿ, ನೀನಗಲು ಚೆಲುವಾಗಿ... 
ಬಾಳುವೆ ಇನ್ನೆಂದೂ, ನಿನ್ನದೇ ಸಲುವಾಗಿ...
*    *    *

ಹೇಳೆನ್ನ ಒಲವೇ,,, ನನ್ನೆಸರ ಉಸಿರಲ್ಲೊಮ್ಮೆ...
ಪ್ರತಿಯೊಂದು ಉಸಿರಲ್ಲಿಯೂ, ಪ್ರೀತಿಸುವೆನು ನಿನ್ನೇ... 
ಕೇಳೆನ್ನ ಒಲವೇ,,, ನನ್ನದೆಯ ಹಾಡನ್ನೊಮ್ಮೆ...
ಪ್ರತಿಯೊಂದು ಸಾಲೆಲ್ಲವೂ, ಕುರಿತಾಗಿಯೇ ನಿನ್ನೇ...

                                      - ಸಂಪತ್ ಕುಮಾರ್

Tuesday, May 20, 2014

ಕೇಳಬಹುದ, ಕೇಳಬಾರದ...?


 Gajakesari Movie Song - My Version
ಇಷ್ಟು ದಿವಸ ಇರಲಿಲ್ವಲ್ಲ, ಈಗ್ಯಾಕೆ ಬಂದೆ
ಕೇಳಬಹುದ, ಕೇಳಬಾರದ...?
ಪುಣ್ಯಾತಗಿತ್ತಿ Boy-Friend ಇನ್ನು, Contact ಅಲ್ಲಿ ಅವ್ನ
ಕೇಳಬಹುದ, ಕೇಳಬಾರದ...?

ಪಕ್ಕದಲ್ಲಿ ಕೂರೋಕೆ, Permission ಸಿಗಬಹುದಾ,
ಯಾವುದಕ್ಕೂ ಒಂದ್ ಸಾರಿ ಕಣ್ತುಂಬ ನೋಡಬಾರದಾ,
ನಾ,,, ಹಿಂಗೆಲ್ಲಾ ಆಡ್ತಿದ್ರು,
ನೀ,,, ನಿನ್ ಪಾಡಿಗೆ ಇರಬಹುದಾ..???

ಪುಣ್ಯಾತಗಿತ್ತಿ Boy-Friend ಇನ್ನು, Contact ಅಲ್ಲಿ ಅವ್ನ
ಕೇಳಬಹುದ, ಕೇಳಬಾರದ...?
ಇಷ್ಟು ದಿವಸ ಇರಲಿಲ್ವಲ್ಲ, ಈಗ್ಯಾಕೆ ಬಂದೆ
ಕೇಳಬಹುದ, ಕೇಳಬಾರದ...? 

*    *    *    *    *

ನಿನ್ನ ನೋಡಿ ತಲೆ ಕೆಡಿಸಿಕೊಂಡೋರ್, ಬೇಜಾನ್ ಅವ್ರೆ
ತಲೆ ಸರಿ ಮಾಡ್ಕೊಂಡೋನು, ನಾನೊಬ್ಬನೇನೆ... 
ನಮ್ಮ Listನಲ್ಲೂ Time Pass ಹುಡುಗೀರು ಅವ್ರೆ
ಪ್ರೀತಿ ಪ್ರೇಮ ಶುರುಮಾಡಿದೊಳು, ನೀನೊಬ್ಬಳೇನೆ...

ಇದೇ ರೀತಿ ಎಲ್ಲಿ ತನಕ Follow ಮಾಡ್ತಿರಬೇಕೆ...? Reality ಚೆಂದ ಅಲ್ವ, ಬರಿ ಕನಸೇ ಯಾಕೆ...?
Bike ಒಮ್ಮೆ ಹತ್ತಿದ್ರೆ, Development ಆಗಬಹುದಾ...

ತುಂಬಾ ಏನ್ ಕೇಳೊಲ್ಲಾ, ಮನೆವರೆಗೂ ಬರಬಹುದಾ...

ನಂಗೆ,,, ಇಷ್ಟೊಂದು Romance...
ನೀನ್,,, ಕಂಜೂಸ್ ಆಗಿ ಇರಬಹುದಾ...???

ಪುಣ್ಯಾತಗಿತ್ತಿ Boy-Friend ಇನ್ನು, Contact ಅಲ್ಲಿ ಅವ್ನ
ಕೇಳಬಹುದ, ಕೇಳಬಾರದ...?
ಇಷ್ಟು ದಿವಸ ಇರಲಿಲ್ವಲ್ಲ, ಈಗ್ಯಾಕೆ ಬಂದೆ
ಕೇಳಬಹುದ, ಕೇಳಬಾರದ...?
*    *    *    *    *

ನಂದು ಇನ್ನು ಮುಕ್ತಿ ಸಿಗದ, ಪ್ರೇಮ ಯೋಗ
ನಿನ್ನ ಪ್ರೇಮ ದಾಸ ನಾನು, ದೇವಿ ನೀನು...
ಎಷ್ಟು ಹೊತ್ತು ಕಂಡ್ರೆ ನೀನು, ಅಷ್ಟೇ ಭಾಗ್ಯ
Time-Sync ಆಗ್ತಾ ಇಲ್ಲ, ಏನು ಮಾಡ್ಲಿ ನಾನು...

ನನ್ನ ಬಗ್ಗೆ ಲವ್ವು ಗಿವ್ವು ಚೂರು ಇಲ್ವಾ ನಿಂಗೆ...?
ಇಬ್ಬರು ಕುಳಿತು ಮಾತಾಡೋಣ ಬಾ Coffee-Day ಒಳಗೆ...?
Sudden ಆಗಿ Break ಹೊಡಿದ್ರೆ, ಅದು ದೊಡ್ಡ ಅಪರಾದ...
ಹಾಗಂತ ಸುಮ್ನಿದ್ರೆ, Bike ಓಡಿಸೋರಿಗೆ ಅಪವಾದ...

ನಾ,,, ಹಿಂದೆ ಹಿಂದೆ ಬಂದಾಗ...
ನೀ,,, ಕಣ್ತಪ್ಪಿಸಿ ಹೋಗಬಹುದಾ...??? 

ಪುಣ್ಯಾತಗಿತ್ತಿ Boy-Friend ಇನ್ನು, Contact ಅಲ್ಲಿ ಅವ್ನ
ಕೇಳಬಹುದ, ಕೇಳಬಾರದ...?

                                                         - ಸಂಪತ್ ಕುಮಾರ್

Thursday, May 08, 2014

ಪ್ರೀತಿಸದಿರು ಈಗಲೇ ನನ್ನ

ಪ್ರೀತಿಸದಿರು ಈಗಲೇ ನನ್ನ,
ಕಾಯಿಸುವೆಯಾ ತುಸು ಇನ್ನ,
ನನ್ನೊಳಗೇ ಪ್ರೀತಿಸುವ ಪರಿ ಎಷ್ಟು ಚೆನ್ನ,
ಸವಿಯಬೇಕಿದೆ ಇನ್ನೂ ಈ ವ್ಯಾಮೋಹವನ್ನ... 
        * * * 
        * * *
ಬರುತಲೆ ಇರಲಿ, ನಿನ್ನೆಲ್ಲ ಸುದ್ದಿಗಳು,
ನನ್ನೆದೆಯ ವರದಿಯಲಿ... 
ಕಾಯುತಲಿರಲಿ, ನನ್ನೆಲ್ಲ ಸ್ವಪ್ನಗಳು,
ನಿನಗಾಗಿ ಸರದಿಯಲಿ...

ಹರಿಯುತಲೇ ಇರಲಿ ಅನುರಾಗ, ನಿನಗಾಗಿ
ಅನುಸರಿಸಿ ಬರಲಿ ಶುಭಯೋಗ, ನಮಗಾಗಿ...
        * * *
        * * * * * *
ನೋಡುತಲಿರು ನನ್ನದೇ ಕಣ್ಣ,
ಮೂಡಿಬರಲಿ ನಿನ್ನದೇ ಬಣ್ಣ...
ಪ್ರೀತಿಸದಿರು ಈಗಲೇ ನನ್ನ,
ಕಾಯಿಸುವೆಯಾ ತುಸು ಇನ್ನ,...
        * * * * * *
        * * *
ಕೂಡುತಲೆ ಇರಲಿ, ಇನ್ನಷ್ಟು ಮುತ್ತುಗಳು
ಪ್ರೀತಿಯನು ಕಲಿಯುತಲಿ...
ಸೇರುತಲಿರಲಿ, ಸಿಕ್ಕಷ್ಟು ಹೊತ್ತುಗಳು
ಹೃದಯಗಳು ನಲಿಯುತಲಿ...

ಸರಿಯದಲೇ ಇರಲಿ ಈ ಸಮಯ, ನಮಗಾಗಿ
ಕನವರಿಸಿ ಕೂರಲಿ ಆ ರವಿಯು, ಬೆರಗಾಗಿ...
        * * *
        * * *
ಭಾವಿಸಿಬಿಡು ನನ್ನಲೇ ನಿನ್ನ
ಧಾವಿಸುವೆನು ನೆನೆಯುವ ಮುನ್ನ...
ಪ್ರೀತಿಸದಿರು ಈಗಲೇ ನನ್ನ,
ಕಾಯಿಸುವೆಯಾ ತುಸು ಇನ್ನ,...
ನನ್ನೊಳಗೇ ಪ್ರೀತಿಸುವ ಪರಿ ಎಷ್ಟು ಚೆನ್ನ,
ಸವಿಯಬೇಕಿದೆ ಇನ್ನೂ ಈ ವ್ಯಾಮೋಹವನ್ನ... 

                                    - ಸಂಪತ್ ಕುಮಾರ್

Wednesday, April 30, 2014

ವಿರಹ ಕಣೆ...

ವಿರಹ ಕಣೆ...
ನಿನ್ನ ವಿನಹ, ಬದುಕು,,,
ಬರಿ ವಿರಹ ಕಣೆ...
ಸಾವೆ ಸನಿಹ ಕಣೆ...
  *  *  *


ನೀಲಿ ಬಾನಂತೆ, ಖಾಲಿ ಜಗವೆಲ್ಲಾ...

ಗಾಳಿಯೂ ಇರದ,
ಪಾಳು ಹೂದೋಟ, ಬಾಳು... ನೀ ಕೇಳು,..
ಸೀಳಿ ಹೋದಂತೆ, ಸಾಲು ಕನಸೆಲ್ಲಾ...
ನಾಳೆಯೇ ಬರದ,
ಹಾಳು ಇರುಳಿದು, ಬಾಳು... ನೀ ಕೇಳು,..


ವಿರಹ ಕಣೆ...

ನಿನ್ನ ವಿನಹ, ಬದುಕು,,,
ಬರಿ ವಿರಹ ಕಣೆ...
ಜೀವ ಕಲಹ ಕಣೆ...
  *  *  *

ಹೂಜಿಯೊಳಗಿಂದ, ಈಜಿ ಹೊರಬಂದು,
ನೀರೆ ಇರದಂತೆ, 
ಮೀನು ಇರಬಹುದೇ, ಹೇಳು... ನೀ ಹೇಳು...
ನಿನ್ನ ಸವಿನೋಟ, ನನ್ನ ಉಸಿರಾಟ,
ನೀನೆ ಇರದಾಗ,
ನಾನು ಇರಲೇಗೆ, ಹೇಳು... ನೀ ಹೇಳು... 

ವಿರಹ ಕಣೆ...
ನಿನ್ನ ವಿನಹ, ಬದುಕು,,,
ಬರಿ ವಿರಹ ಕಣೆ...
ಸಾವೆ ಸನಿಹ ಕಣೆ... 
  *  *  *

ಪ್ರೀತಿ ಕಿರಣ ಕಾಣದಂತ, ತರುಣ ನಾನು,,, ಕರುಣೆ ತೋರು, ತರುಣಿ ನೀನು...

                                                                 - ಸಂಪತ್ ಕುಮಾರ್

Monday, April 14, 2014

ತುಂಬಾ ನೋಡ್ಬಿಟ್ಟೆ,..

 ANNA BOND Movie Song - My Version

ತುಂಬಾ ನೋಡ್ಬಿಟ್ಟೆ, ಲವ್ವು ಆಗ್ತಿದೆ...
ಲವ್ವು ಮಾಡ್ಬಿಟ್ಟೆ, ನೋವು ಆಗ್ತಿದೆ...
ಹೂವ ಕೊಡೋದು ಬಾಕಿ ಉಳಿದಿದೆ
ಟಡನ್ ಟಂಟ ಡನ್...
ಗಿಫ್ಟು ಕೊಟ್ಟಿಲ್ಲ, ಖರ್ಚು ಆಗಿಲ್ಲ
ಲಿಫ್ಟು ಕೊಟ್ಟಿಲ್ಲ, ಕಷ್ಟ ಆಗಿಲ್ಲ
ಸ್ವಲ್ಪ ನಕ್ಕಬಿಟ್ಟೆ, ತುಟಿ ನೋಯ್ತಿಲ್ಲ
ಟಡನ್ ಟಂಟ ಡನ್...  

ಬರುವಾಗ ಒಬ್ಬಳೇ,,, ಹೋಗುವಾಗ ಒಬ್ಬಳೇ,,,
ಜೊತೇಲಿ ನನ್ನ ಕರೆಯೋಕೆ ನಾಚಿಕೆ, ಯಾಕೆ ಲೇ, ಯಾಕೆ ಲೇ?
ಹೇಳೆ ಲೇ, ಹೇಳೆ ಲೇ...
    *    *    *  

ಮೊಬೈಲ್ ಸ್ಕ್ರೀನಿಗೆ, ಕಣ್ಣು ಹೊಡಿತಿನಿ
ಆಫೀಸ್ ಡೋರಿಗೆ, ಡಿಕ್ಕಿ ಹೊಡಿತೀನಿ
ನಿಮಿಷಕ್ಕೆ ಒಂದ್ಸಲ, ತಲೆ ಬಾಚ್ತಿನಿ
ಟಡನ್ ಟಂಟ ಡನ್...
ಅವಳು ಕಂಡರೆ, ಕರಗಿ ಹೋಗ್ತಿನಿ 
ಕಾಣದಿದ್ದರೆ, ಫ್ರೀಜ್ ಆಯ್ತಿನಿ,
ಖಾಲಿ ಗೋಡೆಗೆ ಪೋಜು ಕೊಡ್ತಿನಿ,
ಟಡನ್ ಟಂಟ ಡನ್...  

ನನ್ನ ಹುಡುಗಿ ಯಾಮಾರಿ, ಒಮ್ಮೆ ತಿರುಗಿ ನೋಡಿದರೆ
ಹಾರ್ಟ್ ಒಳಗೆ, ಕರೆಂಟು ಕೊಟ್ಟಂಗ್ ಆಯ್ತದೆ...

ಇವಳೊಮ್ಮೆ ನಕ್ಕರೆ, ಫ್ರೀ ಟೈಮ್ ಸಿಕ್ಕರೆ,
ರೊಮ್ಯಾಂಟಿಕ್ ಸಿನೆಮಾಗೆ ಇವಳನ್ನ, ಕರೆಯಲೇ ಕರೆಯಲೇ...
ಬರ್ತಾಳೆ, ಬರ್ತಾಳೆ...
    *    *    *  

ಕೆಲಸ ಮಾಡದಿದ್ರು ಸಂಬಳ ಕೊಡ್ತಾರೆ
ಸಾಲ ಕೊಟ್ಟವರು, ವಾಪಸ್ ಕೇಳ್ತವ್ರೆ
ಪ್ರೀತಿಯೊಳಗಡೆ ಎಲ್ಲಾ ಮರೆತೋದೆ...
ಟಡನ್ ಟಂಟ ಡನ್...
ನಗು ಬರ್ತದೆ, ಅಳು ಬರ್ತದೆ
ಕೆಲಸದ ಟೈಮ್ ಅಲ್ಲೂ ಕನಸು ಬೀಳ್ತದೆ
ಬ್ಯಾಕ್ ಗ್ರೌಂಡಲಿ ಸಾಂಗು ಕೇಳ್ತದೆ...
ಟಡನ್ ಟಂಟ ಡನ್...

ಲವ್ವು ಕನ್ಫರ್ಮ್ ಆಗ್ದೇನೆ, ಫ್ರೆಂಡ್ಸು ಹತ್ತ್ರ ಚಾಟ್ ಮಾಡಿ,
ಫೋನಿನಲ್ಲಿ ಬ್ಯಾಟರಿ ಖಾಲಿ ಆಗ್ತದೆ...

ಹೇಳ್ತಾನೆ ಹೋದರೆ ಮುಗಿಯೊಲ್ಲ ಗೆಳೆಯರೆ,  
ಸೆಂಟರಲ್ಲಿ ನನ್ನ ಹುಡುಗಿ ಸುಮ್ನೆ ನಗ್ತಳೆ, ನಗ್ತಾಳೆ...
ನನ್ ತಲೆ, ಕೆಡ್ತಲೆ...
    *    *    *

ತುಂಬಾ ನೋಡ್ಬಿಟ್ಟೆ, ಲವ್ವು ಆಗ್ತಿದೆ...
ಲವ್ವು ಮಾಡ್ಬಿಟ್ಟೆ, ನೋವು ಆಗ್ತಿದೆ...
ಹೂವ ಕೊಡೋದು ಬಾಕಿ ಉಳಿದಿದೆ
ಟಡನ್ ಟಂಟ ಡನ್...
ಗಿಫ್ಟು ಕೊಟ್ಟಿಲ್ಲ, ಖರ್ಚು ಆಗಿಲ್ಲ
ಲಿಫ್ಟು ಕೊಟ್ಟಿಲ್ಲ, ಕಷ್ಟ ಆಗಿಲ್ಲ
ಸ್ವಲ್ಪ ನಕ್ಕಬಿಟ್ಟೆ, ತುಟಿ ನೋಯ್ತಿಲ್ಲ
ಟಡನ್ ಟಂಟ ಡನ್...

ಬರುವಾಗ ಒಬ್ಬಳೇ, ಹೋಗುವಾಗ ಒಬ್ಬಳೇ,
ಜೊತೇಲಿ ನನ್ನ ಕರೆಯೋಕೆ ನಾಚಿಕೆ, ಯಾಕೆ ಲೇ, ಯಾಕೆ ಲೇ?
ಹೇಳೆ ಲೇ, ಹೇಳೆ ಲೇ...

                                         - ಸಂಪತ್ ಕುಮಾರ್

Monday, March 17, 2014

ಪ್ರೀತಿಸುತ ಜೀವಿಸುವೆನೇ...

ಪ್ರೀತಿಸುವೆ, ನಿನ್ನ ಹೆಸರನೇ
ಪ್ರೀತಿಸುವೆ, ನಿನ್ನ ಸೊಗಸನೇ
ಪ್ರೀತಿಸುವೆನೇ... ನಿನ್ನೇ ಸೇರೋ ನನ್ನ ದಾರಿನೇ...
ಪ್ರೀತಿಸುವೆ, ನಿನ್ನ ಶ್ವಾಸವಾ
ಪ್ರೀತಿಸುವೆ, ನಿನ್ನ ಸ್ಪರ್ಶವಾ
ಪ್ರೀತಿಸುವೆನೇ... ನಿನ್ನ ಬಳಿಯಿರೊ ನನ್ನ ಹರ್ಷವಾ...

ಪ್ರೀತಿಸುವೆ,.. ನಿನ್ನ ನಸುಕೋಪವಾ
ಪ್ರೀತಿಸುವೆ,... ನಿನ್ನ ಹುಸಿಶಾಪವಾ
ಪ್ರೀತಿಸುವೆ,... ನೀನಿರುವ ಈ ಲೋಕವಾ...
ಪ್ರೀತಿಸುತ ಜೀವಿಸುವೆನೇ... 
              * * *

ನಾನೇನೆ ಧ್ವನಿಯು, ನಿನ್ನ ರಾಗಕೇ
ನಾನೇನೆ ನೆಲವು, ನಿನ್ನ ಪಾದಕೇ
ನಾನೇನೆ ಕಾಂತಿ, ನಿನ್ನ ಹೊಳಪಿಗೆ
ನಾನೇ ತಂಗಾಳಿ, ನಿನ್ನ ಕುರುಳಿಗೆ...

ಹೋಗಿಹುದು ಚಳಿಗಾಲ ನೀ ಮುಟ್ಟಲು,
ನಾನಿರುವೆ ಅನುಗಾಲ ನಿನ್ನ ಸುತ್ತಲೂ, 
ನೀನೊಮ್ಮೆ ಕೈ ಹಿಡಿಯಲು...

ಪ್ರೀತಿಸುವೆ,.. ಅನ್ನೋದೆ ಸಂಜೀವಿ
ಪ್ರೀತಿಸುತ,.. ನಾನಾದೆ ರಾಜೀವಿ
ಪ್ರೀತಿಸುವೆ,.. ನೀ ಪ್ರೀತ್ಸೋ ಈ ಪ್ರೀತಿಯಾ...
ಪ್ರೀತಿಸುತ ಜೀವಿಸುವೆನೇ... 
              * * *

I Just Love, ನಿನ್ನ ನೋಟವಾ
I Just Love, ನಿನ್ನ ರೂಪವಾ
ಪ್ರೀತಿಸುವೆನೇ... ನಮ್ಮ ನಡುವಿನ ಈ ಮೋಹವಾ...
I Just Love, ನಿನ್ನ ಊಹೆಯಾ
I Just Love, ನಿನ್ನ ಮಾಹೆಯಾ
ಪ್ರೀತಿಸುವೆನೇ... ನಿನ್ನಂತಿರೋ ನಿನ್ನ ನೆರಳನೇ... 

ಪ್ರೀತಿಸುವೆ,.. ಈ ಮಧುರ ನೋವೆಲ್ಲವಾ
ಪ್ರೀತಿಸುವೆ,.. ನಿನ್ನ ಮನಸ ಮಾತೆಲ್ಲವಾ
ಪ್ರೀತಿಸುವೆ,.. ನಿನ್ನ ಕನಸ ಹಾಡೆಲ್ಲವಾ... 
ಪ್ರೀತಿಸುತ ಜೀವಿಸುವೆನೇ... 
                                    - ಸಂಪತ್ ಕುಮಾರ್

Thursday, March 13, 2014

ಪ್ರೀತಿಯಾಗಿದೆ...

ಮಾಯದ ಕಣ್ಣು ನಿನ್ನ ನೋಡಿಯಾಗಿದೆ,,,
ರೆಪ್ಪೆಮಿಟುಕೋ ಮುನ್ನ ಪ್ರೀತಿಯಾಗಿದೆ...
ಸ್ವಪ್ನದಿ ನನ್ನ ನಿನ್ನ ಜೋಡಿಯಾಗಿದೆ,,,

ಒಪ್ಪಿಕೊಳ್ಳೇ ಎನ್ನ,.. ಭೀತಿಯಾಗಿದೆ...
    *    *    *


ಹಾಗೇನು,
ಹೀಗೇನು,
ಹೇಗಿದ್ದರೆ ಏನು...
ನಾನಂತು ನಿನಗೇ ಅಲ್ಲವೇ...?
ಅಂದೇನು,
ಇಂದೇನು,
ಎಂದಿದ್ದರೆ ಏನು...
ನೀನಂತು ನನಗೇ ಅಲ್ಲವೇ...?

ಮತ್ತೆ ಮತ್ತೆ ನೆನೆದು ನಿನ್ನ,
ಮೂರಿದ್ದ ಕನಸುಗಳು, ನೂರಾಗಿವೆ...
ಪ್ರೀತಿ ಮಾಡೆ ನನ್ನ, ಆಸೆಗಳು ನೂರಾರಿವೆ...

    *    *    *
ಮೋಹಕ ಹೆಣ್ಣು ನಿನ್ನ ನೋಡಿಯಾಗಿದೆ,,,
ಮಾತನಾಡೋ ಮುನ್ನ ಪ್ರೀತಿಯಾಗಿದೆ...
ನನ್ನಲಿ ಚೆಂದದೊಂದು ಮೋಡಿಯಾಗಿದೆ,,,

ಅಪ್ಪಿಕೊಳ್ಳೇ ಎನ್ನ... ಭೀತಿಯಾಗಿದೆ... 
    *    *    *


ಇಲ್ಲೇನು,
ಅಲ್ಲೇನು
ಎಲ್ಲಿದ್ದರೇ ಏನು...
ನೀ ನನ್ನಲೇ ಇಲ್ಲವೇ...?
ಬೆಳಗಲ್ಲು,
ಸಂಜೇಲು,
ಬೆಳದಿಂಗಳಿರುಳಲ್ಲು...
ಸಂಗಾತಿ ನೀನೇ ಅಲ್ಲವೇ...?  

ಮತ್ತೆ ಮತ್ತೆ ಬಯಸಿ ನಿನ್ನ
ಮೂರಿದ್ದ ಮಾತುಗಳು, ನೂರಾಗಿವೆ...
ಪ್ರೀತಿ ಮಾಡೆ ನನ್ನ, ಮುತ್ತುಗಳು ನೂರಾರಿವೆ...
    *    *    *

ಜೀವವೇ ಜಾರಿ ನಿನ್ನ ಕೂಡಿಯಾಗಿದೆ
ಕಾಯಲಾರೇ ಇನ್ನ, ಪ್ರೀತಿಯಾಗಿದೆ...
ನಿನ್ನದೇ ಧ್ಯಾನವೀಗ ರೂಢಿಯಾಗಿದೆ
ಒಪ್ಪಿಕೊಳ್ಳೇ ಎನ್ನ,.. ಭೀತಿಯಾಗಿದೆ...


                           - ಸಂಪತ್ ಕುಮಾರ್

Sunday, February 02, 2014

ನೋಡಬಾರದೇನು ಒಮ್ಮೆ

ಪ್ರೇಮಿ    : ನೋಡಬಾರದೇನು ಒಮ್ಮೆ ನನ್ನೀ ಕಣ್ಣನು,
ಪ್ರೇಮಿ    : ಕಾಣಲಾರೆ ನಿನ್ನ ಬಿಟ್ಟು ಬೇರೆ ಹೆಣ್ಣನು. 
ಪ್ರೇಮಿ    : ಮರೆತಾಯಿತು ನನ್ನೇ ನಾನು,
ಪ್ರೇಮಿ    : ನೀನಿಲ್ಲದೆ ಸೊನ್ನೆ ನಾನು... 
ಪ್ರೇಯಸಿ : ನನ್ನಲೂ ಪ್ರೀತಿ ಮೂಡಿದೆ,
ಪ್ರೇಯಸಿ : ನಾಚಿಕೆ ಅಡ್ಡಿಯಾಗಿದೆ. 
ಪ್ರೇಯಸಿ : ಹೇಳಬಾರದೇನು ಒಮ್ಮೆ ನೀನೇ ಎಲ್ಲವಾ,
ಪ್ರೇಯಸಿ : ಕಾಯಬೇಕು ಇನ್ನು ಎಷ್ಟು ಸಾಯಂಕಾಲವಾ..?
               * * * * *

ಪ್ರೇಮಿ    : ಮಾತೇ ಆಡದಿದ್ದರೂ
ಪ್ರೇಮಿ    : ಸೋತು ಹೋಗಲಿಲ್ಲವೇ
ಪ್ರೇಮಿ    : ನಿನ್ನ ಮುಂದೆ, ನಾನು...
ಪ್ರೇಮಿ    : ಎದುರಿಗೆದುರು ಸಿಕ್ಕರೂ
ಪ್ರೇಮಿ    : ಮೌನದಲ್ಲೇ ನಕ್ಕರೂ
ಪ್ರೇಮಿ    : ಅಂಜಿ ನಿಂತೆ, ನಾನು... 

ಪ್ರೇಯಸಿ : ಮನದ ನದಿಯಲಿ ಆಸೆ ದೋಣಿಯಾ,,, ದಿನವು ನಡೆಸುವಾ, ನಾವಿಕ ಆದೆಯಾ...
ಪ್ರೇಮಿ    : ತುಟಿಯ ತುದಿಯಲಿ ಹೇಗೆ ತಡೆಯಲಿ,,, ಉಕ್ಕಿ ಬರುತಿಹಾ, ಭಾವುಕ ಭಾಷೆಯ...

               * * * * *
ಪ್ರೇಮಿ    : ನೀಡಬಾರದೇನು ಒಮ್ಮೆ ನಿನ್ನೀ ಕೈಯನು,
ಪ್ರೇಮಿ    : ಸೇರಲಾರೆ ನಿನ್ನ ಬಿಟ್ಟು ಬೇರೆ ಯಾರನು... 
ಪ್ರೇಯಸಿ : ಚಾಚಬಾರದೇನು ನೀನೇ ನಿನ್ನೀ ತೋಳನು,
ಪ್ರೇಯಸಿ : ಬಾಳಬೇಕು ಅಲ್ಲೇ ನನ್ನ ಪೂರ ಬಾಳನು... 
               * * * * *

ಪ್ರೇಮಿ    : ನಿನ್ನ ಬಿಡುವಿನಲ್ಲೆಲ್ಲಾ
ಪ್ರೇಮಿ    : ಜೊತೆಗೆ ಕೂತರೆ ನಾನು,
ಪ್ರೇಮಿ    : ಕಳೆಯದೇನು ಬೇಸರ...
ಪ್ರೇಮಿ    : ಮುಗ್ದಳಾಗಿ ನೋಡುತ್ತಾ
ಪ್ರೇಮಿ    : ನಾಚಿಕೊಂಡರೆ ನೀನು,
ಪ್ರೇಮಿ    : ಸೆಳೆಯದೇನು ಕಾತುರ... 

ಪ್ರೇಯಸಿ : ಹಲವು ತರದಲಿ ಒಲವು ಮೂಡಿದೆ,,, ನೀನೆ ಗುರ್ತಿಸಿ, ಅರ್ಥವಾ ಹೇಳೆಯಾ...
ಪ್ರೇಮಿ    : ದಿನವು ಮನದಲಿ ನಿನ್ನ ಬಿಂಬವಾ,,, ನಾನೆ ಅರ್ಚಿಸಿ, ಪ್ರಿಯತಮ ಆದೆನಾ...

               * * * * *
ಪ್ರೇಮಿ    : ಹಾಡಬಾರದೇನು ಒಮ್ಮೆ ನನ್ನೀ ಹಾಡನು,
ಪ್ರೇಮಿ    : ಕೇಳಲಾರೆ ನಿನ್ನ ಬಿಟ್ಟು ಯಾರ ಮಾತನೂ. 
ಪ್ರೇಮಿ    : ಮರೆತಾಯಿತು ನನ್ನೇ ನಾನು,
ಪ್ರೇಮಿ    : ನೀನಿಲ್ಲದೇ ಸೊನ್ನೆ ನಾನು... 
ಪ್ರೇಯಸಿ : ನನ್ನಲೂ ಪ್ರೀತಿ ಮೂಡಿದೆ,
ಪ್ರೇಯಸಿ : ನಾಚಿಕೆ ಅಡ್ಡಿಯಾಗಿದೆ. 
ಪ್ರೇಯಸಿ : ಹೇಳಬಾರದೇನು ಒಮ್ಮೆ ನೀನೆ ಎಲ್ಲವಾ
ಪ್ರೇಯಸಿ : ಎಂದಿಗೂನು ನಿನ್ನ ಗೆಳತಿ ನಾನೇ ಅಲ್ಲವಾ...

                                                                     - ಸಂಪತ್ ಕುಮಾರ್ 

Friday, January 17, 2014

ಹಾಸನ


ಇದು,
ನಮ್ಮೊಲ್ಮೆಯ ಹಾಸನ,
ನವೋಲ್ಲಾಸ ಚೇತನ.
ಬಿಸಿಲ್ ಮಳೆಗಳ ಹೂರಣ,
ಚಳಿ ಮಂಜಿನ ಚಾರಣ.
ಗಿರಿಮಲೆಗಳ ತೋರಣ,
ಕನ್ನಡ ಕಲಾ ಭೂಷಣ...

ಇಲ್ಲಿ,
ಕಾಣಿಸದೇನ್ ಸಗ್ಗ,
ಶಿಲ್ಪ ಕಲೆಗಳ ಕಗ್ಗ.
ಜಿನನಾಥನ ಯೋಗ,
ಹೊಯ್ಸಳ ತೋಳ್ ಖಡ್ಗ.
ಮಲೆನಾಡಿನ ದಿಬ್ಬ,
ಉದಯಾಸ್ತಮ ಹಬ್ಬ...

ಇಲ್ಲಿ,
ಶಿಲೆ ಬಲ್ಲುದು ಶಾಂತಲೆ ನೃತ್ಯ,
ನೆಲ ಬಲ್ಲುದು ಧರ್ಮದ ಸತ್ಯ.
ಜನ ಬಲ್ಲುದು ನೇಗಿಲ ನೇಮ,
ಜಲ ಬಲ್ಲುದು ಹೇಮೆಯ ಪ್ರೇಮ.
ಹವೆ ಬಲ್ಲುದು ಬಿಸಿಲೆಯ ತಂಪು,
ಸುಖ ಬಾಳ್ವೆಯ ಸಮ್ಮೋಹಕ ಕಂಪು...

ಇದು,
ಸಪ್ತಮಾತೃಕೆ ಶ್ರೀವನ,
ಚೆನ್ನಕೇಶವ ನಂದನ.
ಹಸಿರ್ತೋಟದ ಭೂವನ
ಕುಳಿರ್ಗಾಳಿಯ ಗಾಯನ.
ನವಸ್ಪೂರ್ತಿಯ ಸಿಂಚನ
ಕವಿರಸಿಕರಿಗೆ ಅಂಗಣ...

ಬಾ,,, ಕಡೆಯುವ ಎದೆ ಎದೆಯಲು,
ಸವಿ ಜೀವನ ಶಾಸನ...
ಇದೇ ಅಲ್ಲವೇ
ಕವಿ ಶಿಲ್ಪಿಗೆ ಸಿಂಹಾಸನ...

                                    - ಹಾಸನಿಗ
                                      ಕೆ. ಸಿ. ಸಂಪತ್ ಕುಮಾರ್

Wednesday, January 08, 2014

ನನ್ನ ಮೆಚ್ಚಿನ ಕಾದಂಬರಿಗಳು...

ತ. ರಾ. ಸುಬ್ಬರಾವ್

  • 1. ಸಿಡಿಲ ಮೊಗ್ಗು    
        ಕಿರು ಪರಿಚಯ -
        ಹೊಯ್ಸಳ ಎರೆಯಂಗ ದೇವನು, ಚಾಲುಕ್ಯ ವಿಕ್ರಮಾದಿತ್ಯನ ಸಾಮಂತನಾಗಿದ್ದ ಕಾಲದಲ್ಲಿ ಚಾಲುಕ್ಯ ಉತ್ಸವಕ್ಕೆಂದು ಎರೆಯಂಗನು ದ್ವಾರಸಮುದ್ರದಿಂದ ತಂದೆ ವಿನಯಾದಿತ್ಯ, ಪತ್ನಿ ಏಚಲಾದೇವಿ, ಮಕ್ಕಳಾದ ಬಲ್ಲಾಳ, ಬಿಟ್ಟಿದೇವ(ವಿಷ್ಣು ವರ್ಧನ) ಮತ್ತು ಉದಯಾದಿತ್ಯನೊಂದಿಗೆ ಸಕುಟುಂಬ ಸಮೇತನಾಗಿ ಆಗಮಿಸಿದ್ದಾಗ, ಅಲ್ಲಿ ಚಾಲುಕ್ಯನ ಅಧಿಕಾರಿ ಮಾರಸಿಂಹನು ಅವರ ಆತಿಥ್ಯದ ಜವಾಬ್ದಾರಿ ಹೊತ್ತು, ಉಪಚರಿಸುತ್ತಾನೆ. ಅಲ್ಲಿ ಬಿಟ್ಟಿದೇವ ಮತ್ತು ಮಾರಸಿಂಹನ ಪುತ್ರಿ ಶಾಂತಲೆಯ ಪ್ರೇಮೋದಯ, ಚಾಳುಕ್ಯ ಚಕ್ರವರ್ತಿಯೊಡನೆ ಬಿಟ್ಟಿದೇವನು ಸ್ವಾಭಿಮಾನ ಬಿಡದೆ ಸೆಟೆದು ನಿಂತು ವರ್ತಿಸಿ, ಮುಂದೆ ತಾನೂ ಚಕ್ರವರ್ತಿಯಾಗುವ ಸೂಚನೆಯ ಸಿಡಿಲು, ಮೊಗ್ಗಿನ ರೂಪದಲ್ಲಿ ವ್ಯಕ್ತವಾಗುತ್ತದೆ.
        ಶಾಂತಲೆಯ ರೂಪ ಲಾವಣ್ಯಗಳ ವರ್ಣನೆ, ಅವಳು ಹೂ ಕೊಯ್ಯಲು ಬಂದಾಗ ಅವಳ ಮತ್ತು ಹೂವುಗಳ ನಡುವಣ ಸಂಭಾಷಣೆಯ ಸೊಬಗು ಓದಿಯೇ ಸವಿಯಬೇಕು.
  • 2. ಹೊಯ್ಸಳೇಶ್ವರ ವಿಷ್ಣುವರ್ಧನ
        ಕಿರು ಪರಿಚಯ -
        ಹೊಯ್ಸಳ ಎರೆಯಂಗ ದೇವನ ತರುವಾಯ ಪಟ್ಟಕ್ಕೆ ಬಂದ ಅವನ ಹಿರಿಯ ಮಗ ಬಲ್ಲಾಳನ ಕಾಲದಲ್ಲಿ ಅವನು ಕಾಯಿಲೆಯಿಂದ (ಹುಟ್ಟು ವ್ಯಾಧಿ) ಬಲಳುತ್ತಿರುವ ವೇಳೆಯಲ್ಲಿ ಚಾಲುಕ್ಯ ಸಾಮಂತನಾದ ಜಯಸಿಂಹ ಹೊಯ್ಸಳರ ಮೇಲೆ ದಂಡೆತ್ತಿ ಬರುತ್ತಾನೆ. ಚಾಲುಕ್ಯರ ಸಾಮಂತರಾಗಿದ್ದ ಹೊಯ್ಸಳರು, ರಕ್ಷಣೆ ನಿರೀಕ್ಷಿಸಿದ್ದ ದಿಕ್ಕಿನಿಂದ ಆಕ್ರಮಣ ಎದುರಿಸಬೇಕಾದಾಗ, ಬಲ್ಲಾಳನು ಚಾಲುಕ್ಯರ ಬೆನ್ನು ಹಿರಿತದ ದ್ರೋಹಕ್ಕೆ ಸಿಡಿದೆದ್ದು, ವ್ಯಾಧಿಯನ್ನು ಲೆಕ್ಕಿಸದೆ ಮಾಡಿದ ಹೋರಾಟ ಯುಗ ಯುಗಗಳಾಚೆಗೂ ಜನ ಮನಗಳಲ್ಲಿ ಉಳಿದಿರುವಂತದ್ದು, ಆ ಯುದ್ದದಲ್ಲಿ ಜಯಸಿಂಹನನ್ನು ಸೋಲಿಸಿ, ಸಾವಿಗಿಂತಲೂ ನೀಚವಾಗಿ ಅವಮಾನಿತನನ್ನಾಗಿ ಮಾಡಿ, ವೀರ ಬಲ್ಲಾಳನೆಂದು ಬಿರುದಾಂಕಿತನಾಗುತ್ತಾನೆ. ನಂತರ ಅವನ ಅಕಾಲಿಕ ಸಾವಿನ ತರುವಾಯ ಬಿಟ್ಟಿದೇವ (ವಿಷ್ಣುವರ್ಧನ) ರಾಜನಾಗಿ ತಲಕಾಡನ್ನು ಚೋಳರ ಆಳ್ವಿಕೆಯಿಂದ ಮುಕ್ತಗೊಳಿಸಿ, ತಲಕಾಡುಗೊಂಡ ಎಂಬ ಬಿರುದು ಪಡೆದು ಕನ್ನಡಿಗರ ಕೀರ್ತಿ ಕಳಶವಾಗಿತ್ತಾನೆ.
        ಕೃತಿ ಅತಿಮೋಹಕವಾಗಿದ್ದು, ಹೊಯ್ಸಳರ ಮೇಲಿನ ಕನ್ನಡಿಗರ ಅಭಿಮಾನವನ್ನು ನೂರ್ಮಡಿಗೊಳಿಸುತ್ತದೆ.
  • 3. ಕಸ್ತೂರಿ ಕಂಕಣ 
        ( ಚಿತ್ರದುರ್ಗದ ಐತಿಹಾಸಿಕ ಕಾದಂಬರಿ ಸರಣಿ - 1 )
        ಕಿರು ಪರಿಚಯ -
        ದುರ್ಗದ ಪಾಳೆಯಗಾರ ಕಸ್ತೂರಿ ರಂಗಪ್ಪ ನಾಯಕನ ಕಾಲದಲ್ಲಿ ನಡೆದ, ಸೀರ್ಯ ಪಾಳೆಯಗಾರರು ಮಾಡಿದ ಮೋಸಕ್ಕೆ ಪ್ರತಿಫಲವಾಗಿ ನಡೆದ ಯುದ್ದದ ಕಥಾನಕ. ಇಲ್ಲಿ ಆಗಿನ ರಾಜರುಗಳು ಪರ ಸಂಸ್ಥಾನಗಳನ್ನು ಕಬಳಿಸಲು ಮಾಡುತ್ತಿದ್ದ ಮದುವೆಯಂತಹ ಪಿಥೂರಿಗಳು, ಅವುಗಳನ್ನು ಸ್ಪಷ್ಟವಾಗಿ ಕಂಡುಹಿಡಿಯಬಲ್ಲ ಮಂತ್ರಿಗಳ ರಾಜತಾಂತ್ರಿಕತೆ. ಹಿಂದೂ ಸಂಪ್ರದಾಯಗಳು ಮತ್ತು ಸಾಮಾಜಿಕ ಜೀವನ ಶೈಲಿಯ ಮುದ್ದಾದ ವರ್ಣನೆ ಇಲ್ಲಿದೆ. ಕಾದಂಬರಿಯ ಶೀರ್ಷಿಕೆಯ ಸೊಬಗು, ಕಾದಂಬರಿಯನ್ನು ಓದಿದ ಮೇಲೆ ಮನಸ್ಸಿಗೆ ಹತ್ತಿರವಾಗುತ್ತದೆ.
  •  4. ಕಂಬನಿಯ ಕುಯಿಲು  
        ( ಚಿತ್ರದುರ್ಗದ ಐತಿಹಾಸಿಕ ಕಾದಂಬರಿ ಸರಣಿ - 2 )
        ಕಿರು ಪರಿಚಯ - ಕಸ್ತೂರಿ ರಂಗಪ್ಪ ನಾಯಕನ ಕಿರಿಯ ಮಗ ಹಿರೇ ಮದಕರಿ ನಾಯಕ ಪುತ್ರನಿಲ್ಲದೆ ಅಕಾಲಿಕ ಮರಣವನ್ನಪ್ಪಿದ ನಂತರ ಸಿಂಹಾಸನಕ್ಕಾಗಿ ನೆಡೆಯುವ ಗೊಂದಲ ಮತ್ತು ಹೋರಾಟವನ್ನು ಇಲ್ಲಿ ಚಿತ್ರಿಸಲಾಗಿದೆ. ಕಥೆ ಹಲವು ತಿರುವು ಹಾಗು ಆಕಸ್ಮಿಕ ಘಟನೆಗಳೊಂದಿಗೆ ರೋಚಕವಾಗಿದೆ. ರಂಗಪ್ಪ ನಾಯಕನ ಹಿರಿಯ ಮಗ ಸರ್ಜೇನಾಯಕನ ಮಕ್ಕಳಾದ ಲಿಂಗಣ್ಣನಾಯಕ ಹಾಗು ಚಿಕ್ಕಣ್ಣ ನಾಯಕರ ನಡುವಿನ ಭಿನಾಭಿಪ್ರಾಯದಲ್ಲಿ, ಲಿಂಗಣ್ಣನಾಯಕನ ಉದಾತ್ತ ವ್ಯಕ್ತಿತ್ವ ಆದರ್ಶಮಯವಾಗಿದೆ. ರಾಣಿ ಓಬವ್ವ ನಾಗತಿಯ ಸಖಿ ಗಿರಿಜೆಯದು ಕೂಡ ಬಹು ಮುಖ್ಯ ಪಾತ್ರ.
  • 5. ರಾಜ್ಯದಾಹ  
        ( ಚಿತ್ರದುರ್ಗದ ಐತಿಹಾಸಿಕ ಕಾದಂಬರಿ ಸರಣಿ - 3 )
        ಕಿರು ಪರಿಚಯ -
        ಚಿಕ್ಕಣ್ಣನಾಯಕ, ದಳವಾಹಿ ಮುದ್ದಣ್ಣನ ಬೆಂಬಲದಿಂದ ಸಿಂಹಾಸನವನ್ನೇರಿ, ಮುದ್ದಣ್ಣನಿಗೆ ಸರ್ವಾಧಿಕಾರಿ ಪದವಿ ನೀಡಿ ಸುಖಲೋಲುಪನಾಗುತ್ತಾನೆ. ಈ ಸಮಯದಲ್ಲಿ ಮುದ್ದಣ್ಣನಲ್ಲಿ ರಾಜ್ಯದಾಹ ಹುಟ್ಟಿಕೊಳ್ಳುತ್ತದೆ. ಇದು ಅತಿಯಾದಾಗ ಚಿಕ್ಕಣ್ಣನಾಯಕನ ವಿರೋಧ, ರಾಜಕೀಯ ಕಲಹಗಳು, ಯುದ್ಧ, ಅಧಿಕಾರದ ಮೋಹಗಳನ್ನು ಬಹು ಸ್ವಾರಸ್ಯಕರವಾಗಿ ಬಿಂಬಿಸಲಾಗಿದೆ.
  • 6. ರಕ್ತರಾತ್ರಿ 
        ( ಚಿತ್ರದುರ್ಗದ ಐತಿಹಾಸಿಕ ಕಾದಂಬರಿ ಸರಣಿ - 4 )
        ಕಿರು ಪರಿಚಯ -
        ಚಿಕ್ಕಣ್ಣನಾಯಕನ ತರುವಾಯ ಮುದ್ದಣ್ಣನು ಸಿಂಹಾಸನವನ್ನು ಆಕ್ರಮಿಸಬಯಸಿದಾಗ, ಅವನಿಗೆ ಆಸ್ಪದ ಕೊಡದಂತೆ ಪ್ರಧಾನಿಗಳ ಸಹಾಯದಿಂದ ಲಿಂಗಣ್ಣನಾಯಕ ಪಟ್ಟವನ್ನೇರುತ್ತಾನೆ. ಆಗ ಇಡೀ ರಾಜ್ಯ ಎರಡು ಬಣವಾಗಿ ರೂಪುಗೊಳ್ಳುತ್ತದೆ. ಕಡೆಗೆ ಮುದ್ದಣ್ಣನ ಸರ್ವಾಧಿಕಾರಕ್ಕೆ ಕುತ್ತು ಬಂದಾಗ ಸಿಡಿದೇಳುವ ಮುದ್ದಣ್ಣ ತನ್ನ ವಿರೋದಿಗಳನ್ನೆಲ್ಲ ಮೋಸ ಕಪಟಗಳಿಂದ ಮಟ್ಟ ಹಾಕುವ, ಹಾಗು ಅವನ ಗೆಲುವಿನ ರಕ್ತಮಯ ರಾತ್ರಿಯ ಬಣ್ಣನೆ ರೋಚಕವಾಗಿದೆ.
  • 7. ತಿರುಗುಬಾಣ  
        ( ಚಿತ್ರದುರ್ಗದ ಐತಿಹಾಸಿಕ ಕಾದಂಬರಿ ಸರಣಿ - 5 )
        ಕಿರು ಪರಿಚಯ -
        ಮುದ್ದಣ್ಣನ ಪತನಕ್ಕೆ ಗಿರಿಜೆ ಪಣತೊಟ್ಟು, ಪ್ರಧಾನಿ ಪರಶುರಾಮಪ್ಪ ಮತ್ತು ದಳವಾಹಿ ಭರಮಣ್ಣನನ್ನು ಹುರಿದುಂಬಿಸಿ ಮುದ್ದಣ್ಣನ ವಿರುದ್ದ ಹೋರಾಟಕ್ಕೆ ನಾಂದಿ ಹಾಡಿ ತಿರುಗುಬಾಣವಾಗುತ್ತಾಳೆ. ದುರ್ಗವನ್ನು ಮುದ್ದಣ್ಣನ ಘೋರ ರಕ್ತಮಯ ಕಪಿಮುಷ್ಟಿಯಿಂದ ಬಿಡಿಸಲು ಹಳ್ಳಿ ಹಳ್ಳಿಗಳ ರಾಜಭಕ್ತ ಗೌಡರುಗಳು, ವರ್ತಕರು, ಜನಗಳು ಎಲ್ಲರೂ ಪರಶುರಾಮಪ್ಪನಿಗೆ ಸಹಾಯವಾಗುತ್ತಾರೆ. ಗೌಡತಿಯೊಬ್ಬಳ ದಿಟ್ಟತನ, ಗಿರಿಜೆಯು ನಾಗತಿಯ ಪ್ರೇತಾತ್ಮದಂತೆ ತನ್ನ ಸೇಡನ್ನು ತೀರಿಸಿಕೊಳ್ಳುವುದು ಎಲ್ಲವೂ ಸಹ ಕಾದಂಬರಿಯ ಪ್ರತೀ ಅಕ್ಷರದಲ್ಲೂ ರೋಮಾಂಚನವನ್ನುಂಟು ಮಾಡುತ್ತವೆ.
  • 8. ಹೊಸ ಹಗಲು  
        ( ಚಿತ್ರದುರ್ಗದ ಐತಿಹಾಸಿಕ ಕಾದಂಬರಿ ಸರಣಿ - 6 )
        ಕಿರು ಪರಿಚಯ -
        ಮುದ್ದಣ್ಣನಿಂದಾಗಿ ದುರ್ಗದ ಪಾಳೆಯಗಾರ ಮೂಲ ಪುರುಷ ಮತ್ತಿ ತಿಮ್ಮಣ್ಣ ನಾಯಕರ ವಂಶ ನಿರ್ವಂಶವಾದ ಬಳಿಕ, ಅಲ್ಲಿಗೆ ಬೇರೆಯವರನ್ನು ತರಲಿಚ್ಚಿಸಿದೆ, ಸಿದ್ದರಿಂದ ಒಲಿದ ಈ ಸಿಂಹಾಸನವನ್ನು ತಿಮ್ಮಣ್ಣ ನಾಯಕನ ರಕ್ತ ಸಂಬಂಧಿಗೇ ನೀಡಬೇಕೆಂದು ಮಂತ್ರಾಲೋಚನೆಯಾಗಿರುತ್ತದೆ. ಆಗ ಸೋದರ ಸಂಬಂಧಿಯಾದ ಹಳ್ಳಿಯಲ್ಲಿ ಕುರಿ ಕಾಯುವವನಾಗಿದ್ದ ಭರಮಣ್ಣ ನಾಯಕನಿಗೆ, ಮುರುಘರಾಜೇಂದ್ರ ಸ್ವಾಮಿಗಳ ಆಶಿರ್ವಾದದಿಂದ ಸಿಂಹಾಸನವೊಲಿಯುತ್ತದೆ.
ಮುಂದೆ ಈತ ಬಿಚ್ಚುಗತ್ತಿ ಭರಮಣ್ಣನೆಂದು ಪ್ರಸಿದ್ದಿಯಾಗುತ್ತಾನೆ. ಈತನ ರಾಜ್ಯಭಾರದ ಮೊದಲಿನ ದಿನಗಳನ್ನು, ಆತ ಎದುರಿಸಬೇಕಾದ ಅವಮಾನ, ಯುದ್ದಗಳು ಮತ್ತವನು ಎಲ್ಲವನ್ನೂ ಜಯಿಸಿದ ಬಗೆಯನ್ನು ಕುತೂಹಲಕರವಾಗಿ ಬಿಂಬಿಸಿದ್ದಾರೆ.
  • 9. ವಿಜಯೋತ್ಸವ 
        ( ಚಿತ್ರದುರ್ಗದ ಐತಿಹಾಸಿಕ ಕಾದಂಬರಿ ಸರಣಿ - 7 )
        ಕಿರು ಪರಿಚಯ - ಭರಮಣ್ಣ ನಾಯಕನ ಕಾಲದಲ್ಲಿ ಲೂಟಿಕೋರ ಮರಾಠ ಸರದಾರ ಆಕ್ರಮಣ ಗಳಾಗುತ್ತಿರುತ್ತವೆ. ಇವರಿಂದಾಗಿ ತನ್ನ ಆಸ್ತಿ ಪಾಸ್ತಿಯನ್ನೆಲ್ಲಾ ಕಳೆದುಕೊಂಡ ಫ್ರೆಂಚ್ ವ್ಯಕ್ತಿಯೊಬ್ಬ ಭರಮಣ್ಣ ನಾಯಕನನ್ನು ಆಶ್ರಯಿಸಿ ಬಂದು ಸೇನೆಯಲ್ಲಿ ಸೇರಿ, ಮರಾಠ ಸರದಾರ ಸಂತೋಜಿ ಘೋರ್ಪಡೆಯ ವಿರುದ್ದ ಸೇಡು ತೀರಿಸಿಕೊಳ್ಳುತ್ತಾನೆ. ಇಲ್ಲಿ ಮೆಹರ್ಬಾನು ಎಂಬ ಸ್ಪುರದ್ರೂಪಿ ಸಂಗೀತಗಾರ್ತಿಯ ಮತ್ತು ಫ್ರೆಂಚ್ ಲಾಲಿಸಾಹೆಬನ ಪ್ರೇಮದ ಕಥಾಹಂದರವೂ ಇದೆ. 
  • 10. ದುರ್ಗಾಸ್ತಮಾನ
        ( ಚಿತ್ರದುರ್ಗದ ಐತಿಹಾಸಿಕ ಕಾದಂಬರಿ ಸರಣಿ - 8 ) 
        ಕಿರು ಪರಿಚಯ -
        ದುರ್ಗದ ಸ್ವಾಭಿಮಾನದ ಪ್ರತೀಕ, ರಣರಂಗ ಗಂಡುಗಲಿ, ಎಪ್ಪತ್ತೇಳು ಪಾಳೆಯಗಾರರ ಮಿಂಡ, ಎಂಬೆಲ್ಲ ಬಿರುದಾಂಕಿತನಾದ, ದುರ್ಗದ ಕೊನೆಯರಸು ಮದಕರಿನಾಯಕನ ಜೀವನ ಕಾದಂಬರಿ. ಇಲ್ಲಿ ಆತನ ಬಾಲ್ಯ, ನಾಯಕನಾದ ಬಗೆ, ಸಾಕುತಾಯಿಯಾದ ನಾಗತಿಯ(ರಾಣಿ) ಮಮತೆ, ಪ್ರಧಾನಿ ಕಳ್ಳಿ ನರಸಪ್ಪನಿಂದ ರಾಜಕೀಯದ ವಿದ್ಯೆ, ದೊರೆಯಾಗಿ ಬಾಳಿದ ದರ್ಪ, ಅಚಾತುರ್ಯಗಳು, ಹೈದರಾಲಿ ಮತ್ತು ಮರಾಠರ ನಡುವಿನ ತಿಕ್ಕಾಟದಲ್ಲಿ ತಾನು ಯಾರನ್ನು ನಂಬಬೇಕೆಂಬ ದ್ವಂದ್ವ, ದುರ್ಗದ ಸ್ವಾಬಿಮಾನಕ್ಕೆ ಧಕ್ಕೆ ಬರದಂತೆ ಸಹಾಯ ಕೇಳಿದ ಇಬ್ಬರಿಗೂ ಒಮ್ಮೊಮ್ಮೆ ನೆರವಾಗಿ ಜಯಿಸಿದ ಯುದ್ದಗಳು, ತೋರಿದ ರಣ ಚಾತುರ್ಯಗಳು, ಅಮೋಘ ಗೆಲುವುಗಳು, ಮರಾಠರಿಗೆ ಸೋತು ಸೆರೆಸಿಕ್ಕುವಲ್ಲಿದ್ದ ಹೈದರಾಲಿಯನ್ನು ಪಾರು ಮಾಡಿದ ರೀತಿ, ನಾಲ್ವರು ಸ್ತ್ರೀಯರನ್ನು ಸೇರಿದ್ದು, ಸೈನಿಕರ ಮೇಲಿನ ಪ್ರೇಮಕ್ಕಾಗಿ ರಾಜಗುರುಗಳಲ್ಲಿ ಅಚಾತುರ್ಯವೆಸಗಿದ್ದು, ಸೈನಿಕರಿಂದ ಹೆಣಗಳ ಮೇಲೆ ಕುಳಿತು ರಕ್ತಸ್ನಾನ ಮಾಡಿಸಿಕೊಂಡಿದ್ದು, ಹೈದರಾಲಿಯ ಕಪಟ ಕ್ರೂರತೆಗೆ ತಕ್ಕ ಶಾಸ್ತಿ ಮಾಡಲು ಅವನ ಪರವಾದ ಯುದ್ದದಲ್ಲೇ ಶತ್ರು ಭಂಡಾರವನ್ನು ದೋಚಿ ಹೈದರಾಲಿಗೆ ಅರಿವಿಲ್ಲದಂತೆ ದುರ್ಗಕ್ಕೆ ಸಾಗಿಸಿದ್ದು, ಒಂದೇ ರಾತ್ರಿಯಲ್ಲಿ ಗೆದ್ದ ನಿಜಗಲ್ಲು ಕೋಟೆ, ಹೈದರಾಲಿಯ ಮೋಸಕ್ಕೆ ಸಿಡಿದೆದ್ದು ಅವನ ವಿರೋದ ನಿಂತದ್ದು, ಮೂರುವರ್ಷ ಯುದ್ದ ಮಾಡಿದರೂ ಹೈದರಾಲಿ ದುರ್ಗದ ಒಂದೇ ಒಂದು ಕಲ್ಲನ್ನು ಸಹ ಅಲುಗಾಡಿಸಲಾಗದಂತೆ ಹೋರಾಡಿದ್ದು, ದುರ್ಗದ ದುರಾದೃಷ್ಟಕ್ಕೆ ಕಳ್ಳಿನರಸಪ್ಪನವರು ಹೈದರಾಲಿಗೆ ಸಿಕ್ಕಿ ಬಿದ್ದಿದ್ದು, ಟಿಪ್ಪುವಿಗೆ ಮಣ್ಣು ಮುಕ್ಕಿಸಿದ್ದು, ಮರಾಠರಿಗೆ ಹೈದರಾಲಿಯು ಹಣದ ಆಸೆ ತೋರಿ ಮದಕರಿಗೆ ಸಹಾಯವಾಗದಂತೆ ತಡೆದದ್ದು, ಹೈದರಾಲಿಯನ್ನು ಕಲ್ಲಿನ ಪಂಜರದೊಳಗೆ ಬಂದಿಸಲು ಕಲ್ಲಿನ ಪಂಜರವನ್ನು ಕಟ್ಟಿಸಿ ಪ್ರತಿಜ್ಞೆ ಮಾಡಿದ್ದು, ಹೈದರಾಲಿ ತನ್ನ ಹುಟ್ಟೂರನ್ನು ಸುಟ್ಟ ಸೇಡಿಗೆ ಪ್ರತಿ ಸೋಮವಾರ ಇರುಳ ಕಾಳಗ ಮಾಡಿ ಹೈದರಾಲಿಯ ನೂರು ಸೈನಿಕರ ತಲೆಯನ್ನು ದುರ್ಗದ ಕಾಳಿಗೆ ಬಲಿ ಕೊಟ್ಟದ್ದು, ಕೊನೆಯ ಯುದ್ದದಲ್ಲಿ ರಣಾಂಗಣದಲ್ಲೇ ಮಡಿದದ್ದು.
        ಒಂದು ಕಾದಂಬರಿ ಇದಕ್ಕಿಂತ ಇನ್ನೆಷ್ಟು ರೋಚಕ ಘಟನೆಗಳನ್ನು ಹೊಂದಿರಲು ಸಾದ್ಯ, ಇಲ್ಲಿ ಪ್ರತಿ ಪುಟವು ಮದಕರಿಯಲ್ಲಿ ನಮ್ಮ ಅಭಿಮಾನವನ್ನು ಉಕ್ಕಿಸುವ ಚಿಲುಮೆಗಳಾಗುತ್ತವೆ. ಈ ಚಿಕ್ಕ ಸಂಸ್ಥಾನದ ಅವಸಾನ ಒಂದು ಮಹಾಸಾಮ್ರಾಜ್ಯದ ಅಸ್ತಮಾನವಾದಷ್ಟು ಮನಸನ್ನು ಕಲಕುತ್ತದೆ.
         ಈ ಕೃತಿಗೆ ಕೇಂದ್ರ ಸಾಹಿತ್ಯ ಅಕಾಡೆಮಿ ಪ್ರಶಸ್ತಿ ಲಭಿಸಿರುತ್ತದೆ. ಈ ಕೃತಿಯ ಬಿಡುಗಡೆಯ ದಿನದಂದು ಚಿತ್ರದುರ್ಗ ತನ್ನೆಲ್ಲ ಅಭಿಮಾನವನ್ನು ತ. ರಾ. ಸು ರವರಿಗೆ ತೋರಿಸುವಂತೆ, ಎಂದೂ ಕೇಳರಿಯದ ಅಮೋಘ ಜನಸಾಗರದ ನಡುವಲ್ಲಿ ಬಿಡುಗಡೆ ಹೊಂದಿರುತ್ತದೆ. 
  • 11. ನೃಪತುಂಗ 
        ಕಿರು ಪರಿಚಯ -
        ರಾಷ್ಟ್ರಕೂಟ ದೊರೆ ನೃಪತುಂಗನ ಜೀವನ ಚರಿತೆ. ಪುತ್ರ ವ್ಯಾಮೋಹವನ್ನು ಮೀರಿಸಿದ ಕರ್ತವ್ಯ ಪ್ರೇಮ ನೃಪತುಂಗನ ಬಾಳಿನ ಉತ್ತುಂಗತೆಯನ್ನು ಬಿಂಬಿಸುತ್ತದೆ. ಚಿಕ್ಕದಾದರೂ ಪರಿ ಪೂರ್ಣತೆಯಿಂದಿರುವ ಕೃತಿ.
  • 12. ಜೀತದ ಜೀವ 
        ಕಿರು ಪರಿಚಯ -
  • 13. ರಕ್ತ ತರ್ಪಣ 
        ಕಿರು ಪರಿಚಯ -
  • 14. ಚಂದವಳ್ಳಿಯ ತೋಟ 
        ಕಿರು ಪರಿಚಯ -
  • 15. ಶಿಲ್ಪಶ್ರೀ 
        ಕಿರು ಪರಿಚಯ -
  • 16. ನಾಗರಹಾವು
        ಕಿರು ಪರಿಚಯ -
  • 17. ಹಂಸಗೀತೆ
        ಕಿರು ಪರಿಚಯ -
  • 18. ಬಂಗಾರಿ
        ಕಿರು ಪರಿಚಯ - 


ಶಿವರಾಮ ಕಾರಂತ

  • 1. ಚೋಮನ ದುಡಿ
        ಕಿರು ಪರಿಚಯ -
        ಚೋಮ ಎಂಬ ಹೊಲೆಯನ ದುರಂತ ಜೀವನದ ಕಥಾನಕವಿದು. ಇಲ್ಲಿ ಮಲೆನಾಡಿನ ಹೊಲೆಯರ ಬದುಕನ್ನು ಬಿಂಬಿಸಲಾಗಿದೆ. ದುಡಿ ಎಂಬುದರ ಅರ್ಥ ತಮಟೆಯಂತಹ ಚಿಕ್ಕ ವಾದ್ಯ.
  • 2. ಮರಳಿ ಮಣ್ಣಿಗೆ 
        ಕಿರು ಪರಿಚಯ -
  • 3. ಬೆಟ್ಟದ ಜೀವ 
        ಕಿರು ಪರಿಚಯ -
  • 4. ಮೂಕಜ್ಜಿಯ ಕನಸುಗಳು 
        ಕಿರು ಪರಿಚಯ -
  • 5. ಸರಸಮ್ಮನ ಸಮಾಧಿ 
        ಕಿರು ಪರಿಚಯ -
  • 6. ಕುಡಿಯರ ಕೂಸು 
        ಕಿರು ಪರಿಚಯ -
  • 7. ಚಿಗುರಿದ ಕನಸು 
        ಕಿರು ಪರಿಚಯ -
  • 8. ಗೊಂಡಾರಣ್ಯ
        ಕಿರು ಪರಿಚಯ -
  • 9. ಅಪೂರ್ವ ಪಶ್ಚಿಮ
        ಕಿರು ಪರಿಚಯ -
  • 10. ಹಳ್ಳಿಯ ಹತ್ತು ಸಮಸ್ತರು
        ಕಿರು ಪರಿಚಯ -
  • 11. ಮೈಲುಗಲ್ಲಿನೊಡನೆ ಮಾತುಕಥೆ
        ಕಿರು ಪರಿಚಯ -

ಕುವೆಂಪು

  • 1. ಕಾನೂರು ಹೆಗ್ಗಡತಿ 
        ಕಿರು ಪರಿಚಯ -
  • 2. ಮಲೆಗಳಲ್ಲಿ ಮಧುಮಗಳು 
        ಕಿರು ಪರಿಚಯ -
  • 3. ಮಲೆನಾಡಿನ ಚಿತ್ರಗಳು 
        ಕಿರು ಪರಿಚಯ -
        ಮಲೆನಾಡಿನ ಮಡಿಲು ಕುಪ್ಪಳ್ಳಿಯಲ್ಲಿ ಕಳೆದ ತನ್ನ ಬಾಲ್ಯದ ದಿನಗಳನ್ನು ಲಿಖಿತ ರೂಪದಲ್ಲಿ ವರ್ಣಿಸಲಾಗಿದೆ.
  • 4. ಬಿರುಗಾಳಿ
        ಕಿರು ಪರಿಚಯ - 
  • 5. ರಕ್ತಾಕ್ಷಿ
        ಕಿರು ಪರಿಚಯ - 
  • 6. ಸನ್ಯಾಸಿ ಮತ್ತು ಇತರ ಕಥೆಗಳು
        ಕಿರು ಪರಿಚಯ - 
  • 7. ಹೊನ್ನ ಹೊತ್ತಾರೆ
        ಕವನ ಸಂಕಲನ
  • 8. ಪಕ್ಷಿಕಾಶಿ
        ಕವನ ಸಂಕಲನ
  • 9. ನವಿಲು
        ಕವನ ಸಂಕಲನ
  • 10. ಪ್ರೇಮ ಕಾಶ್ಮೀರ
        ಕವನ ಸಂಕಲನ
  • 11. ಅಗ್ನಿಹಂಸ
        ಕವನ ಸಂಕಲನ
  • 12. ಕುಟೀಚಕ
        ಕವನ ಸಂಕಲನ

  • ಮಂತ್ರಾಕ್ಷತೆ

        ಕವನ ಸಂಕಲನ

ಮಾಸ್ತಿ ವೆಂಕಟೇಶ ಐಯ್ಯಂಗಾರ್

  • 1. ಕಾಕನ ಕೋಟೆ 
        ಕಿರು ಪರಿಚಯ -
        ಹೆಗ್ಗಡದೇವನ ಕೋಟೆ ಸುತ್ತಲಿನ ಕಾಡು ಕುರುಬರ ಜನಾಂಗದ ಕಾಕ ಎಂಬುವವನು ಅವನ ಹಾಡಿಯನ್ನು ಅಲ್ಲಿನ ಹೆಗ್ಗಡೆಯ ಭ್ರಷ್ಟ ಆಡಳಿತದಿಂದ ಹೇಗೆ ಪಾರು ಮಾಡುತ್ತಾನೆಂಬುದನ್ನು ನಾಟಕ ರೂಪದಲ್ಲಿ, ಮೋಹಕವಾಗಿ ಚಿತ್ರಿಸಲಾಗಿದೆ. ಮೈಸೂರು ಸಂಸ್ತಾನದ ಅಧೀನಕ್ಕೊಳಪಟ್ಟಿದ್ದ ಈ ಪ್ರದೇಶ ಆಗ ರಣಧೀರ ಕಂಠೀರವ ನರಸರಾಜ ಒಡೆಯರ ಆಳ್ವಿಕೆಯಿದ್ದ ಕಾರಣ ಅವರನ್ನೂ ನಾಟಕದಲ್ಲಿ ಪ್ರಸ್ತಾಪಿಸಲಾಗಿದೆ. ಕಾಡುಕುರುಬರ ಜೀವನ ಶೈಲಿ, ಸಂಸ್ಕೃತಿ ಹಾಗು ಅವರ ಸಂಕಷ್ಟಗಳನ್ನು ಚಿಕ್ಕ ನಾಟಕವಾದರೂ ಚೊಕ್ಕವಾಗಿ ಕಣ್ತುಂಬಿಸುತ್ತದೆ.
  • 2. ಚೆನ್ನಬಸವ ನಾಯಕ 
        ಕಿರು ಪರಿಚಯ -
        ಕೆಳದಿಯ (ನಗರ) ಸಂಸ್ಥಾನದ ಕೊನೆಯ ದೊರೆ ಚೆನ್ನಬಸವನಾಯಕನ ದುರಂತ ಜೀವನದ ಕಥಾನಕ.
  • 3. ಚಿಕ್ಕ ವೀರರಾಜೇಂದ್ರ 
        ಕಿರು ಪರಿಚಯ -
        ಕೊಡಗಿನ ಕೊನೆಯ ದೊರೆ, ತನ್ನ ದುರ್ಗುಣಗಳಿಂದಾಗಿ ತನ್ನವರನ್ನೇ ವಿರೋಧಿಸಿ, ಕೊಡಗಿನ ಕೀರ್ತಿಯನ್ನು ಮಣ್ಣುಗೂಡಿಸಿ, ಹೇಡಿಯಂತೆ ಅವಿತು ಕುಳಿತು ಇಂಗ್ಲೀಷರ ಕೈಗೆ ಸಿಕ್ಕು ಬಿದ್ದು, ಕೊಡಗನ್ನು ಇಂಗ್ಲೀಷರ ಆಡಳಿತಕ್ಕೆ ಒಪ್ಪಿಸಿ, ಸ್ವಧರ್ಮವನ್ನು ತಿರಸ್ಕರಿಸಿ, ಹೆಂಡತಿಯನ್ನು ಕೈಬಿಟ್ಟು, ರಾಜ ಕೈದಿಯಾಗಿ ಇಂಗ್ಲೆಂಡ್ ಸೇರಿದನು. ತನ್ನ ಮಗಳಾದ ಗೌರಮ್ಮಳನ್ನು ತನ್ನ ಲಿಂಗಾಯತ ಧರ್ಮದಿಂದ ಕ್ರಿಶ್ಚಿಯನ್ ಧರ್ಮಕ್ಕೆ ಮತಾಂತರಗೊಳಿಸಿ, ವಿಕ್ಟೋರಿಯಾ ಗೌರಮ್ಮ ಎಂದು ಹೆಸರಿಟ್ಟು, ಇಂಗ್ಲೆಂಡ್ ರಾಣಿಗೊಪ್ಪಿಸಿ ಸಾವನಪ್ಪುತ್ತಾನೆ. ಇಷ್ಟೆಲ್ಲಾ ದುರಂತಗಳನ್ನು ಜೀವನ ಕಾದಂಬರಿಯಾಗಿ ಸೃಷ್ಟಿಸಲಾಗಿದೆ.
  • 4. ಸಮಗ್ರ ಕಥೆಗಳು - ಸಂಪುಟ 1
  • 5. ಸಮಗ್ರ ಕಥೆಗಳು - ಸಂಪುಟ 2
  • 6. ಸಮಗ್ರ ಕಥೆಗಳು - ಸಂಪುಟ 3

ಪೂರ್ಣ ಚಂದ್ರ ತೇಜಸ್ವಿ

  • 1. ಜುಗಾರಿ ಕ್ರಾಸ್ 
        ಕಿರು ಪರಿಚಯ -  
  • 2. ಸಹಜ ಕೃಷಿ 
        ಕಿರು ಪರಿಚಯ -
  • 3. ಕಾಡಿನ ಕಥೆಗಳು
        ಬೆಳ್ಳಂದೂರಿನ ನರಭಕ್ಷಕ
        ಜಾಲಹಳ್ಳಿಯ ಕುರ್ಕ
        ಬಾಳೆ ತೋಟದ ಸ್ವಾಮಿ
        ಮುನಿಶಾಮಿ ಮತ್ತು ಚಿರತೆ
        ಕಿರು ಪರಿಚಯ -
  • 4. ಕಾಡು ಮತ್ತು ಕ್ರೌರ್ಯ 
        ಕಿರು ಪರಿಚಯ -
  • 5. ಅಬಚೂರಿನ ಪೋಸ್ಟಾಫೀಸು 
        ಕಿರು ಪರಿಚಯ -
  • 6. ಕರ್ವಾಲೋ 
        ಕಿರು ಪರಿಚಯ -
  • 7. ನಿಘೂಡ ಮನುಷ್ಯರು 
        ಕಿರು ಪರಿಚಯ -
  • 8. ಹುಲಿಯೂರಿನ ಸರಹದ್ದು 
        ಕಿರು ಪರಿಚಯ - 
  • 9. ಚಿದಂಬರ ರಹಸ್ಯ 
        ಕಿರು ಪರಿಚಯ -
  • 10. ಪಾಕಶಾಸ್ತ್ರ
        ಕಿರು ಪರಿಚಯ -
  • 11. ಮಿಲ್ಲೇನಿಯಂ ಸೀರೀಸ್
        1. ಅಡ್ವೆಂಚರ್
        ಕಿರು ಪರಿಚಯ -

        2. ಹುಡುಕಾಟ
        ಕಿರು ಪರಿಚಯ -

        3. ಮಹಾಯುದ್ದ - ಭಾಗ 1
        4. ಮಹಾಯುದ್ದ - ಭಾಗ 2
        5. ಮಹಾಯುದ್ದ - ಭಾಗ 3
        ಕಿರು ಪರಿಚಯ -

        6. ದೇಶ ವಿದೇಶ - ಭಾಗ 1
        7. ದೇಶ ವಿದೇಶ - ಭಾಗ 2
        ಕಿರು ಪರಿಚಯ -

        8. ಚಂದ್ರನ ಚೂರು
        ಕಿರು ಪರಿಚಯ -

ಅ. ನ. ಕೃಷ್ಣರಾಯ

  • 1. ರಣ ವಿಕ್ರಮ 
        ಕಿರು ಪರಿಚಯ -
        "ರಜಪೂತ ದೊರೆ ಮೇವಾಡದ ರಾಣಾ ಪ್ರತಾಪ್", ಇಂದಿಗೂ ಈ ಹೆಸರು ದೇಶದಲ್ಲಿ ಯುವಕರಲ್ಲಿ ಕಿಚ್ಚು ಹಚ್ಚುತ್ತದೆ. ಮೊಘಲ ದೊರೆ ಅಕ್ಬರನ, ಅಖಂಡ ಉತ್ತರ ಭಾರತಕ್ಕೆ ಚಕ್ರವರ್ತಿಯಾಗಿ ಮೆರೆಯಬೇಕೆಂಬ ಆಸೆಗೆ ತಣ್ಣೀರು ಎರಚಿ, ಅಖಂಡ ಮೊಘಲ್ ಸೈನ್ಯಕ್ಕೆ ಎದೆಯೊಡ್ಡಿ ನಿಂತು ಹೋರಾಡಿದ ಮಹಾನ್ ಚೇತನ. ಹಿಂದೂ ಧರ್ಮವನ್ನು ಮುಸ್ಲಿಂ ದಾಳಿಯಿಂದ ರಕ್ಷಿಸಲು ಯುದ್ಧ ಮಾಡಿ, ಸಕಲವನ್ನೂ ಕಳೆದುಕೊಂಡು, ಆದಿವಾಸಿಯಂತೆ ಕಾಡಿನಲ್ಲಿ ಬದುಕಿ, ಮತ್ತೆ ಸೈನ್ಯ ಕಟ್ಟಿ ಮೇವಾಡಿಗೆ ಅಧಿಪತಿಯಾದ ರಾಣಾನ ಜೀವನಗಾಥೆ.
  • 2. ಯಲಹಂಕ ಭೂಪಾಲ 
        ಕಿರು ಪರಿಚಯ -
        ಬೆಂಗಳೂರು ನಿರ್ಮಾತೃ ಕೆಂಪೇಗೌಡರ ಚರಿತೆ. ಮಧುರೈನಿಂದ ಪ್ರಾಣಾಪಾಯದಿಂದ ತಪ್ಪಿಸಿಕೊಂಡು ಬಂದ ಒಬ್ಬ ಗೌಡ ಮತ್ತವನ ತಮ್ಮಂದಿರು ಯಲಹಂಕದ ಸುತ್ತಮುತ್ತ ಜನ ಪ್ರೀತಿಯನ್ನು ಗಳಿಸಿ, ಸಂಸ್ಥಾನವನ್ನು ಸ್ಥಾಪಿಸಿ, ತದನಂತರ ವಿಜಯನಗರಕ್ಕೆ ಅಧೀನರಾಗಿ ಮಾಗಡಿಯಲ್ಲಿ ರಾಜ್ಯಭಾರ ಆರಂಭಿಸಿದರು. ಆ ಗೌಡನ ಮಗನಾದ ಕೆಂಪೇಗೌಡರು ಅಪ್ರತಿಮ ದೇಶಭಕ್ತಿಯನ್ನು ವಿಜಯನಗರದ ಮೇಲೆ ಇರಿಸಿಕೊಂಡಿದ್ದರು, ಮತ್ತು  ಅವರು ಬೆಂಗಳೂರಿನ ಕೋಟೆಯನ್ನು ಕಟ್ಟಲು ಸ್ಪೂರ್ತಿ, ಪಟ್ಟ ಶ್ರಮ, ಅವರ ಕುಟುಂಬದ ಮಹಾನ್ ತ್ಯಾಗ, ನಂತರ ವಿಜಯನಗರದಲ್ಲಿ ಅವರ ಗೃಹಭಂಧನ, ಮತ್ತೆ ಬೆಂಗಳೂರಿನ ಕೋಟೆಯಲ್ಲಿ ಕೊನೆಯುಸಿರೆಳೆಯುವ ಕಥೆ ಅದ್ಬುತವಾಗಿದೆ.
  • 3. ಪಶ್ಚಾತಾಪ
        ಕಿರು ಪರಿಚಯ -

  • 4. ಈಚಲು ಮರದವ್ವ
        ಕಿರು ಪರಿಚಯ -

  • 5. ಸಂಗ್ರಾಮಧುರೀಣ
        ಕಿರು ಪರಿಚಯ -


ಕೆ. ವಿ. ಅಯ್ಯರ್

  • 1. ಶಾಂತಲಾ
        ಕಿರು ಪರಿಚಯ -
        ಹೊಯ್ಸಳ ವಿಷ್ಣುವರ್ಧನ ಮತ್ತು ನಾಟ್ಯರಾಣಿ ಶಾಂತಲೆಯ ಪ್ರೇಮಮಯ ಜೀವನದ ಮಾನಸ ಕಾದಂಬರಿ. ಹೊಯ್ಸಳ ಯುಗದ ಕನ್ನಡಿಗರ ಸುವರ್ಣ ಬಾಳ್ವೆಯನ್ನು, ಸಂಮೊಹನವಾಗಿ ಕಟ್ಟಿ ಕೊಡಲಾಗಿದೆ. ಕಾದಂಬರಿಯನ್ನು ಓದಿದ ತರುವಾಯ ಶಾಂತಲೆ ಕನ್ನಡಿಗರ ಆದರ್ಶಮಯ ಮಹಿಳೆಯಾಗಿ ಮನಸಿನಲ್ಲಿ ನಿಲ್ಲುತ್ತಾಳೆ.

ಗೊರೂರು ರಾಮಸ್ವಾಮಿ ಅಯ್ಯಂಗಾರ್

  • 1. ನಮ್ಮ ಊರಿನ ರಸಿಕರು 
        ಕಿರು ಪರಿಚಯ -
  • 2. ಶಿವರಾತ್ರಿ
        ಕಿರು ಪರಿಚಯ -
  • 3. ಗರುಡಗಂಬದ ದಾಸಯ್ಯ
        ಕಿರು ಪರಿಚಯ -

ಚಂದ್ರಶೇಖರ ಕಂಬಾರ

  • 1. ಶಿಖರಸೂರ್ಯ
        ಕಿರು ಪರಿಚಯ - 
  • 2. ಕರಿಮಾಯಿ
        ಕಿರು ಪರಿಚಯ - 
  • 3. ಕನ್ನಡ ಜನಪದ ಕಥೆಗಳು
        ಕಿರು ಪರಿಚಯ - 

ಮ. ನ. ಮೂರ್ತಿ

  • 1. ಚಿಕ್ಕದೇವರಾಯ 
        ಕಿರು ಪರಿಚಯ - 
  • 2. ಹೈದರಾಲಿ 
        ಕಿರು ಪರಿಚಯ - 

ಬೀಚಿ

  • 1. ಅಮ್ಮಾವ್ರ ಕಾಲ್ಗುಣ 
        ಕಿರು ಪರಿಚಯ -
  • 2. ಬೆಳ್ಳಿ ತಿಮ್ಮ ನೂರೆಂಟು ಹೇಳಿದ 
        ಕಿರು ಪರಿಚಯ -
  • 3. ಸಕ್ಕರೆ ಮೂಟೆ 
        ಕಿರು ಪರಿಚಯ -
  • 4. ಚಿನ್ನದ ಕಸ 
        ಕಿರು ಪರಿಚಯ -
  • 5. ಟೆಂಟ್ ಸಿನೆಮಾ 
        ಕಿರು ಪರಿಚಯ -
  • 6. ಬ್ರಹ್ಮಚಾರಿಯ ಮಗ 
        ಕಿರು ಪರಿಚಯ -
  • 7. ತಿಮ್ಮನ ತಲೆ 
        ಕಿರು ಪರಿಚಯ -
  • 8. ಆರಿದ ಚಹಾ
        ಕಿರು ಪರಿಚಯ -
  • 9. ಹೆಣ್ಣು ಕಾಣದ ಗಂಡು
        ಕಿರು ಪರಿಚಯ -
  • 10. ಮಾತ್ರೆಗಳು
        ಕಿರು ಪರಿಚಯ -
  • 11. ಆರು ಏಳು ಸ್ತ್ರೀ ಸೌಖ್ಯ
        ಕಿರು ಪರಿಚಯ -
  • 12. ಸಂಪನ್ನರಿದ್ದಾರೆ ಎಚ್ಚರಿಕೆ
        ಕಿರು ಪರಿಚಯ -

ದೇವುಡು

  • 1. ಮಹಾಕ್ಷತ್ರಿಯ 
        ಕಿರು ಪರಿಚಯ -

ಅಮೀಶ್

  • 1. ಮೆಲೂಹದ ಮೃತ್ಯುಂಜಯ
        ಕನ್ನಡಕ್ಕೆ ಅನುವಾದ - ಎಸ್. ಉಮೇಶ್
        ಕಿರು ಪರಿಚಯ -
  • 2. ನಾಗಾ ರಹಸ್ಯ
        ಕನ್ನಡಕ್ಕೆ ಅನುವಾದ - ಎಸ್. ಉಮೇಶ್
        ಕಿರು ಪರಿಚಯ -
  • 3. ವಾಯುಪುತ್ರರ ಶಪಥ
        ಕನ್ನಡಕ್ಕೆ ಅನುವಾದ - ಎಸ್. ಉಮೇಶ್
        ಕಿರು ಪರಿಚಯ -

ಕೆ. ಎನ್. ಗಣೇಶಯ್ಯ

  • 1. ಕರಿಸಿರಿಯಾನ
        ಕಿರು ಪರಿಚಯ -
  • 2. ಏಳು ರೊಟ್ಟಿಗಳು
        ಕಿರು ಪರಿಚಯ -

ಸಮೇತನಹಳ್ಳಿ ರಾಮರಾಯ

  • 1. ಯದುವೊಡೆಯ 
        ಕಿರು ಪರಿಚಯ -
        ಮೈಸೂರು ಒಡೆಯರ್ ವಂಶದ ಮೂಲಪುರುಷರಾದ, ಯಾದವ ಕುಲದ ಸೋದರರಿಬ್ಬರ ಕಥಾನಕ. ತಮ್ಮ ಭವಿಷ್ಯವನ್ನು ತಾವೇ ರೂಪಿಸಿಕೊಳ್ಳಲು, ಉತ್ತರದಿಂದ ದಕ್ಷಿಣ ಭಾರತಕ್ಕೆ ಬರುವ ರಾಜಕುಮಾರ ಸೋದರರು, ಮಹಿಷ ನಾಡನ್ನು ಆಳುತ್ತಿದಾ ಅರಸನ ವೈರಿಗಳನ್ನು ಸಂಹರಿಸಿ, ಅರಸನ ಮಗಳನ್ನು ರಾಜ್ಯವನ್ನು ಸ್ವೀಕರಿಸಿ ಮೈಸೂರನ್ನು ಆಳಿದ ಕಥೆ.

ಸತ್ಯಕಾಮ


  • 1. ವಿಚಿತ್ರ ವೀರ್ಯ 

        ಕಿರು ಪರಿಚಯ - 

ಸುರೇಶ್ ಸೋಮ್ ಪುರ


  • 2. ಅಘೋರಿಗಳ ನಡುವಲ್ಲಿ 

        ಅನುವಾದ      -
        ಕಿರು ಪರಿಚಯ -

ಜಿಮ್ ಕಾರ್ಬೆಟ್


  • 1. ಶಿಕಾರಿ ಕಥೆಗಳು 

        ಅನುವಾದ - ಟಿ. ಎಸ್. ವಿವೇಕಾನಂದ
        ಕಿರು ಪರಿಚಯ -

xxxxx


  • 1. ಸೀತಾ ಕಲ್ಯಾಣ 

        ಕಿರು ಪರಿಚಯ -

ಕೋಟೆ ಸೀತಾರಾಮ ಶಾಸ್ತ್ರಿ


  • 1. ಧರ್ಮ ದರ್ಶನ 

        ಕಿರು ಪರಿಚಯ -
        ಟಿಪ್ಪು ಸುಲ್ತಾನನ ಕಾಲದಲ್ಲಿ, ಶೃಂಗೇರಿಯ ಮೇಲೆ ನಡೆದ ಮರಾಠರ ಮತ್ತು ಆಂಗ್ಲರ ದಾಳಿಯಿಂದಾಗಿ ಎಲ್ಲವನ್ನೂ ಕಳೆದುಕೊಂಡು ಶ್ರೀರಂಗಪಟ್ಟಣವನ್ನು ಸೇರುವ ಬ್ರಾಹ್ಮಣನೊಬ್ಬ, ಅಲ್ಲಿನ ಮೌಲ್ವಿಯೊಬ್ಬರ ದಯೆ ಮತ್ತು ಆತಿಥ್ಯಕ್ಕೆ ಮಾರು ಹೋಗಿ, ಜಾತಿ ಭೇಧಗಳನ್ನು ದಿಕ್ಕರಿಸಿ ಮಾನವ ಧರ್ಮವೊಂದನ್ನೇ ಅನುಸರಿಸಿ, ತನ್ನ ಪ್ರೇಯಸಿಯನ್ನು ವರಿಸಲು ಮುಸ್ಲಿಂ ಧರ್ಮ ಅಡ್ಡಿಯಾದಾಗ ತಾನು ಮುಸ್ಲಿಂ ಧರ್ಮಕ್ಕೆ ಮತಾಂತರ ಹೊಂದುವ ಕಥಾನಕ. ಇದು ಟಿಪ್ಪು ಸುಲ್ತಾನನ ಬಗ್ಗೆ ಇರುವ ಹಲವು ಭಿನ್ನಾಭಿಪ್ರಾಯಗಳಲ್ಲಿ, ಆತನು ಶೃಂಗೇರಿ ಮಠಕ್ಕೆ ಶ್ರದ್ದೆಯಿಂದ ನೆಡೆದನಾದ್ದರಿಂದ ಅವನನ್ನು ಸರ್ವ ಧರ್ಮ ಸಮ್ನನ್ವಯನೆನ್ದು ಬಿಂಬಿಸಲಾಗಿದೆ.

ತ್ರಿವೇಣಿ


  • 1. ಬೆಳ್ಳಿ ಮೋಡ 

        ಕಿರು ಪರಿಚಯ -
        ಚಿಕ್ಕಮಗಳೂರಿನ ಬೆಳ್ಳಿಮೋಡ ವೆಂಬ ಕಾಫಿ ತೋಟದ ಮಾಲೀಕರ ಮಗಳಾದ ಇಂದಿರಾ, ಮತ್ತವಳ ಜೀವನದ ಕಥೆ ಇದು. ತನ್ನ ವಿದೇಶದ ವಿದ್ಯಾಭ್ಯಾಸಕ್ಕೆ ಧನ ಸಹಾಯ ಕೆಲಬರುವ ಮೋಹನ ಎಂಬ ಕೃತಘ್ನ ಯುವಕನಿಂದ ಪ್ರೇಮ ಭಘ್ನಳಾಗಿ, ತನ್ನ ತಮ್ಮನಿಗಾಗಿ ತವರಲ್ಲೇ ಅವಿವಿವಾಹಿತಳಾಗಿ ನಿಲ್ಲುವ ಮನೋಹರ ಕಥಾನಕ.

  • 2. ಹೂವು ಮುಳ್ಳು

        ಕಿರು ಪರಿಚಯ -

ಡಾ।। ಕೋವೂರ್


  • ೧. ದೇವರು, ದೆವ್ವ ಮತ್ತು ವಿಜ್ಞಾನ

        ಕಿರು ಪರಿಚಯ -

xxxx


  • 1. ನಾಗ ಬಂಧ 
        ಕಿರು ಪರಿಚಯ - 


ಸಿದ್ದಯ್ಯ ಪುರಾಣಿಕ 


  • 1. ತ್ರಿಭುವನ ಮಲ್ಲ 

        ಕಿರು ಪರಿಚಯ -

ಸಿದ್ದಲಿಂಗಯ್ಯ


  • 1. ಅವತಾರಗಳು
        ಕಿರು ಪರಿಚಯ - 

xxxx



  • 1. ಶಿವಪ್ರಭುವಿನ ಪುಣ್ಯ

        ಅನುವಾದ - ಗಳಗನಾಥ
        ಕಿರು ಪರಿಚಯ -

ಮಹಾಮಂತ್ರಿ

ವೀರಗಂಗ ವಿಷ್ಣುವರ್ಧನ

ಮಹಾಯೋಗಿ

ಜಿ. ಪಿ. ರಾಜರತ್ನಂ


  • 1. ರತ್ನನ ಪದಗಳು


ರಾಜಯೋಗಿ

ಅಗಸ್ತ್ಯ

ಕೊಡಗಿನ ಸುಮಗಳು

ಕಲ್ಲು ಹಾಸಿಗೆ


ರವಿ ಬೆಳಗೆರೆ

  • 1. ರಾಜ್ ಲೀಲಾ ವಿನೋದ

        ಕಿರು ಪರಿಚಯ -