Monday, March 17, 2014

ಪ್ರೀತಿಸುತ ಜೀವಿಸುವೆನೇ...

ಪ್ರೀತಿಸುವೆ, ನಿನ್ನ ಹೆಸರನೇ
ಪ್ರೀತಿಸುವೆ, ನಿನ್ನ ಸೊಗಸನೇ
ಪ್ರೀತಿಸುವೆನೇ... ನಿನ್ನೇ ಸೇರೋ ನನ್ನ ದಾರಿನೇ...
ಪ್ರೀತಿಸುವೆ, ನಿನ್ನ ಶ್ವಾಸವಾ
ಪ್ರೀತಿಸುವೆ, ನಿನ್ನ ಸ್ಪರ್ಶವಾ
ಪ್ರೀತಿಸುವೆನೇ... ನಿನ್ನ ಬಳಿಯಿರೊ ನನ್ನ ಹರ್ಷವಾ...

ಪ್ರೀತಿಸುವೆ,.. ನಿನ್ನ ನಸುಕೋಪವಾ
ಪ್ರೀತಿಸುವೆ,... ನಿನ್ನ ಹುಸಿಶಾಪವಾ
ಪ್ರೀತಿಸುವೆ,... ನೀನಿರುವ ಈ ಲೋಕವಾ...
ಪ್ರೀತಿಸುತ ಜೀವಿಸುವೆನೇ... 
              * * *

ನಾನೇನೆ ಧ್ವನಿಯು, ನಿನ್ನ ರಾಗಕೇ
ನಾನೇನೆ ನೆಲವು, ನಿನ್ನ ಪಾದಕೇ
ನಾನೇನೆ ಕಾಂತಿ, ನಿನ್ನ ಹೊಳಪಿಗೆ
ನಾನೇ ತಂಗಾಳಿ, ನಿನ್ನ ಕುರುಳಿಗೆ...

ಹೋಗಿಹುದು ಚಳಿಗಾಲ ನೀ ಮುಟ್ಟಲು,
ನಾನಿರುವೆ ಅನುಗಾಲ ನಿನ್ನ ಸುತ್ತಲೂ, 
ನೀನೊಮ್ಮೆ ಕೈ ಹಿಡಿಯಲು...

ಪ್ರೀತಿಸುವೆ,.. ಅನ್ನೋದೆ ಸಂಜೀವಿ
ಪ್ರೀತಿಸುತ,.. ನಾನಾದೆ ರಾಜೀವಿ
ಪ್ರೀತಿಸುವೆ,.. ನೀ ಪ್ರೀತ್ಸೋ ಈ ಪ್ರೀತಿಯಾ...
ಪ್ರೀತಿಸುತ ಜೀವಿಸುವೆನೇ... 
              * * *

I Just Love, ನಿನ್ನ ನೋಟವಾ
I Just Love, ನಿನ್ನ ರೂಪವಾ
ಪ್ರೀತಿಸುವೆನೇ... ನಮ್ಮ ನಡುವಿನ ಈ ಮೋಹವಾ...
I Just Love, ನಿನ್ನ ಊಹೆಯಾ
I Just Love, ನಿನ್ನ ಮಾಹೆಯಾ
ಪ್ರೀತಿಸುವೆನೇ... ನಿನ್ನಂತಿರೋ ನಿನ್ನ ನೆರಳನೇ... 

ಪ್ರೀತಿಸುವೆ,.. ಈ ಮಧುರ ನೋವೆಲ್ಲವಾ
ಪ್ರೀತಿಸುವೆ,.. ನಿನ್ನ ಮನಸ ಮಾತೆಲ್ಲವಾ
ಪ್ರೀತಿಸುವೆ,.. ನಿನ್ನ ಕನಸ ಹಾಡೆಲ್ಲವಾ... 
ಪ್ರೀತಿಸುತ ಜೀವಿಸುವೆನೇ... 
                                    - ಸಂಪತ್ ಕುಮಾರ್

Thursday, March 13, 2014

ಪ್ರೀತಿಯಾಗಿದೆ...

ಮಾಯದ ಕಣ್ಣು ನಿನ್ನ ನೋಡಿಯಾಗಿದೆ,,,
ರೆಪ್ಪೆಮಿಟುಕೋ ಮುನ್ನ ಪ್ರೀತಿಯಾಗಿದೆ...
ಸ್ವಪ್ನದಿ ನನ್ನ ನಿನ್ನ ಜೋಡಿಯಾಗಿದೆ,,,

ಒಪ್ಪಿಕೊಳ್ಳೇ ಎನ್ನ,.. ಭೀತಿಯಾಗಿದೆ...
    *    *    *


ಹಾಗೇನು,
ಹೀಗೇನು,
ಹೇಗಿದ್ದರೆ ಏನು...
ನಾನಂತು ನಿನಗೇ ಅಲ್ಲವೇ...?
ಅಂದೇನು,
ಇಂದೇನು,
ಎಂದಿದ್ದರೆ ಏನು...
ನೀನಂತು ನನಗೇ ಅಲ್ಲವೇ...?

ಮತ್ತೆ ಮತ್ತೆ ನೆನೆದು ನಿನ್ನ,
ಮೂರಿದ್ದ ಕನಸುಗಳು, ನೂರಾಗಿವೆ...
ಪ್ರೀತಿ ಮಾಡೆ ನನ್ನ, ಆಸೆಗಳು ನೂರಾರಿವೆ...

    *    *    *
ಮೋಹಕ ಹೆಣ್ಣು ನಿನ್ನ ನೋಡಿಯಾಗಿದೆ,,,
ಮಾತನಾಡೋ ಮುನ್ನ ಪ್ರೀತಿಯಾಗಿದೆ...
ನನ್ನಲಿ ಚೆಂದದೊಂದು ಮೋಡಿಯಾಗಿದೆ,,,

ಅಪ್ಪಿಕೊಳ್ಳೇ ಎನ್ನ... ಭೀತಿಯಾಗಿದೆ... 
    *    *    *


ಇಲ್ಲೇನು,
ಅಲ್ಲೇನು
ಎಲ್ಲಿದ್ದರೇ ಏನು...
ನೀ ನನ್ನಲೇ ಇಲ್ಲವೇ...?
ಬೆಳಗಲ್ಲು,
ಸಂಜೇಲು,
ಬೆಳದಿಂಗಳಿರುಳಲ್ಲು...
ಸಂಗಾತಿ ನೀನೇ ಅಲ್ಲವೇ...?  

ಮತ್ತೆ ಮತ್ತೆ ಬಯಸಿ ನಿನ್ನ
ಮೂರಿದ್ದ ಮಾತುಗಳು, ನೂರಾಗಿವೆ...
ಪ್ರೀತಿ ಮಾಡೆ ನನ್ನ, ಮುತ್ತುಗಳು ನೂರಾರಿವೆ...
    *    *    *

ಜೀವವೇ ಜಾರಿ ನಿನ್ನ ಕೂಡಿಯಾಗಿದೆ
ಕಾಯಲಾರೇ ಇನ್ನ, ಪ್ರೀತಿಯಾಗಿದೆ...
ನಿನ್ನದೇ ಧ್ಯಾನವೀಗ ರೂಢಿಯಾಗಿದೆ
ಒಪ್ಪಿಕೊಳ್ಳೇ ಎನ್ನ,.. ಭೀತಿಯಾಗಿದೆ...


                           - ಸಂಪತ್ ಕುಮಾರ್