ನಿನದೊಂದು ಸ್ಪರ್ಶಕೆ
ಜೀವ ತಣಿದಿದೆ
ಮೈಯ ತುಂಬಾ
ರೆಕ್ಕೆ ಮೂಡಿದೆ
ಪೋಲಿ ಹೃದಯ
ಬೇಲಿ ದಾಟಿದೆ,,,
ಆಹ್: ಒಂದೊದು ಉಸಿರಲೂ ನಶೆಯೇ
ಕಣ್ತುಂಬಾ ಕನಸಿನ ಮಳೆಯೇ...
ನಿನ್ನ ತುಟಿಶಿಲ್ಪದ ಮೇಲೆ ಗುಟ್ಟೇಳುವಾಸೆ,,,
ಮುಂಗುರುಳ ಬನದಲ್ಲಿ ಮಿಂದೇಳುವಾಸೆ,,,
ಪ್ರೇಮಪುಷ್ಪ ಚಪ್ಪರದೊಳು
ಪ್ರಣಯ ಮಹೂರ್ತದ ವೇಳೆ,
ಪ್ರೀತಿಯ ವರಿಸುವೆ ಬಾರೇ,, ಒಮ್ಮೆ ನನ್ನ ಸೇರೇ,,,
ಮೈಗೆ ಮೈ ಸೋಕಿದೊಡೆ
ದಿಗಂತಗಳೆಲ್ಲಾ ದ್ವಂಸ,,,
ಚುಂಬನದ ಜೇನುನೊಣ
ಕೆನ್ನೆಯನೊಮ್ಮೆ ಕಚ್ಚಿದೊಡೆ
ಅಂಗಾಂಗ ರಮಿಸಿ, ಅಣುಕಣ
ಅಂಬರಕೆ ಅಪ್ಪುಗೆಯ ನೀಡುತಿದೆ,,,
ಆಹ್: ಒಂದೊಂದು ಕ್ಷಣವೂ ಮರಣವೇ
ನರನಾಡಿ ತಲ್ಪವೂ ಮೃತ್ಯುಕೂಪವೇ,,,
ನಿನ ನೀಳತೋಳ ಸೆಲೆಯಲ್ಲಿ ಮತ್ತೆ ತಬ್ಬಿ ಬದುಕುವಾಸೆ,,,
ನಿನ್ನ ನಯನ ಕಡಲ ಅಮೃತವಾ ಕುಡಿದು ಸಾವ ಗೆಲ್ಲುವಾಸೆ,,,
ಪ್ರೇಮಪುಷ್ಪ ಚಪ್ಪರದೊಳು
ಪ್ರಣಯ ಮಹೂರ್ತದ ವೇಳೆ,
ಪ್ರೀತಿಯ ವರಿಸುವೆ ಬಾರೇ,, ಒಮ್ಮೆ ನನ್ನ ಸೇರೇ,,,
- ಸಂಪತ್ ಕುಮಾರ್.




