ನಾನು,.. ನಿನ್ನ ಕಣ್ಣ ನೀಲಿ ಕಡಲಲ್ಲಾಡೋ ಮೀನು,
ನಾನು,.. ನಿನ್ನ ಕೆನ್ನೆ ದಿಣ್ಣೆಯ ಮುಸ್ಸಂಜೆ ಬಾನು,
ನಾನು,.. ಉನ್ಮತ್ಥನಾಗೋ ಹೊಂಗನಸೇ ನೀನು...
ನೀನು, ಕನ್ನಡಿಯಲಿ ಕಾಣೋ ಪ್ರತಿಬಿಂಬ ನಾನು,
ನೀನು, ಏಕಾಂತದಿ ನುಡಿಯೋ ಪಿಸುದನಿಯೇ ನಾನು,
ನೀನು,.. ನಕ್ಕಾಗ ನಿನ್ನ ಕೆನ್ನೆ ಗುಳಿಯೇ ನಾನು...
* * *
ಆಲಿಸು,,,
ಆಲಂಗಿಸು,,,
ಆಗೊಮ್ಮೆ ಈಗೊಮ್ಮೆ ನಿನ್ನಲ್ಲಿ ಅಂಕುರಿಸೋ ಅಂಜಿಕೆಯ
ಮುತ್ತಾಗಿ ನನ್ನೆದೆಗೆ ನೀ ಅರ್ಪಿಸು...
ಹೋಲಿಸು,,,
ಆಲೋಚಿಸು,,,
ಒಟ್ಟಾರೆ ಒಲವಾಗಿ ನಿನ್ನಲ್ಲಿ ಝೇoಕರಿಸೋ ಸಂಭ್ರಮವ
ಅಲೆಯಾಗಿ ನನ್ನೆಡೆಗೆ ನೀ ತೇಲಿಸು...
ನಾನು,.. ನಿನ್ನ ತುಟಿಯ ಹೂವಿನ ಸಿಹಿಯಾದ ಜೇನು,
ನಾನು,.. ನನಗಿಂತ ಪ್ರೀತಿಸೋ ನನ್ನವಳೇ ನೀನು,
ನೀನು,.. ನನ್ನೆಲ್ಲಾ ಭಾವವ ಪ್ರಿಯವಾಗಿ ಕಾಣು,..
* * *
ಆಶಿಸು,..
ಆನಂದಿಸು,..
ನೀ ಬೀರೋ ಪ್ರತಿನೋಟ ನನ್ನನ್ನೇ ದಿಟ್ಟಿಸಲಿ ಎಂಬೆಲ್ಲ
ಆಸೆಗಳ ನಿನ್ನಲ್ಲು ನೀ ಪೋಷಿಸು...
ಹರ್ಷಿಸು,..
ಆಕರ್ಷಿಸು,..
ಅನುಗಾಲ ನಿನ್ನನ್ನು ಹಂಬಲಿಸಿ ಎಲ್ಲೆಲ್ಲೊ ಅಲೆವಾಗ
ಮೃದುವಾಗಿ ನನ್ನೆದೆಯ ನೀ ಸ್ಪರ್ಶಿಸು...
ನಾನು,.. ನಿನ್ನ ಕಣ್ಣ ನೀಲಿ ಕಡಲಲ್ಲಾಡೋ ಮೀನು,
ನಾನು,.. ನಿನ್ನ ಕೆನ್ನೆ ದಿಣ್ಣೆಯ ಮುಸ್ಸಂಜೆ ಬಾನು,
ನಾನು,.. ಉನ್ಮತ್ಥನಾಗೋ ಹೊಂಗನಸೇ ನೀನು...
ನೀನು, ಕನ್ನಡಿಯಲಿ ಕಾಣೋ ಪ್ರತಿಬಿಂಬ ನಾನು...
ನೀನು, ಏಕಾಂತದಿ ನುಡಿಯೋ ಪಿಸುದನಿಯೇ ನಾನು...
ನೀನು,.. ನಕ್ಕಾಗ ನಿನ್ನ ಕೆನ್ನೆ ಗುಳಿಯೇ ನಾನು...
- ಸಂಪತ್ ಕುಮಾರ್



