Thursday, September 29, 2011

ಇಷ್ಟೇ ನನ್ನಾ ಬಯಕೆ


ಇಷ್ಟೇ ನನ್ನಾ ಬಯಕೆ
ಇಷ್ಟೇ ನನ್ನಾ ಹರಕೆ 
ನಂದಿಷ್ಟೇ ವ್ಯಕ್ತ ಕನವರಿಕೆ, ಪ್ರೀತಿಸು ಬಾರೆ ಬಾ...
ಇಷ್ಟೇ ನನ್ನಾ ಆಸೆ 
ಇಷ್ಟೇ ನನ್ನಾ ಭಾಷೆ 
ನಂದಿಷ್ಟೇ ತಪ್ತ ಗುನುಗುನಿಕೆ, ಪ್ರೀತಿಸು ಬಾರೆ ಬಾ...

ಹೆದರೊ, ಹೆದರೋ ಈ ವಯಸು
ಬೆದರೊ, ಬೆದರೋ ಕಣ್ ಕನಸು
ಬೇವರೊ, ಬೆವರೋ ಮೈಮನಸು, ತಾಳಲಾರೆ ನಾ...
ಚಲನ ವಲನ ಕಣ್ಣಲ್ಲೇ
ಮಿಲನ ಮಿಲನ ನನ್ನಲ್ಲೇ
ಸುಮನ ಗಮನ ಬಾನಲ್ಲೇ, ಹೇಳಲಾರೆ ನಾ...
-------------------------------------------------------------------------
ಕಣ್ಣ ತುಂಬೆಲ್ಲಾ ನೀನೆ ನಿಂತಿರೆ, ಹೇಗೆ ಬರಲಮ್ಮ ನಾ ಮರಳಿ ಪ್ರಜ್ಞೆಗೆ
ಯಾರ ಹಂಗಿಲ್ಲ, ಯಾರೂ ಬೇಕಿಲ್ಲ, ಮನದಿ ಮಾತಾಡೊ ಪ್ರೀತಿಗೆ...

ಉರುಳಿ ಉರುಳಿ ಹೋಗಲಿ ಕಾಲ 
ಉಳಿದು ಉಳಿದು ಕಾಯುವೆ ಬದುಕೆಲ್ಲಾ...
ಕಳೆದು ಕಳೆದು ಹೋಗಲಿ ಉಸಿರು 
ಬೆಳೆದು ಬೆಳೆದು ಬಾಳಲಿ ಈ ಪ್ರೀತೀ...

ಬಂದು ಸೇರು ನೀ, ಬಾಹು ಕವಚಕ್ಕೆ ನನ್ನ ಆಹ್ವಾನ ಕಾಯದೆ 
ಸ್ಪರ್ಶ ಮಾತಾಡಿ ಗೀತೆ ಗುನುಗಲಿ, ನಾನು ನಿನಗೇನೂ ನೀನು ನನಗೇನೂ ಹೇಳದೆ...
-------------------------------------------------------------------------
ಹಣಿಸೋ, ಮಣಿಸೋ ಈ ಚಳೀಲಿ
ನೆನೆಸೋ, ನೆನೆಸೋ ಮಳೇಲಿ
ಇರು ನೀ, ಇರು ನೀ ಎದೆಯ ಗೂಡಲ್ಲೇ...
ನಡುಗೋ, ನಡುಗೋ ಮೈಯಲ್ಲೂ 
ಉಡುಗೋ, ಉಡುಗೋ ಉಸಿರಲ್ಲೂ 
ಇರು ನೀ, ಇರು ನೀ ಎದೆಯ ಗೂಡಲ್ಲೇ...

ನಿನ್ನಾ ತೋಳಲ್ಲೇ ಸತ್ಕರಿಸೇ
ಮುಂಗುರುಳಲ್ಲೇ ನೇವರಿಸೆ
ನಂದಿಷ್ಟೇ ಸ್ಪಷ್ಟ ಚಡಪಡಿಕೆ, ಪ್ರೀತಿಸು ಬಾರೆ ಬಾ...
ಇಷ್ಟೇ ನನ್ನಾ ಆಸೆ
ಇಷ್ಟೇ ನನ್ನಾ ಭಾಷೆ 
ನಂದಿಷ್ಟೇ ತಪ್ತ ಗುನುಗುನಿಕೆ, ಪ್ರೀತಿಸು ಬಾರೆ ಬಾ...

                                                 - ಸಂಪತ್ ಕುಮಾರ್

No comments:

Post a Comment