ಮಲ್ಲಿಗೆ ಮೊಗ್ಗು ಅರಳಿದಂಗೆ
ಶ್ರಾವಣೀನ ಕಂಡಾಗ ಸೋತೊಗಿದ್ದೆ,
ಅವಳ್ಯಾರೋ, ಯಾವೂರೋ,
ಗೊತ್ತಿಲ್ಲ, ಚಿಂತಿಲ್ಲ,
ನನ್ ಪಾಡಿಗೆ ನಾ ಪ್ರೀತಿಸ್ತಾ, ನಿಂತ್ಕಂಡಿದ್ದೆ...
ಅವಳಿಗೂ ಹಂಗೇನೇ ಅಂದ್ಕಂಡಿದ್ದೆ ...
ಏನಿತ್ತೋ, ಯಾರಿಗೊತ್ತು,
ಹೇಗೋಯ್ತೋ, ಯಾರಿಗೊತ್ತು,
ಎರಡು ದಿನ ಕಳೆದೋಯ್ತು, ಅವಳ ಜೊತೆಗೇನೆ,
ಯಾರಯಾರು ಜೋತೆಗಿದ್ರೋ
ದೇವ್ರಾಣೆ ನೆನಪಿಲ್ಲ
ಅವಳುಟ್ಟಿದ್ದ ಆ ಹಸಿರು ಸೀರೆ ಬಿಟ್ಟ್ರೆ...
ಆ ಸೀರೆ ಸೆರಗಿನ ಹೂವ ಬಿಟ್ಟ್ರೆ...
ಉರಿಬಿಸಿಲಲ್ಲಿ ಮಳೆಬಂದು,
ನಿಂತೊದಾಗ ತಂಪಾದಂಗೆ,
ತಣ್ಣಗಿತ್ತು ನಿನ್ನೊಟ್ಟಿಗೆ, ಈ ನನ್ ಜೀವಾ,
ಮಳೆನಿಂತ್ರು ಮರದಹನಿ
ನಿಲ್ಲೋಲ್ಲ ಅನ್ನೋ ಹಂಗೆ
ಎದೆಗೊತ್ತಿ ಬರ್ತಿದ್ದಾ ವಿರಹದ ಕಾವಾ,
ನೆನೆನೆನೆದು ಸಾಲಿಸ್ತು, ಕಣ್ಣಿನ ತೇವಾ...
ಚೆಂದಾನೆ ಹೈದೇರ
ನೋಡಿದೇಟ್ಗೆ ಪ್ರೀತ್ಸೋನು
ನಂಗೇನು ಹೊಸದಲ್ಲ, ಪ್ರೀತಿ ಪ್ರೇಮ...
ಎಗ್ಗಿಲ್ದೆ, ಹೆಣ್ಣಿಂದ್ ಹೆಣ್ಣಿಗೆ
ಹಾರಾಡೋ ಮನಸನ್ನೂ
ಬಲೆಹಾಕಿ ಹಿಡಿದೊಳು, ಶ್ರಾವಣಿ ನೀನೆ...
ಬಲೆಗೆ ಬಿದ್ದ, ಗಂಡುನವಿಲು ನಾನೇ...
ಮದ್ರಾಸಿ ಮಣ್ಣಲ್ಲಿ
ಮಲ್ಲಿಗೆ ಮೊಗ್ಗು ಅರಳಿದಂಗೆ
ಶ್ರಾವಣೀನ ಕಂಡಾಗ ಸೋತೊಗಿದ್ದೆ,..
ನನ್ ಪಾಡಿಗೆ ನಾ ಪ್ರೀತಿಸ್ತಾ, ನಿಂತ್ಕಂಡಿದ್ದೆ...
- ಸಂಪತ್ ಕುಮಾರ್

Preetsu.. preetsu.. arogyakke olledu :-)
ReplyDeletepreethisthini, preethisthini, preethisthaane irthini...
ReplyDeletenice
ReplyDelete