ನಕ್ಕಾಗ ನೀನು, ನಾಚುತ್ತ ಬಾನು,
ಮಳೆಯಾಯ್ತು ನೋಡೇ,
ಹೇ, ಮುದ್ದು ನಾರಿ,,, ನೀ, ಸುರಲೋಕ ಕಿನ್ನರಿ...
ತಂಗಾಳಿ ನಿನ್ನ, ಗಲ್ಲಾನ ಗಿಲ್ಲಿ,
ಕಂಪಿಸಲು ನೀನು, ಕೆಂಪಾದ ಬಿಸಿಲು,
ತಂಪಾಯ್ತು ನೋಡೇ,
ಹೇ, ಮುದ್ದು ನಾರಿ,,, ನೀ, ಸುರಲೋಕ ಕಿನ್ನರಿ...
* * * * *
ಸೋಲಲಾರೆ ಸಾವಿಗೂನೂ,,,
ನಿನ್ನ ರೂಪ ಮತ್ತೆ ಕಾಣೋ,
ಸಣ್ಣ ಸುಳಿವು ಸಿಕ್ಕರೂನೂ...
ಸೇರಬಲ್ಲೆ, ನಿನ್ನ-ನಾನು,,,
ಒಮ್ಮೆ ಒಪ್ಪಿ, ಕೂಗು ನೀನು
ಕೊನೆಯ ಉಸಿರು ನಿಂತರೂನೂ...
* * * * *
ಅಮೃತವ ಸೂಸಿ, ಅಂಗಾಲಿನಲ್ಲಿ,
ನಡೆದಾಗ ನೀನು, ಕಗ್ಗಲ್ಲು ಕೂಡ,
ಹೂವಾಯ್ತು ನೋಡೇ,
ಹೇ, ಮುದ್ದು ನಾರಿ,,, ನೀ, ಸುರಲೋಕ ಕಿನ್ನರಿ...
* * * * *
ಸಾಗುಬಾರೇ ಜೋಡಿಯಾಗಿ,,,
ಬಾಳ ಎಲ್ಲ, ದಾರಿಯಲ್ಲಿ,
ಏನೇ ಇರಲಿ ಅಡ್ಡಿಯಾಗಿ...
ಮೀಸಲಿಡುವೆ ನನ್ನೇ ನಾನು,,,
ನಿಜದ ರೂಪ ನೀಡಲೆಂದು,
ನಿನ್ನ ಎಲ್ಲ ಕನಸಿಗೂನೂ...
* * * * *
ಚೆಂದುಟಿಗಳಲ್ಲಿ ಉಲ್ಲಾಸ ಚೆಲ್ಲಿ,
ನುಡಿವಾಗ ನೀನು, ನೋವೆಲ್ಲ ಕರಗಿ
ನಗುವಾಯ್ತು ನೋಡೇ,
ಹೇ, ಮುದ್ದು ನಾರಿ,,, ನೀ, ಸುರಲೋಕ ಕಿನ್ನರಿ...
ಕಣ್ಣಂಚಿನಲ್ಲಿ ಮಿಂಚನ್ನು ಚೆಲ್ಲಿ,
ನಕ್ಕಾಗ ನೀನು, ನಾಚುತ್ತ ಬಾನು,
ಮಳೆಯಾಯ್ತು ನೋಡೇ,
ಹೇ, ಮುದ್ದು ನಾರಿ,,, ನೀ, ಸುರಲೋಕ ಕಿನ್ನರಿ...
ನೀ, ನನ್ನ ಪಾಲಿಗೆ ಅಚ್ಚರಿ...
ನೀ, ನನ್ನ ಪಾಲಿಗೆ ಅಚ್ಚರಿ...
- ಸಂಪತ್ ಕುಮಾರ್