ಪ್ರೇಮಿ : ನೋಡಬಾರದೇನು ಒಮ್ಮೆ ನನ್ನೀ ಕಣ್ಣನು,
ಪ್ರೇಮಿ : ಕಾಣಲಾರೆ ನಿನ್ನ ಬಿಟ್ಟು ಬೇರೆ ಹೆಣ್ಣನು.
ಪ್ರೇಮಿ : ಮರೆತಾಯಿತು ನನ್ನೇ ನಾನು,
ಪ್ರೇಮಿ : ನೀನಿಲ್ಲದೆ ಸೊನ್ನೆ ನಾನು...
ಪ್ರೇಯಸಿ : ನನ್ನಲೂ ಪ್ರೀತಿ ಮೂಡಿದೆ,
ಪ್ರೇಯಸಿ : ನಾಚಿಕೆ ಅಡ್ಡಿಯಾಗಿದೆ.
ಪ್ರೇಯಸಿ : ಹೇಳಬಾರದೇನು ಒಮ್ಮೆ ನೀನೇ ಎಲ್ಲವಾ,
ಪ್ರೇಯಸಿ : ಕಾಯಬೇಕು ಇನ್ನು ಎಷ್ಟು ಸಾಯಂಕಾಲವಾ..?
* * * * *
ಪ್ರೇಮಿ : ಮಾತೇ ಆಡದಿದ್ದರೂ
ಪ್ರೇಮಿ : ಸೋತು ಹೋಗಲಿಲ್ಲವೇ
ಪ್ರೇಮಿ : ನಿನ್ನ ಮುಂದೆ, ನಾನು...
ಪ್ರೇಮಿ : ಎದುರಿಗೆದುರು ಸಿಕ್ಕರೂ
ಪ್ರೇಮಿ : ಮೌನದಲ್ಲೇ ನಕ್ಕರೂ
ಪ್ರೇಮಿ : ಅಂಜಿ ನಿಂತೆ, ನಾನು...
ಪ್ರೇಯಸಿ : ಮನದ ನದಿಯಲಿ ಆಸೆ ದೋಣಿಯಾ,,, ದಿನವು ನಡೆಸುವಾ, ನಾವಿಕ ಆದೆಯಾ...
ಪ್ರೇಮಿ : ತುಟಿಯ ತುದಿಯಲಿ ಹೇಗೆ ತಡೆಯಲಿ,,, ಉಕ್ಕಿ ಬರುತಿಹಾ, ಭಾವುಕ ಭಾಷೆಯ...
* * * * *
ಪ್ರೇಮಿ : ನೀಡಬಾರದೇನು ಒಮ್ಮೆ ನಿನ್ನೀ ಕೈಯನು,
ಪ್ರೇಮಿ : ಸೇರಲಾರೆ ನಿನ್ನ ಬಿಟ್ಟು ಬೇರೆ ಯಾರನು...
ಪ್ರೇಯಸಿ : ಚಾಚಬಾರದೇನು ನೀನೇ ನಿನ್ನೀ ತೋಳನು,
ಪ್ರೇಯಸಿ : ಬಾಳಬೇಕು ಅಲ್ಲೇ ನನ್ನ ಪೂರ ಬಾಳನು...
* * * * *
ಪ್ರೇಮಿ : ನಿನ್ನ ಬಿಡುವಿನಲ್ಲೆಲ್ಲಾ
ಪ್ರೇಮಿ : ಜೊತೆಗೆ ಕೂತರೆ ನಾನು,
ಪ್ರೇಮಿ : ಕಳೆಯದೇನು ಬೇಸರ...
ಪ್ರೇಮಿ : ಮುಗ್ದಳಾಗಿ ನೋಡುತ್ತಾ
ಪ್ರೇಮಿ : ನಾಚಿಕೊಂಡರೆ ನೀನು,
ಪ್ರೇಮಿ : ಸೆಳೆಯದೇನು ಕಾತುರ...
ಪ್ರೇಯಸಿ : ಹಲವು ತರದಲಿ ಒಲವು ಮೂಡಿದೆ,,, ನೀನೆ ಗುರ್ತಿಸಿ, ಅರ್ಥವಾ ಹೇಳೆಯಾ...
ಪ್ರೇಮಿ : ದಿನವು ಮನದಲಿ ನಿನ್ನ ಬಿಂಬವಾ,,, ನಾನೆ ಅರ್ಚಿಸಿ, ಪ್ರಿಯತಮ ಆದೆನಾ...
* * * * *
ಪ್ರೇಮಿ : ಹಾಡಬಾರದೇನು ಒಮ್ಮೆ ನನ್ನೀ ಹಾಡನು,
ಪ್ರೇಮಿ : ಕೇಳಲಾರೆ ನಿನ್ನ ಬಿಟ್ಟು ಯಾರ ಮಾತನೂ.
ಪ್ರೇಮಿ : ಮರೆತಾಯಿತು ನನ್ನೇ ನಾನು,
ಪ್ರೇಮಿ : ನೀನಿಲ್ಲದೇ ಸೊನ್ನೆ ನಾನು...
ಪ್ರೇಯಸಿ : ನನ್ನಲೂ ಪ್ರೀತಿ ಮೂಡಿದೆ,
ಪ್ರೇಯಸಿ : ನಾಚಿಕೆ ಅಡ್ಡಿಯಾಗಿದೆ.
ಪ್ರೇಯಸಿ : ಹೇಳಬಾರದೇನು ಒಮ್ಮೆ ನೀನೆ ಎಲ್ಲವಾ
ಪ್ರೇಯಸಿ : ಎಂದಿಗೂನು ನಿನ್ನ ಗೆಳತಿ ನಾನೇ ಅಲ್ಲವಾ...
- ಸಂಪತ್ ಕುಮಾರ್

No comments:
Post a Comment