Thursday, September 04, 2014

ಮನಸೇಕೋ ತುಡಿಯುತಿದೆ,,,

ಮನಸೇಕೋ ತುಡಿಯುತಿದೆ,,, 
ಪ್ರೀತಿಯನು ಇಂದೇ,,, ಹೇಳಿಬಿಡು ಎಂದು... 
ಇನ್ನೆಷ್ಟು ದಿವಸ ಕಾಯುವುದು, ನೊಂದು
ಪ್ರತಿಸಂಜೆಯಲ್ಲೂ ವಿರಹದಲಿ ಬೆಂದು...
ಮನಸೇಕೋ ತುಡಿಯುತಿದೆ,,,
ಪ್ರೀತಿಯನು ಇಂದೇ,,, ಹೇಳಿಬಿಡು ಎಂದು...
             *    *    *

ಕಣ್ಣಲ್ಲಿ, ಎಷ್ಟೆಲ್ಲಾ ಹೇಳದ ಮಾತಿವೆ 
ತುಟಿಯಲ್ಲಿ ಮಾತ್ರ, ಮಾತಿರದ ಮೌನವೇ...
ಉಸಿರಾಟದಲ್ಲೂ ಬರಿ ನಿನ್ನ ಧ್ಯಾನವೇ...

ನಿನಗೆಂದೇ ಇನ್ನು, ಈ ನನ್ನ ಜೀವ,,, 
                         ಕೊಲ್ಲುತಿವೆ ನನ್ನ, ನಿನ್ನ ಹಾವ ಭಾವ... 

ತುಟಿಯೇಕೋ ತೊದಲುತಿದೆ,
ಹೆಸರಿಡಿದು ಹೇಗೆ,,, ಕೂಗುವುದು ಎಂದು...
ಇನ್ನೆಷ್ಟು ಕನಸ ಕಾಣುವುದು, ನೊಂದು
ಪ್ರತಿಸಂಜೆಯಲ್ಲೂ ವಿರಹದಲಿ ಬೆಂದು...
ಮನಸೇಕೋ ತುಡಿಯುತಿದೆ,,,
ಪ್ರೀತಿಯನು ಇಂದೇ,,, ಹೇಳಿಬಿಡು ಎಂದು...
             *    *    *

ನಿನ್ನನ್ನೇ, ನನ್ನೆಲ್ಲಾ ಸಮ್ಮೋಹ ಕಾದಿದೆ
ಎದುರಲ್ಲಿ ಮಾತ್ರ ನೀನಿರದ ನೋವಿದೆ...
ಅನುರಾಗವೆಲ್ಲಾ ಬರಿ ನಿನ್ನೇ, ಬೇಡಿದೆ...

ನಿನಗೆಂದೇ ಇನ್ನು, ಈ ನನ್ನ ಜೀವ,,,
                          ಕೊಳ್ಳುವೆಯ ನೀನೇ, ನನ್ನೆದೆಯ ಹೂವ...

ಮನಸೇಕೋ ತುಡಿಯುತಿದೆ,,,
ಪ್ರೀತಿಯನು ಇಂದೇ,,, ಹೇಳಿಬಿಡು ಎಂದು... 
ಇನ್ನೆಷ್ಟು ದಿವಸ ಕಾಯುವುದು ನೊಂದು,
ಪ್ರತಿಸಂಜೆಯಲ್ಲೂ ವಿರಹದಲ್ಲಿ ಬೆಂದು...
ಎದೆಯೇಕೋ ಎದರುತಿದೆ
ನನ್ನೊಲವ ನೀನು,,, ಒಪ್ಪುವೆಯ ಎಂದು...

                                      - ಸಂಪತ್ ಕುಮಾರ್

No comments:

Post a Comment