Wednesday, September 18, 2013

ಹೋಗಿ ಬಾ,,, ಓ ಗೆಳೆಯ (Dedicated to Shivu and Santhosh)




ಹೋಗಿ ಬಾ,,, ಓ ಗೆಳೆಯ
ಸುತ್ತಿ ಬಾ ಈ ಚಿಕ್ಕ ಇಳೆಯ.
ಕಳಚುತಲಿ ಅಜ್ಞಾನ ಪೊರೆಯ,
ಕಡೆದು ತಾ ಬಾಳೆಂಬ ಶಿಲೆಯ.
ಈಜುತಲಿ ಕನಸುಗಳ ಹೊಳೆಯ,
ಕಲಿತು ಬಾ ಬದುಕುವ ಕಲೆಯ...

ಸುರಿಸುತಲಿ ಸಂತಸದ ಮಳೆಯ,
ಸರಿಸು ನೀ ಕಹಿನೆನಪ ತೆರೆಯ.
ಕಿತ್ತೆಸೆದು ಕಷ್ಟಗಳ ಕಳೆಯ,
ಬೆಳೆದು ತಾ ಧನಕನಕ ಬೆಳೆಯ.
ಹೊತ್ತು ಬಾ ಅನುಭವದ ಹೊರೆಯ,
ಹರಸುವೆವು ನಾವ್ ಹಾರೈಕೆ ಸೆಲೆಯ...

ಬೀಸಿಹುದು ಈ ಸ್ನೇಹ ಬಲೆಯ,
ಮರೆಯದಿರು ಈ ನಮ್ಮ ನೆಲೆಯ.
ಆಲಿಸುತಿರು ನಮ್ಮೆಲ್ಲ ಕರೆಯ,
ತಾಯಿ, ತಾಯ್ನಾಡ ಮಮತೆಯ ಮೊರೆಯ.
ಹರಿಸುತಲಿ ಹೊಸತನದ ಅಲೆಯ,
ಮರಳಿ ಬಾ ಇಲ್ಲೆ, ಓ ಗೆಳೆಯ...

                                         -ಕೆ. ಸಿ. ಸಂಪತ್ ಕುಮಾರ್

No comments:

Post a Comment