M: ಕಣ್ತುಂಬ ನಿನ್ನ ಬಿಂಬ
ಕನಸಂತೆ ಇರುವಾಗ
ಹಗಲೇಕೆ ಇರುಳೇತಕೆ
ನೀ ಜೊತೆಯಿರದ ಕ್ಷಣವೇತಕೆ...?
F: ಕಣ್ತುಂಬ ನಿನ್ನ ಬಿಂಬ
ಕನಸಂತೆ ಇರುವಾಗ
ಹಗಲೇಕೆ ಇರುಳೇತಕೆ
ನೀ ಜೊತೆಯಿರದ ಕ್ಷಣವೇತಕೆ...?
* * *
M: ನನ್ನೆದುರು ಕುಳಿತಾಗ
ಮಾತಾಡಿ ಮಾಡದಿರು ಕಾಲಹರಣ.
ಎಂದಿನಂತೆ ಬರುವೆಯಲ್ಲ ಸ್ವಪ್ನದಲ್ಲಿ,
ಅಲ್ಲೆಗೆಲ್ಲಾ ಉಳಿಸಿಕೋ...
ಎಷ್ಟುಸಾರಿ ನೋಡಿದರು
ನಿನ್ನಂದ ನಯನಕೆ ಸಿಹಿಹೂರಣ.
ಹೂವಿನಂತೆ ನಗುವೆಯಲ್ಲ ಮೌನದಲ್ಲಿ,
ಎದೆಗೆ ಒಮ್ಮೆ ಒರಗಿಕೋ...
M: ಇಳಿಸಂಜೆ ಮಳೆಮೋಡ
ಒಲವನ್ನೇ ಸುರಿವಾಗ
ನಿನಗೇಕೆ ಈ ನಾಚಿಕೆ
ನನ್ನೊಲವಲ್ಲಿ ನೆನೆಯೋದಕೆ...?
* * *
M: ಏಕಾಂಗಿ ನಾ ನಡೆವಾಗ
ಬಿಸಿಲಾದ ಕಾಡುದಾರಿ, ಬಾಳು ಬಂಧನ
ಕೈಹಿಡಿದು ನೀ ಬರಲು
ಹೂದೋಟ ಕಾಲುದಾರಿ, ಇದು ಬೃಂದಾವನ
F: ಒಂಟಿಯಾದ ಚಲನಕಿಲ್ಲ, ಯಾವ ಅರ್ಥ
ನನ್ನನೊಮ್ಮೆ ಸ್ಮರಿಸಿಕೋ...
ನನ್ನ ನಿನ್ನ ಮಿಲನವಿಲ್ಲಿ, ಅಲ್ಲ ವ್ಯರ್ಥ
ಬದುಕಾಗಿ ವರಿಸಿಕೋ...
F: ಮನತುಂಬ ನಿನ್ನ ಕಾಂತಿ
ಬೆಳಕಾಗಿ ಇರುವಾಗ
ಈ ಉಷೆಯೇಕೆ, ಶಶಿಯೇತಕೆ...
ನೀನಿರುವಾಗ ಉಸಿರೇತಕೆ...?
* * *
M: ಕಣ್ತುಂಬ ನಿನ್ನ ಬಿಂಬ
ಕನಸಂತೆ ಇರುವಾಗ
ಹಗಲೇಕೆ ಇರುಳೇತಕೆ
ನೀ ಜೊತೆಯಿರದ ಕ್ಷಣವೇತಕೆ...?
F: ನೀನಿರದಂತ ಬದುಕೇತಕೆ...?
- ಸಂಪತ್ ಕುಮಾರ್
No comments:
Post a Comment