ನಿನ್ನೊಲವ ಸುಳಿಯಲ್ಲಿ, ಬಂದಿಯಂತೆ
ನೀನಾಗೆ ಬಳಿಬಂದು
ನನ್ನೆದೆಯ ಅಪ್ಪಿಬಿಡು, ಎಂದಿನಂತೆ...
ಕಣ್ಣುಗಳ ಪೆಟ್ಟಿಗೆಗೆ,
ಕನಸುಗಳ ತುಂಬಿಕೊಡು ಕಂತೆ ಕಂತೆ,,,
ಸಲ್ಲಾಪ ಸವಿಯಲ್ಲಿ
ಗಲ್ಲವನು ಕಚ್ಚಿಬಿಡು, ಎಂದಿನಂತೆ...
* * * * *
* * * * *
ನಿನ್ನ ಹೃದಯ ದೋಣಿಯಲ್ಲಿ ನಾನೇ ಯಾತ್ರಿಕ,
ಪ್ರೇಮದಲ್ಲಿ ತೇಲುವಾಗ, ಮೂಕಭಾಷಿಕ...
ಕಣ್ಣ ಸುತ್ತ ಒಮ್ಮೆ ನೋಡು, ಕನಸ ಕೋಟೆಯ,
ಕಾವಲಾಗಿ ಕಾಯಲೆಂದು, ನಿನ್ನ ಪ್ರೀತಿಯಾ...
ನಾ ನೋಡೋ ಆ ರವಿಯು,
ಮುತ್ತಿಡುವ ನಿನ ಹಣೆಯ, ಬಿಂದಿಯಂತೆ
ನೀನಾಗೆ ಈ ತುಟಿಯ,
ಬೇಕೆಂದೇ ಮುಚ್ಚಿಹಿಡಿ, ಎಂದಿನಂತೆ...
* * * * *
ನಿನ್ನ ಕಂಠ ವೀಣೆಯಲ್ಲಿ ನಾನೇ ಗಾಯನ,
ರಾಗಲಹರಿ ಮೀಟುವಾಗ, ರೋಮಾಂಚನ...
ಅರ್ಥ ಬೇಡ ನಾವು ಆಡೋ, ಎಲ್ಲ ಮಾತಿಗೂ,
ನಿನ್ನ ಸನಿಹ ಒಂದೇ ಸಾಕು, ಸಾವಿನಾಚೆಗೂ...
ನನಗೀಗ ಈ ವಿರಹ,
ನೀರಮೇಲೆ ಇದ್ದೂ ಇರದ, ನೀಲಿಯಂತೆ
ನೀನಾಗೆ ನನ್ನೆದುರು,
ಬೆಳಕಾಗಿ ಮಿಂಚಿಬಿಡು, ಎಂದಿನಂತೆ..
* * * * *
ಈಗೀಗ ಈ ಮನವು
ಅರ್ಥ ಬೇಡ ನಾವು ಆಡೋ, ಎಲ್ಲ ಮಾತಿಗೂ,
ನಿನ್ನ ಸನಿಹ ಒಂದೇ ಸಾಕು, ಸಾವಿನಾಚೆಗೂ...
ನನಗೀಗ ಈ ವಿರಹ,
ನೀರಮೇಲೆ ಇದ್ದೂ ಇರದ, ನೀಲಿಯಂತೆ
ನೀನಾಗೆ ನನ್ನೆದುರು,
ಬೆಳಕಾಗಿ ಮಿಂಚಿಬಿಡು, ಎಂದಿನಂತೆ..
* * * * *
ಈಗೀಗ ಈ ಮನವು
ನಿನ್ನೊಲವ ಸುಳಿಯಲ್ಲಿ, ಬಂದಿಯಂತೆ
ನೀನಾಗೆ ಬಳಿಬಂದು
ನನ್ನೆದೆಯ ಅಪ್ಪಿಬಿಡು, ಎಂದಿನಂತೆ...
- ಸಂಪತ್ ಕುಮಾರ್
ಕಣ್ಣುಗಳ ಪೆಟ್ಟಿಗೆಗೆ,
ಕನಸುಗಳ ತುಂಬಿಕೊಡು ಕಂತೆ ಕಂತೆ,,,
ಸಲ್ಲಾಪ ಸವಿಯಲ್ಲಿ
ಗಲ್ಲವನು ಕಚ್ಚಿಬಿಡು, ಎಂದಿನಂತೆ...
- ಸಂಪತ್ ಕುಮಾರ್

nice one.....
ReplyDeletegood
Thank you Deepak.
DeleteHosa hosa songs baritha eru nin "Estadhante"......
ReplyDeleteNav comment madtirthivi "Yendhinante"......