ನಕ್ಕಳು ಅವಳು, ನನ್ನೆದುರಿಗೆ
ಮುತ್ತುದುರಿದವು ಮನಸಿಗೆ,
ಸೋಲೊಪ್ಪಿಕೊಂಡೆನು ಆ ಸೊಬಗಿಗೆ
ಓಲಾಡೋ, ಓಲೆ ಜುಮುಕಿಗೆ...
ಇಷ್ಟೊಂದು ಅಂದದ ಈ ಅಚ್ಚರಿ,
ಕಣ್ಮುಂದೆ ಬಂದಳು, ಏನ್ಮಾಡಲಿ...
ಪ್ರೀತಿಸದೇನೆ ಹೇಗಿರಲಿ...?
-----------------------------------------
ನುಡಿ ಚೆನ್ನ,
ನುಡಿಯುತಿರು ಚಿನ್ನ,
ನಿನ್ನ ನುಡಿಮುತ್ತುಗಳನ್ನ...
ನಗು ಚಿನ್ನ,
ನುಡಿಯುವ ಮುನ್ನ,
ನಗುವ ನಿನ್ನ ನಗು ಚೆನ್ನ...
ಹೊಸಿಲ ನೀನು ದಾಟುವ ಮುನ್ನ
ದೃಷ್ಟಿ ತೆಗೆದು ಚುಂಬಿಸುವೆ ನಾ...
ಬಿಸಿಲು ನಿನ್ನ ಸುಡುವ ಮುನ್ನ
ಅಂಗೈಲಿ ನೆರಳ ನೀಡುವೆನು ನಾ...
ನಡು ಚೆನ್ನ,
ನಡೆಯುತಿರು ಚಿನ್ನ,
ನನ್ನ ಬಾಳದಾರಿಯನ್ನ...
ತೀಡು ಚಿನ್ನ,
ನಡೆವಾಗ ಹಾರಿ
ಕೆನ್ನೆ ಸವರೊ ಮುಂಗುರುಳನ್ನ...
ಹೆದರಿ ನೀನು ಬೆಚ್ಚುವ ಮುನ್ನ
ಭಯವ ತಡೆದು ಅಪ್ಪುವೆನು ನಾ...
ನಿದಿರೆ ನಿನಗೆ ಬರುವ ಮುನ್ನ
ಕಣ್ಣಲಿ ಕನಸ ತುಂಬುವೆನು ನಾ...
-----------------------------------------
ಒಪ್ಪಿಗೆ ಕೊಟ್ಟಳು, ಈ ಪ್ರೀತಿಗೆ
ಮುತ್ತುದುರಿದವು ಮನಸಿಗೆ,
ಸೋಲೊಪ್ಪಿಕೊಂಡೆನು ಆ ಸೊಬಗಿಗೆ
ಹಾಲಂಥ, ಹಣೆಯ ಸಿಂಧೂರಕೆ...
ಇಷ್ಟೊಂದು ಅಂದದ ಈ ಅಚ್ಚರಿ
ಬಾಳಲ್ಲಿ ಬಂದಳು, ಏನ್ಮಾಡಲಿ...
ಪ್ರೀತಿಸದೇನೆ ಹೇಗಿರಲಿ...?
- ಸಂಪತ್ ಕುಮಾರ್

ಬಯಸುವೆ ಈ ಭ್ರಮೆ ನಿಜವಾಗಲಿ...
ReplyDeleteGood one.....
ReplyDelete