Friday, September 11, 2015

ಹೆಜ್ಜೆ ಹೆಜ್ಜೆಗೂ

Female:  ಹೆಜ್ಜೆ ಹೆಜ್ಜೆಗೂ,
                ಜೋಡಿಯಾದೆ ನೀ,
                ಇಂದು,,, ಇನ್ನೆಂದೂ...
                ಕಣ್ಣ ದೃಷ್ಟಿಗೆ,
                ಬಣ್ಣ ತಂದೆ ನೀ,
                ಇಂದು,,, ನೀ ಬಂದು...

Male:      ನನ್ನೆದೆ,,, ಆಡಿದೆ,,, ನಿನ್ನದೇ,,, ಉಸಿರಾಟವಾ...
                ಜೀವವು,,, ಬೇಡಿದೆ,,, ನಿನ್ನದೇ,,, ಕುಡಿನೋಟವಾ...

Female:  ಬೇಗ, ಬೇಗ, ಸಾಗಬೇಡ, ಸ್ವಾರ್ಥಿ ಸಂಜೆಯೇ,,,
                ನನ್ನ ಪ್ರೇಮಿ, ಕುಳಿತೇ ಇರಲಿ, ಕಣ್ಣ ಮುಂದೆಯೇ...
Female:  ಕೆನ್ನೆ ತುಂಬಾ ಮುತ್ತು ನೀಡು, ಹೋಗೋ ಮುಂಚೆಯೇ,,,
                ನನ್ನ ಜೀವ, ಅಲೆಯುತಿರಲಿ, ನಿನ್ನ ಹಿಂದೆಯೇ...
                * * * * *

Male:      ತಿಳಿಮನಸಿನ, ಬಿಳಿಹಾಳೆಗೆ
                ನಿನ್ನ ಚಿತ್ರವೇ ಅಚ್ಚಾಗಿದೆ...
                ಬಿಸಿಉಸಿರಿನ, ಪಿಸುಮಾತಿಗೆ
                ಎದೆ ಬಡಿತವು ಹೆಚ್ಚಾಗಿದೆ...

Female:  ನಿನ್ನ ಹಾಗೇ ನಾನೂ ಕೂಡ, ಸ್ವಲ್ಪ ಹುಚ್ಚಿಯೇ,,,
                ನಿನ್ನೇ ಬಂದು ಸೇರಬಲ್ಲೆ, ಕಣ್ಣು ಮುಚ್ಚಿಯೇ...
Female:  ನಾನು ಕೇಳೋ ಎಲ್ಲ ಮಾತೂ, ನಿನ್ನ ಸುದ್ದಿಯೇ,,,
                ನಿನ್ನೇ ತುಂಬಿಕೊಂಡ ಹೃದಯ, ನೀನೇ ಕದ್ದಿಹೇ...
                * * * * *

                                                      - ಸಂಪತ್ ಕುಮಾರ್

No comments:

Post a Comment