Thursday, June 30, 2016

ಈ ಪಯಣ...


ಈ ಪಯಣ,,,
ಹೊಸ ಕಿರಣ,,,
ಒಲವರಳೊ ಶುಭದ ಶಕುನ...
ಈ ಪಯಣ,,,
ಹೊಸ ಕವನ,,,
ಹೃದಯಗಳ ಮಧುರ ಮಿಲನ...

ಇರಬಾರದೇಕೆ ಹೀಗೆ,
ಅಲೆಮಾರಿಯಾಗಿ ಬಾಳು...
ಬೇರಾಗದಿರಲಿ, ಎಂದೂ
ಕೂಡಿರುವ ನಮ್ಮ ನೆರಳು... 

ಬೆಳ್ಳಿ ಬಳಿದ ದಾರಿಯಲ್ಲಿ,
ಮೈಲುಗಲ್ಲ ಹಿಂದೆ ತಳ್ಳಿ,
ಹಸಿರಿನಲ್ಲಿ ಹಕ್ಕಿಯಾಗಿ, ಹಾರುವ...
ಬಣ್ಣ ಬಳಿದ ಬಾನಿನಲ್ಲಿ,
ನಮ್ಮದೂನು ರಂಗು ಚೆಲ್ಲಿ,
ಮೋಡಗಳಿಗೆ ಜೋಡಿಯಾಗಿ, ಸಾಗುವ...
        * * *

ನಿನ್ನಾ,,, ಅಲೆ ಅಲೆ ನಗುವಿನ, ಸಿಹಿ ಸಿಹಿ ನಶೆಯಲಿ, ನನ್ನೇ ನಾನು ಮರೆವೆ...
ನಿನ್ನಾ,,, ತಿಳಿ ತಿಳಿ ಕಂಗಳ, ಬಿಳಿ ಬಿಳಿ ತೆರೆಯಲಿ, ಕಾಣೋ ಬಿಂಬ ನನದೇ...

ಇನ್ನು, ನೀನೇ ತಾನೇ ಒಲವೆ, ನನ್ನದೆಯ ಖಾಸಾ ಗುರುತು...
ಮುಂದೆ ಸಾಗಬೇಕು ಪಯಣ, ಎಲ್ಲ ನೋವ ಇಲ್ಲೇ ಮರೆತು...
* * *

ಇರಬಾರದೇಕೆ ಹೀಗೆ,
ಅಲೆಮಾರಿಯಾಗಿ ಬಾಳು...
ಬೇರಾಗದಿರಲಿ, ಎಂದೂ
ನೀ ಹಿಡಿದ ಕೈ ಬೆರಳು...

ಹೂವು ಅರಳೋ ಹಾದಿಯಲ್ಲಿ,
ಮೈಲುಗಲ್ಲ ಹಿಂದೆ ತಳ್ಳಿ,
ಗಾಳಿಯಲ್ಲಿ ದುಂಬಿಯಾಗಿ, ಹಾರುವ...
ಬಣ್ಣ ಬಳಿದ ಬಾನಿನಲ್ಲಿ,
ನಮ್ಮದೂನು ರಂಗು ಚೆಲ್ಲಿ,
ಮೋಡಗಳಿಗೆ ಜೋಡಿಯಾಗಿ, ಸಾಗುವ...
        * * *

                                          - ಸಂಪತ್ ಕುಮಾರ್

No comments:

Post a Comment