ಕನ್ಯಾಕುಮಾರಿಯಿಂದ ಕಾಶ್ಮೀರಕ್ಕೆ
ಮೊದ ಮೊದಲು
ನವೆಂಬರ್ 25, 2016
ಶುಕ್ರವಾರ
ಆ ದಿನ ಸಂಜೆ ನನ್ನ ಸ್ನೇಹಿತ ಶರತ್ ನಿಂದ WhatsApp ಮೆಸೇಜ್ ಒಂದು ಬಂತು.
ಎಲ್ಲೋ ಅಪರೂಪಕ್ಕೊಮ್ಮೆ ಬರುವ ಶರತ್ ನ ಮೇಸಜ್, ಯಾವುದೋ Forwarded ಇರಬೇಕು ಅಂದುಕೊಂಡು, ತೆರೆದು ಓದಿದೆ.
ಯಾವುದೇ ಔಪಚಾರಿಕ ಮಾತುಗಳಿಲ್ಲದೇ,
"ಕಾಶ್ಮೀರದಿಂದ-ಕನ್ಯಾಕುಮಾರಿ ಬೈಕ್ ಟ್ರಿಪ್ ಮಾಡೋಣ ಬರ್ತೀರಾ?", ಅಂದ್ರು.
ಈ ಮೊದಲು ಎಲ್ಲಿಗೂ ಇಷ್ಟು long ride ಮಾಡಿರದಿದ್ದ ನಾನು, ಈಗ ಶರತ್ ಕರೆದ ಕೂಡಲೇ "ಸರಿ, ಬರ್ತೀನಿ" ಎಂದು ಒಪ್ಪಿಕೊಂಡೆ.
ನನಗೂ ಬೇರೇ ಬೇರೇ ವಿಷಯಗಳಿಂದ ಬೇಸರಗೊಂಡಿದ್ದ ಮನಸ್ಸಿಗೆ ಎಲ್ಲಾದರೂ ದೂರ ಒಬ್ಬನೇ ಹೋಗಿಬರಬೇಕೆಂದು ಬಹಳ ದಿನಗಳಿಂದ ಅನ್ನಿಸುತಿತ್ತು. ಈಗ ಶರತ್ ಗೆ ಬರುತ್ತೀನಿ ಎಂದು ಒಪ್ಪಿಕೊಳ್ಳಲೂ ಕೂಡ ಇದೇ ಮುಖ್ಯ ಕಾರಣವಾಗಿತ್ತು.
ಎಷ್ಟು ದಿನ ರಜೆ ಬೇಕಾಗಬಹುದು, ಎಷ್ಟು ಖರ್ಚಾಗಬಹುದು, ಹೀಗೆ ಎಲ್ಲವನ್ನೂ ಕೇಳಿಕೊಂಡೆ. ಒಂದು ಅಂದಾಜಿನಲ್ಲಿ ಅವರು ನನಗೆ ಉತ್ತರಿಸಿದರು.
ಶರತ್ ಜೊತೆಗಿನ ಮಾತಿನಿಂದ, ಆತನ ಕೆಲವು ಗೆಳೆಯರು, ಕೆಲವು ಸಹೋದ್ಯೋಗಿಗಳು ಹೀಗೆ ಹಲವಾರು ಜನ ಸೇರಿ ಒಂದು ಪ್ಲಾನ್ ಮಾಡಿದ್ದಾರೆ, ಅವರೊಡನೆ ನಾನೂ ಒಬ್ಬ ಸೇರಿದರಾಯ್ತು ಎಂದುಕೊಂಡೆ.
* * *
"Not so lucky" ಅಂದೆ.
"Then?"
"I'm going for Kashmir to Kanyakumari ride on bike"
"Ohhh!!! man... Are you serious???"
"Yeah, almost plan is finalized" ಅಂದೆ.
ಈ ಮೊದಲು ನಾನು ಯಾವತ್ತೂ ಇಷ್ಟು ರಜೆ ತೆಗೆದುಕೊಂಡಿರಲಿಲ್ಲವಾದ್ದರಿಂದ, "Okay" ಅಂದುಬಿಟ್ಟರು.
* * *
ಇಲ್ಲಿಂದ ಮುಂದೆ ಶುರು ಆಯಿತು ನಮ್ಮ ಪ್ಲಾನಿಂಗ್ಸ್ ಎಲ್ಲ. ನಿಮಗೆಲ್ಲ ಗೊತ್ತೇ ಇದೆ ಆಲ್ವಾ, ಪ್ಲಾನಿಂಗ್ ಶುರು ಆಗೋದೇ ಒಂದು WhatsApp ಗ್ರೂಪ್ ಮಾಡೋದ್ರಿಂದ. ಹಾಗೇ ಇಲ್ಲೂ ಒಂದು ಗ್ರೂಪ್ ಶುರುವಾಯ್ತು, K2K - Dream Ride ಅಂತ ಗ್ರೂಪ್, ಬರಿ ಮೂರೇ ಜನ ಮೆಂಬರ್ಸ್.
ನಾನು ಶರತ್ ಗೆ ಕೇಳಿದೆ,
"ಏನಿದು ಮೂರೇ ಜನ ಇದೀವಿ, ಬೇರೆ ಇನ್ನ್ಯಾರು ಬರ್ತಿಲ್ವ" ಅಂತ.
"ಇನ್ನಿಬ್ಬರು ಇದಾರೆ, ಆದ್ರೆ ಅವರು ಇನ್ನು ಗ್ಯಾರಂಟೀ ಆಗಿಲ್ಲ ಅಂದ್ರು".
ನನಗೆ ಆ ಕ್ಷಣವೇ, ಅನುಮಾನ ಆಯ್ತು, ನನ್ನ ಪ್ರಕಾರ ಮೂರೇ ಜನ ಹೋಗೋದು ಅಂತ. ಆದರೂ ನಾನು ಶರತ್ ಗೆ ಹೇಳಿಯೇಬಿಟ್ಟೆ,
"ನಾನಂತೂ ರಜೆ ಹಾಕಿ ಆಗಿದೆ, ಈಗ ಟ್ರಿಪ್ ಹೋಗ್ಲೇಬೇಕು" ಎಂದೆ.
"ಆಯ್ತು, ಯಾರೂ ಬರಲಿಲ್ಲ ಅಂದ್ರೂ,,, ನಾವೇ ಮೂರು ಜನ ಹೋಗೋಣ" ಅಂದ್ರು.
"ಆಯ್ತು,,," ಅಂತ ಶುರು ಆಯ್ತು ಪ್ಲಾನಿಂಗ್.
ಏನೇನು ಅವಶ್ಯಕ ಸಾಮಗ್ರಿ ತಗೊಳ್ಬೇಕು ಅಂತ ಒಂದು ಅವರು ಮಾಡಿಟ್ಟಿದ್ದ ಪಟ್ಟಿ ಕಳಿಸಿದ್ರು. ನಾನು ಅದನ್ನ ನೋಡಿ, ಯೋಚಿಸುತ್ತಾ, ಅಲ್ಲಿ ಇಲ್ಲಿ ವಿಷಯ ಸಂಗ್ರಹಿಸುತ್ತಾ ಒಂದೆರಡು ದಿನಗಳನ್ನ ಕಳೆದೆ.

ಆ ಒಂದೆರಡು ದಿನಗಳಲ್ಲಿ ನಾನು ನನ್ನಲ್ಲಿ ಈಗಾಗಲೇ ಇರುವ ವಸ್ತುಗಳೇನು, ಇನ್ನು ಹೊಸದಾಗಿ ಕೊಂಡುಕೊಳ್ಳಬೇಕಾದ ಸಾಮಗ್ರಿಗಳೆಷ್ಟು, ಅವುಗಳ ಸರಿ ಸುಮಾರು ಬೆಳೆಗಳೆಷ್ಟು ಎಂಬುದನ್ನು ಲೆಕ್ಕ ಹಾಕಿಕೊಂಡು, ಒಂದು ಸಪ್ಪೆ ಮುಖದ smiley ಯೊಂದಿಗೆ, ಗ್ರೂಪ್ ನಲ್ಲಿ ಹೀಗೊಂದು ಮೆಸೇಜ್ ಹಾಕಿದೆ.
"ನನ್ನ accessories ಖರ್ಚು, ಟ್ರಿಪ್ ನ ಖರ್ಚಿಗಿಂತಾ ಜಾಸ್ತಿ ಆಗ್ತಿದೆ..."
ಅದಕ್ಕೆ ಶರತ್' ಹೇಳಿದ್ರು,
"ನೀವೇ ಹೀಗಂದ್ರೆ ಹೇಗೆ, ನಾನು ಇಬ್ಬರಿಗೆ ತಗೊಳ್ಬೇಕು,.." ಅಂತಾ.
"ಇಬ್ರಾ,,, ಶ್ವೇತಾನು ಬರ್ತಿದಾರ ಟ್ರಿಪ್ ಗೆ..?" ಅಂದೆ.
"ಇಲ್ವಾ ಮತ್ತೆ, ಈ ಗ್ರೂಪ್ ಅಲ್ಲಿ ಇರೋ ಇನ್ನೊಬ್ರು ಯಾರು ಅಂದುಕೊಂಡಿದೀರಾ..."
"ಓಹ್, ನಾನು,,, ಅದು ನಿಮ್ಮ ಫ್ರೆಂಡ್ ಯಾರೋ ಇರ್ಬೇಕು, ಅಂದುಕೊಂಡೆ"
ಟ್ರಿಪ್ ಹೋಗೋದು ಅಂದಾಗಲೇ ನಾನು, ನನ್ನ ಫ್ರೆಂಡ್ ಶಿವು ನನ್ನೂ ಕೂಡ ಕರೆಯೋಣ ಅಂತ ಅಂದುಕೊಂಡಿದ್ದೆ. ಆದ್ರೆ, ಅವನು ಹೆಂಡತಿನ ಬಿಟ್ಟು ಟ್ರಿಪ್ ಬರೋಲ್ಲ ಅಂದುಕೊಂಡು ಸುಮ್ಮನಾಗಿದ್ದೆ. ಆದರೆ ಈಗ ಶರತ್ ಜೊತೆ ಶ್ವೇತಾನೂ ಬರ್ತಿರೋದ್ರಿಂದ, ಅವನನ್ನ ಒಂದು ಸಲ ಕೇಳಿನೋಡೋಣ ಅಂತ ತೀರ್ಮಾನಿಸಿದೆ.
ಸುಮಾರು ಹತ್ತು ವರ್ಷಗಳಿಂದ ಹತ್ತಿರದ ಸ್ನೇಹಿತ ಆಗಿದ್ದರಿಂದ, ಶಿವುನ ಸ್ವಭಾವ ನನಗೆ ಬಹಳ ಚೆನ್ನಾಗಿ ಗೊತ್ತಿತ್ತು. ಅವನದ್ದು ಒಂದು ಬೇರೇ ತರಹದ ಸ್ವಭಾವ. ನಾವು ರೂಮ್ ಮೇಟ್ಸ್, ಅವನ ಜೊತೆ ಬಹಳ ಏಗಿದಮೇಲೆ ಒಂದು ಲಾಜಿಕ್ ಕಂಡು ಹಿಡಿದುಕೊಂಡಿದ್ವಿ. ಅದು ಬಹಳ ಸಲ ಕೆಲಸ ಮಾಡಿತ್ತು. ಈಗ್ಲೂ, ಅದನ್ನೇ ಮಾಡೋಣ ಅಂದುಕೊಂಡೆ.
ಅದೇನಂದ್ರೆ, ಏನೇ ಕೆಲಸ ಮಾಡೋದಾಗ್ಲಿ ಇಲ್ಲವೇ ಎಲ್ಲಿಗೇ ಹೋಗೋದಾಗ್ಲಿ ಇದ್ದಾಗ, ಅವನನ್ನ ನಮ್ಮ ಜೊತೆ ಬಾ ಅಂತ ಮೊದಲೇ ಕರೆದರೆ ಅಥವಾ ಬಹಳ ಒತ್ತಾಯ ಮಾಡಿದ್ರೆ, ಅವನೂ ಯಾವತ್ತೂ ನಮ್ಮ ಜೊತೆ ಬಂದವನಲ್ಲ. ಬಂದರೂ ಅದು ಇನ್ನೇನೋ ಎಡವಟ್ಟು ಮಾಡಿಕೊಂಡು ಬರುತ್ತಿದ್ದಿದ್ದು ಮಾಮೂಲಾಗಿತ್ತು. ಇದೆಲ್ಲಾ ನೋಡಿ ನೋಡಿ ಸಾಕಾಗಿ, ನಾವು ಎಲ್ಲೇ ಹೋಗಬೇಕಾಗಿ ಬಂದಾಗ, ಸುಮ್ಮನೆ ನಮ್ಮ ಪಾಡಿಗೆ ನಾವು ತಯಾರಿ ಮಾಡಿಕೊಂಡು ಹೊರಡ್ತಾ ಇದ್ರೆ, ಆಗ ಅವನಾಗೆ ಬಂದು ಕೇಳೋನು, ಎಲ್ಲಿಗ್ರೋ ಹೋಗ್ತಿದೀರಾ,,, ನಾನೂ ಬರ್ತೀನಿ... ಅಂತಾ ಏನೂ ರಗಳೆಯಿಲ್ಲದೇ ಹೊರಟು ಬರೋನು. ಈ ಲಾಜಿಕ್ ಒಂದೆರಡು ಸಲ ಅಲ್ಲಾ, ಬಹಳಾಸಲ ಕೆಲಸ ಮಾಡಿದ್ದರಿಂದ, ಇದನ್ನೇ ಇಲ್ಲೂ ಒಂದು ಪ್ರಯತ್ನ ಮಾಡೋಣ ಅಂದುಕೊಂಡೆ. ನಮ್ಮ ಪ್ರವಾಸ ಶುರುವಾಗುವುದು, ಸಂಕ್ರಾಂತಿ ದಿನದಂದು ಎಂದು ತೀರ್ಮಾನಿಸಿಯಾಗಿತ್ತು, ಅದು ಇನ್ನೂ ಒಂದು ತಿಂಗಳಿಗೂ ದೂರವಿದೆ, ಹಾಗಾಗಿ ಇನ್ನುಇನ್ನೊಂದೆರಡು ವಾರ ಕಳೆದು ಶಿವುಗೆ ಈ ಅಸ್ತ್ರ ಪ್ರಯೋಗಿಸೋಣ ಎಂದು ಸುಮ್ಮನಾದೆ.
ಈ ಒಂದೆರಡು ವಾರಗಳಲ್ಲಿ ನಾವು, ಪ್ರವಾಸಕ್ಕೆ ಬೇಕಾದ Safety Jackets, Hand Gloves, Knee Guards, Tank Bags, Saddle Bags ಮತ್ತು Bike spare parts & accessories ಎಲ್ಲ ಹೊಂದಿಸಿಕೊಂಡೆವು.
ನಾವು ಕನ್ಯಾಕುಮಾರಿಗೆ ಬೈಕುಗಳನ್ನು ಮೊದಲು ಸಾಗಿಸಿ, ಆಮೇಲೆ ಸಂಕ್ರಾಂತಿಯ ಹಿಂದಿನ ದಿನ ನಾವು ಅಲ್ಲಿಗೆ ಬಸ್ಸಲ್ಲಿ ಹೋಗುವುದಾಗಿ ಯೋಚಿಸಿದೆವು. ತಮಿಳುನಾಡಿನಲ್ಲಿ ಕೂಡ, ಪೊಂಗಲ್ ಹಬ್ಬವನ್ನು ಜೋರಾಗಿ ಆಚರಿಸುವುದರಿಂದ, ನಮಗೆ ಹಿಂದಿನ ಹೋಗಲು ಬಸ್ ಟಿಕೆಟ್ ಸಿಗುವುದು ಕಷ್ಟ ಎಂದು, ಮೊದಲೇ ನಾವು ಮೂವರಿಗೂ ಟಿಕೆಟ್ ಮುಂಗಡ ಬುಕಿಂಗ್ ಮಾಡಿಸಿಬಿಟ್ಟೆವು.
ಆ ದಿನ ರಾತ್ರಿ ನನ್ನ ಗೆಳೆಯರ WhatsApp ಗ್ರೂಪ್ ಗೆ, ಸುಮ್ಮನೆ ಒಂದು message ಹಾಕಿದೆ.
"ಆಣ್-ತಮ್ಮಾಸ್, ಮುಂದಿನ ತಿಂಗಳು ನಾನು ಕನ್ಯಾಕುಮಾರಿ ಟು ಕಾಶ್ಮೀರ್ ಟ್ರಿಪ್ ಹೋಗ್ತಿದೀನಿ"
ಒಬ್ಬೊಬ್ಬರಾಗಿ ಎಲ್ಲರೂ, ಹೇಗೆ? ಯಾವಾಗ? ಯಾರ್ಯಾರು? ಅಂತ ಕೇಳತೊಡಗಿದರು. ನಾನು ಎಲ್ಲ ವಿಷಯವನ್ನೂ ಕೇಳತೊಡಗಿದೆ.
ಆಗ ಚೇತನ್ ಅನ್ನುವ ಫ್ರೆಂಡ್ ಒಬ್ಬ, ತಾನು ಅರ್ಧದಷ್ಟು ಟ್ರಿಪ್ ಗೆ ಬರ್ತೀನಿ ಎಂದ, ನಾನು "ಸರಿ" ಎಂದೆ. ಆಗ ಹರೀಶ್ ಇದ್ದವನು, "ಎಲ್ಲರೂ ರಿಪ್ಲೈ ಮಾಡ್ತಿದಾರೆ, ಶಿವು ಯಾಕೆ ಸೈಲೆಂಟ್?" ಅಂದ.
ಆಗ ಶಿವುಯಿಂದ ಮೊದಲ ರಿಪ್ಲೈ ಬಂತು, "ಅವನು ನನ್ನ ಕರೆದೆ ಇಲ್ಲ..." ಅಂತ.
ನಾನು, "You are always welcome" ಅಂದೆ.
ಎಲ್ಲರೂ ಅದೂ ಇದೂ ನೆಪ ಹೇಳಿ, ಬರೋಕೆ ಆಗೋಲ್ಲ ಅಂದ್ರು.
ಹೀಗೇ ಅದೂ ಇದೂ, ತಮಾಷೆಯ ಮಾತುಗಳು ಮುಗಿದು ಮಲಗುವ ವೇಳೆಗೆ ಮೊದಲು, ಶಿವುಯಿಂದ ನಂಗೆ ಒಂದು personal chat ಸಂದೇಶ ಬಂತು,
"ಯಾವಾಗ ಕಾಶ್ಮೀರ ತಲುಪ್ತಿರ? ಏನು ಟ್ರಿಪ್ ಪ್ಲಾನ್? ಹೇಗೆ ಪ್ಲಾನ್ ಮಾಡಿದಿರಾ?" ಅಂತ.
ನಾನು ಎಲ್ಲವನ್ನೂ ವಿವರವಾಗಿ ಹೇಳತೊಡಗಿದೆ. ಶರತ್-ಶ್ವೇತಾರ ಪರಿಚಯ ಅವನಿಗೆ ಇಲ್ಲವಾದ್ದರಿಂದ ಅವರ ಪರಿಚಯ ಹೇಳಿ, ಅವರ ಪ್ರವಾಸಗಳ ಹುಚ್ಚು, ಫೋಟೋಗ್ರಫಿ ಹವ್ಯಾಸ, ಅವರ ಹಲವಾರು you-tube video ಗಳ ಬಗ್ಗೆ ವಿವರಿಸಿ ಹೇಳಿದೆ.
ಶಿವು ನನ್ನ ಬೆಸ್ಟ್ ಫ್ರೆಂಡ್ಸ್ ಗಳಲ್ಲಿ ಒಬ್ಬ, ಅವನು ನನ್ನ ಜೊತೆ ಟ್ರಿಪ್ ಬರಲೇ ಬೇಕೆಂಬ ಆಸೆ ನನ್ನಲಿದ್ದರೂ, ನಾನು ಎಲ್ಲಿಯೂ, "ನೀನು, ಬರಲೇಬೇಕು,,," ಎಂದು ಒಮ್ಮೆಯೂ ಹೇಳಲೇ ಇಲ್ಲ.
ಶಿವು ಹೇಳಿದ,
"ನಾನು ಫೆಬ್ರವರಿ 6, 7ಕ್ಕೆ ಲಖನೌಗೆ ಒಂದು ಮದುವೆಗೆ ಹೋಗಬೇಕಿದೆ, ಆ ಸಮಯದಲ್ಲೇ ರಾಜಸ್ಥಾನದ ಪ್ರವಾಸ ಮಾಡಲು ಯೋಚಿಸುತ್ತಿದ್ದೆ"
"ನಮ್ಮ ಟ್ರಿಪ್ ಪ್ಲಾನ್ ಅಲ್ಲಿ ರಾಜಸ್ಥಾನ ಕೂಡ ನೋಡಿಕೊಂಡು ಹೋಗ್ತೀವಿ."
"ಇದೆಲ್ಲಕ್ಕಿಂತ ಹೆಚ್ಚಾಗಿ ನಮ್ಮದು, ಭಾರತದ ದಕ್ಷಿಣ ತುದಿಯಿಂದ - ಉತ್ತರ ತುದಿಗೆ (ಒಂದು ರೀತಿಯ ಸಾಹಸಮಯ ಪ್ರಯಾಣವೇ ಸರಿ) ಬೈಕ್ ಟ್ರಿಪ್ ಮಾಡಬೇಕೆನ್ನುವುದು"
"ಇಂಥ ಕನಸನ್ನು, ಸಾಧ್ಯ ಮಾಡುವುದು ಕೆಲವೇ ಕೆಲವು ಜನ ಮಾತ್ರ", ಎಂದೆ.
"ಈಗ ಆಫೀಸ್ ನಲ್ಲೊಮ್ಮೆ, ರಜೆ ಕೇಳಿ ನೋಡ್ತೀನಿ, ನನಗೂ ಮೂರು ವಾರಗಳ ರಜೆ ಸಿಕ್ಕರೆ, ನಿಮ್ಮ ಜೊತೆ ಟ್ರಿಪ್ ಗೆ ನಾನೂ ಬರ್ತೀನಿ" ಅಂದ.
"ಸರಿ, ಹಾಗೇ ಮಾಡು. ನೀನೂ ನಮ್ಮ ಜೊತೆ ಬಂದ್ರೆ, ಅದು ನಿಜಕ್ಕೂ ತುಂಬ ಖುಷಿನೇ"
"ದೀಪಿಕ ಕೂಡ ರಜೆ ಕೇಳಿ ನೋಡ್ತಾಳೆ ಆಫೀಸ್ ಅಲ್ಲಿ, ಅವಳಿಗೂ ರಜೆ ಸಿಕ್ಕರೆ ನಾವು sure join ಆಗ್ತಿವಿ"
"ಓಹ್, ಸೂಪರ್..."
"ಏನೂ, ಭಯಪಡಬೇಕಾಗಿಲ್ಲ... ನಮ್ಮ ಜೊತೆ ಶ್ವೇತ ಅವರು ಬರ್ತಿರೋದ್ರಿಂದ, ಸ್ವಲ್ಪ ಎಚ್ಚರಿಕೆಯಿಂದಾನೆ ಪ್ಲಾನ್ ಮಾಡಿದೀವಿ. ದೀಪಿಕ ಕೂಡ ಬಂದ್ರೆ, ಇಬ್ಬರಿಗೂ ಕಂಪನಿ ಕೂಡ ಇರುತ್ತೆ. ಬೇಸರ ಕೂಡ ಏನಾಗೋಲ್ಲ"
"ನಾಳೆ ಒಳಗೆ ನಂಗೆ, ಏನು ಅಂತ ಹೇಳಿ .." ಅಂದು ಸುಮ್ಮನಾದೆ.
ಮರುದಿನ ಅವರಿಬ್ಬರೂ ಬರುವುದಾಗಿ ತಿಳಿಸಿದರು. ಅಂತೂ, ನಮ್ಮ ಲಾಜಿಕ್ ಮತ್ತೆ ಕೆಲಸ ಮಾಡಿತು, ಅಂತ ಖುಷಿಯಾಯ್ತು.
ಶರತ್-ಶ್ವೇತಾಗೆ, ಶಿವು-ದೀಪಿಕ ಟ್ರಿಪ್ ಗೆ ಬರ್ತಿರೋ ಬಗ್ಗೆ ಹೇಳಿದೆ. ಪರಿಚಯದವರು, ಅಲ್ಲದೇ couple, join ಆಗ್ತಿರೋದ್ರಿಂದ ಅವರಿಬ್ಬರು ಖುಷಿಪಟ್ಟರು. ಮೂವರಿಂದ, ಐವರು ಆಗಿದ್ದು ನಮ್ಮ ಖರ್ಚಿನ ಲೆಖ್ಖಕ್ಕೂ ಒಳ್ಳೆಯದೇ ಅಂದುಕೊಂಡೆವು. ಶಿವು-ದೀಪಿಕರನ್ನ, ನಮ್ಮ K2K-Dream Ride ಗ್ರೂಪ್ ಗೆ ಸೇರಿಸಿ, ಪರಸ್ಪರ ಪರಿಚಯ ಮಾಡಿಸಿದೆ.
ಈಗ ಮತ್ತೆ, ಶಿವು-ದೀಪಿಕಾರಿಗೂ ಕೂಡ ಕನ್ಯಾಕುಮಾರಿಗೆ ಬಸ್ ಟಿಕೆಟ್ ಬುಕ್ ಮಾಡಲು ಹೇಳಿ, ಉಳಿದ ಪ್ರವಾಸದ ಯೋಜನೆಗಳ ಬಗ್ಗೆ ಎಲ್ಲರೂ ಹೆಚ್ಚೆಚ್ಚು ವಿಷಯ ಕಲೆಹಾಕುತ್ತಾ, ನಮ್ಮ ಕನಸಿನ ಪಯಣಕ್ಕೆ ದಿನಗಳನ್ನು ಲೆಕ್ಕ ಹಾಕತೊಡಗಿದೆವು.
"ನೀವೇ ಹೀಗಂದ್ರೆ ಹೇಗೆ, ನಾನು ಇಬ್ಬರಿಗೆ ತಗೊಳ್ಬೇಕು,.." ಅಂತಾ.
"ಇಬ್ರಾ,,, ಶ್ವೇತಾನು ಬರ್ತಿದಾರ ಟ್ರಿಪ್ ಗೆ..?" ಅಂದೆ.
"ಇಲ್ವಾ ಮತ್ತೆ, ಈ ಗ್ರೂಪ್ ಅಲ್ಲಿ ಇರೋ ಇನ್ನೊಬ್ರು ಯಾರು ಅಂದುಕೊಂಡಿದೀರಾ..."
"ಓಹ್, ನಾನು,,, ಅದು ನಿಮ್ಮ ಫ್ರೆಂಡ್ ಯಾರೋ ಇರ್ಬೇಕು, ಅಂದುಕೊಂಡೆ"
"Oh God,,, she is ready for this much long trip, that too on bike as pillion rider... Great..."
"ಹ್ಞೂ..."
"ನಿಮ್ಮ ಫ್ರೆಂಡ್ಸ್ ಯಾರಾದ್ರೂ ಬರ್ತಾರಾ ಕೇಳಿ ನೋಡಿ"
"ಸರಿ, ಒಂದ್ ಸಲ ಕೇಳಿ ನೋಡ್ತೀನಿ" ಅಂದೆ.
ಆವಾಗಲೇ ನನಗೆ ಗೊತ್ತಾಗಿದ್ದು, ಈಗ ತಯಾರಿರೋದು ಎರಡೇ ಬೈಕು, ಮೂರೇ ಜನ ಅಂತ. ಅಂತೂ, ಏನೇ ಆದರು ಟ್ರಿಪ್ ಹೋಗೋದು ಗ್ಯಾರಂಟೀ ಆಗಿದ್ದರಿಂದ, ತಯಾರಿ ಮಾಡಿಕೊಳ್ಳೋದು ನೆಡಿತಾನೆ ಹೋಯ್ತು.
ಶರತ್ ಅವರಿಂದ ಆಮೇಲೆ ಗೊತ್ತಾಯ್ತು ಈ ಪ್ರವಾಸದ ಬಗ್ಗೆ ಮೊದಲ ಯೋಚನೆ ಮಾಡಿದ್ದೇ ಶ್ವೇತ, ಎಂದು. ಇವರಿಬ್ಬರೂ ಈಗಾಗಲೇ ದಕ್ಷಿಣ ಭಾರತದ ಹತ್ತಿರತ್ತಿರ ಎಲ್ಲಾ ಪ್ರವಾಸಿ ತಾಣಗಳನ್ನು ನೋಡಿಯಾಗಿರಬಹುದು. ಅಲ್ಲದೆ, ಈಗ್ಗೆ ಕೆಲವು ತಿಂಗಳ ಹಿಂದಷ್ಟೇ ತಮ್ಮ ಕಾರಿನಲ್ಲಿ ಇಡೀ ಕರ್ನಾಟಕ ಪ್ರವಾಸ ಮುಗಿಸಿದ್ದರು. ಆ ಪ್ರವಾಸದ ಸಮಯದಲ್ಲೇ ಶ್ವೇತಾರಿಗೆ ಕಾಶ್ಮೀರ-ಕನ್ಯಾಕುಮಾರಿಯ ಪ್ರವಾಸದ ಬಗ್ಗೆ ಆಸಕ್ತಿ ಮೂಡಿ, ಶರತ್ ರಿಗೂ ಅದರ ಹುಚ್ಚು ಹಿಡಿಸಿ, ಒಪ್ಪಿಸಿದ್ದಾರೆ. ಅದು ಫಲಿಸುವ ಸಮಯ ಈಗ ಶುರುವಾಗಿದೆ ಎಂದು ತಿಳಿಯಿತು. ಇದನ್ನೆಲ್ಲ ಕೇಳಿದ ನನಗೆ ಇವರ ಮೇಲಿನ ಗೌರವ ಮತ್ತು ಹೆಮ್ಮೆ ಇನ್ನೂ ಒಂದು ಪಟ್ಟು ಹೆಚ್ಚಾಯಿತು.

ನಾವು ಹೊರಡುತ್ತಿರುವುದು ಜನವರಿಯಲ್ಲಿ ಆದ್ದರಿಂದ, ಕಾಶ್ಮೀರದಲ್ಲಿ ಹಿಮಪಾತ ಬಹಳವಿರುತ್ತದೆ. ಬಹಳಷ್ಟು ಬಾರಿ ಹಿಮಪಾತದಿಂದಾಗಿ ರಸ್ತೆಗಳು ಮುಚ್ಚಿರುತ್ತವೆ, ಮತ್ತೆ ಭಾರತೀಯ-ಸೈನ್ಯ ಆ ಹಿಮವನ್ನು ಸರಿಸಿ ರಸ್ತೆ ತೆರವುಗೊಳಿಸಬೇಕಾಗುತ್ತದೆ. ಇವುಗಳ ಸಮಾಯಾಪರಿ ಇಷ್ಟೇ ಎಂದು ಹೇಳಲಾಗುವುದಿಲ್ಲವಾದ್ದರಿಂದ, ಕೆಲವೊಮ್ಮೆ ವಾರಗಟ್ಟಲೆ ರಸ್ತೆ ಮುಚ್ಚಿರುತ್ತದೆ. ನಾವು ಬೆಂಗಳೂರಿನಿಂದ ಕಾಶ್ಮೀರದ ಶ್ರೀನಗರಕ್ಕೆ ಬೈಕ್ ಅನ್ನು ಸಾಗಿಸಲು, ಲಾರಿಯಲ್ಲಿ ಹಾಕಿದರೆ ನಮಗೆ ಅದು ತಲುಪುವ ದಿನ ಖಂಡಿತವಾಗಿ ಅಂದಾಜು ಸಿಗಲೇ ಇಲ್ಲ. ಇನ್ನು, ನಾವು ಇಲ್ಲಿಂದ ವಿಮಾನದಲ್ಲಿ ಶ್ರೀನಗರ ತಲುಪಲಾಗದಿದ್ದರೂ, ಜಮ್ಮುವರೆಗೆ ತಲುಪಬಹುದೆಂಬ ಖಾತರಿಯಿತ್ತು. ಹೀಗಾದಾಗ, ಅಕಸ್ಮಾತ್ ಲಾರಿ ಜಮ್ಮು ಮತ್ತು ಕಾಶ್ಮೀರದ ಮಧ್ಯದಲ್ಲೆಲ್ಲೋ ಸಿಲುಕಿದರೆ, ನಾವು ಪ್ರವಾಸ ಶುರು ಮಾಡುವ ಮೊದಲೇ ಹಲವಾರು ದಿನಗಳನ್ನು ಜಮ್ಮುವಿನಲ್ಲೋ, ಅಥವಾ ಶ್ರೀನಗರದಲ್ಲೋ ಕಳೆಯಬೇಕಾಗ ಬಂದು, ನಮ್ಮ ಯೋಜನೆಯೇ ಹಾಳಾಗಬಹುದಾದ ಸಾಧ್ಯತೆ ಬಹಳಷ್ಟಿತ್ತು.
ಇದನ್ನೆಲ್ಲಾ ಯೋಚಿಸಿ ನಮ್ಮ ಕ್ಯಾಪ್ಟನ್ ಶರತ್, "ನಾವು ಪ್ರವಾಸವನ್ನು ಕನ್ಯಾಕುಮಾರಿಯಿಂದ ಶುರು ಮಾಡೋಣ, ಇಲ್ಲಿಂದ ನಾವು ಪಶ್ಚಿಮ ಭಾರತವನ್ನೆಲ್ಲ ಸುತ್ತಿ, ಕಾಶ್ಮೀರ ತಲುಪವ ವೇಳೆಗೆ ಫೆಬ್ರವರಿ ಶುರುವಾಗಿರುತ್ತದೆ. ಆಗ ನಮ್ಮ ಅದೃಷ್ಟಕ್ಕೆ ಹಿಮಪಾತ ಕಡಿಮೆಯಾಗಿದ್ದರೆ, ಕಾಶ್ಮೀರ ತಲುಪಬಹುದು. ಇಲ್ಲವಾದಲ್ಲಿ ಜಮ್ಮುವಿನಿಂದ, ಬೈಕುಗಳನ್ನು ಬೆಂಗಳೂರಿಗೆ ಸಾಗಾಣೆಗೆ ಹಾಕಿ, ನಾವು ವಿಮಾನ ಹತ್ತಿ ಬರಬಹುದು" ಎಂದು ಯೋಜನೆಯನ್ನು ಬದಲಾಯಿಸಿದರು.
ನನಗಂತೂ ಕಾಶ್ಮೀರದಿಂದ ಪ್ರವಾಸ ಶುರು ಮಾಡುವ ಆಸೆ ಇನ್ನೂ ಇತ್ತು, ಆದರೂ ಪರಿಸ್ಥಿತಿ ನಮ್ಮ ಕೈಲಿ ಇಲ್ಲವಾದ್ದರಿಂದ ಒಲ್ಲದ ಮನಸಿನಿಂದ ಒಪ್ಪಿಕೊಂಡೆ.
ಈಗ, ನಮ್ಮ ಪ್ರವಾಸದ ನಕ್ಷೆ (Trip Map Finalize) ಯೋಜಿಸುವುದು ಉಳಿದಿತ್ತು. ನಾವು ಮೂವರು ಒಂದೊಂದಷ್ಟು ದಿನಗಳನ್ನು plan ಮಾಡುವುದೆಂದು ತೀರ್ಮಾನಿಸಿಕೊಂಡೆವು.
ನಾವು ಯೋಜಿಸಿದ ನಕ್ಷೆ ಹೀಗಿತ್ತು,
"ಕನ್ಯಾಕುಮಾರಿ(ಭಾರತದ ದಕ್ಷಿಣ ತುದಿ) - ಮಧುರೈ - ತುಮಕೂರು - ಬೆಳಗಾವಿ - ರಾಯಘಡ - ಲೋಣಾವಾಲಾ - ಲೋಹಘಡ - ಮುಂಬೈ - ಅಹಮದಾಬಾದ್ - ಕಛ್ - ಗುಹಾರ್ ಮೋತಿ (ಭಾರತದ ಪಶ್ಚಿಮ ತುದಿ) - ಡೋಲವಿರಾ - ಮೌಂಟ್ ಅಬು - ಕುಂಭಲ್ ಘಡ - ಉದಯಪುರ - ಚಿತ್ತೋರ್ ಘಡ - ಅಜಮೇರ್ - ಜೈಪುರ - ಆಗ್ರಾ - ದೆಹಲಿ - ಅಮೃತಸರ - ಜಮ್ಮು - ಶ್ರೀನಗರ"
ಒಟ್ಟು 22 ದಿನಗಳಲ್ಲಿ ಪ್ರಯಾಣ ಮುಗಿಸಿ, 23ನೇ ದಿನ ವಾಪಸಾಗಬೇಕು.
ಆಯಾ ಸ್ಥಳಗಳಲ್ಲಿ ಯಾವ ಯಾವ ತಾಣಗಳನ್ನು ನೋಡುವುದು, ಎಲ್ಲಿ ಉಳಿದುಕೊಳ್ಳಿವುದು ಎಂದೂ ತೀರ್ಮಾನಿಸಿ ಅಂತಿಮಗೊಳಿಸಿದೆವು.
* * *
ಸುಮಾರು ಹತ್ತು ವರ್ಷಗಳಿಂದ ಹತ್ತಿರದ ಸ್ನೇಹಿತ ಆಗಿದ್ದರಿಂದ, ಶಿವುನ ಸ್ವಭಾವ ನನಗೆ ಬಹಳ ಚೆನ್ನಾಗಿ ಗೊತ್ತಿತ್ತು. ಅವನದ್ದು ಒಂದು ಬೇರೇ ತರಹದ ಸ್ವಭಾವ. ನಾವು ರೂಮ್ ಮೇಟ್ಸ್, ಅವನ ಜೊತೆ ಬಹಳ ಏಗಿದಮೇಲೆ ಒಂದು ಲಾಜಿಕ್ ಕಂಡು ಹಿಡಿದುಕೊಂಡಿದ್ವಿ. ಅದು ಬಹಳ ಸಲ ಕೆಲಸ ಮಾಡಿತ್ತು. ಈಗ್ಲೂ, ಅದನ್ನೇ ಮಾಡೋಣ ಅಂದುಕೊಂಡೆ.
ಅದೇನಂದ್ರೆ, ಏನೇ ಕೆಲಸ ಮಾಡೋದಾಗ್ಲಿ ಇಲ್ಲವೇ ಎಲ್ಲಿಗೇ ಹೋಗೋದಾಗ್ಲಿ ಇದ್ದಾಗ, ಅವನನ್ನ ನಮ್ಮ ಜೊತೆ ಬಾ ಅಂತ ಮೊದಲೇ ಕರೆದರೆ ಅಥವಾ ಬಹಳ ಒತ್ತಾಯ ಮಾಡಿದ್ರೆ, ಅವನೂ ಯಾವತ್ತೂ ನಮ್ಮ ಜೊತೆ ಬಂದವನಲ್ಲ. ಬಂದರೂ ಅದು ಇನ್ನೇನೋ ಎಡವಟ್ಟು ಮಾಡಿಕೊಂಡು ಬರುತ್ತಿದ್ದಿದ್ದು ಮಾಮೂಲಾಗಿತ್ತು. ಇದೆಲ್ಲಾ ನೋಡಿ ನೋಡಿ ಸಾಕಾಗಿ, ನಾವು ಎಲ್ಲೇ ಹೋಗಬೇಕಾಗಿ ಬಂದಾಗ, ಸುಮ್ಮನೆ ನಮ್ಮ ಪಾಡಿಗೆ ನಾವು ತಯಾರಿ ಮಾಡಿಕೊಂಡು ಹೊರಡ್ತಾ ಇದ್ರೆ, ಆಗ ಅವನಾಗೆ ಬಂದು ಕೇಳೋನು, ಎಲ್ಲಿಗ್ರೋ ಹೋಗ್ತಿದೀರಾ,,, ನಾನೂ ಬರ್ತೀನಿ... ಅಂತಾ ಏನೂ ರಗಳೆಯಿಲ್ಲದೇ ಹೊರಟು ಬರೋನು. ಈ ಲಾಜಿಕ್ ಒಂದೆರಡು ಸಲ ಅಲ್ಲಾ, ಬಹಳಾಸಲ ಕೆಲಸ ಮಾಡಿದ್ದರಿಂದ, ಇದನ್ನೇ ಇಲ್ಲೂ ಒಂದು ಪ್ರಯತ್ನ ಮಾಡೋಣ ಅಂದುಕೊಂಡೆ. ನಮ್ಮ ಪ್ರವಾಸ ಶುರುವಾಗುವುದು, ಸಂಕ್ರಾಂತಿ ದಿನದಂದು ಎಂದು ತೀರ್ಮಾನಿಸಿಯಾಗಿತ್ತು, ಅದು ಇನ್ನೂ ಒಂದು ತಿಂಗಳಿಗೂ ದೂರವಿದೆ, ಹಾಗಾಗಿ ಇನ್ನುಇನ್ನೊಂದೆರಡು ವಾರ ಕಳೆದು ಶಿವುಗೆ ಈ ಅಸ್ತ್ರ ಪ್ರಯೋಗಿಸೋಣ ಎಂದು ಸುಮ್ಮನಾದೆ.
ಈ ಒಂದೆರಡು ವಾರಗಳಲ್ಲಿ ನಾವು, ಪ್ರವಾಸಕ್ಕೆ ಬೇಕಾದ Safety Jackets, Hand Gloves, Knee Guards, Tank Bags, Saddle Bags ಮತ್ತು Bike spare parts & accessories ಎಲ್ಲ ಹೊಂದಿಸಿಕೊಂಡೆವು.
ನಾವು ಕನ್ಯಾಕುಮಾರಿಗೆ ಬೈಕುಗಳನ್ನು ಮೊದಲು ಸಾಗಿಸಿ, ಆಮೇಲೆ ಸಂಕ್ರಾಂತಿಯ ಹಿಂದಿನ ದಿನ ನಾವು ಅಲ್ಲಿಗೆ ಬಸ್ಸಲ್ಲಿ ಹೋಗುವುದಾಗಿ ಯೋಚಿಸಿದೆವು. ತಮಿಳುನಾಡಿನಲ್ಲಿ ಕೂಡ, ಪೊಂಗಲ್ ಹಬ್ಬವನ್ನು ಜೋರಾಗಿ ಆಚರಿಸುವುದರಿಂದ, ನಮಗೆ ಹಿಂದಿನ ಹೋಗಲು ಬಸ್ ಟಿಕೆಟ್ ಸಿಗುವುದು ಕಷ್ಟ ಎಂದು, ಮೊದಲೇ ನಾವು ಮೂವರಿಗೂ ಟಿಕೆಟ್ ಮುಂಗಡ ಬುಕಿಂಗ್ ಮಾಡಿಸಿಬಿಟ್ಟೆವು.
* * *
ಡಿಸೆಂಬರ್ 22, 2016
ಗುರುವಾರ
ಆ ದಿನ ರಾತ್ರಿ ನನ್ನ ಗೆಳೆಯರ WhatsApp ಗ್ರೂಪ್ ಗೆ, ಸುಮ್ಮನೆ ಒಂದು message ಹಾಕಿದೆ.
"ಆಣ್-ತಮ್ಮಾಸ್, ಮುಂದಿನ ತಿಂಗಳು ನಾನು ಕನ್ಯಾಕುಮಾರಿ ಟು ಕಾಶ್ಮೀರ್ ಟ್ರಿಪ್ ಹೋಗ್ತಿದೀನಿ"
ಒಬ್ಬೊಬ್ಬರಾಗಿ ಎಲ್ಲರೂ, ಹೇಗೆ? ಯಾವಾಗ? ಯಾರ್ಯಾರು? ಅಂತ ಕೇಳತೊಡಗಿದರು. ನಾನು ಎಲ್ಲ ವಿಷಯವನ್ನೂ ಕೇಳತೊಡಗಿದೆ.
ಆಗ ಚೇತನ್ ಅನ್ನುವ ಫ್ರೆಂಡ್ ಒಬ್ಬ, ತಾನು ಅರ್ಧದಷ್ಟು ಟ್ರಿಪ್ ಗೆ ಬರ್ತೀನಿ ಎಂದ, ನಾನು "ಸರಿ" ಎಂದೆ. ಆಗ ಹರೀಶ್ ಇದ್ದವನು, "ಎಲ್ಲರೂ ರಿಪ್ಲೈ ಮಾಡ್ತಿದಾರೆ, ಶಿವು ಯಾಕೆ ಸೈಲೆಂಟ್?" ಅಂದ.
ಆಗ ಶಿವುಯಿಂದ ಮೊದಲ ರಿಪ್ಲೈ ಬಂತು, "ಅವನು ನನ್ನ ಕರೆದೆ ಇಲ್ಲ..." ಅಂತ.
ನಾನು, "You are always welcome" ಅಂದೆ.
ಎಲ್ಲರೂ ಅದೂ ಇದೂ ನೆಪ ಹೇಳಿ, ಬರೋಕೆ ಆಗೋಲ್ಲ ಅಂದ್ರು.
ಹೀಗೇ ಅದೂ ಇದೂ, ತಮಾಷೆಯ ಮಾತುಗಳು ಮುಗಿದು ಮಲಗುವ ವೇಳೆಗೆ ಮೊದಲು, ಶಿವುಯಿಂದ ನಂಗೆ ಒಂದು personal chat ಸಂದೇಶ ಬಂತು,
"ಯಾವಾಗ ಕಾಶ್ಮೀರ ತಲುಪ್ತಿರ? ಏನು ಟ್ರಿಪ್ ಪ್ಲಾನ್? ಹೇಗೆ ಪ್ಲಾನ್ ಮಾಡಿದಿರಾ?" ಅಂತ.
ನಾನು ಎಲ್ಲವನ್ನೂ ವಿವರವಾಗಿ ಹೇಳತೊಡಗಿದೆ. ಶರತ್-ಶ್ವೇತಾರ ಪರಿಚಯ ಅವನಿಗೆ ಇಲ್ಲವಾದ್ದರಿಂದ ಅವರ ಪರಿಚಯ ಹೇಳಿ, ಅವರ ಪ್ರವಾಸಗಳ ಹುಚ್ಚು, ಫೋಟೋಗ್ರಫಿ ಹವ್ಯಾಸ, ಅವರ ಹಲವಾರು you-tube video ಗಳ ಬಗ್ಗೆ ವಿವರಿಸಿ ಹೇಳಿದೆ.
ಶಿವು ನನ್ನ ಬೆಸ್ಟ್ ಫ್ರೆಂಡ್ಸ್ ಗಳಲ್ಲಿ ಒಬ್ಬ, ಅವನು ನನ್ನ ಜೊತೆ ಟ್ರಿಪ್ ಬರಲೇ ಬೇಕೆಂಬ ಆಸೆ ನನ್ನಲಿದ್ದರೂ, ನಾನು ಎಲ್ಲಿಯೂ, "ನೀನು, ಬರಲೇಬೇಕು,,," ಎಂದು ಒಮ್ಮೆಯೂ ಹೇಳಲೇ ಇಲ್ಲ.
ಶಿವು ಹೇಳಿದ,
"ನಾನು ಫೆಬ್ರವರಿ 6, 7ಕ್ಕೆ ಲಖನೌಗೆ ಒಂದು ಮದುವೆಗೆ ಹೋಗಬೇಕಿದೆ, ಆ ಸಮಯದಲ್ಲೇ ರಾಜಸ್ಥಾನದ ಪ್ರವಾಸ ಮಾಡಲು ಯೋಚಿಸುತ್ತಿದ್ದೆ"
"ನಮ್ಮ ಟ್ರಿಪ್ ಪ್ಲಾನ್ ಅಲ್ಲಿ ರಾಜಸ್ಥಾನ ಕೂಡ ನೋಡಿಕೊಂಡು ಹೋಗ್ತೀವಿ."
"ಇದೆಲ್ಲಕ್ಕಿಂತ ಹೆಚ್ಚಾಗಿ ನಮ್ಮದು, ಭಾರತದ ದಕ್ಷಿಣ ತುದಿಯಿಂದ - ಉತ್ತರ ತುದಿಗೆ (ಒಂದು ರೀತಿಯ ಸಾಹಸಮಯ ಪ್ರಯಾಣವೇ ಸರಿ) ಬೈಕ್ ಟ್ರಿಪ್ ಮಾಡಬೇಕೆನ್ನುವುದು"
"ಇಂಥ ಕನಸನ್ನು, ಸಾಧ್ಯ ಮಾಡುವುದು ಕೆಲವೇ ಕೆಲವು ಜನ ಮಾತ್ರ", ಎಂದೆ.
"ಈಗ ಆಫೀಸ್ ನಲ್ಲೊಮ್ಮೆ, ರಜೆ ಕೇಳಿ ನೋಡ್ತೀನಿ, ನನಗೂ ಮೂರು ವಾರಗಳ ರಜೆ ಸಿಕ್ಕರೆ, ನಿಮ್ಮ ಜೊತೆ ಟ್ರಿಪ್ ಗೆ ನಾನೂ ಬರ್ತೀನಿ" ಅಂದ.
"ಸರಿ, ಹಾಗೇ ಮಾಡು. ನೀನೂ ನಮ್ಮ ಜೊತೆ ಬಂದ್ರೆ, ಅದು ನಿಜಕ್ಕೂ ತುಂಬ ಖುಷಿನೇ"
"ದೀಪಿಕ ಕೂಡ ರಜೆ ಕೇಳಿ ನೋಡ್ತಾಳೆ ಆಫೀಸ್ ಅಲ್ಲಿ, ಅವಳಿಗೂ ರಜೆ ಸಿಕ್ಕರೆ ನಾವು sure join ಆಗ್ತಿವಿ"
"ಓಹ್, ಸೂಪರ್..."
"ಏನೂ, ಭಯಪಡಬೇಕಾಗಿಲ್ಲ... ನಮ್ಮ ಜೊತೆ ಶ್ವೇತ ಅವರು ಬರ್ತಿರೋದ್ರಿಂದ, ಸ್ವಲ್ಪ ಎಚ್ಚರಿಕೆಯಿಂದಾನೆ ಪ್ಲಾನ್ ಮಾಡಿದೀವಿ. ದೀಪಿಕ ಕೂಡ ಬಂದ್ರೆ, ಇಬ್ಬರಿಗೂ ಕಂಪನಿ ಕೂಡ ಇರುತ್ತೆ. ಬೇಸರ ಕೂಡ ಏನಾಗೋಲ್ಲ"
"ನಾಳೆ ಒಳಗೆ ನಂಗೆ, ಏನು ಅಂತ ಹೇಳಿ .." ಅಂದು ಸುಮ್ಮನಾದೆ.
* * *
ಶರತ್-ಶ್ವೇತಾಗೆ, ಶಿವು-ದೀಪಿಕ ಟ್ರಿಪ್ ಗೆ ಬರ್ತಿರೋ ಬಗ್ಗೆ ಹೇಳಿದೆ. ಪರಿಚಯದವರು, ಅಲ್ಲದೇ couple, join ಆಗ್ತಿರೋದ್ರಿಂದ ಅವರಿಬ್ಬರು ಖುಷಿಪಟ್ಟರು. ಮೂವರಿಂದ, ಐವರು ಆಗಿದ್ದು ನಮ್ಮ ಖರ್ಚಿನ ಲೆಖ್ಖಕ್ಕೂ ಒಳ್ಳೆಯದೇ ಅಂದುಕೊಂಡೆವು. ಶಿವು-ದೀಪಿಕರನ್ನ, ನಮ್ಮ K2K-Dream Ride ಗ್ರೂಪ್ ಗೆ ಸೇರಿಸಿ, ಪರಸ್ಪರ ಪರಿಚಯ ಮಾಡಿಸಿದೆ.
ಈಗ ಮತ್ತೆ, ಶಿವು-ದೀಪಿಕಾರಿಗೂ ಕೂಡ ಕನ್ಯಾಕುಮಾರಿಗೆ ಬಸ್ ಟಿಕೆಟ್ ಬುಕ್ ಮಾಡಲು ಹೇಳಿ, ಉಳಿದ ಪ್ರವಾಸದ ಯೋಜನೆಗಳ ಬಗ್ಗೆ ಎಲ್ಲರೂ ಹೆಚ್ಚೆಚ್ಚು ವಿಷಯ ಕಲೆಹಾಕುತ್ತಾ, ನಮ್ಮ ಕನಸಿನ ಪಯಣಕ್ಕೆ ದಿನಗಳನ್ನು ಲೆಕ್ಕ ಹಾಕತೊಡಗಿದೆವು.
* * *
ಇಲ್ಲಿಂದಲೇ ಮೊದಲುಗಳು,,,
ಏಕ-ಮನಸ್ಕರ ಮಿಲನಗಳು,,,
ಬರುವ-ನಾಳೆಗೆ ಹೊಸ ಕನಸುಗಳು,,,
ಬದುಕ-ಹಾಳೆಗೆ ಹೊಸ ಕವನಗಳು...
ಇಲ್ಲಿಂದಲೇ ಹಲವು ಮೊದಲುಗಳು...

ಒಂಥರಾ ಪದಗಳಿಂದನೇ ಚಿತ್ರೀಕರಿಸಿ ತೋರ್ಸಿದೀರಾ ನಿಮ್ಮ ಒಂದು ಸಕತ್ ಟ್ರಿಪ್ ಎಸ್ಪಿಎರಿಯನ್ಸ್ ನ. :) ಒಳ್ಳೆ ಒಂದು ಕನ್ನಡ ಕಾದಂಬರಿ ಓಡಿದಹಾಗೆ ಅನಿಸ್ತಯ್ದೆ ...
ReplyDeleteUsiradide , usiradide ,usiranne na...preethiside....
ReplyDeleteSoorya yaake, Chandra yaake ,nenapu onde saakenage.
Hey....naane elli nan bitre yaaru ella elli,,
Be alone, to be happy yo....be happy to be alone.....