ಕಾಫಿ ತೋಟವನ್ನು ಸೀಳಿ ಸಾಗುವ
ತಿರುವು ದಾರಿಯಲ್ಲಿ
ಹಾಸಿ ಮಲಗಿದ್ದ ಹಳೆ ಕನಸುಗಳು
ಎದ್ದು ಕುಳಿತವು ಮನಸಿನಲ್ಲಿ,..
ಲೈಟು ಕಂಬದ ಜೋಡಿ ವೈರುಗಳ ನೊಡಿ
ಅವಳ ಕೈಹಿಡಿದು ನೆಡೆದ ನೆನಪು ಬಂತು,..
ಮುಗಿಲಲ್ಲಿ ಹಾರಿಳಿವ ಜೋಡಿ ಹಕ್ಕಿಗಳ ನೋಡಿ
ಅವಳ ಕೈಹಿಡಿದು ಆಡಿದ ನೆನಪು ಬಂತು,..
ಕಣ್ತುಂಬ ಹೊಸ ಹೊಳಪು ಬಂತು,
ತುಟಿತುಂಬ ನಗುವಿನ ಬೆಳಕು ಬಂತು...
ಆ ಪ್ರಪಾತ ಪಾತಾಳ,
ನಾನರಿಯದೆ ಹೋದ ಅವಳಂತರಾಳವಾಗಿ ಕಂಡಿತು...
ಆ ಬೆಟ್ಟ ಹೊದ್ದಿರುವ, ಆ ಬೆಳ್ಳಿ ಮಂಜಿನೊದಿಕೆ,
ನನ್ನೆದುರು ಈಗಿಲ್ಲದ, ಅವಳ ಮೂಗುತಿ ನತ್ತಿನಂತಿತ್ತು...
ಸುಳಿಗಾಳಿ ಎದುರಾಗಿ ಬೀಸಿ ಬರುತ್ತಿತ್ತು,
ಹಿಂತುರುಗಿ ಅವಳೆಡೆಗೆ ಹೋಗೆಂದು ನೂಕುತಿತ್ತು...
ಆ ಸ್ವಚ್ಚಂಧ ಝರಿನೀರು,
ಒಲವಿರದ ಮನಸಿನ ಕಲುಷತೆಯ, ಕಳೆದುಕೋ ಎನ್ನುತಿತ್ತು...
ಅಜಾನು ಮರಗಳು, ತಬ್ಬಿ ನಿಂತ ಬಳ್ಳಿಗಳ ತೋರಿ,
ನೀನೇಕೆ ಒಂಟಿ ಎಂದು, ಮೂದಲಿಸಿ ನಗುತಿತ್ತು...
ನಿದಿರೆ ತಾಯಿ ಮೈದುಂಬಿ ಬಂದು, ಕಣ್ಣು ಮುಚ್ಚುತಿತ್ತು
ಅವಳಿರುವ ಕನಸುಗಳ ಬುತ್ತಿ ಬಿಚ್ಚುತಿತ್ತು...
ಕಾಫಿ ತೋಟವನ್ನು ಸೀಳಿ ಸಾಗುವ
ತಿರುವು ದಾರಿಯಲ್ಲಿ,
ಬತ್ತಿ ಹೋಗಿದ್ದ ಒಲವ ಚಿಗುರು
ಮೊಳಕೆಯೊಡೆಯಿತು ಮತ್ತೆ ಮನಸಿನಲ್ಲಿ...
- ಸಂಪತ್ ಕುಮಾರ್

rocking as usual :-) but still... avaLu yaaru?
ReplyDelete