Monday, September 23, 2013

ನನ್ನ ಶಾಂತಲಾ

(Small tribute to my all time favorite historical lady - Naatyaraani Shaanthalaa)

ನನ್ನ ಶಾಂತಲಾ
ನಿತ್ಯಪ್ರೇಮ ನೀರುಣಿಸುವ ಜೀವಕೊಳ
ನನ್ನ ಶಾಂತಲಾ
ಅಮರಪ್ರೇಮ ಕರುಣಿಸುವ ಅಮೃತಜಲ
ಸದಾದಾಹಿ ನಾನು
ಗೆಳತಿ, ಪ್ರೇಮಾಂದೇಹಿ ನೀನು...
*****

ಆನಂದದ ಅಂಬರದಲಿ
ಅರವಿಂದ ವದನ ನಿನ್ನದು
ನಿದ್ರೆ ಬಾರದ ಕಂಗಳಲ್ಲೂ
ನಿತ್ಯ ಕಾಣೋ ಕನಸು ನಿನ್ನದು
ನಿನಗೆಂದೇ ಈ ಬಾಳು ನನ್ನದು,
ಹೇ ಪ್ರೇಮವತ್ಸಲಾ...

ನನ್ನ ಶಾಂತಲಾ
ಮೋಹಗಂಧ ಸುಘಮಿಸುವ ಪುಷ್ಪದಳ
ನನ್ನ ಶಾಂತಲಾ
ಪ್ರೇಮಗಂಗೆ ಉಗಮಿಸುವ ಪುಣ್ಯನೆಲ
ತೀರಯಾನಿ ನಾನು
ದಾಟಿಸು, ಅಂಬಿಗತಿ ನೀನು...
*****

ಅನುಗಾಲ ಅರಳಿನಿಂತ
ಕಮಲದಂತ ನಗುವು ನಿನ್ನದು
ಆ ನಗುವ ಕಾಣಲೆಂದೆ
ಕಾಲದೊಡನೆ ಕದನ ನನ್ನದು
ನಿನಗೆಂದೇ ಈ ಬಾಳು ನನ್ನದು,
ಹೇ ರಶ್ಮಿನಿರ್ಮಲಾ...

ನನ್ನ ಶಾಂತಲಾ
ಬಾಳತುಂಬ ಬೆಳಗಿನಿಂತ ಚಂದ್ರಕಲ
ನನ್ನ ಶಾಂತಲಾ
ಪ್ರೀತಿಹೊತ್ತ ಮನಸುನಿಂದು ಹೂ ಮೃದುಲ
ಹೊನ್ನಮೂಗುತಿ ನಾನು
ಮುತ್ತೈದೆ, ಕನ್ನಡತಿ ನೀನು...

                                      - ಸಂಪತ್ ಕುಮಾರ್ 

1 comment: