Patho version of Sadaa Ninna Kannali song written by me (from the movie Bacchan)
M: ಎಂದೂ ನಿನ್ನ ಕಣ್ಣಲಿ
ಕಣ್ಣಾ ಹನಿಯ ಕಾಣಲು
ಕನಸಿನಲ್ಲೂ ಕೂಡ ಬಯಸಲಾರೆ ನಾನು
ನಿನ್ನೆಲ್ಲ ನೋವಿಗೂ,
ನಾನಿಲ್ಲವೇ ಇನ್ನು
ನೀ ನಕ್ಕರೆ ಮಿಕ್ಕಿದ್ದೆಲ್ಲಾ ಯಾಕಿನ್ನು
ಬೆನ್ನ ಹಿಂದೆ ನಿಂತು ಬೆಳಕ ತೋರಲೇನು...
ಎಂದೂ ನಿನ್ನ ಕಣ್ಣಲಿ
ಕಣ್ಣಾ ಹನಿಯ ಕಾಣಲು
ಕನಸಿನಲ್ಲೂ ಕೂಡ ಬಯಸಲಾರೆ ನಾನು...
*********
F: ಅತಿ ಭಾವುಕ ಅಳುಕೆಲ್ಲವಾ
ನನ್ನಿಂದ ನೀ ತೊಡೆದೆ
ಅಪರೂಪದ ಅನುರಾಗವ
ನಿನ್ನಿಂದ ನಾ ಪಡೆದೆ
ನೀನೇ ದಾರಿ
ನೀನೇ ದಿಕ್ಸೂಚಿ
ನೀನೇ ನನ್ನ ಬಾಳ ಬುನಾದಿ...
ನೀನೇ ಧೈರ್ಯ
ನೀನೇ ನಿರ್ದಾರ
ನೀನೇ ನನ್ನ ಬಾಳ ಸಿತಾರ
M: ಭಯವೆಲ್ಲವು ಸಾಕು, ಒಲಿದು ಬಾಳಬೇಕು,
ನಿನಗೆಂದೇ ನಿಂತಿಹೆ, ಪ್ರೀತಿ ಹೊತ್ತು ನಾನು...
ಎಂದೂ ನಿನ್ನ ಕಣ್ಣಲಿ
ಕಣ್ಣಾ ಹನಿಯ ಕಾಣಲು
ಕನಸಿನಲ್ಲೂ ಕೂಡ ಸಹಿಸಲಾರೆ ನಾನು...
*********
F: ದುಗುಡವ ಕಳೆಯುವಂತ
ಹೊಸತನ ಬೆಳೆಯುವಂತ
ಹೃದಯದ ಕೃಷಿಕ ನೀನು...
ನೀನೇ ಶಾಂತಿ
ನೀನೇ ವಿಶ್ರಾಂತಿ
ನಿನ್ನ ಧ್ಯಾನ ನನ್ನ ಪ್ರವೃತ್ತಿ
ನನ್ನ ಸ್ಫೂರ್ತಿ
ನೀನೇ ಸಂಗಾತಿ
ಬೇರೆ ಎಲ್ಲಾ ವ್ಯರ್ಥ ವದಂತಿ
M: ಬಳಿ ಇರುವೆನು ನಾನು, ಮರಳಲಾರೆ ಇನ್ನು
ನಿನ್ನನ್ನೇ ನೋಡುತಾ ಎಲ್ಲಾ ಮರೆವೆ ನಾನು
*********
M: ಎಂದೂ ನಿನ್ನ ಕಣ್ಣಲಿ
ಕಣ್ಣಾ ಹನಿಯ ಕಾಣಲು
ಕನಸಿನಲ್ಲೂ ಕೂಡ ಬಯಸಲಾರೆ ನಾನು...
ನಿನ್ನೆಲ್ಲ ನೋವಿಗೂ,
ನಾನಿಲ್ಲವೇ ಇನ್ನು
ನೀ ನಕ್ಕರೆ ಮಿಕ್ಕಿದ್ದೆಲ್ಲಾ ಯಾಕಿನ್ನು
ಬೆನ್ನ ಹಿಂದೆ ನಿಂತು ಬೆಳಕ ತೋರಲೇನು...
- ಸಂಪತ್ ಕುಮಾರ್

Supppperrrrrrr,...
ReplyDeletesakkath maga...:)
ReplyDeleteSuperr guru!
ReplyDeleteThanks guys
ReplyDelete