Thursday, March 12, 2015

ನೀನೇ ನನ್ನ ದೇವತೆ...


ಇರುವುದೇನೇ,,,?
ನಿನ್ನ ಹೊರತು ಬೇರೆ ನಾನು,
ಬದುಕಿ ಉಳಿವ ಸಾದ್ಯತೆ...

ನನ್ನ ಹೃದಯದಲ್ಲಿ ಎಂದೂ,
ನಿನಗೇ ಮೊದಲ ಆದ್ಯತೆ... 
ನೀನೇ ನನ್ನ ದೇವತೆ...
* * *

ಕಣ್ಣು ನಿನ್ನ ಕಂಡರೇನೇ, ನನ್ನ ದಿನದ ಶುರುವಾತು
ಗಾಳಿಯಲ್ಲೂ ಕೇಳುತಿಹುದು, ನಿನ್ನದೇ ಪಿಸುಮಾತು

ಹೆಜ್ಜೆ ಹಿಡುವ ಹಾದಿಲೆಲ್ಲ, ತಲುಪೊ ಕೊನೆಯು ನೀನೆಯೇ
ಎದೆಯ ಸುಡುವ ನೋವನೆಲ್ಲ, ತಣಿಸೋ ಮಳೆಯು ನೀನೆಯೇ

ನನ್ನದು ಸೀದಾ - ಸಾದಾ ತಲ್ಲಣ,
ನಿನ್ನ ದಾರಿ ಕಾಯುವುಲ್ಲೇ, ನನ್ನ ಎಲ್ಲ ಸಂಭ್ರಮ...
   
* * *
ಇರುವುದೇನೇ,,,?
ಹೂವಿನಲ್ಲೂ, ನಿನ್ನ ಮೀರೋ,
ಮುಗ್ದ ಮನದ ಸೌಮ್ಯತೆ...

ನನ್ನ ಹೃದಯದಲ್ಲಿ ಎಂದೂ,
ನಿನಗೇ ಮೊದಲ ಆದ್ಯತೆ...
ನೀನೇ ನನ್ನ ದೇವತೆ...
* * *

ಚೂರು ನೀನು ನಕ್ಕರೂನು, ತಾರೆ ಮಿಂಚಿದಂತಾಯ್ತು
ನೀಲಿ ಬಾನು ಕೆಂಪಾಯ್ತು, ಅರೆ ಏನಾಗೋಯ್ತು

ಸುತ್ತ ಕಾಣೋ ವಸ್ತುವೆಲ್ಲ, ನಿನ್ನದೇನೆ ಅವತರಣೆ
ನೆರಳು ಕೂಡ ನಟಿಸಿತಲ್ಲೇ, ನಿನ್ನ ಹಾಗೇ ಅನುಕರಣೆ

ನಮ್ಮದು ಕೊನೆಯೆ ಇರದ ಬಂದನ
ನಿತ್ಯ ಇರಲಿ ಮನಸಿನಲ್ಲಿ, ನನ್ನ ನಿನ್ನ ಸಂಗಮ

* * *
ಇರುವುದೇನೇ,,,?
ಚಂದ್ರ ಕಿರಣ ಹೊಳಪಿನಲ್ಲೂ
ನಿನ್ನ ಕಣ್ಣ ಸಾಮ್ಯತೆ...

ನನ್ನ ಹೃದಯದಲ್ಲಿ ಎಂದೂ,
ನಿನಗೇ ಮೊದಲ ಆದ್ಯತೆ... 
ನೀನೇ ನನ್ನ ದೇವತೆ...

                                     - ಸಂಪತ್ ಕುಮಾರ್

No comments:

Post a Comment