Monday, February 09, 2015

ನೋಡಿದೆಯಾ,,, ನೋಡಿದೆಯಾ,,,

Translation of "Dekhona,,, Dekhona..." song from the movie FANAA


ಏನಿದೆಯೋ ಈ ಹನಿಯೊಳಗೆ,
ಮೊಗ್ಗರಳಿದೆ ಮನದೊಳಗೆ,
ಏನಿದೆಯೋ ಈ ಹನಿಯೊಳಗೆ,
ಮೊಗ್ಗರಳಿದೆ ಮನದೊಳಗೆ,
ನೋಡಿದೆಯಾ,,, ನೋಡಿದೆಯಾ,,,
ನೋಡಿದೆಯಾ,,, ನೋಡಿದೆಯಾ,,,
ತಂಗಾಳಿಯು ಬೀಸಿ ಬೀಸಿ
ನಿನ್ನಾಸೆಯ ರಾಶಿ ರಾಶಿ
ಮಿಂಚು, ಮಿಂಚುತ್ತ ಮಳೆಯಾಗಿದೆ...
ನೋಡಿದೆ ನಾ,,, ನೋಡಿದೆ ನಾ...
ನೋಡಿದೆ ನಾ,,, ನೋಡಿದೆ ನಾ...
    *    *    *    *

ಮತ್ತಿನ್ನೆಂದೂ, ಈ ತಂಗಾಳಿ ಸಂಕೋಚವ ಬಿಡದು...
ಮತ್ತಿನ್ನೆಂದೂ, ಈ ಅಂಗಾಲು ನಲಿಯದು ಕುಣಿದು...
ಓ,,, ಮಳೆಗಾಲಕಂತೂ ಮರುಳು, ಬಹಳಾಗಿದೆ,,,
ಸುರಿಯುತ್ತ ಸೋನೆ ಮಳೆ, ಏನೋ ಹೇಳಿದೆ...
ಕೇಳಿದೆಯಾ,,, ಕೇಳಿದೆಯಾ...
ಕೇಳಿದೆಯಾ,,, ಕೇಳಿದೆಯಾ...
ತಂಗಾಳಿಯು ಬೀಸಿ ಬೀಸಿ
ನಿನ್ನಾಸೆಯ ರಾಶಿ ರಾಶಿ
ಮಿಂಚು, ಮಿಂಚುತ್ತ ಮಳೆಯಾಗಿದೆ...
ಕೇಳಿದೆ ನಾ,,, ಕೇಳಿದೆ ನಾ... 
ಕೇಳಿದೆ ನಾ,,, ಕೇಳಿದೆ ನಾ... 
    *    *    *    *

ಜುಮ್ಮೆನಿಸೋ ಚಳಿ, ಜೀವ ಹಿಂಡಿ, ಕೆಣಕಿದೆ
ಸಂಕಟದಲ್ಲು ಸವಿಯಿದೆ ಇಲ್ಲಿ, ಏನು ಮಾಡಲಿ...
ಮೋಹದ ಅರ್ಜಿಯೊಂದು, ಅಂಚೆ ಬಂದಿದೇ,,,
ಮೋಡದ ಮರ್ಜಿಯಂತೆ, ಉಸಿರು ಹಾಡಿದೆ...
ಸ್ಪರ್ಶಿಸೆಯಾ,,, ಸ್ಪರ್ಶಿಸೆಯಾ...
ಸ್ಪರ್ಶಿಸೆಯಾ,,, ಸ್ಪರ್ಶಿಸೆಯಾ... 
ತಂಗಾಳಿಯು ಬೀಸಿ ಬೀಸಿ
ನಿನ್ನಾಸೆಯ ರಾಶಿ ರಾಶಿ
ಮಿಂಚು, ಮಿಂಚುತ್ತ ಮಳೆಯಾಗಿದೆ...
ನೋಡಿದೆ ನಾ,,, ನೋಡಿದೆ ನಾ...
ನೋಡಿದೆ ನಾ,,, Hmm Hmm Hmm
Hmm Hmm Hmm ನೋಡಿದೆ ನಾ... 

                                                   - ಸಂಪತ್ ಕುಮಾರ್

1 comment:

  1. Amazing work!! Can actually sing it in the same tune.. Great choice of words.. :)
    P.S. You should give credit to the fan who requested this.. :P

    ReplyDelete