Sunday, April 09, 2017

ನೀನು ಇರುವಾಗ ಮಾತನಾಡದೇ...


ಇನ್ನು ಏಕಿದೆಯೋ,
ಈ ಜೀವ ಹೋಗದೇ
ನೀನು ಇರುವಾಗ ಮಾತನಾಡದೇ...
ಮತ್ತೆ ಈ ಕೊರಳು 
ನಿನ್ನೇ ಕೂಗಿದೆ,.. 
ಒಮ್ಮೆ ಜೋರಾಗಿ ಓಗೊಡಬಾರದೇ...

ಬೇರೆ ಯಾರೋ, ಬೆರಳ ಹಿಡಿದು
ಬೆಳದಿಂಗಳಿಂದ
ಬೇರೆಡೆಗೆ ದೂರ ಕರೆದಂತಿದೆ,,,
ಬದುಕೇ ಬೆಳಕಿಗೆ, ಬೆನ್ನು ಮಾಡಿ ನಿಂತಂತಿದೆ...

ಇನ್ನು ಏಕಿದೆಯೋ,
ಈ ಜೀವ ಹೋಗದೇ
ನೀನು ಇರುವಾಗ ಮಾತನಾಡದೇ...
ಮತ್ತೆ ಈ ಕಣ್ಣು 
ನಿನ್ನೇ ಹುಡುಕಿದೆ,..
ಒಮ್ಮೆ ಎದುರಾಗಿ ನೀ ಸಿಗಬಾರದೇ...

ಜೀವವೆಲ್ಲಾ, ನರಳಿ ನರಳಿ
ಹಸಿಕಂಗಳಿಂದ
ಕಣ್ಣೀರ ಧಾರೆ ಹರಿಯುತ್ತಿದೆ,,,
ನೆನಪೇ ನಗುವಿಗೆ, ಸನ್ನೆ ಮಾಡಿ ಕೊಂದಂತಿದೆ...

ಇನ್ನು ಏಕಿದೆಯೋ,
ಈ ಜೀವ ಹೋಗದೇ
ನೀನು ಇರುವಾಗ ಮಾತನಾಡದೇ...
ಮತ್ತೆ ಈ ಮನಸು
ನಿನ್ನೇ ಬೇಡಿದೆ
ಒಮ್ಮೆ ನೀನಾಗಿ ನೀ ಬರಬಾರದೇ...

                                  - ಸಂಪತ್ ಕುಮಾರ್.        

1 comment:

  1. Prartisidde devara husiru nilluva varegu...
    spoorthi tumbuva shakthiyondu jeevanada payanakke joteyaagalendu,
    Manadalli mandiraviddaru maneyalli jagavillavante,
    Adakkende koneyagisibitte nammi...yanavanu.
    Naa aparaadi agibitte ellara drushtiyallu ,
    Nee oppale Ella konegu solannu,
    Baghavantanige gottittu yavudu sariyendu.
    Koragadiru manave ennendu....
    Mukadalli erali sadaa nageyondu.😊

    ReplyDelete