ಮನದ ಮಳೆಬಿಲ್ಲಿನಲ್ಲಿ, ಮೂಡಿಬಂದ ವರ್ಣವೇ
ನೂರೊಂದು ಕಾಲಕು, ಮಿನುಗುತಿರು ಹೀಗೆಯೇ...
ಗೆಳತಿ ನೀ ನಕ್ಕರಿಲ್ಲಿ, ನಾಚಿಕೊಂತು ಸ್ವರ್ಣವೇ,
ಇನ್ನೆಲ್ಲಾ ಕಾಲಕು, ನಗುತಲಿರು ಹೀಗೆಯೇ...
* * * * *
ಈ ಸ್ನೇಹ,
ಸನ್ನಾಹ,,,
ಎಂದಿಗೂನು ಸುಂದರ.
ನಮ್ಮಲ್ಲಿ,
ಇನ್ನೆಂದೂ,
ಬಾರದಿರಲಿ ಅಂತರ...
ಜೊತೆಯಿರಲು ನೀನು, ಮರೆತೇ ಹೋದೆ ನಾನು,,,
ಬೇಸರಿಕೆ ಎಂದರೇನು...?
* * * * *
ದಿನದ ಇಳಿಸಂಜೆಯಲ್ಲಿ, ಬಾನಗೆಂಪು ವರ್ಣವೇ
ಇನ್ನೆಲ್ಲಾ ಸಂಜೆಗೂ, ಹೊಳೆಯುತಿರು ಹೀಗೆಯೇ...
* * * * *
ನೀನಾಗೇ
ಬಂದಾಗ
ಹಾಗೇನೇ ಹತ್ತಿರ,,,
ಏಕಿಷ್ಟು
ಉಲ್ಲಾಸ
ನಾನರಿಯೆ ಉತ್ತರ...
ದಡವಾದರೆ ನೀನು, ಈಜಿ ಸೇರುವೆ ನಾನು,,,
ಸಾಗರವೇ ಬಂದರೇನು...?
* * * * *
ನದಿಯ ತಿಳಿನೀರಿಗಿಂತ, ಶುಭ್ರವಾದ ವರ್ಣವೇ
ಇನ್ನೆಲ್ಲಾ ಕಾಲಕು, ಹರಿಯುತಿರು ಹೀಗೆಯೇ...
ಮನದ ಮಳೆಬಿಲ್ಲಿನಲ್ಲಿ, ಮೂಡಿಬಂದ ವರ್ಣವೇ
ನೂರೊಂದು ಕಾಲಕು, ಮಿನುಗುತಿರು ಹೀಗೆಯೇ...
- ಸಂಪತ್ ಕುಮಾರ್
nice
ReplyDelete