ನೀ ಜೊತೆಗೆ ಬರಲು ಒಪ್ಪಿದರೆ,,,
ನನ್ನನ್ನೇ ದಾಸನಾಗಿಸುವೆ,
ನೀ ಜೊತೆಗೆ ಇರಲು ಒಪ್ಪಿದರೆ,,,
ಪ್ರತೀ,,, ಕ್ಷಣವೂ ಪ್ರೀತಿಸುವೆ,
ನನ್ನಾಣೆ,.. ಮಾತು ತಪ್ಪಿದರೆ...
---------------------------------------------------------------------
---------------------------------------------------------------------
ನಿನ್ನಾ ಕಣ್ಣ ಬೆಳಕು ಸಾಕು,
ಮುಂದಿನೆಲ್ಲಾ ಪ್ರಯಾಣಕೆ...
ನಿನ್ನಾ ಸಣ್ಣ ನಗುವು ಸಾಕು,
ತೀರಲೆನ್ನಾ ಬಾಯಾರಿಕೆ...
ಅರಳೋ ನೂರು ಹೂಗಳೊಳಗೆ, ಚೆಂಗುಲಾಬಿ ನಿನ್ನಾ ಮೊಗವು...
ಬರಲು ನೀನು ಎದೆಯ ಒಳಗೆ, ಸ್ವರ್ಗವಾಯ್ತು ನನ್ನಾ ಜಗವು...
* * *
ಅರಳೋ ನೂರು ಹೂಗಳೊಳಗೆ, ಚೆಂಗುಲಾಬಿ ನಿನ್ನಾ ಮೊಗವು...
ಬರಲು ನೀನು ಎದೆಯ ಒಳಗೆ, ಸ್ವರ್ಗವಾಯ್ತು ನನ್ನಾ ಜಗವು...
* * *
ದಾರಿಗೆ ಹೂವ ಹಾಸಿಡುವೆ,
ನೀ ಜೊತೆಗೆ ಬರಲು ಒಪ್ಪಿದರೆ,,,
ಪ್ರತೀ ಹೆಜ್ಜೆ ಜೊತೆಗಿಡುವೆ,
ನನ್ನಾಣೆ,.. ಮಾತು ತಪ್ಪಿದರೆ...
---------------------------------------------------------------------
ನಿನ್ನಾ ಗೆಜ್ಜೆ ದನಿಗೆ ಸೋತು
ಗಾಳಿ ಕೂಡ ಮೂಕಾಗಿದೆ...
ಗಲ್ಲಕೊಂದು ದೃಷ್ಟಿ ಬಿಂದು
ಇಡವ ಆಸೆ ಹೆಚ್ಚಾಗಿದೆ...
ಇರುವ ಒಂದು ಹೃದಯದೊಳಗೆ, ಮಿಡಿಯುತಿರವ ಜೀವ ನೀನು...
ಬರುವ ಎಲ್ಲ ಜನ್ಮಗಳಿಗೆ, ಜೊತೆಯಲಿರುವ ಸಾಥಿ ನೀನು...
* * *
ನಿನ್ನೆಲ್ಲಾ ಭೀತಿ ನೀಗಿಸುವೆ
ನೀ ಜೊತೆಗೆ ಇರಲು ಒಪ್ಪಿದರೆ,,,
ಪ್ರತೀ,,, ಆಸೆ ತೀರಿಸುವೆ,
ನನ್ನಾಣೆ,.. ಮಾತು ತಪ್ಪಿದರೆ...
---------------------------------------------------------------------
ಬೇರೊಂದು ಲೋಕ ಸೃಷ್ಟಿಸುವೆ,
ನೀ ಜೊತೆಗೆ ಬರಲು ಒಪ್ಪಿದರೆ,,,
ನನ್ನನ್ನೇ ದಾಸನಾಗಿಸುವೆ,
ನೀ ಜೊತೆಗೆ ಇರಲು ಒಪ್ಪಿದರೆ,,,
ಪ್ರತೀ,,, ಕ್ಷಣವೂ ಪ್ರೀತಿಸುವೆ,
ನನ್ನಾಣೆ,.. ಮಾತು ತಪ್ಪಿದರೆ...
- ಸಂಪತ್ ಕುಮಾರ್

Super buddy .... Keep it up!
ReplyDeleteThanks Giri
ReplyDelete